

|ಉಮೇಶಕುಮಾರ್ ಶಿಮ್ಲಡ್ಕ
ಭಾರತದ ನವೋದ್ಯಮ ಕ್ಷೇತ್ರದ ಚಾಲನಾ ಸ್ತರದಲ್ಲಿ ಲಿಂಗ ತಾರತಮ್ಯ ಕೊಂಚ ಮಟ್ಟಿಗೆ ನಿವಾರಣೆ ಆಗಿದ್ದು, 2021ರಲ್ಲಿ ಮಹಿಳೆಯರ ನಾಯಕತ್ವ ಪ್ರಮಾಣದಲ್ಲಿ ಸ್ವಲ್ಪ ಸುಧಾರಣೆ ಆಗಿದೆ. ಏಷ್ಯಾದ ಪ್ರಮುಖ ಉದ್ಯಮ ಬಂಡವಾಳ ಸಾಲ ನೀಡಿಕೆ ಸಂಸ್ಥೆ ಇನ್ನೊವೆನ್ ಕ್ಯಾಪಿಟಲ್ ಇತ್ತೀಚೆಗೆ ಪ್ರಕಟಿಸಿದ ಏಳನೇ ಆವೃತ್ತಿಯ ‘ಸ್ಟಾರ್ಟಪ್ ಔಟ್ಲುಕ್ ರಿಪೋರ್ಟ್ 2022’ ಈ ಕುರಿತು ಗಮನಸೆಳೆದಿದೆ. 100 ನವೋದ್ಯಮ ಸಂಸ್ಥಾಪಕರು ಇನ್ನೋವೆನ್ ಸಮೀಕ್ಷೆಯಲ್ಲಿ ಭಾಗವಹಿಸಿದ್ದರು. ಅವರು ನೀಡಿದ ಮಾಹಿತಿಗಳನ್ನು ಆಧರಿಸಿ ವರದಿ ಸಿದ್ಧವಾಗಿದೆ. ದೇಶದಲ್ಲಿ 2020ರಲ್ಲಿ ಶೇ.77 ನವೋದ್ಯಮಗಳಿಗೆ ಹೋಲಿಸಿದರೆ 2021ರಲ್ಲಿ ಶೇ.70 ನವೋದ್ಯಮಗಳಲ್ಲಿ ನಾಯಕತ್ವ ಸ್ಥಾನಗಳಲ್ಲಿ ಶೇಕಡ 20ಕ್ಕಿಂತ ಕಡಿಮೆ ಮಹಿಳೆಯರಿದ್ದಾರೆ. ಅದೇ ರೀತಿ ಶೇಕಡ 41 ನವೋದ್ಯಮಗಳಲ್ಲಿ ಶೇ.10ಕ್ಕಿಂತ ಕಡಿಮೆ ಮಹಿಳೆಯರು ನಾಯಕತ್ವ ಸ್ಥಾನದಲ್ಲಿದ್ದಾರೆ. ಲಿಂಗ ತಾರತಮ್ಯ 2019ರಲ್ಲಿ ಶೇ.69 ನವೋದ್ಯಮಗಳಲ್ಲಿ ಶೇ. 20ಕ್ಕಿಂತ ಕಡಿಮೆ ಇತ್ತೆಂಬುದು ಗಮನಾರ್ಹ. ಒಟ್ಟಿನಲ್ಲಿ ಆಡಳಿತ ಸ್ತರದಲ್ಲಿ ಲಿಂಗ ವೈವಿಧ್ಯ ಕಾಪಾಡುವುದು, ಸುಧಾರಣೆಗೊಳಿಸುವುದು ಒಂದು ಸವಾಲಿನ ಕೆಲಸವೇ ಸರಿ ಎಂದು ವರದಿ ಹೇಳಿದೆ.
ತೆರೆಮರೆಯಲ್ಲಿತ್ತು ನಾಯಕತ್ವ ಕೆಲಸ: ಕೋವಿಡ್ 19 ಸಂಕಷ್ಟದ ಸಂದರ್ಭ ದಲ್ಲಿ ಮೆಕ್ಇನ್ಸೆ ಆಂಡ್ ಕಂಪನಿ ನಡೆಸಿದ ಸಮೀಕ್ಷೆಯ ‘ವಿಮೆನ್ ಇನ್ ವರ್ಕ್ಪ್ಲೇಸ್ 2021’ ವರದಿ ಪ್ರಕಾರ, ಪುರುಷ ನಾಯಕತ್ವಕ್ಕೆ ಹೋಲಿಸಿದರೆ ಮಹಿಳಾ ನಾಯಕತ್ವ ಹೆಚ್ಚು ಮಾನವೀಯ ಕೆಲಸ ಮಾಡಿದೆ.
ಸಮಸ್ಯೆ ಬಗೆಹರಿಸುವ ಕೌಶಲ: ಗುಂಪು ಚರ್ಚೆ ಮತ್ತು ಸೃಜನಶೀಲತೆ, ಪ್ರತಿಯೊಬ್ಬರನ್ನೂ ಉತ್ತೇಜಿಸುವ ಕೆಲಸದಿಂದ ಹಿಡಿದು ಪ್ರತಿಯೊಂದರಲ್ಲೂ ಮುನ್ನುಗ್ಗುವ ಛಾತಿ ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬಂದಿದೆ. ಇದಲ್ಲದೆ ಯಾವುದೇ ಸಮಸ್ಯೆಗೂ ಪರಿಹಾರ ಒದಗಿಸಿ ಅದನ್ನು ಬಗೆಹರಿಸುವ ಕೌಶಲ ಹಾಗೂ ಜಾಗೃತಿ ಮಹಿಳಾ ನಾಯಕತ್ವದಲ್ಲಿ ವ್ಯಕ್ತವಾಗುತ್ತಿರುವುದು ಅನೇಕ ಸಮೀಕ್ಷೆಗಳಲ್ಲಿ ಬಹಿರಂಗವಾಗಿದೆ. ಅವರ ಈ ಕೌಶಲದ ಕಾರಣವೇ ಪ್ರಗತಿಗೆ, ಬೆಳವಣಿಗೆಗೆ ಪೂರಕವಾಗಿ ಕಂಡುಬಂದಿದೆ.
ಸವಾಲು ಎನಿಸಲು ಕಾರಣಗಳಿವು:
(ಮಾಹಿತಿ- ಸ್ಟಾರ್ಟಪ್ ಔಟ್ಲುಕ್ ರಿಪೋರ್ಟ್ 2022)