

ಪ್ಲವನಾಮ ಸಂವತ್ಸವದ ವಸಂತ ನವರಾತ್ರಿ ಆರಂಭವಾಗಿ ರಾಮನನ್ನು, ಮೇಷಾಧಿಪತಿಯಾದ ಸುಬ್ರಹ್ಮಣ್ಯ, ದುರ್ಗೆಯನ್ನು ಪೂಜಿಸುವ ಸಮಯ. ಮೇಷಕ್ಕೆ ಶನಿ, ಗುರು, ಕುಜ ಸೌಮ್ಯ ಗ್ರಹಗಳು. ಇವು ಸೌಮ್ಯತನದಿಂದ ಕಾಪಾಡುತ್ತವೆ. ಮೇಷ ರಾಶಿಗೆ ಸೂರ್ಯನು ನಿಮಗೆ ಸರಿಯಾದ ದಾರಿ ತೋರಿಸಿ ರವಿ-ಬುಧ- ಶುಕ್ರರು ಮೇಷದಲ್ಲೇ ಇದ್ದಾರೆ. ಕಾರ್ಯಸಾಧನೆ ಕಾಲವಿದು.
ರಾಶಿಯಲ್ಲಿ ರಾಹುವಿದ್ದು, ಈ ರಾಶಿಯಲ್ಲಿ ಜನಿಸಿದ ಮಾನವರು ವಸಂತ ನವರಾತ್ರಿಯಲ್ಲಿ ದುರ್ಗೆಯನ್ನು ಪೂಜಿಸಲೆಂದು ತಿಳಿಸಿಕೊಡಲೆಂದೇ ಸ್ವಕ್ಷೇತ್ರದಲ್ಲಿ ರಾಹು ಕುಳಿತಿದ್ದಾನೆ. ರಾಶ್ಯಾಧಿಪತಿ ಶುಕ್ರನು 12ರಲ್ಲಿದ್ದು, ರವಿ-ಬುಧರು ದ್ವಾದಶದಲ್ಲಿದ್ದು ಎಲ್ಲವೂ ನಿಮ್ಮಂತೆ ಆಗುವುದೆಂದು ತಿಳಿಯಬೇಡಿ. ಧರ್ಮಕ್ಕೆ ಚ್ಯುತಿಬಾರದಂತೆ ನಡೆಯಿರಿ. ನಿತ್ಯ ಸೂರ್ಯನನ್ನು ಪ್ರಾರ್ಥಿಸಿ.
13ನೇ ತಾರೀಕಿನಿಂದ ಬುಧನು ಮೇಷರಾಶಿ ಸೇರಿದ್ದಾನೆ. ರಾಶ್ಯಾಧಿಪತಿ ಬುಧನ ಮನೆ. ಈಗ ಅವನು ಏಕಾದಶದಲ್ಲಿದ್ದಾನೆ. 9ರ ಗುರುವು ಮುನ್ನಡೆಯಲು ಅನುವುಮಾಡಿಕೊಡುತ್ತಾನೆ. ನವಮದ ಗುರುವಿಗೆ ನಿಮ್ಮ ಗುರುಗಳಿಂದ ಮಾರ್ಗದರ್ಶನ ಪಡೆದು ಗುರುಸ್ತುತಿ, ಬೃಹಸ್ಪತಿ ಅಷಿಪಾರಾಯಣ ಮಾಡಿ ಕಾರ್ಯ ಸಾಧಿಸುವ ಕಾಲ. ಆರೋಗ್ಯದ ಬಗ್ಗೆ ಎಚ್ಚರವಿರಲಿ.
ರಾಶಿಗೆ ಅಧಿಪತಿ ಮನಃಕಾರಕ ಚಂದ್ರನು. ರಾತ್ರಿಯಲ್ಲಿ ಹಿತವಾದ ತಂಪಾದ ನಿದ್ದೆ ಕೊಡುವವನು ಚಂದ್ರನೇ. ಉದ್ವೇಗಕ್ಕೆ ಕಡಿವಾಣ ಹಾಕಿ. ಹಠ ಬಿಟ್ಟು ಸಾಗಿದಲ್ಲಿ ಅಷ್ಟಮ ಗುರು, ಸಪ್ತಮ ಶನಿಯು ಯಾವ ತೊಂದರೆಇಲ್ಲದೆ ಮುಂದೆ ಸಾಗುತ್ತೀರ. ಗುರುಚರಿತ್ರೆಯ 14ನೇ ಅಧ್ಯಾಯ ಪಾರಾಯಣ ಮಾಡಿ. ಸಪ್ತಮ-ಅಷ್ಟಮದಲ್ಲಿ ಶನಿ ಇರುವವರೆಗೂ ಶನಿ ಪ್ರಾರ್ಥನೆ ಅತ್ಯಗತ್ಯ.
ಕಾಡಿನಲ್ಲಿ ನುಗ್ಗಿ ಸಿಂಹ, ಚಿರತೆಯನ್ನು ಕಟ್ಟಲಾಗುತ್ತದೆಯೇ? ಮೇಷ ರಾಶಿಯ ಸೂರ್ಯನ ತಾಪಮಾನಕ್ಕೆ ಆಕಾಶಕ್ಕೆ ಮುಚ್ಚಲು ಛತ್ರಿಯಿದೆಯೇ? ಸಿಂಹ ರಾಶಿಗೆ ಸಪ್ತಮಗುರು ಬಯಸಿದ್ದನ್ನೆಲ್ಲಾ ಕೊಡುವುದಲ್ಲದೆ ಅಂಗಾರಕನು ಸಹ ಸಹಕಾರ ನೀಡಿ ವ್ಯಾಪಾರ ವೃತ್ತಿಯಲ್ಲಿ ಭೂಮಿಯಿಂದ ಲಾಭ ತರುತ್ತದೆ. ಮಾನವನಿಗೆ ಒಳ್ಳೆಯ ಸಮಯ ಬರುವುದು ಸ್ವಾರ್ಥಕ್ಕೂ, ಸಹಾಯಕ್ಕೂ.
ಹೊಸ ಸಂವತ್ಸರವು ಸೂರ್ಯಸಿದ್ಧಾಂತ ಪ್ರಕಾರ 14.4.2021ರಿಂದ ಆರಂಭವಾಗಿದ್ದು, ಸಂವತ್ಸರದ ರಾಜಶ್ರೇಷ್ಠನಾದ ಬುಧಗ್ರಹದ ಅಧಿಪತಿಯಾದ ಕರುಣಾ ಸಮುದ್ರ ಕ್ಷೀರವಾಸದ ಶ್ರೀಮನ್ನಾರಾಯಣನೇ ಆಗಿರುತ್ತಾನೆ. ನಾರಾಯಣನ ಮರೆತಲ್ಲಿ ಮನುಜನಿಗೆ ಯಾವ ಬೆಲೆ ಇರುವುದಿಲ್ಲ. ಪಂಚಮ ಶನಿ, ಷಷ್ಠ ಗುರುವಿಗೆ ಸದಾ ಪ್ರಾರ್ಥನೆಯಿರಲಿ. ನಿತ್ಯವೂ ತಪ್ಪದೇ ಈಶ್ವರನ ಮುಂದೆ ಕುಳಿತು ಶನಿ ಅಷ್ಟೋತ್ತರ ಪಾರಾಯಣ ಮಾಡಿ.
ಗುರುವು ಪಂಚಮದಲ್ಲಿ ಶ್ರೇಯಸ್ಸನ್ನು ಮಾಡುತ್ತಾನೆ. ಚತುರ್ಥ ಶನಿ ಸ್ವಕ್ಷೇತ್ರದಲ್ಲಿರುವುದರಿಂದ ಉಚ್ಚ ಶನಿಯ ಸಂಪರ್ಕವಿರುವ ನಿಮಗೆ ಯಾವ ತೊಂದರೆ ಆಗುವುದಿಲ್ಲ. ಆದರೆ ಅನುಷ್ಠಾನ, ದೇವತಾ ಪ್ರಾರ್ಥನೆ ಎಲ್ಲವೂ ಬೇಕಾಗುತ್ತದೆ. ಯಾರೇ ನಿಮ್ಮನ್ನು ದ್ವೇಷ ಮಾಡಿದರೂ ವಿಚಲಿತರಾಗಬೇಡಿ. ಕೋರ್ಟ್-ಕಚೇರಿ ವ್ಯವಹಾರದ ವಿಚಾರಗಳಲ್ಲಿ ನ್ಯಾಯವೂ ಸಿಗುತ್ತದೆ. ದತ್ತಾತ್ರೇಯ ಚರಿತ್ರೆ ಮಾಡುವುದನ್ನು ಮರೆಯಬೇಡಿ.
ಯಾವುದೇ ವಿಚಾರ ವಿಷಯಗಳು ನಮ್ಮಂತೆ ಹೋಗಬೇಕಾದರೆ ಮೊದಲು ನಾವು ಗುಣಾಢ್ಯರಾಗಿ, ದರ್ಪವಿಲ್ಲದೆ ವರ್ತಿಸಬೇಕು. ಪ್ರೀತಿಗಿಂತ ದೊಡ್ಡ ವಸ್ತು ಯಾವುದೂ ಇಲ್ಲ. ಶನಿಯು ನಿಮಗೆ ಬರಬೇಕಾದ ಧನ, ಲಾಭ ಕೊಟ್ಟೇ ಕೊಡುತ್ತಾನೆ. ಗುರುಪರಂಪರಾ ಸ್ತೋತ್ರ ಪಠಿಸಿ. ಸುಬ್ರಹ್ಮಣ್ಯನನ್ನು ಪೂಜಿಸಿ. ಒಳ್ಳೆಯ ಕಾಲವಿದು.
ದ್ವಾದಶದಲ್ಲಿ ಕೇತು, ಷಷ್ಠದಲ್ಲಿ ರಾಹು ಅವಾಂತರ, ಅಡ್ಡಿಗಳನ್ನು ಸೃಷ್ಟಿಸುತ್ತಾರೆ. ಶ್ರೀರಾಮನ ರಾಮನವರಾತ್ರಿ ಎಂದು ಕರೆಯುವ ಮಾಸವಿದು. ಧನಸ್ಸು, ಮೀನ, ಮಿಥುನ ಕನ್ಯಾರಾಶಿಯವರು ಶ್ರೀರಾಮನನ್ನು ಪೂಜಿಸಿ. ಸುಂದರಕಾಂಡ ಪಾರಾಯಣಮಾಡಿ. ಸದ್ಯದಲ್ಲಿ ನಿಮಗೆ ತೊಂದರೆ ಕೊಡುವವರನ್ನು ನೋಡುತ್ತೀರಿ. ರಾಮನ ಬಾಣಗಳನ್ನು ಇಟ್ಟಿರಿ. ಸಮಯ ಬಂದಾಗ ಉಪಯೋಗಿಸಿ. ಶನಿಅಷ್ಟೋತ್ತರ ಪಾರಾಯಣ ಮಾಡಿ.
ಶನಿ ಸಂಚಾರದಲ್ಲಿ ವ್ಯಸನಿಯಾಗಿ ಕುಳಿತರೆ ಏನು ಪ್ರಯೋಜನ. ಎಲ್ಲವೂ ಒಳ್ಳೆಯದಲ್ಲ. ಎಲ್ಲವೂ ಕೆಟ್ಟದ್ದಲ್ಲ. 2ನೇ ಮನೆಯ ಗುರುವು ಮಿಂಚಿನಂತೆ ಬಂದು ಪರಿಹಾರ ಕೊಡುತ್ತಾನೆ. ಅದರ ಉಪಯೋಗ ಪಡೆದು ಬಾಳಲು ದಾರಿ ತೋರುತ್ತಾನೆ. ಅನನ್ಯವಾಗಿ ಈಶ್ವರನ ಆರಾಧನೆ ಮಾಡಿ. ಹನ್ನೊಂದನೆ ಅಧ್ಯಾಯ (ಗುರುಚರಿತ್ರೆ) ಪಾರಾಯಣ ಮಾಡಿ.
ಲಗ್ನದಲ್ಲಿ ಗುರುವು ಚಿಂತೆಯನ್ನು ತರುತ್ತಾನೆ. ದ್ವಾದಶ ಶನಿ ಸಣ್ಣಕಷ್ಟಗಳು ಬೆಟ್ಟದಂತೆ ಕರಗುತ್ತದೆ. ಹೆದರಿದವನನ್ನು ಶನಿಯು ಕಾಡುತ್ತಾನೆ. ಭಯವಿಲ್ಲದ ಜೀವನ ನಡೆಸಲು ಮುಂದಾದರೆ ಗುರುವು ಕೈಹಿಡಿಯುತ್ತಾನೆ. ನಿತ್ಯವೂ ನಿಮ್ಮ ಜನ್ಮದಾತರನ್ನು ಉಮಾಮಹೇಶ್ವರರಂತೆ ಪೂಜಿಸಿ. ಕಷ್ಟ-ಕಾರ್ಪಣ್ಯ ಕಡಿಮೆಯಾಗುತ್ತದೆ. ಗುರುಚರಿತ್ರೆಯ ಐದನೇ ಅಧ್ಯಾಯ ಪಾರಾಯಣ ಮಾಡಿ.
ಧನುರ್-ಮೀನರಾಶಿಯ ದಂಡನಾಯಕನು ಸಾಕ್ಷಾತ್ ಗುರುವೇ. ಶನಿಯು 11ನೇ ಮನೆಯಲ್ಲಿದ್ದು, ಸಕಲ ಧನ-ಕನಕ-ಆರೋಗ್ಯ ಕೊಡುವ ಏಕೈಕ ಗ್ರಹ. ಆಲಸ್ಯವೆಂಬ ವಿಷವನ್ನು ದೂರಮಾಡಿ. ಗುರು ಚರಿತ್ರೆಯ 16ನೇ ಅಧ್ಯಾಯ ಪಾರಾಯಣ ಮಾಡಿ. ಪೌರ್ಣಮಿಯಂದು ತಪ್ಪದೆ ಶಿವಸಹಸ್ರನಾಮವನ್ನು ಪಾರಾಯಣ ಮಾಡಿ.