

ಮಹಿಳೆಯರು ಆರೋಗ್ಯವಾಗಿರಲು ನಿಯಮಿತ ಮುಟ್ಟು ಹೊಂದುವುದು ಅವಶ್ಯಕ. ಪ್ರಾಯಕ್ಕೆ ಬಂದಾಗ ಗರ್ಭಾಶಯದಿಂದ ಆಗುವ ರಕ್ತಸ್ರಾವವೇ ಋತುಚಕ್ರ ಅಥವಾ ಮುಟ್ಟು ಎನ್ನುವಂತಹದ್ದು. ಇದೊಂದು ನೈಸರ್ಗಿಕ ಬದಲಾವಣೆಗಳ ಸರಣಿ. ಅನೇಕ ಮಹಿಳೆಯರು ಇದೊಂದು ಶಾಪವೆಂಬಂತೆ, ಉಳಿದವರು ಮುಟ್ಟಾಗಿರುವುದು ಒಂದು ವರವೆಂಬಂತೆ ಕಾಣುತ್ತಾರೆ. ಋತುಸ್ರಾವದ ಅವಧಿಯು ದೇಹದ ಬೆಳವಣಿಗೆ ಹಾಗೂ ಸಂತಾನೋತ್ಪತ್ತಿಯ ಆರೋಗ್ಯದ ಪ್ರಮುಖ ಭಾಗವಾಗಿರುತ್ತದೆ. ಈ ಸಮಯದಲ್ಲಿ ಮಹಿಳೆಯರ ದೇಹದಲ್ಲಿ ಅನೇಕ ಬದಲಾವಣೆಗಳು, ಮಾನಸಿಕ ಸ್ಥಿತಿಗತಿಗಳಲ್ಲಿ ಏರುಪೇರುಗಳು ಕಂಡುಬರುತ್ತವೆ.
|ಡಾ. ಶ್ರೀಲತಾ ಪದ್ಯಾಣ
ಮುಟ್ಟಿನ ಸಮಯದಲ್ಲಿ ಅಥವಾ ಅದರ ಹಿಂದಿನ ದಿನಗಳಲ್ಲಿ ಶೇಕಡ 20 ಮಹಿಳೆಯರು ಹಲವು ಸಮಸ್ಯೆ ಎದುರಿಸುತ್ತಾರೆ. ಇನ್ನು ಶೇಕಡ 80 ಮಂದಿಯಲ್ಲಿ ತಮ್ಮ ದೈನಂದಿನ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಯಾವುದೇ ಅಡ್ಡಿಯಾಗದಿರಲೂಬಹುದು. ಮುಟ್ಟಿನ ಕೆಲವು ದಿನಗಳ ಹಿಂದೆ ಕಾಣಿಸಿಕೊಳ್ಳುವ ಸಮಸ್ಯೆಗೆ ಪ್ರಿ ಮೆನ್ಸ್ಟ್ರಲ್ ಸಿಂಡ್ರೋಮ್ (ಕMಖ) ಎಂದು ಕರೆಯಲಾಗುತ್ತದೆ. ಇವುಗಳಲ್ಲಿ ಮೊಡವೆ, ಸ್ತನಗಳ ನೋವು, ದಣಿದ ಭಾವನೆ ಅತಿಯಾದ ಅಥವಾ ಅಸಹಜ ರಕ್ತಸ್ರಾವ, ಋತುಚಕ್ರದ ಅವಧಿಯಲ್ಲಿ ಕೊರತೆ (ಅಮೆನೋರಿಯ) ಹಾಗೂ ನೋವಿನ ಅವಧಿಗಳು ಸೇರಿವೆ.
ಮುಟ್ಟಿನ ನೋವು ಏಕೆ ಉಂಟಾಗುತ್ತದೆ?: ಗರ್ಭದ ಮೇಲೆ ಹಾರ್ವೇನ್ಗಳ ಪ್ರಭಾವ ಉಂಟಾಗುವುದರಿಂದ ಹಲವು ಏರುಪೇರುಗಳಾಗುತ್ತವೆ. ಪೋ›ಸ್ಟಗ್ಲಾ್ಯಂಡಿನ್ ಎಂಬ ರಾಸಾಯನಿಕ ಸಂದೇಶವಾಹಕವು ಗರ್ಭಾಶಯದ ಸ್ನಾಯುಗಳನ್ನು ಹೆಚ್ಚು ಸಂಕುಚಿತಗೊಳಿಸುವಂತೆ ಮಾಡುತ್ತದೆ. ಇದರ ಹೆಚ್ಚಿದ ಮಟ್ಟದಿಂದಾಗಿ ನೋವು ಹೆಚ್ಚಾಗುತ್ತದೆ. ಈ ಸಂಕೋಚನಗಳು ಹೊಟ್ಟೆಯಲ್ಲಿ ಸೆಳೆತದ ಜತೆಗೆ ಬೆನ್ನು ನೋವು, ಕಾಲಿನ ಸ್ನಾಯುಗಳ ಸೆಳೆತಕ್ಕೆ ಕಾರಣವಾಗುತ್ತದೆ. ಕೆಲವರಲ್ಲಿ ತೀವ್ರ ನೋವು ಕಾಣಿಸಿಕೊಳ್ಳುತ್ತವೆ.
ಪ್ರಿ ಮೆನ್ಸ್ಟ್ರಲ್ ಸಿಂಡ್ರೋಮ್ ಲಕ್ಷಣಗಳಲ್ಲಿ ಬೆನ್ನು ನೋವು ಕಾಣಿಸಿಕೊಳ್ಳುತ್ತದೆ. ಅದಲ್ಲದೆ ಡಿಸ್ಮೆನೋರಿಯದಲ್ಲಿ ಗರ್ಭಾಶಯ ಹೆಚ್ಚು ಸಂಕುಚನ ಗೊಳ್ಳುವುದರಿಂದ ತೀವ್ರ ನೋವು ಅಥವಾ ದುರ್ಬಲಗೊಳಿಸುವ ಸೆಳೆತಗಳು ಉಂಟಾಗುತ್ತವೆ. ಇವು ಕೆಳ ಬೆನ್ನಿನಲ್ಲಿ ನೋವಿನ ಜೊತೆಗೆ ಬೆನ್ನಿನ ಮೇಲ್ಭಾಗಕ್ಕೂ ನೋವನ್ನು ಹರಡಿಸುತ್ತವೆ. ಮುಟ್ಟಿನ ಅವಧಿಯಲ್ಲಿ ಸಾಧಾರಣ ಕೆಳ ಬೆನ್ನು ನೋವು ಕಂಡು ಬರುವುದು ಸಾಮಾನ್ಯವಾಗಿರುತ್ತದೆ. ಆದರೆ ನೋವು ನಿರಂತರವಾಗಿದ್ದರೆ ಅದು ತೀವ್ರ ಸಮಸ್ಯೆಯನ್ನು ಎಂಡೊಮೆಟ್ರಿಯೋಸಿಸ್ ಅನ್ನು (ಗರ್ಭಕೋಶದ ಹೊರಗಡೆ ಅಂಗಾಂಶ ಬೆಳೆದಿರುವುದು) ಸೂಚಿಸುತ್ತದೆ. ಗರ್ಭಾಶಯದ ಗಡ್ಡೆಗಳು ಇದ್ದಾಗಲೂ ನೋವುಭರಿತ ಮುಟ್ಟು ಕಂಡುಬರುವುದಕ್ಕೆ ಕಾರಣವಾಗಿರುತ್ತದೆ.
ಪರಿಹಾರ ಹೇಗೆ?