

ಕೋವಿಡ್ನಿಂದಾಗಿ ಯುವಜನತೆಯಲ್ಲಿ ಆಹಾರಕ್ರಮ ವ್ಯತ್ಯಾಸವಾಗಿದೆ. ದೈಹಿಕ ಚಟುವಟಿಕೆಗಳು ಕಡಿಮೆಯಾಗಿದ್ದು, ಬೊಜ್ಜು ಮತ್ತು ಡಯಾಬಿಟೀಸ್ ಹೆಚ್ಚಾಗುತ್ತಿದೆ. ಚಿಕ್ಕವಯಸ್ಸಿನಲ್ಲೇ ಕಾಯಿಲೆ ತಂದುಕೊಳ್ಳದಿರುವ ಕುರಿತು ಗಮನಹರಿಸಬೇಕಿದೆ. ಉತ್ತಮ ಜೀವನಶೈಲಿ ರೂಪಿಸಿಕೊಳ್ಳಬೇಕಿದೆ.
ಇಡೀ ಜಗತ್ತನ್ನು ಎರಡು ವರ್ಷದಿಂದ ಬಾಧಿಸುತ್ತಿರುವ ಕೋವಿಡ್ ಮಾಡಿರುವ ಹಾನಿ ಅಷ್ಟಿಷ್ಟಲ್ಲ. ಈಗ ಕೇವಲ ಕೋವಿಡ್ ಬಗ್ಗೆ ಅಲ್ಲ, ಇತರೆ ಸಮಸ್ಯೆಗಳ ಬಗ್ಗೆಯೂ ಗಮನಹರಿಸುವ ಅಗತ್ಯ ಎದುರಾಗಿದೆ. ಅದರಲ್ಲಿ ಪ್ರಮುಖವಾಗಿ ಯುವಜನತೆಯ ಕುರಿತು ಚಿಂತನೆ ನಡೆಸಬೇಕಿದೆ. ಯುವಕರು ದೇಶದ ಭವಿಷ್ಯ. ನಾವು ವರ್ತಮಾನವನ್ನು ಚೆನ್ನಾಗಿಟ್ಟುಕೊಂಡರೆ, ಭವಿಷ್ಯ ಸಹ ಉಜ್ವಲವಾಗಿರುತ್ತದೆ. ಆದರೆ, ಅದು ಅಷ್ಟು ಸುಲಭದ ವಿಷಯವಲ್ಲ ಎಂಬುದಂತೂ ಕಟುಸತ್ಯ...
ಏಕೆಂದರೆ, ಇಂದು ಒಂದು ಕಡೆ ಕೋವಿಡ್ ಹಾಗೂ ಅದರಿಂದ ಎದುರಾಗಿರುವ ಆರ್ಥಿಕ ಸಮಸ್ಯೆ. ಇನ್ನೊಂದೆಡೆ, ರಷ್ಯಾ ಮತ್ತು ಯೂಕ್ರೇನ್ ನಡುವೆ ನಡೆಯುತ್ತಿರುವ ಯುದ್ಧದಿಂದ, ಅಲ್ಲಿ ಕಲಿಯಲು ಹೋಗಿದ್ದ ವಿದ್ಯಾರ್ಥಿಗಳಿಗೆ ಶಿಕ್ಷಣದ ಬಿಕ್ಕಟ್ಟು ಸೇರಿ ಹಲವು ಸವಾಲುಗಳು ಹಾಗೂ ಸಮಸ್ಯೆಗಳು ಎದುರಾಗಿವೆ. ಇದಕ್ಕೆ ಧೃತಿಗೆಡದೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಯುವಜನರು ಮುಂದಾಗಬೇಕು. ಅದಕ್ಕಾಗಿ ಮೊದಲು ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಆರೋಗ್ಯವಂತ ಯುವಜನರಿಂದ ಸದೃಢ ಸಮಾಜ ನಿರ್ಮಾಣ ಸಾಧ್ಯ.
ಕೋವಿಡ್ ಕರಿನೆರಳಿನಿಂದ ಈಗಷ್ಟೇ ಹೊರಬರುತ್ತಿದ್ದೇವೆ. ಇದರ ಬೆನ್ನಲ್ಲೇ ಚೀನಾದಲ್ಲಿ ಕೋವಿಡ್ 4ನೇ ಅಲೆ ತೀವ್ರಗೊಂಡು ಕೆಲ ನಗರಗಳಲ್ಲಿ ಲಾಕ್ಡೌನ್ ವಿಧಿಸಿರುವುದು ಮತ್ತೆ ಆತಂಕ ಸೃಷ್ಟಿಸಿದೆ. ಹಾಗೆಂದು ಯಾರೂ ಹೆದರುವ ಅಗತ್ಯವಿಲ್ಲ. ಇನ್ನೂ ಕೆಲ ಸಮಯ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಕೈಗಳ ಸ್ವಚ್ಛತೆಗೆ ಸ್ಯಾನಿಟೈಸ್ ಬಳಕೆ ಸೇರಿ ಎಲ್ಲರೂ ಕೋವಿಡ್ ನಿಯಮಗಳನ್ನು ತಪ್ಪದೇ ಪಾಲಿಸಬೇಕು.
ಯುವಜನತೆ ಆರೋಗ್ಯದ ಬಗ್ಗೆ ಹೆಚ್ಚು ಜಾಗೃತಿ ವಹಿಸಬೇಕಿದೆ. ಪ್ರಮುಖವಾಗಿ ಇಂದಿನ ಜೀವನಶೈಲಿ ಬದಲಾಗಿದೆ. ಹೊಸ ಜೀವನಶೈಲಿಗೆ ಮಾರುಹೋಗುತ್ತಿರುವ ಯುವಜನತೆ, ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸುತ್ತಿಲ್ಲ. ಕೋವಿಡ್ನಿಂದಾಗಿ ಯುವಜನತೆಯಲ್ಲಿ ಆಹಾರಕ್ರಮ ವ್ಯತ್ಯಾಸವಾಗಿದ್ದು, ದೈಹಿಕ ಚಟುವಟಿಕೆಗಳು ಕಡಿಮೆಯಾಗಿದ್ದು, ಬೊಜ್ಜು ಮತ್ತು ಡಯಾಬಿಟೀಸ್ ಹೆಚ್ಚಾಗುತ್ತಿದೆ. ಚಿಕ್ಕವಯಸ್ಸಿನಲ್ಲೇ ಕಾಯಿಲೆ ತಂದುಕೊಳ್ಳದಿರುವ ಕುರಿತು ಗಮನಹರಿಸಬೇಕಿದೆ. ಆರೋಗ್ಯ ಕಾಳಜಿಯಿಂದ ಖಂಡಿತವಾಗಿಯೂ ವಿವಿಧ ಕಾಯಿಲೆಗಳಿಂದ ದೂರವಿರಬಹುದು. ಈ ನಿಟ್ಟಿನಲ್ಲಿ ನನ್ನದೊಂದಿಷ್ಟು ಸಲಹೆಗಳಿವೆ.
ಈ ರೀತಿಯ ಕೆಲ ಕ್ರಮಗಳನ್ನು ತೆಗೆದುಕೊಂಡರೆ ದೇಶದ ಭವಿಷ್ಯವಾಗಿರುವ ಯುವಜನತೆಯನ್ನು ಸರಿಯಾದ ದಾರಿಯಲ್ಲಿ ಮುನ್ನಡೆಸುವುದರ ಜತೆಗೆ, ಆರೋಗ್ಯಕರ ಸಮಾಜ ನಿರ್ವಣದ ಕಡೆಗೂ ಮುನ್ನಡೆಯಬಹುದು. ಯುವಕರಷ್ಟೇ ಅಲ್ಲ, ಹಿರಿಯರು ಸಹ ಈ ನಿಟ್ಟಿನಲ್ಲಿ ಹೆಜ್ಜೆ ಇಟ್ಟರೆ ದೇಶದ ಭವಿಷ್ಯವೂ ಉಜ್ವಲವಾಗುವುದರಲ್ಲಿ ಸಂದೇಹವಿಲ್ಲ.