ಈ ರಾಶಿಯವರು ಹೆಣ್ಣುಮಕ್ಕಳನ್ನು ಮಾತನಾಡಿಸುವಾಗ ಎಚ್ಚರವಿರಲಿ: ವಾರ ಭವಿಷ್ಯ

Vara-Bhavishya-2
Published on

ಮೇಷ

ಸಹಸ್ರಾವಧಿ ಪಾಪಗಳನ್ನು ಕಳೆಯುವ ಗುರುವು ನಿಮ್ಮನ್ನು ಕಾಪಾಡುತ್ತಾನೆಂಬ ಭರವಸೆಯಲ್ಲಿ ಮುಂದೆ ಸಾಗಿ. ಇನ್ನು ಕೇವಲ ಐದು ಮಾಸಗಳಲ್ಲಿ 11ನೇ ಮನೆ ಸೇರಿ ಮತ್ತಷ್ಟು ಸುಖವನ್ನು ಕೊಡುತ್ತಾನೆ. ತೃಪ್ತಿಯಾದ ಜೀವನ ಸಾಗಿಸುವುದರಲ್ಲಿ ನಿಮ್ಮ ಸಮಯವನ್ನು ಸದ್ವಿನಿಯೋಗ ಮಾಡಿಕೊಳ್ಳಿ. ಅಷ್ಟಮ ಶುಕ್ರನು ಖರ್ಚನ್ನು ಅಧಿಕಗೊಳಿಸುತ್ತಾನೆ.

ವೃಷಭ

ಶುಕ್ರನು ಸಪ್ತಮದಲ್ಲಿ ಅಂಗಾರಕನೊಂದಿಗೆ ಸೇರಿ ಶುಭವನ್ನು ಬೇಕಾದ ಅವಶ್ಯಕವಿರುವ ಧನವನ್ನು ಕೊಡುತ್ತಾನೆ. ಉಚ್ಚ ರಾಶಿಯ ರಾಹು ಕೆಲವೊಂದು ಆರೋಗ್ಯ ಸಮಸ್ಯೆ ಉಂಟುಮಾಡಬಹುದು. ಹೆದರುವ ಅಗತ್ಯವಿಲ್ಲ. ಕಾಳಿಕಾಷ್ಟೋತ್ತರವನ್ನು ಪಠಿಸಿ.

ಮಿಥುನ

ದ್ವಾದಶ ರಾಹು ಚಿಂತೆಯನ್ನು ಕೊಟ್ಟರೂ, ದೃಢವಾದ ಸಂಕಲ್ಪವಿದ್ದಲ್ಲಿ, ದೇವನಿಗೆ ಶರಣಾಗತರಾದಲ್ಲಿ ಹೆದರುವ ಅಗತ್ಯವಿಲ್ಲ. ಮುಂದಿನ ಐದು ಮಾಸಗಳು ಜಾಗರೂಕರಾಗಿ ಸಾಗಿರಿ. ರಾಹುವಿನ ಹಾಗೂ ಗುರುವಿನ ಸ್ತೋತ್ರವನ್ನು ನಿತ್ಯ ಪಠಿಸಿ.

ಕಟಕ

ಸಪ್ತಮದಲ್ಲಿ ಗುರು ಒಬ್ಬನೇ ಸಾಕು ನಿಮ್ಮನ್ನು ಕೈಹಿಡಿದು ನಡೆಸುವುದಕ್ಕೆ. ಆಯಾಸವಾಗುವಷ್ಟು ದೇಹಶ್ರಮವೂ, ಬೇಡವಾದ ಕೆಲಸವನ್ನು ಮಾಡಿ ದೇಹಕ್ಕೂ-ಮನಸ್ಸಿಗೂ ಕಷ್ಟವನ್ನು ತಂದೊಡ್ಡಬೇಡಿ. ಮನಸ್ಸನ್ನು ಸರಿಯಾಗಿಟ್ಟುಕೊಂಡರೆ ಆರೋಗ್ಯ, ಧನ, ಸುಖ-ಶಾಂತಿ ಎಲ್ಲವೂ ದೊರೆಯುತ್ತದೆ. ಧನ್ವಂತರಿ ಹಾಗೂ ದಕ್ಷಿಣಮೂರ್ತಿ ಧ್ಯಾನವಿರಲಿ.

ಸಿಂಹ

ದುರ್ಗೆಯ ವಾಹನ ಸಿಂಹ. ಮನುಷ್ಯನು ಎಲ್ಲರನ್ನೂ ಹೆದರಿಸುತ್ತಾನೆ. ಆದರೆ ಸಿಂಹದ ಮುಂದೆ ನಿಲ್ಲಲು ಧೈರ್ಯವಿದೆಯೇ? ದುರ್ಗೆಯ ಪ್ರಾರ್ಥನೆ ಒಂದೇ ಸಾಕು. ನಿಮ್ಮ ಕಾರ್ಯಗಳು ಯಶಸ್ವಿಯಾಗಿ ಸಾಗುತ್ತವೆ. ಆರನೇಯ ಶನಿ ಒಬ್ಬನೇ ಸಾಕು, ನಿಮ್ಮ ಸಾಹಸವನ್ನು ಮೆಚ್ಚಿ ಕೀರ್ತಿಯನ್ನು ತರುತ್ತಾನೆ. ಆರೋಗ್ಯದ ಭಯವಿಲ್ಲ. ಬಂದ ಧನವನ್ನು ಎಚ್ಚರದಿಂದ ಬಳಸಿ ದೈವಕೃಪೆಗೆ ಪಾತ್ರರಾಗಿ. ಮಂಗಳವಾರದಂದು ದುರ್ಗಾಸಹಸ್ರನಾಮ ಅಥವಾ ಅಷ್ಟೋತ್ತರವನ್ನು ಪಠಿಸಿ.

ಕನ್ಯಾ

ಭಯವನ್ನು ಬಿಟ್ಟು ಧ್ಯಾನ, ಧಾರಣೆ, ದೈವಚಿಂತನೆಯು ಇದ್ದಲ್ಲಿ ಪಂಚಮ ಗುರುವು ರಕ್ಷಣೆ ನೀಡುತ್ತಾನೆ. ಭಕ್ತಿಯಿದ್ದಲ್ಲಿ ರಕ್ಷಕನಂತೆ ನಿಮ್ಮ ಹಿಂದೆ ಇದ್ದು ನಿಮ್ಮ ಕೆಲಸಗಳನ್ನು ನಾಗಾಲೋಟದಲ್ಲಿ ಮಾಡಿಸುತ್ತಾನೆ. ಹೆಣ್ಣುಮಕ್ಕಳನ್ನು ಮಾತನಾಡಿಸುವಾಗ ಎಚ್ಚರವಿರಲಿ. ಪಂಚಮ ಗುರುವಿನಿಂದ ಲಾಭ ಪಡೆಯಿರಿ. ಸರಸ್ವತಿ ಅಷ್ಟೋತ್ತರವನ್ನು ಜಪಿಸಿ, ಕಾರ್ಯಸಾಧಕರಾಗಿ ಬದುಕಿ.

ತುಲಾ

ಶುಕ್ರನು ವೃಶ್ಚಿಕವನ್ನು ಸೇರಿ ಹಣದ ಕೊರತೆಯನ್ನು ನೀಗಿಸುತ್ತಾನೆ. ದೈವವನ್ನು ತುಂಬಿದ ಮನಸ್ಸಿನಿಂದ ಜಪಿಸಿ. ವಿಶೇಷವಾದ ಅಭಿವೃದ್ಧಿಯನ್ನು ಕಾಣುತ್ತೀರಿ. ಭೈರವಾಷ್ಟೋತ್ತರವನ್ನು ಜಪಿಸಿ. ಕಾಲಭೈರವವನನ್ನು ಭಜಿಸಿ. ಸ್ವಾಭಿಮಾನ, ಉತ್ಸಾಹದಿಂದ ನಿಮ್ಮ ಬಾಳನ್ನು ಸರಿಮಾಡುತ್ತಾನೆ.

ವೃಶ್ಚಿಕ

10ನೇ ತಾರೀಖಿನಿಂದ ಶುಕ್ರನು ವೃಶ್ಚಿಕಕ್ಕೆ ಒಂದು ಕಾಣದ ಧನವನ್ನು ತೋರಿಸುತ್ತಾನೆ. ವ್ಯವಹಾರಗಳಲ್ಲಿ ಯೋಚಿಸಿ, ವಿಚಾರಿಸಿ ನಿರ್ಣಯ ತೆಗೆದುಕೊಳ್ಳಿ. ಋಣ ವಿಮೋಚನೆ ಆಗಿ ಜೀವನಶೈಲಿ ಪ್ರಗತಿಪರವಾಗಿ ಸಾಗುತ್ತದೆ. ಲಗ್ನದಲ್ಲಿ ಕೇತು, ಸಪ್ತಮದಲ್ಲಿ ರಾಹು ಇರುವುದರಿಂದ ಮಾತಿನಲ್ಲಿ ಎಚ್ಚರವಿರಲಿ. ಕೋಪಕ್ಕೆ ಕಡಿವಾಣ ಹಾಕಿ. ಕೇತುವಿನ ದೋಷಕ್ಕೆ ಗಣಪತಿಯನ್ನು ಪೂಜಿಸಿ. ತಾಳೆಹೂವನ್ನು ತಂದು ಐದು ಶುಕ್ರವಾರ ಮಹಾಲಕ್ಷ್ಮೀಯನ್ನು ಶ್ರದ್ಧೆಯಿಂದ ಪೂಜಿಸಿ.

ಧನು

12ರ ಕೇತುವಿನಿಂದ ವೃಥಾಕೋಪವು ಅನರ್ಥ ಉಂಟುಮಾಡುತ್ತದೆ. ಜಾಗರೂಕತೆಯಿಂದ, ಮಾತಿನ ಹತೋಟಿಯಿಂದ ಎಲ್ಲರ ಮನಸ್ಸನ್ನು ಗೆದ್ದು ಜಯಶೀಲರಾಗುವ ಕಾಲ. ಹಿರಿಯರ ಆಶೀರ್ವಾದ ಪಡೆದು ಸಾಗಿರಿ. ತಿನ್ನುವುದಕ್ಕೆ ಅಳತೆ ಇರಬೇಕು. ಆರೋಗ್ಯದ ಬಗ್ಗೆ ಎಚ್ಚರವಿರಬೇಕು ನೆನಪಿಟ್ಟುಕೊಳ್ಳಿ ಸುಂದರ ಸಮಯ.

ಮಕರ

ಅರ್ಧಭಾಗ ಶನಿಯ ತಾಪ ಕಳೆಯುವುದು 2021ರ ಜನವರಿ ನಂತರವಷ್ಟೇ. ಗುರುಚರಿತ್ರೆಯಲ್ಲಿ ಬರೆದಿರುವಂತೆ ಧರ್ವನುಷ್ಠಾನ ಮಾಡುವವರನ್ನು, ನೀತಿಯಿಂದ ಬಾಳುವವರನ್ನು, ದೇವರನ್ನು ಪೂಜಿಸುವವರನ್ನು ಶನಿ ಕಾಡುವುದಿಲ್ಲ. ನಿತ್ಯವೂ ಶಿವಸಹಸ್ರನಾಮ ಪಾರಾಯಣ ಮಾಡಿ, ಈಶ್ವರನ ಪ್ರೀತಿಗೆ ಪಾತ್ರರಾಗಿ. ಬಾಳೇಹಣ್ಣು-ಜೇನುತುಪ್ಪ ದಾನ ಮಾಡಿ.

ಕುಂಭ

ಆಸೆಯಿರಬೇಕು. ಆದರೆ ದುಃಖಕ್ಕೆ ಕಾರಣ ಶನಿಯು ಮೊದಲು ದುಃಖ, ತಾಪತ್ರಯಗಳನ್ನು, ಬಿಡಿಸಲಾಗದ ಸಮಸ್ಯೆಗಳನ್ನು ಉದಾರವಾಗಿ ಕೊಡುತ್ತಾನೆ. ಇದರಿಂದ ಆಚೆ ಬರಬೇಕಾದರೆ ನಿತ್ಯವೂ ಸುಂದಕಾಂಡ ಪಾರಾಯಣ ಮಾಡಿ. ಮಿತವ್ಯಯದಲ್ಲಿ ಜೀವನವನ್ನು ನಡೆಸಿ. ಮರೆಯದಿರಿ ವಾರದಲ್ಲಿ 7 ದಿನಗಳು, 7 ಗ್ರಹಗಳನ್ನು ಸೂಚಿಸುತ್ತವೆ. ರವಿವಾರದಿಂದ ಹಿಡಿದು ಶನಿವಾರದವರೆಗೆ ಅಷ್ಟೋತ್ತರ ಓದಿ. ಕೇತುವಿಗೆ ಮಂಗಳವಾರ, ರಾಹುವಿಗೆ ಶುಕ್ರವಾರದಂದು ಅಷ್ಟೋತ್ತರ ಪಠಿಸಿ.

ಮೀನ

ಸಕಲವನ್ನು ಕೊಡುವವನು ಲಕ್ಷ್ಮೀಸಹಿತ ನಾರಾಯಣನೊಬ್ಬನೆ. ಸುಖವನ್ನು ಅನುಭವಿಸಲು ಆಯುಷ್ಯ, ಆರೋಗ್ಯ ಎರಡೂ ಬೇಕು. ಮುಂದಿನ ಸಂವತ್ಸರದಲ್ಲಿ ಬೇಕಾದ ಪುಣ್ಯವನ್ನು, ಧರ್ಮವನ್ನು ಈಗಲೇ ಕೂಡಿಟ್ಟುಕೊಳ್ಳಿ. ಯಾವುದಕ್ಕೂ ಕೊರತೆಯಿಲ್ಲ. ಕ್ಷುಲ್ಲಕ ಕಾರಣಕ್ಕೆ ಮನಸ್ಸು ಹಾಳುಮಾಡಿಕೊಳ್ಳಬೇಡಿ. ವಿಷ್ಣು ಸಹಸ್ರನಾಮ, ಲಕ್ಷ್ಮೀ ಅಷ್ಟೋತ್ತರ ಪಾರಾಯಣ ಮಾಡಿ. ದೇವಿ ದೇವಸ್ಥಾನದಲ್ಲಿ 3 ತಾವರೆ ಹೂವನ್ನು ಶುಕ್ರವಾರ, ಮಂಗಳವಾರದಂದು ನೀಡಿ. ಶುಭವಾಗಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net