

ನಮ್ಮಕ್ಕ ಕಲಿಕೆಯಲ್ಲಿ ಚುರುಕಾಗಿದ್ದಳು. ತಮ್ಮನೂ ಬುದ್ಧಿವಂತ. ದಡ್ಡಿ ಎಂದರೆ ನಾನೇ. ನನಗೆ ಓದುವುದಕ್ಕಿಂತ ಊಟ ಇಷ್ಟ. ಆಗ ತಾನೆ ಎಸ್ಸೆಸ್ಸೆಲ್ಸಿಯಲ್ಲಿ ಅತಿ ಕಡಿಮೆ ಅಂಕಗಳೊಂದಿಗೆ ಪಾಸಾಗಿದ್ದೆ. ಕಾಲೇಜು ಸೇರುವ ತವಕ. ಊರ ಪಕ್ಕದಲ್ಲೇ ಒಂದು ಕಾಲೇಜಿತ್ತು. ಅಲ್ಲಿಗೆ ಸೇರುವುದೆಂದು ನಿರ್ಧರಿಸಿದೆ. ಅಡ್ಮಿಷನ್‌ಗೆ ನನ್ನೊಂದಿಗೆ ಬರಲು ಅಪ್ಪ ಒಪ್ಪಲಿಲ್ಲ. ‘ಇಷ್ಟು ಕಡಿಮೆ ಮಾರ್ಕ್ ತೆಗೆದಿದ್ದೀಯಾ, ನೀನೊಬ್ಬಳೇ ಹೋಗು’ ಎಂದುಬಿಟ್ಟರು. ನನಗೆ ಕಡಿಮೆ ಮಾರ್ಕ್ಸ್ ಬಂದಾಗಲೂ ಅಷ್ಟು ನೋವಾಗಿರಲಿಲ್ಲ, ಅಪ್ಪನ ಮಾತಿನಿಂದ ಬಹಳ ನೋವಾಯಿತು. ಎಷ್ಟಾದರೂ ಹೆತ್ತಮ್ಮ ಬಿಡುತ್ತಾಳಾ? 2 ಕಿಮೀ ದೂರದ ಕಾಲೇಜಿಗೆ ನನ್ನೊಂದಿಗೆ ನಡೆದುಕೊಂಡೇ ಬಂದಳು.
| ಭವಾನಿ ಎಂ. ದೊಡ್ಡಬಳ್ಳಾಪುರ