ಜನಮತ; ಪೌರತ್ವ ಕಾಯ್ದೆಯ ವಾಸ್ತವ ಅರಿಯಲಿ

janamata
Published on

ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರು ಎಷ್ಟೊಂದು ಅಸುರಕ್ಷಿತ ವಾತಾವರಣದಲ್ಲಿ ಬದುಕುತ್ತಿದ್ದಾರೆ ಎಂಬುದನ್ನು ಇನ್ನಾದರೂ ನಮ್ಮ ದೇಶದ ರಾಜಕೀಯ ಪಕ್ಷಗಳು ಅರ್ಥಮಾಡಿಕೊಳ್ಳಬೇಕು. ಪಾಕ್​ನ ಗುರುದ್ವಾರದ ಮೇಲೆ ಹಲ್ಲೆ ನಡೆದ ಬೆನ್ನಲ್ಲೇ ಸಿಖ್ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿರುವುದು ಅಲ್ಲಿನ ಘೋರ ಪರಿಸ್ಥಿತಿಗೆ ಸಾಕ್ಷಿ.

ಕಳೆದ ಹಲವು ವರ್ಷಗಳಿಂದ ಹಿಂದೂ ಯುವತಿಯರ ಅಪಹರಣ, ಬಲವಂತದ ಮತಾಂತರ, ಕೊಲೆಯಂಥ ಘಟನೆಗಳು ನಡೆಯುತ್ತಲೇ ಇದ್ದು, ಅಲ್ಲಿನ ಪೊಲೀಸ್ ವ್ಯವಸ್ಥೆ ದೂರು ದಾಖಲಿಸಿಕೊಳ್ಳುವ ಸೌಜನ್ಯವನ್ನೂ ತೋರುವುದಿಲ್ಲ. ಒಂದೊಮ್ಮೆ, ಜನಾಕ್ರೋಶದಿಂದ ದೂರು ದಾಖಲಾದರೂ ತಪ್ಪಿತಸ್ಥರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಹೀಗಾಗಿ ಭಯ, ಆತಂಕದ ನೆರಳಲ್ಲೇ ಅಲ್ಲಿನ ಅಲ್ಪಸಂಖ್ಯಾತರು ವಾಸಿಸುವ ಸ್ಥಿತಿಯಿದೆ. ಇಂಥ ಶೋಷಿತರು ಆಶ್ರಯ ಕೋರಿ ನಮ್ಮಲ್ಲಿ ಬಂದರೆ ಅವರಿಗೆ ಭಾರತದ ನಾಗರಿಕತ್ವ ಕೊಡುವುದರಲ್ಲಿ ಏನು ತಪ್ಪಿದೆ?

| ರವಿ ಮಂಗಳೂರು 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net