ಜನಮತ; ಸರ್ಕಾರಿ ಜಮೀನು ರಕ್ಷಣೆಯಾಗಲಿ

Janamata
Published on

ಪ್ರತಿ ಗ್ರಾಮಕ್ಕೂ ಈ ಹಿಂದೆ ನೆಡುತೋಪು, ಗುಂಡುತೋಪು, ಗೋಮಾಳ, ಪಾಳುಭೂಮಿ, ದೇವರಕಾಡು ಎಂದು ಕರೆಯುವ ಸರ್ಕಾರಿ ಜಮೀನು ಇತ್ತು. ಈ ಭೂಮಿಯಲ್ಲಿ ಊರಿನ ಕೆಲವು ಸಾಂಪ್ರದಾಯಿಕ, ಧಾರ್ವಿುಕ ಆಚರಣೆಗಳು ನಡೆಯುತ್ತಿದ್ದವು. ಊರಿನ ಎಲ್ಲ ಸಮುದಾಯದ ಜನರ ಹಸು ಮೇಯಿಸಲು ಪ್ರಧಾನವಾಗಿ ಈ ಜಮೀನು ಬಳಕೆಯಾಗುತ್ತಿತ್ತು. ಆದರೆ ಕಾಲಾಂತರದಲ್ಲಿ ಭೂಗಳ್ಳರ ಕೆಂಗಣ್ಣಿಗೆ ಬಿದ್ದ ಈ ಭೂಮಿ ಮಾಯವಾಗಿ ಹೋಗುತ್ತಿದೆ.

ಕೆಲವು ಆಯಕಟ್ಟಿನ ಸ್ಥಳ ಮತ್ತು ಪ್ರಾಕೃತಿಕವಾಗಿ ಸುಂದರವಾದ ಸ್ಥಳ ಇರುವ ಸರ್ಕಾರಿ ಜಮೀನಿನಲ್ಲಿ ಪ್ರಭಾವಿಗಳು ಧಾರ್ವಿುಕ ಸ್ಥಳಗಳನ್ನು ಸ್ಥಾಪಿಸಿದ್ದಾರೆ. ಈ ಕುರಿತು ಇತ್ತೀಚೆಗೆ ಸ್ವಯಂಪ್ರೇರಿತವಾಗಿ ಹೈಕೋರ್ಟ್ ಸಾರ್ವಜನಿಕ ಹಿತಾಸಕ್ತಿ ಅಡಿ ಅರ್ಜಿ ವಿಚಾರಣೆ ಮಾಡುತ್ತಿದೆ. ಪ್ರತಿ ಜಿಲ್ಲೆಯ ಡಿಸಿಗಳಿಗೆ ನೋಟಿಸ್ ಜಾರಿಮಾಡಿ ವಿಚಾರಣೆಗೆ ಹಾಜರಾಗಲು ತಿಳಿಸಿದ್ದು ಸ್ವಾಗತಾರ್ಹ ಕ್ರಮವಾಗಿದೆ. ಅಕ್ರಮವಾಗಿ ನಿರ್ವಿುಸಿದ ಕಟ್ಟಡಗಳನ್ನು ಪತ್ತೆ ಹಚ್ಚಿ ತೆರವುಗೊಳಿಸಬೇಕು. ಇದು ಭೂಗಳ್ಳರಿಗೆ ಎಚ್ಚರಿಕೆ ಗಂಟೆಯಾಗಬೇಕು. ಸಂಬಂಧಪಟ್ಟವರು ಈ ನಿಟ್ಟಿನಲ್ಲಿ ಸೂಕ್ತ ಹಾಗೂ ತ್ವರಿತ ಕ್ರಮ ಕೈಗೊಳ್ಳಲಿ.

| ಪ್ರಹ್ಲಾದ್ ಪತ್ತಾರ ಯಡ್ರಾಮಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net