ರೊಮ್ಯಾಂಟಿಕ್​ ಫಿಲ್ಮ್​ ಅಂದ್ರೆ ನಂಗಿಷ್ಟ ಎನ್ನುವ ನಟಿ ಪ್ರಣೀತಾ ಈಗ ಮೆಚ್ಚಿಕೊಂಡ ಕನ್ನಡದ ಸಿನಿಮಾ ಯಾವುದು ಗೊತ್ತಾ?

Praneeta 22 april 20
Published on

ಲಾಕ್​ಡೌನ್​ನಲ್ಲಿ ಸಿನಿಮಾ ತಾರೆಯರು ಸಿನಿಮಾ ನೋಡುವುದರಲ್ಲಿ ಬ್ಯುಸಿಯಾಗಿದ್ದಾರೆ. ಈ ಪೈಕಿ ಪ್ರಣೀತಾ ಸುಭಾಷ್ ಯಾವ ಸಿನಿಮಾ ನೋಡಿದ್ದಾರೆ, ಆ ಚಿತ್ರ ಅವರಿಗೆ ಯಾಕೆ ಹಿಡಿಸಿತು ಎಂದು ಅವರೇ ಹೇಳುತ್ತಾರೆ ಕೇಳಿ. ಓವರ್ ಟು ಪ್ರಣೀತಾ ...

ನಾನು ಹೆಚ್ಚಾಗಿ ನೋಡುವುದು ಕಮರ್ಷಿಯಲ್ ಸಿನಿಮಾಗಳನ್ನು. ರೊಮ್ಯಾಂಟಿಕ್ ಸಿನಿಮಾಗಳೆಂದರೆ ಇಷ್ಟ. ಲಾಕ್​ಡೌನ್​ನಲ್ಲಿ ಬೇರೆ ಬೇರೆ ಶೈಲಿಯ ಸಿನಿಮಾಗಳನ್ನು ನೋಡಿದ್ದೇನೆ. ಈಗ ಅದನ್ನು ಹೊರತುಪಡಿಸಿ ಇತ್ತೀಚೆಗೆ ಕನ್ನಡದ ‘ಗಂಟುಮೂಟೆ’ ಸಿನಿಮಾ ಇಷ್ಟವಾಯ್ತು. ಹರೆಯದ ಅಮಲಿನಲ್ಲಿ ಉಂಟಾಗುವ ತವಕ-ತಲ್ಲಣಗಳನ್ನು ನಿರ್ದೇಶಕಿ ರೂಪಾ ರಾವ್ ಮನಮುಟ್ಟುವಂತೆ ತೆರೆಮೇಲೆ ತಂದಿದ್ದಾರೆ. 90ರ ಕಾಲಘಟ್ಟದಲ್ಲಿ ಕಥೆ ತೆರೆದುಕೊಳ್ಳುವುದರಿಂದ ಅದನ್ನೇ ನೋಡಿದಂತೆ ಭಾಸವಾಗುತ್ತದೆ. ಹರೆಯದ ಅಮಲಿನಲ್ಲಿ ಉಂಟಾಗುವ ತವಕ ತಲ್ಲಣಗಳು

ಹೇಗಿರುತ್ತವೆ ಎಂಬುದನ್ನು ಈ ಸಿನಿಮಾ ಮೂಲಕ ನೋಡಬಹುದು. ಈ ಸಿನಿಮಾದ ಜತೆಗೆ ಹಿಂದಿಯ ‘ಪತಿ ಪತ್ನಿ ಔರ್ ವೋ’ ಕನ್ನಡದ ‘ದಿಯಾ’, ಕೊರಿಯಾದ ‘ಪ್ಯಾರಸೈಟ್’ನೋಡಿದೆ. ಎಲ್ಲವೂ ಇಷ್ಟವಾದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net