

ರಾಷ್ಟ್ರಧ್ವಜಕ್ಕೆ ವಂದಿಸುವಾಗ ಯೋಧನಿಗೆ ಅದು ಬಟ್ಟೆಯಾಗಿ ಕಾಣುವುದಿಲ್ಲ! ರಾಷ್ಟ್ರವಾಗಿ ಕಾಣುತ್ತದೆ. ‘ವಂದೇ ಮಾತರಂ’ ಎಂಬ ಗೀತೆ ಹಾಡುವಾಗ ಆ ಶಬ್ದಗಳಲ್ಲಿ ‘ತಾಯಿ’ಯನ್ನು ಕಾಣುತ್ತೀರಿ. ಇದು ಅರಬ್ಬರಿಗೆ, ಯೇಸು ಭಕ್ತರಿಗೆ ತಿಳಿದಾಗ ಅವರ ಶಿಲುಬೆ, ‘ಕಬಾ’ಗಳೂ ಪೂಜ್ಯವಾದಂತೆ, ಭಾರತದ ದೇವಾಲಯಗಳಲ್ಲೂ ದೇವರು ಕಾಣುತ್ತಾನೆ.
ಮನಸ್ಸಿಟ್ಟು ಮಾಡದ, ಮನದ ಮೇಲೆ ಪರಿಣಾಮ ಮಾಡದ, ಮನದ ಮೂಲಕ ಪರಿವರ್ತನೆ ಮಾಡದ, ನಮ್ಮನ್ನು ಬೆಳೆಸದ ಯಾವುದೇ ಭಜನೆ, ಕೀರ್ತನೆ, ಪಾರಾಯಣ, ಅರ್ಚನ, ವಂದನ, ನಮಸ್ಕಾರ, ಶ್ರವಣ, ಪಾದಸೇವನ, ಆತ್ಮನಿವೇದನ ಎಂಬ ಒಂಬತ್ತು ವಿಧ ಭಕ್ತಿಗಳೂ ಆಚರಣೆಯಲ್ಲಿ ವಿಫಲವೂ; ಭ್ರಷ್ಟವೂ ಆಗುತ್ತದೆ. ಈ ನವವಿಧ ಭಕ್ತಿಯನ್ನು ನಿರೂಪಿಸಿದವನು ಶ್ರೀಭಾಗವತದ ಪ್ರಹ್ಲಾದ. ‘ತನ್ಮಯತ್ವೇನ ಗೋವಿಂದಃ’ ಎಂಬ ತಾದಾತ್ಯ್ಮಾವ ಯೋಗದಲ್ಲಿ ಅವನು ನಿಯುಕ್ತನಾದುದರಿಂದಲೇ ಹಾವು ಕಚ್ಚಿದರೂ, ಬೆಂಕಿಯಲ್ಲಿ ಇಟ್ಟರೂ, ಕುದಿಯುವ ಎಣ್ಣೆಯಲ್ಲಿ ಎಸೆದರೂ, ಆನೆ ತುಳಿದರೂ ಅವನಿಗೆ ಘಾಸಿಯಾಗಲಿಲ್ಲ! ಮನದ ಮುಖ್ಯತೆಯನ್ನು ಅವನೇ ತನ್ನ ನರಸಿಂಹ ಸ್ತುತಿಯಲ್ಲಿ ಎತ್ತಿ ಸಾರಿದ್ದಾನೆ.
ಪೂಜೆ ಒಂದು ‘ಯೋಗ’- ಬರೀ ‘ರಿಚ್ಯುಯಲ್’ ಅಲ್ಲ- ಅದು ‘ಸ್ಪಿ-ರಿಚ್ಯುಯಲ್’ ಆಗಬೇಕು. ಮೂರ್ತಿ ಭಂಜಕ ಮುಸಲ್ಮಾನ, ಕ್ರೖೆಸ್ತ, ದ್ರವಿಡವಾದೀ, ಕಮ್ಯುನಿಸ್ಟರಿಗೆ ಇಲ್ಲಿ ಅಪಾರ್ಥ ಕಲ್ಪನೆಯಿದೆ. ಈ ಪೂಜಾಯೋಗದಲ್ಲಿ ‘ಭಾವಶುದ್ಧಿ’ ಬೇಕು; ಬುದ್ಧಿ ವಿಕೃತಿ ಅಲ್ಲ, ಸಂಶಯ ಅಲ್ಲ, ವಿಶ್ಲೇಷಣಾ ವಿಭೇದಕ, ಒಡಕ ಪರೀಕ್ಷೆಯಲ್ಲ. ಪ್ರಶ್ನೆಯಲ್ಲೇ ಜೀವನ ಕಳೆಯುವುದು ಬದುಕಿನ ದಾರಿಯಲ್ಲ. ‘ಸಂಶಯಾತ್ಮಾ ವಿನಶ್ಯತಿ’ ಎಂಬುದು ಗೀತಾವಚನ. ‘ವಿಜ್ಞಾನಾತ್ಮಕ’ ಗ್ರಹಿಕೆಯಲ್ಲಿ ಇಂದು ಬರೀ ಪಾಂಚಭೌತಿಕ ವಿಜ್ಞಾನವನ್ನು ಅಳವಡಿಸುತ್ತೇವಾಗಿ, ಇಲ್ಲಿ ಮಿತಿ ಇದೆ. ‘ವೇದಾಂತ ವಿಜ್ಞಾನ’ ಎಂಬುದು ವೇದದಲ್ಲೇ ಬರುವ ಶಬ್ದ, ಯೋಗ, ಚಿಂತನ.
‘ನ ಕರ್ಮಣಾ, ನ ಪ್ರಜಯಾ, ಧನೇನ... ವೇದಾಂತವಿಜ್ಞಾನ ಸುನಿಶ್ಚಿತಾರ್ಥಾಃ ಯತಯಃ ಶುದ್ಧನತ್ವಾಃ’ ಎಂಬ ತೈ.ಉಪನಿಷತ್ತಿನ ಸೂಕ್ತಿಯಲ್ಲಿ ಈ ಮರ್ಮ ಕಾಣಿರಿ! ಅಳೆಯುವುದಕ್ಕೆ ಸಾಧನಗಳು ಆ ಆ ಅನುಭವ ಕ್ಷೇತ್ರಕ್ಕೆ ಮೀಸಲಾಗಿ ತಕ್ಕಂತೆ ಇರುತ್ತವೆ. ಉದ್ದವನ್ನು ತಕ್ಕಡಿಯಲ್ಲಿ ಅಳೆಯಲಾಗುವುದಿಲ್ಲ. ದ್ರವಗಳ-ಹಾಲು, ಜೇನು, ಮೊಸರು, ನೀರು-ಇವುಗಳ ಪ್ರಮಾಣವನ್ನು ಉಷ್ಣಮಾಪಕದಿಂದ ಅಳೆಯಲು ಸಾಧ್ಯವಿಲ್ಲ. ಈ ಉಪಕರಣಗಳು ತಂತಮ್ಮ ಕ್ಷೇತ್ರಕ್ಕೆ ಮಾತ್ರ ನಿರ್ವಿುತವಾದ ಮಾನವಯತ್ನಗಳು. ಬುದ್ಧಿಯನ್ನು, ಪ್ರೇಮದ ಆಳವನ್ನು, ಕೃತಜ್ಞತೆ, ಧನ್ಯತೆ, ರಾಷ್ಟ್ರಪ್ರೇಮ, ಜೀವನ ಅಗಾಧತೆ, ವಿಸ್ಮಯ, ಕುತೂಹಲ, ತೃಪ್ತಿಗಳನ್ನು ಈ ಮೂಢ ಭೌತಿಕ ಮಾಪನಗಳಿಂದ ಅಳೆಯುತ್ತೀರಾ? ಮೂಢರೇ! ಮರುಳರೇ! ಟಜಢಠಜ್ಚಿಚ್ಝ ಞಛಿಚಠ್ಠ್ಟಞಛ್ಞಿಠಿಠ ಜಚಡಛಿ ್ಝಞಜಿಠಿಚಠಿಜಿಟ್ಞಠ. ಅದು ಕೃತಕ. ನಾವು ಮಾಡಿಕೊಂಡೆವು! ಭೌತ ಅಳತೆಗಳಲ್ಲಿ ಮನವಿಡದೆಯೂ ಯಾಂತ್ರಿಕವಾಗಿ ಅಳೆಯಬಹುದು. ಸೌದೆ ತೂಗುವಾಗ, ಸೌದೆ ಡಿಪೋದವನು ‘ಭಕ್ತಿಯಿಂದ’ ತೂಗಬೇಕಿಲ್ಲ! ರಸ್ತೆ ನಿರ್ವಿುತಿಯ ಕಾಂಕ್ರೀಟು ತಯಾರಿಸುವಾಗ ‘ಬುದ್ಧಿ’-ಐಠಿಛ್ಝಿ್ಝ್ಚ್ಠ್ಝ ಎಚ್ಚರಿಕೆ ಸಾಕು. ಅಲ್ಲಿ ಭಾವನೆ ಸಲ್ಲದು. ತಂದೆ, ತಾಯಿ, ಮಕ್ಕಳು ಸತ್ತಾಗ, ಸುಡುವಾಗ, ಹೂಳುವಾಗ ಬರೀ ‘ಬುದ್ಧಿ’ ಸಾಲದು. ಬೇಡವೆಂದರೂ ಭಾವನೆ ಕೆಲಸ ಮಾಡುತ್ತದೆ. ಎರಡರ ಕೆಲಸ ಬೇರೆ ಬೇರೆ. ಪೂಜೆಗೆ ಹೇಗೆ? ನೋಡಿ.
ಬಸವಣ್ಣನವರ ಒಂದು ವಚನದಲ್ಲಿ ನೀವು ಓದಿರಬೇಕಾದ ಒಂದು ಸೂಕ್ತಿ ಹೀಗಿದೆ-
‘ಏತ ತಲೆವಾಗಿದಡೇನು? ಇಕ್ಕಳ ಕೈ ಮುಗಿದೊಡೇನು?’ ಅಂತ.
ರೈತನೊಬ್ಬ ಏತನೀರಾವರಿಯಲ್ಲಿ, ಆಳದ ನೀರನ್ನು ಬಾವಿಯಿಂದ ಮೇಲೆತ್ತುವಾಗ ಒಂದು ಪಾತ್ರೆಯನ್ನು ಬಿದಿರಿನ ಗಳಕ್ಕೆ ಬಿಗಿದು, ಈ ಕಡೆಯಿಂದ ಆ ಏತವನ್ನು ಎತ್ತುಗಳ ಮೂಲಕ ಹಿಂದೆ ಮುಂದೆ ಆಡಿಸುತ್ತ, ನೀರು ಎತ್ತುತ್ತ, ಪಾತ್ರೆಗೆ ಸುರಿಯುತ್ತ, ‘ಯಾತಾಯಾತ’ವಾಗಿ ನಡೆಸುವ ಯಾಂತ್ರಿಕ ಕ್ರಿಯೆಯಲ್ಲಿ ಆ ಪಾತ್ರೆಯೂ ಏತವೂ ಬಗ್ಗಿದ್ದೆ ಬಗ್ಗಿದ್ದು. ಅದನ್ನು ‘ನಮಸ್ಕಾರ’ ಎನ್ನಲುಬಹುದೇ? ಆ ಯಂತ್ರಕ್ಕೆ ಭಾರವಿದೆಯೇ? ಒಂದು ಮಹಾಗ್ರಂಥವನ್ನು ಮುದ್ರಿಸುವ ಡಿಟಿಪಿ ಮಾಡುವ ಯಂತ್ರಕ್ಕೆ ಆ ಗ್ರಂಥದ ಬಗ್ಗೆ ಭಕ್ತಿ ಇರುತ್ತದೆಯೇ? ಎಟಿಎಂನಿಂದ ಹಣ ತೆಗೆಯುವಾಗ ಆ ಯಂತ್ರಕ್ಕೆ ‘ದಾನ’ ಮಾಡಿದ ಭಾರ, ಧನ್ಯತೆ, ಫಲ, ದಾನಸಿದ್ಧಿ ಬರುತ್ತದೆಯೇ? ಮರುಳೇ!
ಗಾಣದ ಯಂತ್ರಕ್ಕೆ ಬಿಗಿದ ಎತ್ತು, ಪ್ರದಕ್ಷಿಣೆ ಮಾಡಿದ ಪುಣ್ಯವನ್ನು ಪಡೆಯುತ್ತದೆಯೇ? ಇದೆಲ್ಲ ಬರೀ ಯಾಂತ್ರಿಕ; ಅಲ್ಲಿ ಭಾವ, ಮನಃಶುದ್ಧಿ, ಮನದ ತೊಡಗುವಿಕೆ, ಮೌಲ್ಯ ಇರುವುದಿಲ್ಲ. ಹಾಗೆಯೇ ಕೆಂಡವನ್ನು ಅಗ್ಗಿಷ್ಟಿಕೆಯಿಂದ ಎತ್ತುವಾಗ ಚಿನಿವಾರನು ಇಕ್ಕಳವನ್ನು ಉಪಯೋಗಿಸುವಾಗ, ಕೆಂಡವೆಂಬ ಅಗ್ನಿಗೆ, ಇಕ್ಕಳ ಎರಡು ಬದಿಯಲ್ಲಿ, ಕಬ್ಬಿಣದ ಕೈಗಳಿಂದ ಕೈ ಮುಗಿದ ಭಕ್ತಿಭಾವ ಬರುತ್ತದೆಯೇ? ಹಾಗೆ ಗಂಟೆಗಟ್ಟಲೆ ಒಂದು ವಿಗ್ರಹಕ್ಕೆ, ಶಿವಲಿಂಗಕ್ಕೆ, ಸಾಲಿಗ್ರಾಮಕ್ಕೆ ಅಗಾಧ ಪಾತ್ರೆಯಿಂದ ನೀರೆತ್ತಿ ಸುರಿಸುರಿದು, ಅಭಿಷೇಕ ಮಾಡುವಾಗ, ಭಕ್ತಿಯ ಆಳವನ್ನು ಅಳೆದು ಸುರಿದ ನೀರಿನ ಪ್ರಮಾಣದಿಂದ ಅಳೆಯುತ್ತೀರಾ? ನಿಮಗೆ ಬುದ್ಧಿ ಇದೆಯೇ? ಏನಿರಯ್ಯ?
ಕೆಲವರು ಮಹಾಭಾರತಕ್ಕೆ ಅರ್ಥೈಸುವಾಗ ಒಂದು ರೀತಿಯನ್ನು ಅನ್ವಯಿಸಿ ಗೊಂದಲ ಮಾಡುತ್ತಾರೆ. ‘ದೇವಾಂಶ ಸಂಭೂತನು ಇಲ್ಲಿ ಹುಟ್ಟುವಾಗ ತಪು್ಪ ಮಾಡಲು ಸಾಧ್ಯವಿಲ್ಲ, ಆಸುರೀ ಅಂಶದವನು ಏನೂ ಸರಿಯಾದುದನ್ನು ಮಾಡಲು ಶಕ್ಯವಿಲ್ಲ’ ಅಂತ. ಹಾಗಾದರೆ, ಸೂರ್ಯಾಂಶ ಸಂಭೂತನಾದ ಕರ್ಣ ದ್ರೌಪದೀ ಸೀರೆ ಸುಲಿಯಲು ಪ್ರಚೋದಿಸಿದ್ದು ಸರಿಯೇ? ರುದ್ರಾಂಶನಾದ ಅಶ್ವತ್ಥಾಮ, ಮಲಗಿದ ದ್ರೌಪದೇಯರನ್ನೂ, ಧೃಷ್ಟದ್ಯುಮ್ನನನ್ನೂ, ಕೊಂದದ್ದು ಸರಿಯೇ?-ಇಲ್ಲಿ ನಿಮ್ಮ ಎದುರು ಮೂಲ ಗ್ರಂಥವಿದೆ. ಅದನ್ನು ಇಜಚ್ಟಚ್ಚಠಿಛ್ಟಿ, ಕ್ಝಟಠಿ, ಕ್ಠ್ಟಟಠಛಿಕವಿಯ ಅಶಯಕ್ಕೆ ಸರಿಯಾಗಿ ಅರ್ಥೈಸುವುದು ಬಿಟ್ಟು ಹೊರಗೆಲ್ಲಿಂದಲೋ ತಂದ, ಪೂರ್ವನಿಶ್ಚಿತ ಅಳತೆಗೋಲಿನಿಂದ ತೂಗಿದರೆ ದಾರಿ ತಪು್ಪತ್ತೀರಿ. ವ್ಯಾಸರ ಆಶಯದಿಂದ ವಂಚಿತರಾಗುತ್ತೀರಿ. ಇಲ್ಲಿ ಬಂದ ಮೇಲೆ ಮಾನವ ಧರ್ಮದಂತೆ ನಡೆಯಬೇಕು. ‘ಕರ್ಣ ಆದರೇನು, ಯುಧಿಷ್ಠಿರ ಆದರೇನು? ಯಾರು ಎತ್ತಾದರೇನು? ಸರ್ಪವಾದರೇನು? ಯಾರು ಯಾವ ಹಿಂದಿನ ಜನ್ಮದಲ್ಲಿ ಏನಾಗಿದ್ದರು?’ ಜ್ಟಿ್ಟ್ಝಡಚ್ಞಠಿ. ಅಪ್ರಸ್ತುತ ಮಾನದಂಡ.
ಕಲ್ಲನಾಗರ ಕಂಡರೆ ಹಾಲನೆರೆ ಎಂಬರು
ನಿಜನಾಗರ ಕಂಡರೆ ಕೊಲ್ಲು ಕೊಲ್ಲೆಂಬರಯ್ಯ!
ಎಂಬ ವಚನದಲ್ಲೂ ಇದೇ ಭಾವ. ಹರಿದಾಡುವ ಹಾವುಗಳೆಲ್ಲ ಆದಿಶೇಷ ಅಲ್ಲ, ಸುಬ್ರಹ್ಮಣ್ಯ ಅಲ್ಲ. ಕೋತಿಗಳೆಲ್ಲ ಹನುಮಂತ ಅಲ್ಲ. ಎತ್ತುಗಳೆಲ್ಲ ನಂದಿಯಲ್ಲ. ಅವು ಸಂಕೇತ. ಇಲ್ಲಿ ನೀವು ಸಂಕೇತ-ಸಂಕೇತಿತೆಗಳ ಸಂಗಮಾರ್ಥವನ್ನು - ಖಜಛಿ ಠಢಞಚಿಟ್ಝ ಚ್ಞಛ ಠಢಞಚಿಟ್ಝಜಿಠಛಿಛ-ಗಳ ಯೋಗವನ್ನು ಅನುಸಂಧಾನ ಮಾಡಬೇಕು. ಪೂಜೆ ಭಕ್ತಿಯಿಂದಾದಾಗ ನೀವು ಕಾಣುವುದು ದೇವರನ್ನು-ಅಲ್ಲಿನ ಮೂರ್ತಿಗಳ ಲೋಹ, ಶಿಲೆ, ಮೃತ್ತಿಕೆ, ಮಣಿ, ಚಿತ್ರ-ವಸ್ತ್ರಗಳ ವಿನ್ಯಾಸವನ್ನಲ್ಲ! ಇದು ಭಾಗವತದ ಉದ್ಧವ ಗೀತೆಯ ಅರ್ಥ! ಮೂರ್ತಿಪೂಜೆಯ ಭಾವಾಂತರಂಗ ಇದೇ. ಒಬ್ಬ ಕ್ರೖೆಸ್ತನು ಸ್ವಾಮಿ ವಿವೇಕಾನಂದರನ್ನು-‘ನೀವು ಹಿಂದೂಗಳು ಜಡವಸ್ತುಗಳನ್ನು ಪೂಜಿಸುತ್ತೀರಿ! ವಿಗ್ರಹದಲ್ಲಿ ದೇವರುಂಟೆ?’ ಎಂದು ತಿರಸ್ಕಾರದಿಂದ ಆಕ್ಷೇಪಿಸಿದನಂತೆ. ಆಗ ಏನೂ ಉತ್ತರಿಸದ ವಿವೇಕಾನಂದರು, ಆಮೇಲೆ, ಅವನ ಮನೆಯಲ್ಲೆಲ್ಲ ಸುತ್ತಾಡುತ್ತ, ಸೊಬಗನ್ನು ಕಾಣುತ್ತ ಬರುವಾಗ, ಒಂದು ಗೋಡೆಯ ಮೇಲೆ ಹಾಕಿದ್ದ ಆ ಗೃಹಸ್ಥನ ತಂದೆಯ ಫೋಟೋ ನೋಡಿ, ಅದರ ಮೇಲೆ ಉಗುಳಿದರಂತೆ! ಯಜಮಾನನು ‘ಅಯ್ಯೋ, ಏಕೆ ಉಗುಳುವಿರಿ! ಇದು ನನ್ನ ತಂದೆ’ ಎಂದಾಗ ವಿವೇಕಾನಂದರು ಹೇಳಿದ್ದು, ‘ನಿನ್ನ ತಂದೆ ಈ ಚಿತ್ರದಲ್ಲಿ ಇರಬಹುದಾದರೆ ನಮ್ಮ ವಿಗ್ರಹಗಳಲ್ಲೂ ದೇವರು ಇರುತ್ತಾನೆಂದು ತಿಳಿಯಲಾಗದೆ?’ ಅಂತ.
ರಾಷ್ಟ್ರಧ್ವಜಕ್ಕೆ ವಂದಿಸುವಾಗ ಯೋಧನಿಗೆ ಅದು ಬಟ್ಟೆಯಾಗಿ ಕಾಣುವುದಿಲ್ಲ! ರಾಷ್ಟ್ರವಾಗಿ ಕಾಣುತ್ತದೆ. ‘ವಂದೇ ಮಾತರಂ’ ಎಂಬ ಗೀತೆ ಹಾಡುವಾಗ ಆ ಶಬ್ದಗಳಲ್ಲಿ ‘ತಾಯಿ’ಯನ್ನು ಕಾಣುತ್ತೀರಿ. ಇದು ಅರಬ್ಬರಿಗೆ, ಯೇಸು ಭಕ್ತರಿಗೆ ತಿಳಿದಾಗ ಅವರ ಶಿಲುಬೆ, ‘ಕಬಾ’ಗಳೂ ಪೂಜ್ಯವಾದಂತೆ, ಭಾರತದ ದೇವಾಲಯಗಳಲ್ಲೂ ದೇವರು ಕಾಣುತ್ತಾನೆ. ಒಂದು ವಾರಪತ್ರಿಕೆಯ ಸಂದರ್ಶನದಲ್ಲಿ ನನಗೆ ಪ್ರಶ್ನೆ ಕೇಳಿದರು-‘ಜಗತ್ತಿನಲ್ಲಿ ಶಾಂತಿ ಬರುವುದು ಯಾವಾಗ?’ ಅಂತ. ನಾನು ಹೇಳಿದೆ- ‘ಅರಬ್ಬಿ ರಾಜಪುತ್ರರು ನನ್ನ ಗೀತಾ ಪ್ರವಚನ ಕೇಳಿ ಮರುಳಾದಾಗ, ಪೋಪರು ನನ್ನ ರಾಮಾಯಣ, ಭಾಗವತ ಪ್ರವಚನ ಕೇಳಿ ಕಣ್ಣೀರು ಹಾಕಿದಾಗ’ ಅಂತ. ನನ್ನದೊಂದು ಗ್ರಂಥದಲ್ಲಿ ಇದನ್ನು ದಾಖಲಿಸಿಯೂ ಇದ್ದೇನೆ.
ಇನ್ನೊಂದು ಮಾತು. ಎಷ್ಟೇ ಹಿರಿಯರೂ, ಪೂಜ್ಯರೂ ಯಾರೇ ಆದರೂ, ಅವರವರ ಕಾಲಕ್ಕೆ ಅಲ್ಲಲ್ಲಿ ಅವರ ಮಾತುಗಳಲ್ಲಿ ಇರುವ, ಇತರರು ನುಸುಳಿಸಿದ, ಸಣ್ಣವರು ಸೇರಿಸಿದ, ಆ ಮೇಲಿನ ಪ್ರಕ್ಷಿಪ್ತ ನಿಂದಾಮಾತುಗಳು ಇಂದು ಅಪ್ರಸ್ತುತ. ‘ಬ್ರಾಹ್ಮಣ, ವೈದಿಕ, ವೈಷ್ಣವ’ ನಿಂದಾವಾಕ್ಯಗಳನ್ನು ಬಸವಣ್ಣನವರ ವಚನಗಳಲ್ಲೂ, ವೈದಿಕೇತರರ ನಿಂದೆಗಳನ್ನು ದಾಸರ ವಾಣಿಯಲ್ಲೂ, ಕ್ರೖೆಸ್ತರ ಬೈಬಲ್, ಮುಸ್ಲಿಂರ ‘ಕಾಫಿರ್’, ‘ಜಿಹಾದ್’, ಮೊದಲಾದ ಆಜ್ಞೆಗಳಲ್ಲೂ ಕಾಣುವುದು ಇಂದಿಗೆ ಹಾನಿಕರ. ‘ಅವು ಗ್ರಂಥಗಳಲ್ಲಿಲ್ಲವೇ?’ ಎಂಬ ಶುಷ್ಕ ಗ್ರಾಂಥಿಕರಿಗೆ, ಅಚಛಛಿಞಜ್ಚಿ ಮರುಳರಿಗೆ ಹೇಳುವುದಿದೆ. ಸಮುದ್ರವು ಸರ್ವ ತೀರ್ಥಮಯ ಎಂದ ಮಾತ್ರದಿಂದ ಅಲ್ಲಿನ ಮೊಸಳೆ, ತಿಮಿಂಗಲಗಳೂ ಪೂಜ್ಯವಾಗುವುದಿಲ್ಲ. ಬಾಯಾರಿದವನಿಗೆ ಉಕ್ಕೇರಿದ ನದಿಯಷ್ಟೂ ನೀರು ಬೇಕಾಗುವುದಿಲ್ಲ.
ಗೀತಾಚಾರ್ಯ ಹೇಳುತ್ತಾನೆ, ‘ತ್ರಿಗುಣ್ಯ ವಿಷಯಾವೇರಾ: ನಿಸ್ತ್ರೆಗುಣ್ಯೋ ಭವಾರ್ಜುನ’. ‘ರಾಜಸ ತಾಮಸರಿಗೂ ಉಪದೇಶಿಸುವಾಗ ನಿಂದಾ ವಾಕ್ಯ ಬರಬಹುದು. ಅದು ನಿನಗೆ ಬೇಡ-‘ಸಾತ್ವಿಕ ಉಪದೇಶ ಸ್ವೀಕರಿಸು’ ಅಂತ. ನೋಡಿದಿರಾ? ಒಬ್ಬ ಕ್ರೖೆಸ್ತ ಲೈಟು ಕಂಬಕ್ಕೆ ನಮಸ್ಕರಿಸುತ್ತಿದ್ದ. ಏಕೆ ಎಂದು ಕೇಳಿದೆ. ಅವನು, ‘ಇದು ಶಿಲುಬೆ ಆಕಾರದಲ್ಲಿದೆ. ಅದರ ಮೇಲೆ ವಿದ್ಯುತ್ ತಂತಿ! ಅದರರ್ಥ, ಶಿಲುಬೆಯಲ್ಲಿ ಶಕ್ತಿ ಇದೆ’ ಅಂತ. ಇವನಿಗೆ ಬುದ್ಧಿ ಇದೆಯೇ? ಸಾಹೇಬ್ರೆ? ಮಠಪತಿಗಳೇ? ನೀವು ಅಹಂಕಾರ, ಜಂಭ, ಕಾಮಕ್ರೋಧಗಳನ್ನು ಬಿಡುವುದು ಯಾವಾಗ? ಪತ್ರಿಕಾ ಬರೆಹಗಳಲ್ಲೇ ಅಜ್ಞಾನ ತೋಡಿಕೊಳ್ಳುತ್ತೀರಿ? ಹಾಯ್! ಮರುಳೇ!
(ಲೇಖಕರು ಬಹುಶ್ರುತ ವಿದ್ವಾಂಸರು, ವರ್ತಮಾನ ವಿದ್ಯಮಾನಗಳ ವಿಶ್ಲೇಷಕರು)