ಕರೊನಾ ಕಾಲಕ್ಕೆ ಶುದ್ಧಿಯ ಮಹತ್ವ

Sam 1
Published on

ಜಗತ್ತಿನಾದ್ಯಂತ ಕರೊನಾ ಸೋಂಕು ವ್ಯಾಪಕವಾಗಿ ಹರಡಿರುವ ಇಂದಿನ ಪರಿಸ್ಥಿತಿಯಲ್ಲಿ ಶುದ್ಧಿಕ್ರಿಯೆಯು ಸಾಮಾನ್ಯಮಟ್ಟಕ್ಕಿಂತಲೂ ವಿಭಿನ್ನ ಮತ್ತು ವಿಶೇಷವಾಗಿರಬೇಕಲ್ಲವೇ? ರೋಗದಿಂದ ನಮ್ಮನ್ನು ರಸಿಕೊಳ್ಳಲು, ಗುಣಮುಖರಾಗಲು ವಿಶೇಷವಾದ ರೀತಿ&ನೀತಿಗಳ ಪಟ್ಟಿಯನ್ನೇ ಸರ್ಕಾರ ರೂಪಿಸಿದೆ. ಈ ಆಚಾರಸಂಹಿತೆ ಇಂದಿನದಲ್ಲ. ಪ್ರಾಚಿನ ಕಾಲದಿಂದಲೂ ನಮ್ಮ ಸಂಸತಿಯಲ್ಲಿ ಇದ್ದಿದ್ದೇ. ನಾವು ಮರೆತಿದ್ದೆವಷ್ಟೇ. ಹಾಗಾದರೆ ಪ್ರಾಚಿನ ಕಾಲದಲ್ಲಿ, ಋಷಿ&ಮುನಿಗಳು ಶುದ್ಧತೆಯ ಆಚಾರದ ಬಗ್ಗೆ ಏನೇನು ಹೇಳಿದ್ದರು? ಅವು ಇಂದಿಗೂ ಹೇಗೆ ಮತ್ತು ಏಕೆ ಪ್ರಸ್ತುತವಾಗಿವೆ? ಅವುಗಳನ್ನು ಅನುಸರಿಸುವುದರಿಂದ ಸೋಂಕುಗಳನ್ನು ಹೇಗೆ ದೂರ ಇಡಬಹುದು?

ಶುದ್ಧಿ... ಇದು ಸಾಮಾನ್ಯವಾಗಿ ಪ್ರಪಂಚದಲ್ಲಿ ಎಲ್ಲರೂ ಪ್ರಾಮುಖ್ಯತೆಯನ್ನು ಕೊಡುವ ವಿಚಾರ. ಮಕ್ಕಳಿಗೆ ಚಿಕ್ಕಂದಿನಿಂದ ಮನೆಯಲ್ಲೂ, ಶಾಲೆಗಳಲ್ಲೂ ಶುದ್ಧಿಯ ಬಗೆಗೆ ಪಾಲಕರು, ಶಿಕ್ಷಕರು ತಿಳಿಯಪಡಿಸುವುದು ಸಾಮಾನ್ಯ. ಇಂದಿನ ವಿಾನವು ಶುದ್ಧ ಸ್ಥಿತಿಯಲ್ಲಿನ ಅಂಶಗಳನ್ನೂ, ಭೂ&ಜಲ&ವಾಯುಮಾಲಿನ್ಯ ಸೇರಿದಾಗಿನ ಅಂಶಗಳನ್ನೂ ನಿಖರವಾಗಿ ಅಳೆದು ಲೋಕದ ಮುಂದಿಡುವುದರಿಂದ ಅದನ್ನು ಪ್ರಶ್ನಿಸುವ, ನಿರಾಕರಿಸುವ ಪ್ರವೃತ್ತಿಯು ಏಳಬೇಕಾದ ಸನ್ನಿವೇಶವೇ ಇಲ್ಲ. ಹೀಗಾಗಿ ಮಾಲಿನ್ಯದ ವಿಚಾರಗಳು ಆಧುನಿಕ ವಿಾನದ ಪ್ರಭಾವದಿಂದಲೇ ಹೆಚ್ಚು ಬೆಲೆಯನ್ನು ಪಡೆದಿವೆ ಎಂದೆನಿಸಿದರೂ ಹಿಂದಿನ ಕಾಲದಿಂದಲೂ ಋಷಿಯುಗದಲ್ಲಿಯೂ ಶುದ್ಧಿಯ ಬಗೆಗೆ ಜನರ ಮನಸ್ಸು& ವಿಚಾರಗಳು ಬಹುಮಟ್ಟಿಗೆ ಹರಿದಿರುವುದು ಕಂಡುಬರುತ್ತದೆ.

ಭಾರತೀಯ ಸಂಸತಿಯಲ್ಲಿನ ಪರಿಕಲ್ಪನೆಗಳು: ಮಹರ್ಷಿಗಳು ತಮ್ಮ ಶುದ್ಧಿಯ ಪರಿಕಲ್ಪನೆಯನ್ನು ದೈನಂದಿನ ಚಟುವಟಿಕೆಗಳಲ್ಲಿ ಹಾಸುಹೊಕ್ಕಾಗಿ ಹೆಣೆದು ನಾಗರಿಕತೆಯಾಗಿ ಹೊರತಂದರು. ಅದನ್ನು ಜನರು ಆಚಾರ& ಮಡಿ& ಮೈಲಿಗೆ ಎಂಬುದಾಗಿ ಕರೆಯುತ್ತಾರೆ. ಮಹರ್ಷಿಗಳ ಆಚಾರಗಳು ಇಂದು ಕೇವಲ ವಿಧಿ& ನಿಷೇಧಗಳ ಪಟ್ಟಿಯಾಗಿ ಉಳಿದಿವೆ. ಅವುಗಳಲ್ಲಿ ಕೆಲವು ಅರ್ಥಹೀನವಾಗಿಯೂ, ಮೂಢನಂಬಿಕೆಗಳಾಗಿಯೂ ಕಾಣಿಸುತ್ತಿವೆ. ಇನ್ನು ಕೆಲವು ಇಂದಿನ ಜೀವನಶೈಲಿಗೆ ಹೊರತಾದ ವಿಚಾರಗಳಾಗಿವೆ. ಆದ್ದರಿಂದ ಆಚಾರ& ಮಡಿವಂತಿಕೆಗಳನ್ನು ನಮ್ಮಿಂದ ದೂರ ಇಡೋಣ ಎನ್ನಿಸುವುದೂ ಸಹಜವೇ. ಇವು ನಿಜಕ್ಕೂ ಸಾರಹೀನವಾಗಿ, ಋಷಿಯುಗಕ್ಕೇ ಸೀಮಿತವಾದವುಗಳೇ ಎಂಬುದನ್ನು ಅರಿಯಲು ಮಹರ್ಷಿಗಳ ಶುದ್ಧಿಪರಿಕಲ್ಪನೆಯನ್ನು ನೋಡಬೇಕಾಗುತ್ತದೆ.

1. ಉಟ್ಟ ಬಟ್ಟೆಯನ್ನು ಒಗೆಯುತ್ತೇವೆ. ನೀರು, ಸಾಬೂನಿನಿಂದ ಇದರ ಶುದ್ಧಿ ಆಗುತ್ತದೆ. ಆದರೆ ಒಬ್ಬ ವೈದ್ಯ ಶಸಚಿಕಿತ್ಸೆ ಮಾಡಲು ಧರಿಸುವ ಅಥವಾ ಚಿಕಿತ್ಸೆ ಮಾಡುವಾಗ ಧರಿಸಿದ್ದ ಬಟ್ಟೆಗಳ ಒಗೆಯುವಿಕೆಗೆ ಸಾಬೂನಷ್ಟೇ ಸಾಲದು. ಡೆಟಾಲ್​ನಂತಹ ಕ್ರಿಮಿನಾಶಕಗಳ ಬಳಕೆಯೂ ಅತ್ಯವಶ್ಯ. ಏಕೆಂದರೆ ಆತನ ಕಾರ್ಯ ಹೆಚ್ಚು ಶುದ್ಧಿಯನ್ನು ಅಪೇಸುತ್ತದೆ. ಅದರ ಪರಿಚಯವುಳ್ಳವರು ಯಾರೂ ಇದನ್ನು ಆೇಪಿಸುವುದಿಲ್ಲ. ಕೆಲವು ಸಂಶೋಧನಾಕೂಟಗಳು ಇದಕ್ಕಿಂತ ಹೆಚ್ಚು ಹಾಗೂ ಭಿನ್ನ ಶುಚಿತ್ವ ಅಪೇಸುತ್ತವೆ. ಹೀಗೆ ಕಾಯೋರ್ದ್ದೇಶದ ಮೇಲೆಯೇ ಶುದ್ಧಿಯ ಮಟ್ಟವನ್ನು ನಿಶ್ಚಯಿಸಬೇಕು ಎನ್ನುವುದು ಸ್ಥಾಪಿತವಾಗುತ್ತದೆ.

2. ಶುದ್ಧಿಗೊಳಿಸುವ ಪದಾರ್ಥಗಳೂ, ವಿಧಾನಗಳೂ ಕೊಳೆಯ ಮಟ್ಟವನ್ನು ಅವಲಂಬಿಸಿರುತ್ತವೆ. ಬಟ್ಟೆ& ಪಾತ್ರೆ& ನಮ್ಮಶರೀರ ಎಲ್ಲಕ್ಕೂ ಒಂದೇ ಪದಾರ್ಥದಿಂದ ಶುದ್ಧಿಯೇ? ಬಟ್ಟೆಯೇ ಆದರೂ ಬೇರೆಬೇರೆ ಕಲೆಗಳಿಗೆ ಬೇರೆಬೇರೆ ಸಾಧನ& ವಿಧಾನ ಬೇಕಾಗುತ್ತದೆ.

3. ಬಟ್ಟೆಯನ್ನು ಶುದ್ಧಿಗೊಳಿಸುವುದೆಂದರೇನು? ಕೊಳೆ ಅಂಟುವ ಮುನ್ನ ಇದ್ದ ಸ್ಥಿತಿಗೇ ತರುವುದು. ಹೊಸ ಬೆಳ್ಳಿಲೋಟವನ್ನು ಗಾಳಿಗೆ ಒಡ್ಡಿದಾಗ ತನ್ನ ಹೊಳಪನ್ನು ಕಳೆದುಕೊಳ್ಳುತ್ತದೆ. ಅದರ ಶುದ್ಧಿಯೆಂದರೆ ಸೂಕ್ತ ಪದಾರ್ಥ ದಿಂದ ಉಜ್ಜಿ& ತೊಳೆದು ಅದನ್ನು ಮೂಲರೂಪಕ್ಕೆ ತರುವುದು.

ಋಷಿಗಳ ಶುದ್ಧಿ ಕಲ್ಪನೆ

ಆಚಾರ& ಶುದ್ಧಿ ಏನು ಎನ್ನುವುದನ್ನು ಕೆಳಗಿನ ಸಾಲುಗಳು ಸುಸ್ಪಷ್ಟವಾಗಿ ತಿಳಿಸುತ್ತವೆ.

ಪಂಚೇಂದ್ರಿಯಸ್ಯ ದೇಹಸ್ಯ

ಬುದ್ಧೇಶ್ಚ ಮನಸಸ್ತಥಾ >

ದ್ರವ್ಯ ದೇಶ ಕ್ರಿಯಾಣಾಂಚ ಶುದ್ಧಿ

ಆಚಾರ ಇಷ್ಯತೇ >>

ಪಂಚೇಂದ್ರಿಯಗಳು, ದೇಹ, ದ್ರವ್ಯ, ದೇಶ, ಕ್ರಿಯೆ, ಬುದ್ಧಿ, ಮನಸ್ಸು ಇವುಗಳ ಶುದ್ಧಿಗಾಗಿ ಮಾಡುವ ಕ್ರಿಯೆಯೇ ಆಚಾರ. ಈ ಪಟ್ಟಿಯಲ್ಲಿನ ಮೊದಲ ಐದು ಸಾಮಾನ್ಯವಾಗಿ ಆಧುನಿಕರು ಶುದ್ಧಿಗೆ ನೀಡುವ ವಿವರಣೆಗೆ ಹೊಂದಿಕೊಳ್ಳುತ್ತವೆ. ಆದರೆ ಬುದ್ಧಿ&ಮನಸ್ಸುಗಳು ಅವರ ಶುಚಿತ್ವ (ಕ್ಲೀನ್​ಲಿನೆಸ್​), ಮಾಲಿನ್ಯ ನಿಯಂತ್ರಣಗಳಲ್ಲಿ (ಪೊಲ್ಯೂಷನ್​ ಕಂಟ್ರೋಲ್​) ಸೇರಿಲ್ಲವಷ್ಟೆ!

ನಾಡಿಮಿಡಿತವೇ ಸಾಧನ!

ಋಷಿಹೃದಯವನ್ನು ಬಲ್ಲವರೂ, ಾನಿಶ್ರೇಷ್ಠರೂ ಆದ ಶ್ರೀರಂಗ ಮಹಾಗುರುಗಳು ಈ ವಿಚಾರಗಳೆಲ್ಲವನ್ನೂ ಬೋಧಿಸಿದ್ದರು. "ವಿಚಾರದೊಡಗೂಡಿದ್ದರೆ ಮಾತ್ರವೇ ಆಚಾರ ಅರ್ಥಪೂರ್ಣ. ಇಲ್ಲದಿದ್ದಲ್ಲಿ ಅಂಧನಿಂದ ನಡೆಸಲ್ಪಟ್ಟ ಹೆಳವನಂತಾಗುವುದು; ಆಚಾರವಿಲ್ಲದ ವಿಚಾರ ಊಟಕ್ಕಿಲ್ಲದ ಉಪ್ಪಿನಕಾಯಿಯಂತೆ ವ್ಯರ್ಥ' ಎಂದಿದ್ದರು. ನಾವೆಲ್ಲರೂ ಪದಾರ್ಥಗಳ ಗುಣ ಅಳೆಯುವ ಮೀಟರ್​ ಹೊತ್ತಿದ್ದೇವೆ; ಪ್ರತಿಯೊಬ್ಬರ ಕೈಮಣಿಕಟ್ಟಿನ ಜಾಗದಲ್ಲಿ ಮಿಡಿಯುವ ನಾಡಿಯೇ ಆ ಮೀಟರ್​. ಪ್ರತಿಣವೂ ನಮ್ಮ ಮೈಮನಗಳಲ್ಲಿನ ಎಲ್ಲ ಆಗುಹೋಗುಗಳನ್ನೂ& ನಾವು ಅರಿತರೂ, ಅರಿಯದಿದ್ದರೂ& ಅದು ತನ್ನಲ್ಲಿ ಮುದ್ರಿಸಿಕೊಳ್ಳುತ್ತಲೇ ಇರುತ್ತದೆ. ಅದು ನೀಡುವ ಫಲಿತಾಂಶಗಳನ್ನು ತಿಳಿಯುವ ಅರ್ಹತೆಯನ್ನು ನಾವು ಪಡೆಯಬೇಕಷ್ಟೇ ಎಂಬುದು ಅವರ ಬೋಧನೆಯ ಸಾರ.

ಮಹರ್ಷಿವಿಾನ

ದಿನಬಳಕೆಯಲ್ಲಿ ಉಪಯೋಗಿಸುವ ಪದಾರ್ಥಗಳು ಮೊದಲುಗೊಂಡು ಎಲ್ಲವೂ ನಮ್ಮ ಮೈಮನಗಳ ಮೇಲೆ ಮಾಡುವ

ಪರಿಣಾಮವನ್ನು ನಿಖರವಾಗಿ ಬಲ್ಲವರಾಗಿದ್ದ ವರು ಮಹರ್ಷಿಗಳು. ಅಷ್ಟಲ್ಲದೆ ವಿವಿಧ ಪದಾರ್ಥಗಳ ಯೋಗಗಳು (ಸೇರುವಿಕೆ) ಉಂಟುಮಾಡಬಹುದಾದ ಪರಿಣಾಮಗಳನ್ನೂ ಅರಿತಿದ್ದರು. ಸನ್ನಿವೇಶಗಳಿಗೆ ಅನುಗುಣವಾಗಿ ಮನಸ್ಸಿನಲ್ಲಿ ಬಂದು ಸೇರಬಹುದಾದ ದೋಷಗಳ (ಕೊಳೆಗಳ) ಸ್ವರೂಪವನ್ನೂ, ಅವುಗಳನ್ನು ನಿವಾರಿಸಬಲ್ಲ ಪದಾರ್ಥಗಳನ್ನೂ ರ್ನಿದಿಷ್ಟವಾಗಿ ಸೂಚಿಸಬಲ್ಲವರಾಗಿದ್ದರು. ಮಹರ್ಷಿಗಳ ಆಳವಾದ ವೈಾನಿಕ ನೋಟದಿಂದ ಹೊರಬಂದ ವಿಚಾರಗಳೇ ನಮಗೆ ಲಭ್ಯವಾಗಿರುವ ವಿಧಿ&ನಿಷೇಧಗಳ ಪಟ್ಟಿ. ಕಾಲಕ್ರಮದಲ್ಲಿ ಕೆಲವು ಪ್ರಪ್ತಗಳು ಸೇರಿರುವ ಸಾಧ್ಯತೆಗಳು, ಇತರ ಗ್ರಂಥಗಳಿಗಿರುವಂತೆಯೇ, ಇದರಲ್ಲಿಯೂ ಇರಬಹುದು. ಋಷಿದೃಷ್ಟಿಯಲ್ಲಿನ ವಿಾನವನ್ನು ಬಲ್ಲವರು ಮಾತ್ರವೇ ಮೂಲವನ್ನೂ, ಪ್ರಪ್ತವನ್ನೂ ಬೇರ್ಪಡಿಸಿ ತಿಳಿಸಬಲ್ಲರು. ಋಷಿದೃಷ್ಟಿಯ ರ್ನಿಣಯ ಋಷಿಯುಗಕ್ಕೆ ಸೀಮಿತವಲ್ಲ, ಅದು ಸಾರ್ವಕಾಲಿಕ. ಇಷ್ಟು ವ್ಯಾಪಕವಾದ ಮಹರ್ಷಿಗಳ ಶುದ್ಧಿಪರಿಕಲ್ಪನೆಯನ್ನು ಗೌರವಿಸಿದರೆ ಪೂರ್ಣಾರೋಗ್ಯವನ್ನು ಪಡೆಯಲು ಸಾಧ್ಯ.

ಶುದ್ಧಿಯ ಉದ್ದೇಶವೇನು?

ಬುದ್ಧಿ&ಮನಸ್ಸಿನ ಶುದ್ಧಿಯ ವಿಷಯವನ್ನು ಋಷಿಗಳು ಏಕೆ ಸೇರಿಸಿದ್ದಾರೆ? ಇಂತಹ ಶುದ್ಧಿಯಿಂದ ಏನನ್ನು ಸಾಧಿಸಲು ಹೊರಟರು? ಆರೋಗ್ಯ& ಸುಖಜೀವನದಲ್ಲಿ ಇವುಗಳ ಪಾತ್ರವೇನು? ಮಹರ್ಷಿಗಳ ಆರೋಗ್ಯದ ಪರಿಕಲ್ಪನೆಯೆಂದರೆ ಮಾನವನು ತನ್ನ ಶಕ್ತಿ&ಸಾಮರ್ಥ್ಯಗಳನ್ನು ಪರಿಪೂರ್ಣವಾಗಿ ಹೊಂದಿರುವುದು. ಭೌತಿಕ ೇತ್ರ ಮಾತ್ರವಲ್ಲದೆ ದೈವಿಕ&ಅಧ್ಯಾತ್ಮ ೇತ್ರಗಳ ಪ್ರವೇಶಕ್ಕೂ ಅನುವು ಮಾಡಿಕೊಡುವ ಶರೀರ ರಚನೆ ಹಾಗೂ ಸಾಮರ್ಥ್ಯವು ಮನುಷ್ಯಮಾತ್ರರೆಲ್ಲರಿಗೂ ಸೃಷ್ಟಿಸಹಜವಾಗಿಯೇ ಇರುವುದನ್ನು ಮಹರ್ಷಿಗಳು ಮನಗಂಡಿದ್ದರು. ಹಾಗಾಗಿ ಭೌತಿಕೇತ್ರದ ಆರೋಗ್ಯ ಮಾತ್ರವಲ್ಲದೆ ಅಧ್ಯಾತ್ಮ ೇತ್ರಗಳಲ್ಲೂ ಸಂಚರಿಸಿ ಆನಂದಿಸುವ ಸ್ಥಿತಿ ಇದ್ದಾಗ ಮಾತ್ರವೇ ವ್ಯಕ್ತಿಯು ಪೂರ್ಣ ಆರೋಗ್ಯವಂತ ಎಂಬುದು ಅವರ ಅಭಿಮತವಾಗಿತ್ತು. ಮನಸ್ಸು ಶುದ್ಧವಾಗಿದ್ದರೆ ಮಾತ್ರವೇ ಜೀವಿಯು ದೈವಿಕ&ಆಧ್ಯಾತ್ಮಿಕ ೇತ್ರಗಳಲ್ಲಿ ಸಂಚರಿಸಬಹುದು; ತನ್ಮೂಲಕ ಸುಖವನ್ನೂ, ಶಾಶ್ವತವಾದ ಪರಮಾನಂದವನ್ನೂ ಪಡೆಯಬಹುದೆಂಬುದು ಮಹರ್ಷಿಗಳ ಅನುಭವ. ಈ ರೀತಿಯ ಆರೋಗ್ಯವೇ ಒಬ್ಬ ವ್ಯಕ್ತಿಯು ತನ್ನ ಜೀವಮಾನದಲ್ಲಿ ಪಡೆಯಬಹುದಾದ ಅತ್ಯಮೂಲ್ಯ ಫಲ ಎಂಬುದು ಅವರ ನಿಷ್ಕರ್ಷೆ. ಇಂತಹ ಪರಿಪೂರ್ಣ ಆರೋಗ್ಯವನ್ನು ಪಡೆಯುವಲ್ಲಿ ಮನಸ್ಸೇ ಪ್ರಧಾನ ಪಾತ್ರ ವಹಿಸುವುದರಿಂದ ಶರೀರದ ಆರೋಗ್ಯದ ಜತೆಗೆ ಮನಸ್ಸಿನ ಸುಸ್ಥಿತಿಯನ್ನೂ ಗಮನದಲ್ಲಿಟ್ಟುಕೊಂಡು ವಿಧಿ&ನಿಷೇಧಗಳನ್ನು ಸೂಚಿಸಿದ್ದಾರೆ. ಈ ಮೂಲಭೂತ ವಿಚಾರ ಕಾಲಕ್ರಮದಲ್ಲಿ ಕಳೆದುಹೋಗಿ ವಿಧಿ&ನಿಷೇಧಗಳ ಪಟ್ಟಿ ಮಾತ್ರವೇ ಉಳಿಯಿತು. ಇಂದು ಆ ಪಟ್ಟಿಯಲ್ಲಿ ಭೌತಿಕ ಆರೋಗ್ಯವನ್ನು ಸೂಚಿಸುವ ಅಂಶಗಳನ್ನಷ್ಟೇ ಗೌರವಿಸಿ ಉಳಿದವುಗಳನ್ನೆಲ್ಲ ಅರ್ಥಹೀನವೆಂದು ಭಾವಿಸುವ ಪರಿಸ್ಥಿತಿ ಏರ್ಪಟ್ಟಿದೆ.

ಶುದ್ಧತೆ ಅನಿವಾರ್ಯ ಕರ್ತವ್ಯ

ಕರೊನಾದಿಂದ ರಸಿಕೊಳ್ಳಲು ವಿಶೇಷ ವಿಧಿ& ನಿಷೇಧಗಳ ಪಟ್ಟಿ ಇದೆಯಲ್ಲವೇ? ಮುಖಕ್ಕೆ ಮಾಸ್ಕ್​, ಕೈಗಳಿಗೆ ಸಾನಿಟೈಸರ್​, ವ್ಯಕ್ತಿಗಳ ಮಧ್ಯೆ ದೈಹಿಕ ಅಂತರ ಮುಂತಾದವು ವಿಧಿಯ ಪಟ್ಟಿಯಲ್ಲಿದ್ದರೆ, ಜನ ಗುಂಪು ಕಟ್ಟಬಾರದು, ಬೀದಿಯಲ್ಲಿ ಉಗುಳಬಾರದು ಇತ್ಯಾದಿ ನಿಷೇಧದ ಪಟ್ಟಿಯಲ್ಲಿವೆ. ನೆಗಡಿ&ಕೆಮ್ಮು ಹೊಸದೇನಲ್ಲವಲ್ಲ, ಹಾಗಾದರೆ ಈಗೇಕೆ ಇಷ್ಟೊಂದು ಕಟ್ಟುಪಾಡು? ಈ ವಿಧಿ& ನಿಷೇಧ ಪಟ್ಟಿಯನ್ನು ರೋಗಾಣುವಿನ ಸ್ವರೂಪವೇ ನಿಶ್ಚಯಿಸುತ್ತದೆ. ರೋಗದ ಪರಿಚಯ ಇಲ್ಲದವರಿಗೆ ಈ ಕಟ್ಟುಪಾಡುಗಳೆಲ್ಲ ಅರ್ಥಹೀನ. ಆದರೆ ಕರೊನಾದ ಹಾವಳಿಗೆ ಸಿಗಬಾರದೆಂದಿದ್ದರೆ ಈ ಕಟ್ಟುಪಾಡುಗಳೆಲ್ಲವೂ ಅರ್ಥಪೂರ್ಣ; ಅಷ್ಟೇ ಅಲ್ಲ, ಅನಿವಾರ್ಯ ಕೂಡ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net