ನಕಲಿ ವೈದ್ಯರ ಕ್ಲಿನಿಕ್​ಗೆ ಬೀಗ

Fake doctor's clinic locked up
ಕೊಲ್ಹಾರ ಪಟ್ಟಣದಲ್ಲಿ ನಕಲಿ ವೈದರ ಕ್ಲಿನಿಕ್​ ಮೇಲೆ ತಾಲೂಕು ಆರೋಗ್ಯಾಧಿಕಾರಿ ಡಾ.ಕವಿತಾ ದೊಡಮನಿ ತಂಡ ದಾಳಿ ನಡೆಸಿ ಆಸ್ಪತ್ರೆಗೆ ಬೀಗ ಹಾಕಿತು.
Published on

ಕೊಲ್ಹಾರ: ತಾಲೂಕಿನ ವಿವಿಧ ಗ್ರಾಮಗಳ ಕ್ಲಿನಿಕ್​ಗಳ ಮೇಲೆ ತಾಲೂಕು ಆರೋಗ್ಯಾಧಿಕಾರಿ ಡಾ.ಕವಿತಾ ದೊಡಮನಿ ನೇತೃತ್ವದ ತಂಡ ದಾಳಿ ನಡೆಸಿ ಪರವಾನಗಿ ಇಲ್ಲದ ಆಸ್ಪತ್ರೆಗಳನ್ನು ಶುಕ್ರವಾರ ಬಂದ್​ ಮಾಡಿಸಿತು.

ಕೊಲ್ಹಾರದಲ್ಲಿ ಮೂರು, ಕೂಡಗಿಯಲ್ಲಿ ಎರಡು, ಮುತ್ತಗಿಯಲ್ಲಿ ಒಂದು ಕ್ಲಿನಿಕ್​ ಮೇಲೆ ದಾಳಿ ನಡೆಸಿ ವೈದ್ಯಕಿಯ ಮಂಡಳಿ ನೀಡುವ ಪರವಾನಗಿ ಪತ್ರ ಇಲ್ಲದ ಕಾರಣ ಆಸ್ಪತ್ರೆಗಳಿಗೆ ಬೀಗ ಹಾಕಲಾಯಿತು.

ಸಾರ್ವಜನಿಕರು ನಕಲಿ ವೈದ್ಯರ ಬಗ್ಗೆ ದೂರು ನೀಡಿದಲ್ಲಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಡಾ.ಕವಿತಾ ದೊಡಮನಿ ಹೇಳಿದರು. ಎಸ್​.ಎಸ್​.ಮೇಟಿ, ತೌಸೀಫ್​ ಬಾಗೇವಾಡಿ ಇತರರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net