ಇತರರಿಗೂ ಮಾದರಿ ಆಗಲಿ

Janamata
Published on

ತನ್ನಲ್ಲಿ ಖಾತೆ ಹೊಂದಿರುವ ಪಿಂಚಣಿದಾರರಿಗೆ ವಿಶೇಷವಾಗಿ 80 ವರ್ಷಕ್ಕಿಂತ ಹೆಚ್ಚು ಪ್ರಾಯದವರಿಗೆ ಕರೊನಾ ಲಾಕ್​ಡೌನ್ ಸಂದರ್ಭದಲ್ಲಿ ಮನೆಗೆ ಪಿಂಚಣಿ ತಲುಪಿಸುವ ಕಾರ್ಯವನ್ನು ಬ್ಯಾಂಕ್ ಆಫ್ ಮಹಾರಾಷ್ಟ್ರದ ಪುಣೆಯ ಭವಾನಿಪೇಟ್ ಶಾಖೆ ಪ್ರಾರಂಭಿಸಿದೆ. ಲಾಕ್​ಡೌನ್ ಸಮಯದಲ್ಲಿ ಹಿರಿಯರು ಮನೆಯಿಂದ ಹೊರಗೆ ಬರಬೇಡಿ ಎಂಬುದಾಗಿ ಮಾಧ್ಯಮಗಳಲ್ಲಿ ಪ್ರಚಾರವಾಗುತ್ತಲೇ ಇರುತ್ತದೆ. ಆದರೆ ಅಗತ್ಯ ಇರುವ ವಯೋವೃದ್ಧರಿಗೆ ಅವರ ಹಕ್ಕಿನ ಸೌಲಭ್ಯ ಒದಗಿಸಲು ಮುಂದಾದವರು ಕಡಿಮೆ. ಬ್ಯಾಂಕುಗಳಲ್ಲಿ ತಿಂಗಳ ಮೊದಲ ವಾರದಲ್ಲಿ ಹಿರಿಯರಿಗಾಗಿ ಪ್ರತ್ಯೇಕ ಸಾಲಿನ, ಕಿಟಕಿಯ ಏರ್ಪಾಡು ಮಾಡುವಂತೆ ಸಲ್ಲಿಸಿದ ಕೇಳಿಕೆ ಕಾರ್ಯಗತವಾಗುತ್ತಿಲ್ಲ. ಹಿರಿಯರಿಗೆ ಪ್ರಾಶಸ್ಱ ಕೊಡಿ ಎಂಬ ನಾಮಫಲಕ ಕೆಲವು ಕಡೆ ಹಾಕಲಾಗಿದೆ. ಆದರೆ ಅದನ್ನು ಕಾರ್ಯಗತಗೊಳಿಸುವಲ್ಲಿ ಅವರು ಆಸಕ್ತಿ ತೋರಿಸುತ್ತಿಲ್ಲ. ಬ್ಯಾಂಕ್ ಆಫ್ ಮಹಾರಾಷ್ಟ್ರ ಪ್ರಾರಂಭಿಸಿರುವ ಕಾರ್ಯ ದೇಶದಲ್ಲಿ ಮಾದರಿ. ದೇಶದ, ರಾಜ್ಯದ ಎಲ್ಲ ಬ್ಯಾಂಕುಗಳು ಪಿಂಚಣಿ ಪಡೆಯುವ ವಯೋವೃದ್ಧ ಹಿರಿಯ ನಾಗರಿಕರಿಗೆ ಈ ಸೌಲಭ್ಯವನ್ನು ಒದಗಿಸಲು ಚಿಂತನೆ ನಡೆಸಿ, ಅನುಷ್ಠಾನಕ್ಕೆ ಮುಂದಾಗಬೇಕು.

| ಶ್ರೀನಿವಾಸ ಶೆಟ್ಟಿ ತೋನ್ಸೆ ಉಡುಪಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net