

ವಯಸ್ಸು ಹತ್ತು ಆವಾಗ, ಇಂದಿಗೆ ಹನ್ನೊಂದು ವರ್ಷ ಕಳೆಯಿತು. ಆವಾಗ ನಾನು ಇನ್ನೂ ಪ್ರಾಥಮಿಕ ಶಾಲೆಯಲ್ಲಿ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದೆ. ಇವಾಗಲು ನೆನಪಿದೆ, ಆ ದಿನ ಶಾಲೆಯಲ್ಲಿ 8ನೇ ತರಗತಿ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆಯಾಗಿತ್ತು. ಪ್ರಾಥಮಿಕ ಶಾಲೆ ಅಂದರೆ ಅದೊಂದು ಒಂಥರ ಖುಷಿಯ ದಿನಗಳು. ಲೇಟ್ ಹೋಗೋದು, ಬೇಗ ಬರೋದು, ಮಾವಿನ ಮರಕ್ಕೆ ಕಲ್ಲು ಎಸೆಯುವುದು, ಪೇರಳೆ ಕದಿಯುವುದು ಹೀಗೆ ಸಾವಿರ ನೆನಪುಗಳು, ಆದರೆ ತಂದೆ-ತಾಯಿಯಲ್ಲಿ ಹೇಳಲೆ ಇಲ್ಲ. ಒಂದು ದಿನ ಸಂಜೆ ಮನೆಗೆ ಬೇಗ ಮುಟ್ಟಬೇಕೆಂಬ ಆಸೆ, ಶಾಲೆ ಬಿಟ್ಟ ತಕ್ಷಣವೇ ಓಟದ ಹೆಜ್ಜೆ ಇಟ್ಟಿದ್ದೆ, ನಾನು ರಸ್ತೆಯಲ್ಲಿ ಓಡಿಕೊಂಡು ಬರುತ್ತಿದ್ದೆ, ಹಿಂದುಗಡೆಯಿಂದ ನನ್ನ ಪರಿಚಯದವನೇ ಎಂಟನೆಯ ತರಗತಿಯವನೂ ಹೊಸ ಸೈಕಲ್ ನನ್ನ ಮೇಲೆಯೆ ಹತ್ತಿಸಿ ಬಿಟ್ಟಿದ್ದ, ತಪ್ಪು ನನ್ನದು ಆದರೂ ಅವನು ನೋಡಿಕೊಳ್ಳಬೇಕಿತ್ತು ನನ್ನ ವಾದ.
ಕೈ ಸ್ವಲ್ಪ ಗಾಯವಾಯಿತು, ರಕ್ತವು ಡಾಂಬರನ್ನು ಮುತ್ತಿಟ್ಟಿತ್ತು. ಹಾಗೆ ಮನೆಗೆ ಬಂದೆ, ಹೆತ್ತವರಲ್ಲಿ ಯಾರಲ್ಲಿಯೂ ಕೂಡ ಹೇಳಲಿಲ್ಲ, ಹೋಗಿ ಸ್ನಾನ ಮಾಡಿದೆ, ಗಾಯಕ್ಕೆ ಒಂದುವರೆ ರೂಪಾಯಿಯ ಎರಡು ಬೇಡೆಂಜ್ ಹಾಕಿದೆ. ಉದ್ದ ಕೈ ಟಿ-ಸರ್ಟ್ ದರಿಸಿದೆ. ರಾತ್ರಿಯಾಯಿತು, ಸಮಯ ಸುಮಾರು ಎಂಟಿರಬೇಕು. ನನಗೆ ಸೈಕಲ್ ಗುದ್ದಿದವನ ಹೆತ್ತವರೊಂದಿಗೆ ನನ್ನ ಮನೆಗೆ ಭೇಟಿ ನೀಡಿದ್ದರು, ನನಗೆ ತುಂಬ ಭಯವಾಯಿತು ಅವನನ್ನು ನೋಡಿ, ರೂಂ ಅಲ್ಲಿಯೇ ಇದ್ದೆ. ಅವರು ಅಮ್ಮನಲ್ಲಿ ಕೇಳಿಯೆ ಬಿಟ್ಟರು. "ಯಾಚೀ ಎಲ್ಲಿ..? ಗಾಯ ಎಷ್ಟಾಗಿದೆ..?" ಅಮ್ಮನಿಗೆ ಆಶ್ಚರ್ಯವಾಯಿತು. ಏನೀದು ಕೇಳುತ್ತಿರುವುದು ಅಂತ.. ಆವಾಗಲೇ ಎಲ್ಲವೂ ಸತ್ಯಗಳನ್ನು ಹೇಳಿಬಿಟ್ಟೆ. ತಂದೆಗೆ ಹೇಳಬಾರದೆಂದು ಕೂಗೀಯೆ ಬಿಟ್ಟಿದ್ದೆ, ನನ್ನ ತಪ್ಪು ರಸ್ತೆಯಲ್ಲಿ ಓಡಿಕೊಂಡು ಬಂದದ್ದು ಅಷ್ಟೆ. ತಂದೆಗೆ ಇಂದಿಗೂ ಕೂಡ ಗೊತ್ತಿಲ್ಲ, ಅಮ್ಮ ಅಂದು ಹೇಳಿದ ಪಾಠವು ಇಂದಿಗೂ ಅನುಸರಿಸುತ್ತಿದ್ದೇನೆ. ಆದರೆ ಈ ಘಟನೆ ಪ್ರತೀ ಬಾರಿಯು ನನ್ನ ಎಡಗೈ ನೋಡುವಾಗ ಮತ್ತೇ ಮತ್ತೇ ನೆನಪಿಸುತ್ತದೆ. ಅಮ್ಮಾ... ಕ್ಷಮಿಸು ಬಿಡು,, ನನ್ನ ಏನಾದರೂ ತಪ್ಪಾಗಿದ್ದರೆ..!
| ಯಾಸೀನ್ ಬಂಗೇರಕಟ್ಟೆ ಅಂತಿಮ ಪತ್ರಿಕೋದ್ಯಮ ವಿದ್ಯಾರ್ಥಿ, ಎಸ್ಡಿಎಂ ಕಾಲೇಜು ಉಜಿರೆ