ದುಃಖದ ಕಾರಣ ಯಾವುದು?

Buddha
Published on

| ಚಿದಂಬರ ಮುನವಳ್ಳಿ

ಉದ್ಯಮಿಯೊಬ್ಬರು ವ್ಯವಹಾರದ ನಿಮಿತ್ತ ವಿದೇಶಕ್ಕೆ ಹೋದಾಗ ಅಲ್ಲಿಯ ವ್ಯಾಪಾರೀ ಮಳಿಗೆಯೊಂದರಲ್ಲಿ ಸುತ್ತಾಡುತ್ತಿರಬೇಕಾದರೆ ಎಲ್ಲ ಹೊಸ ತಂತ್ರಾನ ಒಳಗೊಂಡಿರುವ ಸುಂದರವಾದ ಮೊಬೈಲ್​ ಅವರ ಕಣ್ಣಿಗೆ

ಬಿತ್ತು. ಅದನ್ನು ಖರೀದಿಸಿ ಮನೆಗೆ ತಂದರು. ನೌಕರನನ್ನು ಕರೆದು, "ಈ ಟೇಬಲ್​ ಮೇಲೆ ಇರುವುದು ಬೆಲೆಬಾಳುವ ಮೊಬೈಲ್​ ೋನ್​. ಇದರ ಕಡೆಗೆ ಲ ್ಯವಿರಲಿ' ಎಂದರು. ನೌಕರ ಹೇಳಿದ, "ಯಜಮಾನರೇ ನೀವು ಏನೂ ಚಿಂತೆ ಮಾಡಬೇಡಿ. ಜೋಪಾನವಾಗಿ ನೋಡಿಕೊಳ್ಳುತ್ತೇನೆ'. ಪ್ರಯಾಣದ ಆಯಾಸದಿಂದ ಅವರು ಕೂಡಲೇ ನಿದ್ರೆ ಹೋದರು. ಮರುದಿನ ಮುಂಜಾನೆ ನೌಕರ ಆ ಕೋಣೆಯನ್ನು ಸ್ವಚ್ಛ ಮಾಡುವಾಗ ಅವನ ಕೈ ತಾಗಿ ಮೊಬೈಲ್​ ಕೆಳಗೆ ಬಿದ್ದು ಒಡೆದಿದ್ದಷ್ಟೇ ಅಲ್ಲದೆ ಅದರಲ್ಲಿ ನೆಲ ಒರೆಸಲು ಸುರುವಿದ ನೀರೂ ಸೇರಿಕೊಂಡು ಸಂಪೂರ್ಣವಾಗಿ ಹಾಳಾಯಿತು. ಆ ನೌಕರನ ಮೇಲೆ ಉದ್ಯೋಗಪತಿಗೆ ಬಹಳ ಸಿಟ್ಟು ಬಂತು. ಕೆಲಸದಿಂದ ತೆಗೆದು ಹಾಕಬೇಕೆಂದರೆ ಬಹಳ ದಿವಸಗಳಿಂದ ಪ್ರಾಮಾಣಿಕವಾಗಿ ಕೆಲಸ ಮಾಡಿದ ಅವನನ್ನು ಒಂದು ತಪ್ಪಿಗೆ ಹೊರ ಹಾಕಲು ಮನಸ್ಸಾಗಲಿಲ್ಲ. ಆದರೆ ಎಷ್ಟೊಂದು ಪ್ರೀತಿಯಿಂದ ತಂದ ವಸ್ತುವನ್ನು ಈತ ಒಂದು ಣದಲ್ಲಿ ಒಡೆದು ಹಾಕಿದನಲ್ಲ? ಎಂಬ ವಿಚಾರದಲ್ಲಿ ಅಂದು ರಾತ್ರಿ ಅವರಿಗೆ ನಿದ್ದೆಯೇ ಬರಲಿಲ್ಲ. ಹಾಗೆಯೇ ಹೊರಗಡೆ ಬಂದು ನೋಡಿದರೆ ಆ ನೌಕರ ಆರಾಮವಾಗಿ ಮಲಗಿಕೊಂಡು ಗೊರಕೆ ಹೊಡೆಯುತ್ತಿದ್ದ. "ಛೆ! ಇವನಿಗೆ ಸ್ವಲ್ಪವೂ ಪಶ್ಚಾತ್ತಾಪ ಆಗಿಲ್ಲವಲ್ಲ, ಎಂಥ ಮನುಷ್ಯ?' ಅವರಿಗೆ ಮತ್ತಷ್ಟು ಬೇಜಾರಾಯಿತು.

ಮರುದಿನ ಅವನನ್ನು ಕರೆದು, "ಮುಂದಿನ ವಾರ ನಿನ್ನ ಹುಟ್ಟುಹಬ್ಬ ತಾನೇ. ನಿನ್ನ ಪ್ರಾಮಾಣಿಕ ಕೆಲಸವನ್ನು ಮೆಚ್ಚಿ ಒಳ್ಳೆಯ ಉಡುಗೊರೆ ಕೊಡಬೇಕೆಂದು ನಿನಗೋಸ್ಕರ ಆ ಮೊಬೈಲ್​ನ್ನು ವಿದೇಶದಿಂದ ತಂದಿದ್ದೆ. ನಿನಗೆ ಹೇಳುವ ಮೊದಲೇ ಒಡೆದುಬಿಟ್ಟೆ'. ಆಗ ನೌಕರನಿಗೆ ತಳಮಳ ಶುರುವಾಯಿತು. "ನನ್ನಿಂದ ಎಂಥ ಪ್ರಮಾದವಾಯಿತು. ಸ್ವಲ್ಪ ಕಾಳಜಿ ವಹಿಸಿದ್ದರೆ ಇಷ್ಟೊಂದು ಬೆಲೆಬಾಳುವ ವಸ್ತು ನನ್ನದಾಗುತ್ತಿತ್ತು. ಅಂದು ರಾತ್ರಿಯಿಡೀ ಅವನಿಗೆ ನಿದ್ರೆ ಬರಲಿಲ್ಲ. ಆದರೆ ಆ ಉದ್ಯಮಿ ಮಾತ್ರ ಆ ಟನೆಯನ್ನು ಮರೆತು ಆರಾಮವಾಗಿ ನಿದ್ರೆ ಮಾಡಿದ.

ಗೌತಮ ಬುದ್ಧರು ತಮ್ಮ ಶಿಷ್ಯರಿಗೆ "ದು@ಖವೆಂದರೆ ಏನು?' ಎಂದು ಕೇಳಿದ ಪ್ರಶ್ನೆಗೆ ಉತ್ತರಿಸುತ್ತ, "ದು@ಖವೆಂದರೆ ಅದೊಂದು ವಿಚಾರ. ನಾವು ಯಾವುದನ್ನು ನನ್ನದೆಂದು ತಿಳಿದುಕೊಳ್ಳುತ್ತೇವೆಯೋ ಅದು ದು@ಖವನ್ನುಂಟು ಮಾಡುತ್ತದೆ. ಅದನ್ನು ನಮ್ಮ ಜೊತೆ ಜೋಡಿಸುವುದನ್ನು ಬಿಟ್ಟ ದಿನದಿಂದಲೇ ಆ ದು@ಖ ಹೋಗಿ ಬಿಡುವುದು'. ಜಗತ್ತಿನಲ್ಲಿ ದಿನಾಲೂ ಎಷ್ಟೋ ಜನ ಸಾಯುತ್ತಿರುತ್ತಾರೆ. ಆದರೆ ನಮ್ಮವರು ಹೋದಾಗ ಮಾತ್ರ ನಮಗೆ ದು@ಖವಾಗುತ್ತದೆ. ಇಲ್ಲಿ ಯಾವುದೂ ಶಾಶ್ವತವಲ್ಲ. ಎಲ್ಲವೂ ಕೆಲವೊಂದು ಸಮಯ ನಮ್ಮ ಜೊತೆ ಇರುತ್ತದೆ. ನಂತರ ಹೋಗುತ್ತದೆ ಎಂಬ ಸತ್ಯವನ್ನು ಅರ್ಥ ಮಾಡಿಕೊಂಡರೆ ಅಗಲಿಕೆಯ ದುಃಖ ಕಡಿಮೆಯಾಗಿ ಮನಸ್ಸು ಸ್ವಲ್ಪ ಹಗುರವಾಗುತ್ತದೆ.

(ಲೇಖಕರು ನಿವೃತ್ತ ಬ್ಯಾಂಕ್​ ಅಧಿಕಾರಿ)

(ಪ್ರತಿಕ್ರಿಯಿಸಿ: manollasavv@gmail.com)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net