

ಅಮೆರಿಕದ ಅಧ್ಯಕ್ಷೀಯ ಚುನಾವಣೆಯೆಂದರೆ ಅದು ದೊಡ್ಡ ಮೊತ್ತದ ವ್ಯವಹಾರ. ಶ್ವೇತಭವನದ ಗಮ್ಯ ತಲುಪಲು ಅಭ್ಯರ್ಥಿ ಕೋಟಿಗಟ್ಟಲೇ ಹಣ ವ್ಯಯಿಸಬೇಕಾದ ಪರಿಸ್ಥಿತಿ ಇದೆ. ಚುನಾವಣೆ ಬಹುದೀರ್ಘ ಪ್ರಕ್ರಿಯೆಯಾದ್ದರಿಂದ ಹೆಚ್ಚೇ ಹಣವನ್ನು ಬೇಡುತ್ತದೆ. ಅಭ್ಯರ್ಥಿಗಳು ವರುಷದ ಮೊದಲೇ ಪ್ರಚಾರ ತಂಡ ಕಟ್ಟಿಕೊಂಡು, ಹಲವು ಕಾರ್ಯಕರ್ತರನ್ನು, ವಿಷಯ ಪರಿಣಿತರನ್ನು, ಪ್ರಚಾರ ನಿರ್ವಾಹಕರನ್ನು ಪೂರ್ಣಾವಧಿಗೆ ನೇಮಿಸಿಕೊಳ್ಳಬೇಕಾಗುತ್ತದೆ. ಅವರೆಲ್ಲರ ಸಂಬಳ, ಓಡಾಟದ ಖರ್ಚು, ಜಾಹೀರಾತು, ಸಭೆ ಸಮಾರಂಭ ಎಂದು ಲಕ್ಷಾಂತರ ಡಾಲರ್ ಮೊತ್ತ ವ್ಯಯಿಸಬೇಕಾಗುತ್ತದೆ. ಕೇವಲ ಐಯೋವಾ, ನ್ಯೂ ಹ್ಯಾಂಪ್ಶೈರ್ನಂತಹ ಸಣ್ಣ ರಾಜ್ಯಗಳಲ್ಲಿ ಪ್ರಾಥಮಿಕ ಹಂತದ ಚುನಾವಣೆ ಗೆಲ್ಲಲು 20 ದಶಲಕ್ಷ ಡಾಲರ್ ಬೇಕಾಗುತ್ತದೆ!
ಈ ಸಂಬಂಧ ರಾಜಕೀಯ ತಜ್ಞರು ಬಳಸುವ ಪದವೊಂದಿದೆ ?’Mಟ್ಞಛಿಢ ಕ್ಟಜಿಞಚ್ಟಢ’. ತಮ್ಮ ಉಮೇದುವಾರಿಕೆಯನ್ನು ಘೊಷಿಸಿಕೊಳ್ಳುವ ಮೊದಲೇ, ಅಭ್ಯರ್ಥಿಗಳು ದೇಣಿಗೆ ಸಂಗ್ರಹಕ್ಕೆ ಇಳಿಯುವುದರಿಂದ ಈ ಹೆಸರು ಚಾಲ್ತಿಯಲ್ಲಿದೆ. ಸಾಮಾನ್ಯವಾಗಿ ಶ್ವೇತಭವನದ ಕನಸು ಕಂಡವರು, ಚುನಾವಣಾ ಪ್ರಕ್ರಿಯೆ ವಿಧ್ಯುಕ್ತವಾಗಿ ಆರಂಭವಾಗುವ ಮೊದಲೇ ದೇಣಿಗೆ ಸಂಗ್ರಹಿಸಲು ಮುಂದಾಗುತ್ತಾರೆ, ಶ್ರೀಮಂತರನ್ನು ಓಲೈಸುವ ಕೆಲಸಕ್ಕೆ ನಿಲ್ಲುತ್ತಾರೆ. ಪ್ರಥಮ ಹಂತದಲ್ಲೇ ಹೆಚ್ಚು ದೇಣಿಗೆ ಸಂಗ್ರಹಿಸಲು ಸಫಲವಾದರೆ, ಪಕ್ಷವೂ ಉಮೇದುವಾರಿಕೆಯನ್ನು ಬೆಂಬಲಿಸುತ್ತದೆ. ದೇಣಿಗೆ ಸಂಗ್ರಹದ ಸಾಮರ್ಥ್ಯ ಅಭ್ಯರ್ಥಿಯಾಗಲು ಮುಖ್ಯ ಮಾನದಂಡವಾಗುತ್ತದೆ!
ಅಭ್ಯರ್ಥಿಯಾಗಬೇಕಾದರೆ, ಮೊದಲು ಬಹುದೊಡ್ಡ ಮೊತ್ತವನ್ನು ಸಂಗ್ರಹಿಸಬೇಕು. ತಮ್ಮ ಹಿಂದೆ ದೊಡ್ಡ ಬೆಂಬಲಿಗ ಪಡೆಯಿದೆ ಎನ್ನುವುದನ್ನು ತೋರಿಸಿಕೊಳ್ಳಬೇಕು. ಆಗ ಮಾಧ್ಯಮಗಳು ಸುದ್ದಿ ಮಾಡುತ್ತವೆ. ಪ್ರಚಾರ ಸಿಕ್ಕಂತೆಲ್ಲಾ ಹಣವೂ ಹೆಚ್ಚೆಚ್ಚು ಹರಿದು ಬರುತ್ತದೆ. ಬೆಂಬಲಿಗರೂ ಜೊತೆಯಾಗುತ್ತಾರೆ ಎಂಬುದು ಒಂದು ರಾಜಕೀಯ ತಂತ್ರಗಾರಿಕೆ. ಒಬಾಮ ಈ ಸೂತ್ರವನ್ನು ಬಳಸಿದ್ದರು. ಚುನಾವಣಾ ಪ್ರಚಾರದ ಪೂರ್ವಸಜ್ಜಿಕೆಯಾಗಿ ’ಖಜಛಿ ಅಛಚ್ಚಜಿಠಿಢ ಟ್ಛ ಏಟಟಛಿ’ ಕೃತಿಯನ್ನು 2006ರಲ್ಲಿ ಹೊರತಂದಿದ್ದರು. ಅದರ ಬಿಡುಗಡೆ ಕಾರ್ಯಕ್ರಮವನ್ನು ದೇಶದ ವಿವಿಧ ಭಾಗಗಳಲ್ಲಿ ಆಯೋಜಿಸಿ, ತಮ್ಮ ಚುನಾವಣಾ ಪ್ರಚಾರಕ್ಕೆ ಅನಧಿಕೃತ ಚಾಲನೆ ನೀಡಿದ್ದರು. ಆ ಮೂಲಕ ತಾವು ಹೊರಟಿರುವುದು ಶ್ವೇತಭವನದ ಕಡೆಗೇ ಎಂಬುದನ್ನು ತೋರಿಸಿದ್ದರು. ಪುಸ್ತಕ ಪ್ರಚಾರದ ಜೊತೆಯಲ್ಲೇ, ಚುನಾವಣಾ ದೇಣಿಗೆ ಸಂಗ್ರಹದ ಬಗ್ಗೆ ಶ್ರೀಮಂತ ಉದ್ಯಮಿಗಳೊಂದಿಗೆ ಮಾತುಕತೆ ಆರಂಭಿಸಿದ್ದರು. ಅದನ್ನು ಗಮನಿಸಿದ ಟೈಮ್್ಸ ಪತ್ರಿಕೆ ’ಗಜಢ ಣಚಿಚಞಚ ್ಚuಛ ಚಿಛಿ ಠಿಜಛಿ ಘಛ್ಡಿಠಿ ಕ್ಟಛಿಠಜಿಛಛ್ಞಿಠಿ’ ಎಂಬ ಶೀರ್ಷಿಕೆಯನ್ನು ಮುಖಪುಟದಲ್ಲಿ ಮುದ್ರಿಸಿ 2006ರಲ್ಲಿ ಸಂಚಿಕೆಯನ್ನು ಹೊರತಂದಿತ್ತು. ನಂತರ ಒಬಾಮಾ ಸ್ಪರ್ಧೆಯನ್ನು ದೃಢಪಡಿಸಿದ್ದರು.
ಹಾಗೆ ನೋಡಿದರೆ, 1972ರವರೆಗೂ ಚುನಾವಣೆಯಲ್ಲಿ ಬಳಕೆಯಾಗುವ ಹಣ, ದೇಣಿಗೆ ಸಂಗ್ರಹದ ಬಗ್ಗೆ ಹೆಚ್ಚು ಸುದ್ದಿಯಾಗುತ್ತಿರಲಿಲ್ಲ. 1972ರ ಚುನಾವಣೆಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದಿಂದ 10 ಲಕ್ಷ ಡಾಲರ್ ಮೊತ್ತವನ್ನು ನಿಕ್ಸನ್ ಚುನಾವಣಾ ಖರ್ಚಿಗೆಂದು ಪಡೆದಿದ್ದರು. ಅದಕ್ಕೆ ಪ್ರತಿಯಾಗಿ ಹಾಲು ಉತ್ಪನ್ನಗಳ ಬೆಲೆ ನಿಗದಿ ಸಂಬಂಧ, ಆ ಸಂಘಕ್ಕೆ ಅನುಕೂಲ ಮಾಡಿಕೊಡುವ ವಾಗ್ದಾನ ಮಾಡಿದ್ದರು. ಇದು ‘ವಾಟರ್ ಗೇಟ್ ಹಗರಣ’ದ ತನಿಖೆಯ ಸಂದರ್ಭ ಬೆಳಕಿಗೆ ಬಂದಿತ್ತು. ಅದರ ಬೆನ್ನಲ್ಲೇ ‘ಅಮೆರಿಕ ಏರ್ಲೈನ್ಸ್’ ಸ್ವಿಸ್ ಬ್ಯಾಂಕಿನಲ್ಲಿರುವ ದೊಡ್ಡ ಇಡಗಂಟನ್ನು ಮಧ್ಯವರ್ತಿಯ ಮೂಲಕ ನಿಕ್ಸನ್ ತಂಡಕ್ಕೆ ತಲುಪಿಸಿತ್ತು ಎಂಬುದು ತನಿಖೆಯ ವೇಳೆ ಸಾಬೀತಾಗಿತ್ತು. ‘ವಾಟರ್ ಗೇಟ್ ಹಗರಣ’ದ ಬಳಿಕ ಚುನಾವಣಾ ದೇಣಿಗೆ ಸಂಗ್ರಹಕ್ಕೆ ಸಂಬಂಧಿಸಿದಂತೆ ಕಠಿಣ ಕಾನೂನು ತರಬೇಕು ಎಂಬ ಕೂಗು ಕಾಂಗ್ರೆಸ್ಸಿನಲ್ಲಿ ಕೇಳಿಬಂದಿತ್ತು. ಮೊದಲಿದ್ದ ಕಾನೂನಿಗೆ ತಿದ್ದುಪಡಿ ತರಲಾಯಿತು. ದೇಣಿಗೆ ವಿವರವನ್ನು ಬಹಿರಂಗಗೊಳಿಸಬೇಕು, ಚುನಾವಣಾ ವೆಚ್ಚಕ್ಕೆ ಗರಿಷ್ಠ ಮಿತಿ ನಿಗದಿಪಡಿಸಬೇಕು, ಅಭ್ಯರ್ಥಿಗಳು ಸಂಗ್ರಹಿಸುವ ದೇಣಿಗೆ ಮತ್ತು ಚುನಾವಣಾ ಖರ್ಚಿನ ಬಗ್ಗೆ ಚುನಾವಣಾ ಆಯೋಗ ನಿಗಾ ವಹಿಸಬೇಕು ಎಂಬುದು ತಿದ್ದುಪಡಿಯ ಆಶಯವಾಗಿತ್ತು. ಆದರೆ ಈ ವಿಷಯ ನ್ಯಾಯಾಲಯದ ಮೆಟ್ಟಿಲೇರಿತು. ಅಮೆರಿಕದ ಸುಪ್ರಿಂಕೋರ್ಟ್ ಚುನಾವಣಾ ವೆಚ್ಚಕ್ಕೆ ಮಿತಿ ಹೇರುವ ವಿಷಯದಲ್ಲಿ ಅಸಮ್ಮತಿ ಸೂಚಿಸಿತಾದರೂ, ವಿದೇಶಿ ಸಂಸ್ಥೆಗಳಿಂದ ದೇಣಿಗೆ ಸಂಗ್ರಹಿಸುವುದನ್ನು ನಿರ್ಬಂಧಿಸಿ ತೀರ್ಪಕೊಟ್ಟಿತು.
ನ್ಯಾಯಾಲಯದ ಆದೇಶದನ್ವಯ ನೇರವಾಗಿ ಅಭ್ಯರ್ಥಿ ಅಥವಾ ಪಕ್ಷಕ್ಕೆ ವೈಯಕ್ತಿಕ ನೆಲೆಯಲ್ಲಿ ದೇಣಿಗೆ ನೀಡುವ ಬಗ್ಗೆ ಮಿತಿ ಇದೆಯಾದರೂ, ರಾಜಕೀಯ ಕ್ರಿಯಾ ಸಮಿತಿಗಳ (ಕಅಇ) ಮೂಲಕ ವಂತಿಗೆ ನೀಡಲು ಅವಕಾಶಗಳಿವೆ. ಹಾಗಾಗಿಯೇ ‘ಸೂಪರ್ ಪ್ಯಾಕ್’ಗಳನ್ನು ರಚಿಸಲಾಗುತ್ತದೆ. ಇವು ಪರೋಕ್ಷವಾಗಿ ಅಭ್ಯರ್ಥಿಯ ಪರ ವ್ಯಯಿಸುವ ಮೊತ್ತಕ್ಕೆ ಯಾವುದೇ ಮಿತಿ ಇಲ್ಲ. ಹಾಗಾಗಿ ಅಭ್ಯರ್ಥಿಗಳು ‘ಸೂಪರ್ ಪ್ಯಾಕ್’ಗಳ ಮೊರೆ ಹೋಗುತ್ತಾರೆ. ರಾಜಕೀಯ ಕ್ರಿಯಾ ಸಮಿತಿಗಳು ಇತರರಿಂದ ಹಣ ಒಟ್ಟುಮಾಡಿ, ಅಭ್ಯರ್ಥಿಗಳ ಪರ ಚುನಾವಣೆಯಲ್ಲಿ ವೆಚ್ಚ ಮಾಡುತ್ತವೆ. ’ಗಜ್ಞಿ್ಞ್ಞ ಟ್ಠ್ಟ fಠ್ಠಿ್ಟ’, ’ಅಞಛ್ಟಿಜ್ಚಿಚ್ಞಠ ್ಛ್ಟ ಚ ಆಛಿಠಿಠಿಛ್ಟಿ ಖಟಞಟ್ಟ್ಟಡಿ’, ’ಅಞಛ್ಟಿಜ್ಚಿಚ್ಞಠ ್ಛ್ಟ ಟ್ಟಟಠಟಛ್ಟಿಜಿಠಿಢ’ ಎಂಬಿತ್ಯಾದಿ ಹೆಸರಿನಲ್ಲಿ ಸುಮಾರು 4000 ರಾಜಕೀಯ ಕ್ರಿಯಾ ಸಮಿತಿಗಳು ಅಮೆರಿಕದಲ್ಲಿ ಕಾರ್ಯನಿರ್ವಹಿಸುತ್ತಿವೆ. ಇವುಗಳಲ್ಲಿ ಕೆಲವು ವಿಷಯಾಧಾರಿತವಾಗಿ, ಮತದಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿವೆಯಾದರೂ, ಬಹುಪಾಲು ಸಂಸ್ಥೆಗಳು, ರಾಜಕೀಯ ಪಕ್ಷಗಳ ಹಿತ್ತಲ ಬಾಗಿಲಿನಂತೆ ಕೆಲಸ ಮಾಡುತ್ತಿವೆ.
2016ರ ಚುನಾವಣೆಯಲ್ಲಿ, ರಾಜಕೀಯ ಕ್ರಿಯಾ ಸಮಿತಿಗಳು ಅಂದಾಜು 215 ದಶಲಕ್ಷ ಡಾಲರ್ ಮೊತ್ತವನ್ನು ಟಿ.ವಿ ಜಾಹೀರಾತು, ಪತ್ರಿಕಾ ಪ್ರಕಟಣೆ, ಮತದಾರರಿಗೆ ನೇರವಾಗಿ ಇ-ಮೇಲ್, ದೂರವಾಣಿ ಕರೆ ಮಾಡಿ ಮತ ಕೋರುವ ಪ್ರಕ್ರಿಯೆಗೆ ಬಳಸಿದ್ದವು. 2016ರ ಸೆಪ್ಟೆಂಬರ್ 30ರಂದು ಚುನಾವಣಾ ಆಯೋಗಕ್ಕೆ ನೀಡಿದ್ದ ಮಾಹಿತಿಯ ಪ್ರಕಾರ, ಸುಮಾರು 1.1 ಶತಕೋಟಿ ಡಾಲರ್ ಮೊತ್ತ ಹಿಲರಿ ಅವರ ಬೊಕ್ಕಸ ಸೇರಿತ್ತು. ಆ ಪೈಕಿ ಅದಾಗಲೇ ಹಿಲರಿ ಕ್ಲಿಂಟನ್ ತಂಡ ಶೇಕಡ 93ರಷ್ಟು ಹಣವನ್ನು ಖರ್ಚು ಮಾಡಿಯಾಗಿತ್ತು. ಟ್ರಂಪ್ ದೇಣಿಗೆ ಸಂಗ್ರಹದಲ್ಲಿ ಹಿಲರಿಗಿಂತ ಹಿಂದಿದ್ದರು.ಟ್ರಂಪ್ ಚುನಾವಣಾ ಪ್ರಚಾರಕ್ಕೆ ಒಟ್ಟು 700 ದಶಲಕ್ಷ ಡಾಲರ್ ಸಂದಾಯವಾಗಿತ್ತು. ಅದರಲ್ಲಿ ಶೇಕಡ 86ರಷ್ಟನ್ನು ಟ್ರಂಪ್ ಪರ ತಂಡ ಸೆಪ್ಟೆಂಬರ್ ಹೊತ್ತಿಗೆ ಖರ್ಚುಮಾಡಿತ್ತು.
ಅಭ್ಯರ್ಥಿಗಳ ಹೆಸರಿನಲ್ಲಿ ಪರೋಕ್ಷವಾಗಿ, ‘ಸೂಪರ್ ಪ್ಯಾಕ್’ಗಳು ಸಂಗ್ರಹಿಸುವ ನಿಧಿಗೆ ದೊಡ್ಡ ಮೊತ್ತ ನೀಡುವ ಹಲವು ಪ್ರತಿಷ್ಠಿತ ಕುಟುಂಬಗಳು ಅಮೆರಿಕದಲ್ಲಿವೆ. 2016ರ ಚುನಾವಣೆಯಲ್ಲಿ ಮೊದಲ ಹಂತದಲ್ಲೇ 157 ಕುಟುಂಬಗಳು ಶ್ವೇತಭವನದ ಹಣಾಹಣಿಗೆ 176 ದಶಲಕ್ಷ ಡಾಲರ್ ದೇಣಿಗೆ ನೀಡಿದ್ದವು ಎಂಬ ಬಗ್ಗೆ ‘ನ್ಯೂಯಾರ್ಕ್ ಟೈಮ್್ಸ’ ಆ ವರ್ಷದ ಫೆಬ್ರವರಿಯಲ್ಲಿ ವರದಿ ಮಾಡಿತ್ತು. ದೇಣಿಗೆ ನೀಡಿರುವ ಕುಟುಂಬಗಳ ಪಟ್ಟಿಯನ್ನೂ ಬಹಿರಂಗಪಡಿಸಿತ್ತು. ಈ ಪಟ್ಟಿಯಲ್ಲಿ ಹಣಕಾಸು ಸಂಸ್ಥೆಗಳ ಮಾಲೀಕರು, ರಿಯಲ್ ಎಸ್ಟೇಟ್ ಕುಳಗಳು, ಮಾಧ್ಯಮ ಮತ್ತು ಮನರಂಜನೆ ಕ್ಷೇತ್ರದ ಗಣ್ಯರು, ಆರೋಗ್ಯ ವಿಮಾ ಕಂಪನಿ ಒಡೆಯರು, ಸಗಟು ವ್ಯಾಪಾರ ಮತ್ತು ಉತ್ಪಾದನಾ ಕ್ಷೇತ್ರದಲ್ಲಿ ಹಣ ಹೂಡಿಕೆ ಮಾಡಿರುವವರು ಇದ್ದರು.
ಅದಲ್ಲದೇ ಅಮೆರಿಕದ ರಾಜಕೀಯವನ್ನು ನಿಯಂತ್ರಿಸುವ ಕೆಲವು ಹಿರಿತಲೆಗಳಿವೆ. ಅದರಲ್ಲಿ ಲಾಸ್ವೇಗಸ್ ನಗರದ ಜೂಜು ಕೇಂದ್ರಗಳ ಮಾಲೀಕ ಶೆಲ್ಡನ್ ಅಡಲ್ಸನ್, ಕೋಕ್ ಸಂಸ್ಥೆಗಳ ಒಡೆಯರಾದ ಕೋಕ್ ಸಹೋದರರು, ಸರೋಸ್ ಫಂಡ್ ಮ್ಯಾನೇಜ್ಮೆಂಟ್ ಮುಖ್ಯಸ್ಥ ಜಾರ್ಜ್ ಸರೋಸ್ ಪ್ರಮುಖರು. ಪ್ರತೀ ಚುನಾವಣೆಯಲ್ಲೂ ಅಭ್ಯರ್ಥಿ ಯಾರು, ಅವರು ಪ್ರಕಟಿಸಿರುವ ನಿಲುವು ಏನು ಎಂಬುದರ ಆಧಾರದ ಮೇಲೆ ಇವರು ತಮ್ಮ ಬೆಂಬಲ ಯಾರಿಗೆ ಎಂದು ಘೊಷಿಸುತ್ತಾರೆ. 2016ರ ಚುನಾವಣೆಯಲ್ಲಿ ಟ್ರಂಪ್ ಪರ, ಶೆಲ್ಡನ್ ಅಡಲ್ಸನ್ 100 ದಶಲಕ್ಷ ಡಾಲರ್ ಮೊತ್ತವನ್ನು ಹೂಡಿದ್ದರು! ಸಾಂಪ್ರದಾಯಿಕವಾಗಿ ರಿಪಬ್ಲಿಕನ್ ಅಭ್ಯರ್ಥಿಯನ್ನು ಬೆಂಬಲಿಸುತ್ತಿದ್ದ ಜಾರ್ಜ್ ಸೋರಸ್ ಮತ್ತು ಕೋಕ್ ಸಹೋದರರು ನಿಷ್ಠೆ ಬದಲಿಸಿ ಡೆಮಾಕ್ರಟಿಕ್ ಪಕ್ಷದ ಜೊತೆಯಾಗಿದ್ದರು. ಎಚ್ಪಿ ಕಂಪನಿಯ ಮುಖ್ಯಸ್ಥೆ ಮೆಗ್ ವಿಟ್ಮೆನ್ ಮೊದಲು ರಿಪಬ್ಲಿಕನ್ ಪಕ್ಷದ ಪರ ಇದ್ದವರು, 2016ರ ಚುನಾವಣೆಯಲ್ಲಿ ಹಿಲರಿ ಪರ ನಿಂತಿದ್ದರು. ಹೀಗೆ ದೊಡ್ಡ ಮೊತ್ತದ ದೇಣಿಗೆ ನೀಡುವ ಸಿರಿವಂತರು, ತಮ್ಮ ಸ್ವಹಿತಾಸಕ್ತಿಗೆ ಪೂರಕವಾಗಿ ಕೆಲವು ನಿಬಂಧನೆಗಳನ್ನೂ ಹಾಕುತ್ತಾರೆ. ವಿವಿಧ ವಿಷಯಗಳ ಬಗ್ಗೆ ಅಭ್ಯರ್ಥಿ ತೆಗೆದುಕೊಳ್ಳುವ ನಿಲುವು, ಪ್ರಕಟಿಸುವ ಯೋಜನೆಗಳು ಈ ಸಿರಿವಂತರ ಸಮ್ಮುಖದಲ್ಲಿ ನಿರ್ಧಾರವಾಗಿರುತ್ತದೆ.
ಒಂದಂತೂ ನಿಜ, ಎಷ್ಟೇ ಆರ್ಥಿಕತೆ ಕುಸಿಯುತ್ತಿದೆ, ಉದ್ಯೋಗ ನಷ್ಟವಾಗುತ್ತಿದೆ ಎಂದು ಬೊಬ್ಬೆ ಹೊಡೆದರೂ, ಅಮೆರಿಕದ ಚುನಾವಣೆಯಲ್ಲಿ ಬಳಕೆಯಾಗುವ ಮೊತ್ತವಂತೂ ಪ್ರತೀ ವರ್ಷ ಹೆಚ್ಚುತ್ತಲೇ ಇದೆ. ಸಾಮಾನ್ಯವಾಗಿ ಬಂದೂಕು ಮತ್ತು ಜೂಜು ಲಾಬಿಗಳು ರಿಪಬ್ಲಿಕನ್ ಪಕ್ಷದ ಪರ ಹೂಡಿಕೆ ಮಾಡಿದರೆ, ವಿಮಾ ಕಂಪನಿಗಳು ಹಾಗೂ ಮಾಧ್ಯಮ ಸಂಸ್ಥೆಗಳು ಡೆಮಾಕ್ರಟಿಕ್ ಪಕ್ಷದ ಪರ ನಿಲ್ಲುತ್ತವೆ, ಆಯಾ ಪಕ್ಷಗಳ ಪ್ರಣಾಳಿಕೆಯನ್ನು ನಿರ್ದೇಶಿಸುತ್ತವೆ. ಒಟ್ಟಿನಲ್ಲಿ ಅಧ್ಯಕ್ಷೀಯ ಚುನಾವಣೆ, ಹಣ ಹೂಡಿಕೆಯ ವ್ಯವಹಾರವಾಗಿ ಬದಲಾಗಿದೆ. ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಮಟ್ಟಿಗೆ ಹೇಳುವುದಾದರೆ ‘ಸಿರಿವಂತರಿಲ್ಲಿ ಸೂತ್ರಧಾರಿಗಳು, ಅಭ್ಯರ್ಥಿಗಳು ಕೇವಲ ಪಾತ್ರಧಾರಿಗಳು’.
(ಲೇಖಕರು ಸಾಫ್ಟ್ವೇರ್ ಇಂಜಿನಿಯರ್, ಹವ್ಯಾಸಿ ಬರಹಗಾರರು. ಇಲ್ಲಿ ಪ್ರಕಟವಾಗಿರುವುದು ಅವರ ‘ಶ್ವೇತಭವನ ಕಥನ’ ಕೃತಿಯ ಒಂದು ಅಧ್ಯಾಯ.)