ಎಐಎಡಿಎಂಕೆಯಿಂದ ಹೊಸ ಮೈತ್ರಿಕೂಟ?

aiadmk
aiadmk
Published on

ಚೆನ್ನೈ: ಎನ್​ಡಿಎ ಮೈತ್ರಿಕೂಟದಿಂದ ಹೊರ ಬಂದ ಎಐಎಡಿಎಂಕೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹೊಸ ಮೈತ್ರಿಕೂಟ ಪ್ರಾರಂಭಿಸುವುದಾಗಿ ಹೇಳುತ್ತಿದೆ. ಇದು ತಮಿಳುನಾಡು ಮಾತ್ರವಲ್ಲದೆ, ದೇಶದಲ್ಲಿ ಮೂರನೇ ಮೈತ್ರಿಕೂಟ ಉದಯಕ್ಕೆ ಮತ್ತೊಮ್ಮೆ ನಾಂದಿಯಾಗುವುದೇ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಮೂಡುವಂತಾಗಿದೆ.

ಇದನ್ನೂ ಓದಿ

ತಮಿಳುನಾಡಿನ ಕೃಷ್ಣಗಿರಿಯಲ್ಲಿ ಎಐಎಡಿಎಂಕೆ ಮುಖಂಡ ಮುನಿಸ್ವಾಮಿ ಮಾತನಾಡಿ, ಮುಖ್ಯಮಂತ್ರಿ ಸ್ಟಾಲಿನ್​, ಅವರ ಪುತ್ರ ಉದಯನಿಧಿ ನಮ್ಮ ಪಕ್ಷ ಬಿಜೆಪಿ ಜತೆ ಇರುವುದಾಗಿ ಹೇಳುತ್ತಿದ್ದಾರೆ. ಇದು ಸತ್ಯಕ್ಕೆ ದೂರವಾದದ್ದು. ಬಿಜೆಪಿಯಿಂದ ಎಐಡಿಎಂಕೆ ದೂರವಾದರೆ ತಮಿಳುನಾಡಿನಲ್ಲಿ ಪರಿಸ್ಥಿತಿ ಏನಾಗುತ್ತದೆ ಎಂಬುದು ಡಿಎಂಕೆಯವರಿಗೆ ತಿಳಿದಿದೆ. ಈ ಭಯದಿಂದಲೇ ಅವರು ಬಿಜೆಪಿ ಜತೆಗಿದ್ದೇವೆಂದು ಹೇಳುತ್ತಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಪಳನಿಸ್ವಾಮಿ ನೇತೃತ್ವದಲ್ಲಿ ಹೊಸ ಮೈತ್ರಿಕೂಟ ಪ್ರಾರಂಭಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಬದಲಾವಣೆಗೆ ಒತ್ತಾಯಿಸುತ್ತೀರಾ ಎಂಬ ಪ್ರಶ್ನೆಗೆ ರಾಷ್ಟ್ರದ ದೊಡ್ಡ ಪಕ್ಷದ ಪ್ರಮುಖ ರಾಜ್ಯವೊಂದರ ರಾಜ್ಯಾಧ್ಯಕ್ಷರನ್ನು ಬದಲಿಸಬೇಕು ಎಂದರೆ ಆ ಮಾತಿಗೆ ಅರ್ಥವಿರುವುದಿಲ್ಲ. ಹಾಗೆ ಒತ್ತಾಯಿಸಲಿಕ್ಕೆ ಇದು ಮಕ್ಕಳ ಆಟವಲ್ಲ. ಮತ್ತೊಂದು ಪಕ್ಷ ಹೀಗೇ ಇರಬೇಕು ಎಂದು ಹೇಳುವುದು ಸರಿ ಎನಿಸುವುದಿಲ್ಲ ಎಂದು ಅವರು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net