ಕಹಿ ಬಿತ್ತುವ ಸಮಯವಲ್ಲ

Janamata
Published on

ಇಡೀ ದೇಶ ಕರೊನಾ ಸೋಂಕಿನ ವಿರುದ್ಧ ಹೋರಾಡುತ್ತಿದೆ. ಹೀಗಿರುವಾಗ, ಕೆಲವರು ವೈದ್ಯರು, ಆರೋಗ್ಯ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸುವ, ಬೆದರಿಕೆ ಒಡ್ಡುವ ಕಹಿಯನ್ನು ಸಮಾಜದಲ್ಲಿ ಬಿತ್ತುತ್ತಿದ್ದಾರೆ. ನಿಜಕ್ಕೂ ಇಂಥ ಘಟನೆಗಳು ಖಂಡನಾರ್ಹ. ಇಂಥ ಹಲವು ಪ್ರಕರಣಗಳು ದೇಶದ, ಸರ್ಕಾರದ ಪ್ರಯತ್ನಗಳನ್ನು ಹಾಳು ಮಾಡುತ್ತವೆ. ಎಂಥದ್ದೇ ವಿಪತ್ತು ಬಂದರೂ ಸಹಕಾರ, ಮಾನವೀಯ ಸ್ಪಂದನೆಯಿಂದ ಗೆಲ್ಲುವುದು ಇಲ್ಲಿಯ ಸಂಸ್ಕೃತಿಯ ಲಕ್ಷಣ. ಅದನ್ನು ಮರೆಯುವುದು ಬೇಡ.

| ಗೌರೀಶ್ ಬಂಟ್ವಾಳ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net