

| ಕೃಷ್ಣವೇಣಿ ಪ್ರಸಾದ್ ಮುಳಿಯಟ್ರೆಡ್ವಿುಲ್ ಎಂದರೆ...
ಕಡಿಮೆ ಜಾಗವುಳ್ಳ ಪ್ರದೇಶದಲ್ಲಿ ರಭಸದಿಂದ ಚಲಿಸುವ ಇಲೆಕ್ಟ್ರಾನಿಕ್ ಯಂತ್ರದಲ್ಲಿರುವ ಮ್ಯಾಟ್ನಲ್ಲಿ ನಿಂತು ನಡೆಯುತ್ತಾ ಒಂದೇ ಜಾಗದಲ್ಲಿ ಬಹುದೂರ ಸಾಗಬಹುದೆಂದು ಭಾಸವಾಗುವ ಯಂತ್ರವೇ ಟ್ರೆಡ್ವಿುಲ್.
ಟ್ರೆಡ್ ಮಿಲ್ ಬಳಕೆ ಮತ್ತು ಮುಂಜಾಗ್ರತಾ ಕ್ರಮ
ಯಂತ್ರವನ್ನು ಚಾಲು ಮಾಡುವ ಮೊದಲು ಚಲಿಸುವ ಮ್ಯಾಟ್ನಲ್ಲಿ ನಿಲ್ಲದೆ ಅದರ ಬದಿಯಲ್ಲಿ ನಿಲ್ಲಬೇಕು. ಅನಂತರ ಸ್ಟಾರ್ಟ್ ಬಟನ್ನ್ನು ಒತ್ತಿದಾಗ ಮ್ಯಾಟ್ ಚಲಿಸಲು ಪ್ರಾರಂಭಿಸುತ್ತದೆ. ಆಗ ಒಂದು ಕಾಲು ಒಳಗಿಟ್ಟು ಸರಿಹೊಂದಿಸಿ ಇನ್ನೊಂದು ಕಾಲನ್ನು ಜೊತೆಗೂಡಿಸಿ ನಡೆಯಲು ಆರಂಭಿಸಬೇಕು. ಯಂತ್ರದ ಮುಂದೆ ಒಂದು ಅಡಿ ಜಾಗ ಅಲ್ಲದೆ ಹಿಂದೆ 5 ಅಡಿ ಖಾಲಿ ಜಾಗ ಇರಬೇಕು. ಇದು ಪ್ರಮುಖವಾಗಿದೆ.
ಟ್ರೆಡ್ವಿುಲ್ ಬಳಸುವ ಮೊದಲು ನಮ್ಮ ಉಡುಪು ಹೇಗಿರಬೇಕು?
ಸಡಿಲ ಪ್ಯಾಂಟ್, ಕಾಟನ್ ಟಾಪ್ ಅಥವಾ ಟೀ ಶರ್ಟ್ ಆದರೆ ಒಳ್ಳೆಯದು ಸ್ಪೋರ್ಟ್ಸ್ ಶೂ ಹಾಕಿ ಒಳಗೆ ಕಾಟನ್ ಸಾಕ್ಸ್ ಹಾಕಿದ್ದರೆ ಉತ್ತಮ.
ಟ್ರೆಡ್ವಿುಲ್ ಬಳಸಬೇಕಾದರೆ ನಮ್ಮ ಆರೋಗ್ಯ ಹೇಗಿರಬೇಕು?
ಬೆನ್ನು ನೋವು, ಮೊಣಕಾಲು ನೋವು ಇದ್ದವರು ಗುಡ್ಡ ಹತ್ತುವಂತೆ ನಡೆಯಬಾರದು, ಓಡಬಾರದು.
ಟ್ರೆಡ್ವಿುಲ್ ಅನ್ನು ಎಷ್ಟು ರೀತಿಯಲ್ಲಿ ಬಳಸಬಹುದು?
ಟ್ರೆಡ್ವಿುಲ್ನ್ನು 2 ರೀತಿಯಲ್ಲಿ ಉಪಯೋಗಿಸಿ ಕೊಳ್ಳಬಹುದಾಗಿದೆ. - ಸಮನಾದ ಜಾಗದಲ್ಲಿ ನಡೆಯುವ ಅನುಭವ ನೀಡುವಂತೆ ಮತ್ತು ಗುಡ್ಡ ಹತ್ತುವ ಅನುಭವ ನೀಡುವಂತೆ ಬಳಸಬಹುದು. ಈ 2 ರೀತಿಯಲ್ಲೂ ನಡೆಯಬಹುದು, ಓಡಬಹುದು, ದಾಪುಗಾಲು ಕೂಡ ಹಾಕಬಹುದು. ಇದು ಅವರವರ ದೇಹದ ಸಮಸ್ಯೆಗನುಗುಣವಾಗಿ ಬಳಸತಕ್ಕದ್ದು.
ಟ್ರೆಡ್ವಿುಲ್ ಅನ್ನು ಸರಿಯಾಗಿ ಇಟ್ಟುಕೊಳ್ಳುವುದು
ಪ್ರತಿ ತಿಂಗಳು ಸಹ ಚಲಿಸುವ ಬೆಲ್ಟ್ನ ಅಡಿಯಲ್ಲಿ ಸಿಲಿಕಾನ್ ಆಯಿಲ್ ಅನ್ನು ಸವರಬೇಕು. ಧೂಳು ಹೋಗದ ಹಾಗೆ ನೋಡಬೇಕು. ಇಲ್ಲದಿದ್ದರೆ ಸರಾಗವಾಗಿ ಚಲಿಸುವುದಿಲ್ಲ. ಟ್ರೆಡ್ವಿುಲ್ ಮಾಡುವಾಗ ದೇಹದ ಪೂರ್ಣ ತೂಕವನ್ನು ಕಾಲುಗಳನ್ನು ಬಳಸಿಯೇ ನಡೆಯಬೇಕು. ಅದಲ್ಲದೆ ನಮ್ಮ ಕೈಗಳಿಂದ ಯಂತ್ರದಲ್ಲಿರುವ ಹ್ಯಾಂಡಲ್ ಹಿಡಿದುಕೊಂಡರೆ ನಮ್ಮ ದೇಹದ ಸಮತೋಲನ ತಪ್ಪುವ ಸಾಧ್ಯತೆ ಇರುತ್ತದೆ ಮತ್ತೆ ಭುಜ ಮತ್ತು ಸೊಂಟದ ನೋವು ಬರುವ ಸಾಧ್ಯತೆ ಇರುತ್ತದೆ.
ಟ್ರೆಡ್ವಿುಲ್ನಲ್ಲಿ ಯಾವೆಲ್ಲ ಬಟನ್ ಪ್ರಾಮುಖ್ಯವಾದುವು
ಇನ್ಕ್ಲೈನ್ಲ್ಲಿ ನಡೆಯುವ, ಮ್ಯೂಸಿಕ್ ಹೊಂದಿಸುವ, ಪೆನ್ಡ್ರೈವ್ ಹಾಕುವ, ಮೊಬೈಲ್ ಚಾರ್ಜ್ ಮಾಡುವ, ಪೋಸ್ ಮಾಡುವ, ಪಲ್ಸ್ ರೇಟ್ ನೋಡುವ, ಟೈಮ್ ಇರುವ, ಕ್ಯಾಲರಿ ಬರ್ನ್ ತಿಳಿಸುವ ಸರಿಯಾದ ರೀತಿಯಲ್ಲಿ ಸ್ಪೀಡ್ ಹೊಂದಿಸುವ ಎಲ್ಲಾ ಬಟನ್ಗಳು ಇದೆಯೇ ಎಂದು ಪರಿಶೀಲಿಸಿ ಖರೀದಿಸಿ. ಸೇಫ್ಟಿ ಕ್ಲಿಪ್ ಇರಲೇಬೇಕು.
ಟ್ರೆಡ್ವಿುಲ್ ಅನ್ನು ಹಿರಿಯರು ಬಳಸುವಾಗ ಮುಂಜಾಗ್ರತೆ ಹೇಗೆ?
ಹಿರಿಯರು ಬಳಸುವಾಗ ಆದಷ್ಟು ಒಬ್ಬರೇ ಮಾಡದಿರುವುದು ಒಳ್ಳೆಯದು. ಬಿದ್ದು ಹೋದರೆ ಕಷ್ಟ ಅಲ್ಲದೆ ಸೇಫ್ಟಿ ಎಮರ್ಜೆನ್ಸಿ ಕ್ಲಿಪ್ಪನ್ನು ಧರಿಸಿ ಮಾಡಿದರೆ ಉತ್ತಮ. ಹಿರಿಯರು ಮನೆಯಲ್ಲಿ ವಾಕರ್ ಮೆಷಿನ್ನಲ್ಲಿ ನಡೆಯುವಾಗ ಮನೆ ಮಂದಿಯಲ್ಲಿ ಯಾರಿಗಾದರೂ ತಿಳಿದಿರಲಿ.
ಟ್ರೆಡ್ವಿುಲ್ನ್ನು ಮಕ್ಕಳು ಯಾವ ವಯಸ್ಸಿನಿಂದ ಬಳಸಬಹುದು?
ಈ ಯಂತ್ರದಲ್ಲಿ ಯಾವ ವಯಸ್ಸಿನವರಾದರೂ ನಡೆಯಬಹುದು. ನಡೆಯುವ ಕ್ರಮ ತಿಳಿದಿರಬೇಕು. ಆಟ ಆಡಲು ಬಿಡಬಾರದು ನೆನಪಿರಲಿ.
ಟ್ರೆಡ್ ಮಿಲ್ ಆಧುನಿಕ ಬದುಕಿನ ಪರಿಹಾರ ಉಪಕರಣಗಳ ಪೈಕಿ ಒಂದು. ಇದು ಆಧುನಿಕ ಬದುಕಿನ ವಾಕ್ವೆುೕಟ್ ಅಥವಾ ರನ್ವೆುೕಟ್ ಎಂದರೆ ತಪ್ಪಾಗಲಾರದು. ಆದರೆ, ಇದರ ಬಳಕೆ ಸುಲಭವಲ್ಲ, ಮುಂಜಾಗ್ರತೆಯೂ ಅಗತ್ಯ ಎಂಬುದನ್ನು ಬಳಕೆದಾರರು ಮರೆಯಬಾರದು. | ಶ್ರೀಕೃಷ್ಣ ಪುತ್ತೂರು ತರಬೇತುದಾರ
ನಡಿಗೆ ಮತ್ತು ಓಟಕ್ಕೆ ಸಂಬಂಧಿಸಿ ಟ್ರೆಡ್ ಮಿಲ್ ಮತ್ತು ಇತರ ಕೆಲವು ಉಪಕರಣಗಳನ್ನು ಯುವಜನರು ಬಳಸುತ್ತಾರೆ. ಅಂತಹ ಉಪಕರಣಗಳ ಪೈಕಿ ಆಯ್ದ ಉಪಕರಣಗಳನ್ನು ಯಾವುದಕ್ಕೆ ಮತ್ತು ಯಾವಾಗ ಬಳಸಿದರೆ ಉತ್ತಮ ಎಂಬುದರ ವಿವರ ಇಲ್ಲಿದೆ.