ತೆರಿಗೆ ಉಳಿತಾಯ- ಹಲವು ಉಪಾಯ

tax
Published on

ಮುಂದಿನ ಹಣಕಾಸು ವರ್ಷಕ್ಕೆ ಸಂಬಂಧಿಸಿದ ಕೇಂದ್ರ ಮುಂಗಡಪತ್ರ ಮಂಡನೆಯಾಗಿದೆ. ತೆರಿಗೆ ಸ್ಲ್ಯಾಬ್​ಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಆದಾಯದ ಮೇಲಿನ ತೆರಿಗೆ ಉಳಿಸುವುದು ಹೇಗೆ ಎಂಬುದು ಸಾಮಾನ್ಯರ ಚಿಂತೆ. ಹೋಮ್​ ಲೋನ್​ ಇನ್ಸೆಂಟಿವ್ಸ್​, ಇಪಿಎ್​, ಇಎಲ್​ಎಸ್​ಎಸ್​, ಯುಲಿಪ್​, ಎನ್​ಪಿಎಸ್​ ಸೇರಿ ವಿವಿಧ ಸೆಕ್ಷನ್​ಗಳ ಪ್ರಕಾರ ಹೂಡಿಕೆಗೂ ಸರ್ಕಾರ ಉತ್ತೇಜನ ನೀಡುತ್ತಿದೆ. ಇವುಗಳ ಮೂಲಕ ಒಂದಷ್ಟು ತೆರಿಗೆ ಉಳಿಸಿಕೊಳ್ಳಲು ಅವಕಾಶವೂ ಇದೆ. ಹಣಕಾಸು ವರ್ಷದ ಕೊನೆಯಾದ ಕಾರಣ ಹೂಡಿಕೆ ಪ್ರಮಾಣ ಹೆಚ್ಚಾಗಲಿದೆ.

ಬದುಕಿನಲ್ಲಿ ಆರ್ಥಿಕ ಶಿಸ್ತು ಸುಲಭದಲ್ಲಿ ಕೈಗೂಡುವಂಥದ್ದಲ್ಲ. ಅದೊಂದು ತಪಸ್ಸು. ಒಮ್ಮೆ ಸಾಧಿಸಿದರೆ ಬದುಕಿನ ಉದ್ದಕ್ಕೂ ಈ ಶಿಸ್ತು ಕೈಬಿಟ್ಟುಹೋಗುವುದಿಲ್ಲ. ಈ ಪೀಠಿಕೆ ಯಾಕೆ ಎಂದರೆ, ದೇಶದಲ್ಲಿರುವ ಬಹುಸಂಖ್ಯಾತರು ವೇತನ ಪಡೆಯುವ ಉದ್ಯೋಗಿಗಳು. ಹಣಕಾಸು ವರ್ಷದ ಕೊನೆಯ ಕಾಲಟ್ಟದಲ್ಲಿದ್ದೇವೆ. ಹೀಗಾಗಿ ಆದಾಯ ತೆರಿಗೆ ವ್ಯಾಪ್ತಿಗೆ ಬರುವಂತಹ ಉದ್ಯೋಗಿಗಳು ತಮ್ಮ ಆದಾಯದಲ್ಲಿ ತೆರಿಗೆ ಕಡಿತ ಉಳಿಸುವುದಕ್ಕೆ ಅಗತ್ಯ ಹೂಡಿಕೆಗಳ ಹುಡುಕಾಟದಲ್ಲಿರುವುದು ಸ್ವಾಭಾವಿಕ. ಯಾವುದರಲ್ಲಿ ಹೂಡಿಕೆ ಮಾಡಿದರೂ ಈ ತಿಂಗಳು ಮತ್ತು ಮಾರ್ಚ್​ ಅಂತ್ಯದ ಒಳಗೆ ಹೂಡಿಕೆ ಮಾಡಿಬಿಡಬೇಕು.

ಇಂತಹ ಸನ್ನಿವೇಶದಲ್ಲಿ ಸಹಜವಾಗಿಯೇ ಪಬ್ಲಿಕ್​ ಪ್ರಾವಿಡೆಂಟ್​ ಫಂಡ್​ (ಪಿಪಿಎಫ್), ನ್ಯಾಷನಲ್​ ಸೇವಿಂಗ್ಸ್​ ಸಟಿರ್ಫಿಕೇಟ್​ (ಎನ್​ಎಸ್​ಸಿ), ಐದು ವರ್ಷಗಳ ಟ್ಯಾಕ್ಸ್​ ಸೇವಿಂಗ್​ ಬ್ಯಾಂಕ್​ ಎ್​ಡಿ, ಈಕ್ವಿಟಿ ಲಿಂಕ್ಡ್​ ಸೇವಿಂಗ್ಸ್​ ಸ್ಕೀಮ್​ (ಇಎಲ್​ಎಸ್​ಎಸ್​), ಸುಕನ್ಯಾ ಸಮೃದ್ಧಿ ಖಾತೆ, ಹಿರಿಯ ನಾಗರಿಕರ ಉಳಿತಾಯ ಯೋಜನೆ, ಯುನಿಟ್​ ಲಿಂಕ್ಡ್​ ಇನ್ಶೂರೆನ್ಸ್​ ಪ್ಲಾನ್​ (ಯುಲಿಪ್​)ಗಳು ಗಮನಸೆಳೆಯುತ್ತವೆ. ಆದರೆ, ತೆರಿಗೆ ಉಳಿತಾಯ ಮಾತ್ರ ಆದರೆ ಸಾಕೆ? ಅದರ ಜತೆಗೆ ಆ ಹೂಡಿಕೆಗೆ ಸರಿಯಾದ ರಿಟರ್ನ್ಸ್​ ಕೂಡ ಸಿಗುವುದು ಕೂಡ ಅಗತ್ಯ. ಈಗಿನ ಹಣದುಬ್ಬರ ದರಕ್ಕೆ ಹೋಲಿಸಿದರೆ ಶೇಕಡ 10ಕ್ಕಿಂತ ಕಡಿಮೆ ರಿಟರ್ನ್ಸ್​ ಒದಗಿಸುವ ಹೂಡಿಕೆ ಯೋಜನೆಗಳು ಲಾಭದಾಯಕವಲ್ಲ.

ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್​ 80ರಲ್ಲಿ ವೈಯಕ್ತಿಕ ಆದಾಯದ ವೆಚ್ಚದಲ್ಲಿ ಪಡೆಯಬಹುದಾದ ತೆರಿಗೆ ವಿನಾಯಿತಿಗಳ ಮಾಹಿತಿ ಇದೆ. ಸೆಕ್ಷನ್​ 80ರ ಉಪಸೆಕ್ಷನ್​ಗಳಲ್ಲಿ (ಉದಾಹರಣೆ 80ಸಿ, 80ಡಿ ಇತ್ಯಾದಿ) ವಿವಿಧ ರೀತಿಯ ಹೂಡಿಕೆಗಳು ಮತ್ತು ವೆಚ್ಚಗಳನ್ನು ಘೋಷಿಸುವುದಕ್ಕೆ ಅನುಕೂಲ ಮಾಡಿಕೊಡಲಾಗಿದೆ. ಸೆಕ್ಷನ್​ 80 ಸಿ ಪ್ರಕಾರ ವಾಷಿರ್ಕ 1.5 ಲಕ್ಷ ರೂಪಾಯಿ ತನಕ ತೆರಿಗೆ ಉಳಿಸಬಹುದು. ಪಿಪಿಎ್​, ಎನ್​ಎಸ್​ಸಿ, 5 ವರ್ಷಗಳ ಅವಧಿಯ ಬ್ಯಾಂಕ್​ ಎಫ್‌ಡಿ, ಇಎಲ್​ಎಸ್​ಎಸ್​ ಹೂಡಿಕೆಗಳು ಇದೇ ಸೆಕ್ಷನ್​ ವ್ಯಾಪ್ತಿಗೆ ಬರುತ್ತವೆ.

ಯುನಿಟ್​ ಲಿಂಕ್ಡ್​ ಇನ್ಶೂರೆನ್ಸ್​ ಪ್ಲಾನ್​

ತೆರಿಗೆ ಉಳಿತಾಯ, ವಿಮಾ ಸೌಲಭ್ಯ ಮತ್ತು ಹೂಡಿಕೆಗೆ ತಕ್ಕ ಪ್ರತಿಲ ನೀಡುವಂತಹ ಹೂಡಿಕೆ ಯೋಜನೆ ಯುನಿಟ್​ ಲಿಂಕ್ಡ್​ ಇನ್ಶೂರೆನ್ಸ್​ ಪ್ಲಾನ್​ ಅಥವಾ ಯುಲಿಪ್​. ಇದರಲ್ಲಿ ಹೂಡಿಕೆ ಮಾಡಿದ ಹಣವನ್ನು ವಿಮಾ ಕಂಪನಿಯು, ಬಾಂಡ್​ಗಳ ಮೇಲೆ ಅಥವಾ ಷೇರುಗಳ ಮೇಲೆ ಹೂಡಿಕೆ ಮಾಡಿ ನಿರ್ವಹಣೆ ಮಾಡುತ್ತದೆ. ಪ್ರತಿ ತಿಂಗಳು, ಮೂರು ತಿಂಗಳು, ಆರು ತಿಂಗಳು ಮತ್ತು ವಾಷಿರ್ಕ ಪ್ರೀಮಿಯಂ ಕಟ್ಟುವುದಕ್ಕೆ ಇದರಲ್ಲಿ ಅವಕಾಶವಿದೆ. ಆದಾಯ ತೆರಿಗೆಯ ಸೆಕ್ಷನ್​ 80 ಸಿ ಪ್ರಕಾರ ಇದರಲ್ಲಿ ಹೂಡಿಕೆ ಮಾಡಿ ತೆರಿಗೆ ವಿನಾಯಿತಿ ಲಭ್ಯವಿದೆ. ಈ ಸೆಕ್ಷನ್​ ಪ್ರಕಾರ ಗರಿಷ್ಠ 1.5 ಲಕ್ಷ ರೂಪಾಯಿ ತನಕದ ಹೂಡಿಕೆಗೆ ತೆರಿಗೆ ವಿನಾಯಿತಿ ಸಿಗಲಿದೆ.

ಫಿಕ್ಸೆಡ್​ ಡೆಪಾಸಿಟ್​

ಬ್ಯಾಂಕುಗಳಲ್ಲಿ ಫಿಕ್ಸೆಡ್​ ಡೆಪಾಸಿಟ್​ಗೆ ಅಂದರೆ ಐದು ವರ್ಷಗಳ ತನಕದ ಲಾಕ್​ ಇನ್​ ಇರುವ ಟ್ಯಾಕ್ಸ್​ ಸೇವಿಂಗ್​ ಫಿಕ್ಸೆಡ್​ ಡೆಪಾಸಿಟ್​ನಲ್ಲಿ ಹಣ ಜಮೆ ಮಾಡಿದರೆ ತೆರಿಗೆ ವಿನಾಯಿತಿ ಲಭ್ಯವಾಗುತ್ತದೆ. ಇದು ಕೂಡ ಆದಾಯ ತೆರಿಗೆ ಸೆಕ್ಷನ್​ 80ಸಿ ವ್ಯಾಪ್ತಿಗೇ ಬರುತ್ತದೆ. ಇದರಲ್ಲಿ ತೆರಿಗೆ ವಿನಾಯಿತಿ ಜತೆಗೆ ಹೂಡಿದ ಹಣಕ್ಕೆ ಬಡ್ಡಿ ಕೂಡ ಲಭ್ಯವಿದೆ. ಆದರೆ ಬಡ್ಡಿ ತೆರಿಗೆ ವ್ಯಾಪ್ತಿಗೆ ಬರುತ್ತದೆ.

ಪಿಪಿಎಫ್ ಯೋಜನೆ

ಪಬ್ಲಿಕ್​ ಪ್ರಾವಿಡೆಂಟ್​ ಂಡ್​ (ಪಿಪಿಎ್​) ಸೆಕ್ಷನ್​ 80ಸಿ ಪ್ರಕಾರ ಉಳಿತಾಯ ಮಾಡುವುದಕ್ಕೆ ಜನಪ್ರಿಯವಾಗಿರುವ ಹೂಡಿಕೆ ಯೋಜನೆಗಳ ಪೈಕಿ ಒಂದು. ಬ್ಯಾಂಕ್​ ಎ್​ಡಿ, ಎನ್​ಎಸ್​ಸಿಗಳಿಗೆ ಹೋಲಿಸಿದರೆ ಹೆಚ್ಚಿನ ರಿಟರ್ನ್ಸ್​ ಅಥವಾ ಬಡ್ಡಿ ಒದಗಿಸುತ್ತದೆ. ಬಡ್ಡಿ ಆದಾಯ ತೆರಿಗೆ ಮುಕ್ತ ಮತ್ತು ಅದಕ್ಕೆ ಸಾವರಿನ್​ ಗ್ಯಾರೆಂಟಿ ಇರುವ ಕಾರಣ, ಮಾರುಕಟ್ಟೆ ಅಪಾಯ ಮುಕ್ತವಾದ ಯೋಜನೆ. ಪಿಪಿಎ್​ ಅವಧಿ 15 ವರ್ಷ ಇದ್ದರೂ, ಏಳು ವರ್ಷಗಳ ಬಳಿಕ ಭಾಗಶಃ ಹೂಡಿಕೆ ಹಣ ಹಿಂಪಡೆಯುವುದಕ್ಕೆ ಅವಕಾಶವಿದೆ.

ಸುಕನ್ಯಾ ಸಮೃದ್ಧಿ ಖಾತೆ

ಹೆಣ್ಣು ಮಗುವಿನ ಶೈಕ್ಷಣಿಕ ಭವಿಷ್ಯಕ್ಕಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಉಳಿತಾಯ ಯೋಜನೆ ಇದು. ಈ ಯೋಜನೆಯ ಹೂಡಿಕೆಗೆ ದೀರ್ಘಾವಧಿಯ ಲಾಕ್​ ಇನ್​ ಅವಧಿ ಇದೆ. ಹೀಗಾಗಿ ಅವಧಿ ಪೂರ್ವ ನಗದೀಕರಣ ಅಥವಾ ವಿತ್​ಡ್ರಾವಲ್​ ಸಾಧ್ಯವಿಲ್ಲ. ಪಿಪಿಎ್​ಗಿಂತ ಶೇಕಡ 0.5 ಹೆಚ್ಚು ರಿಟರ್ನ್ಸ್​ ಅಥವಾ ಬಡ್ಡಿಯನ್ನು ಈ ಹೂಡಿಕೆ ತಂದುಕೊಡುತ್ತದೆ. ಇದರಲ್ಲೂ ಬಡ್ಡಿ ಆದಾಯ ತೆರಿಗೆ ಮುಕ್ತವಾಗಿರುತ್ತದೆ. ಹೀಗಾಗಿ ಹೆಣ್ಣು ಮಗುವಿನ ಪಾಲಕರು ಈ ಯೋಜನೆಯನ್ನೇ ಹೂಡಿಕೆಯ ಮೊದಲ ಆಯ್ಕೆಯಾಗಿ ಇಟ್ಟುಕೊಳ್ಳುತ್ತಾರೆ. ಸಣ್ಣ ಹೂಡಿಕೆ ವಿಭಾಗದಲ್ಲಿ ಗರಿಷ್ಠ ಬಡ್ಡಿ ಒದಗಿಸುವ ಹೂಡಿಕೆ ಯೋಜನೆಯೂ ಇದುವೇ ಆಗಿದೆ.

ಹಿರಿಯ ನಾಗರಿಕರ ಉಳಿತಾಯ ಯೋಜನೆ

ನಿವೃತ್ತರು ಅಥವಾ ಹಿರಿಯ ನಾಗರಿಕರಿಗೆ ಮಾತ್ರ ಸಿಗುವ ಸೌಲಭ್ಯ ಇದು. ಪಿಪಿಎ್​ ಮತ್ತು ಬ್ಯಾಂಕ್​ ಎ್​ಡಿಗೆ ಹೋಲಿಸಿದರೆ ಕೊಂಚ ಹೆಚ್ಚು ಬಡ್ಡಿ ಅಥವಾ ರಿಟರ್ನ್ಸ್​ ಕೊಡುವ ಯೋಜನೆ ಇದು. ವಾಷಿರ್ಕ ಆದಾಯ ಮಿತಿಯ ಒಳಗೆ ಬಡ್ಡಿ ಆದಾಯ ಇದ್ದರೆ ತೆರಿಗೆ ವಿನಾಯಿತಿ ಸಿಗುತ್ತದೆ. ಇಲ್ಲದೇ ಇದ್ದರೆ ಈ ಬಡ್ಡಿ ಆದಾಯ ತೆರಿಗೆ ಮುಕ್ತ ಅಲ್ಲ.

ಇಎಲ್​ಎಸ್​ಎಸ್​

ಮ್ಯೂಚುವಲ್​ ಂಡ್​ ಬಗ್ಗೆ ತಿಳಿವಳಿಕೆ ಉಳ್ಳವರ ಪಾಲಿಗೆ ಸೆಕ್ಷನ್​ 80 ಸಿ ಕೆಟಗರಿಯಲ್ಲಿ ಇದು ಹೆಚ್ಚು ಜನಪ್ರಿಯವಾದ ಹೂಡಿಕೆ ಯೋಜನೆ. ಈಕ್ವಿಟಿ ಲಿಂಕ್ಡ್​ ಸೇವಿಂಗ್ಸ್​ ಸ್ಕೀಮ್​ (ಇಎಲ್​ಎಸ್​ಎಸ್​) ಎಂದೇ ಇದು ಜನಪ್ರಿಯ. ಇದನ್ನು ಟ್ಯಾಕ್ಸ್​ ಸೇವಿಂಗ್​ ಂಡ್​ ಎಂದೂ ಹೇಳುತ್ತಾರೆ. ಮೂರು ವರ್ಷದ ಲಾಕ್​ ಇನ್​ ಅವಧಿ ಇದೆ. ಅದಕ್ಕಿಂತ ಮೊದಲು ಈ ಹೂಡಿಕೆ ಹಿಂಪಡೆಯಲಾಗದು. ಇದರಲ್ಲಿ ಸಿಕ್ಕಿದ ಕ್ಯಾಪಿಟಲ್​ ಗೇನ್​ ವರ್ಷಕ್ಕೆ 1 ಲಕ್ಷ ರೂಪಾಯಿ ತನಕ ತೆರಿಗೆ ವಿನಾಯಿತಿ ಇದೆ. ಒಂದೊಮ್ಮೆ 1 ಲಕ್ಷ ಕ್ಕಿಂತ ಹೆಚ್ಚು ಕ್ಯಾಪಿಟಲ್​ ಗೇನ್​ ಬಂದರೆ ಶೇಕಡ 10 ತೆರಿಗೆ ಪಾವತಿಸಬೇಕು.

ಸೆಕ್ಷನ್​ 80 ಡಿ ಪ್ರಕಾರ ಉಳಿತಾಯ

ಆರೋಗ್ಯ ವಿಮೆಯ ಪ್ರೋಮಿಯಂ ಗರಿಷ್ಠ 25,000 ರೂ. (ಹಿರಿಯ ನಾಗರಿಕರಿಗೆ 50,000 ರೂ.)ಗೆ ಸೆ.80 ಡಿ ಪ್ರಕಾರ ತೆರಿಗೆ ವಿನಾಯಿತಿ ಇದೆ. ಇದಲ್ಲದೆ, 60 ವರ್ಷ ಮೇಲ್ಪಟ್ಟ ಪಾಲಕರು ಜತೆಗಿದ್ದರೆ ಅವರ ವೈದ್ಯಕಿಯ ವೆಚ್ಚ ಗರಿಷ್ಠ 50,000 ರೂಪಾಯಿಗೆ ತೆರಿಗೆ ವಿನಾಯಿತಿ ಪಡೆಯಬಹುದು.

ಹೋಮ್​ಲೋನ್​ ಇನ್​ಸೆಂಟಿವ್ಸ್​

ಹೋಮ್​ ಲೋನ್​ ಮೂಲಕ ತೆರಿಗೆ ಉಳಿಸುವುದು ಸಾಧ್ಯವಿದೆ. ವಿಶೇಷವಾಗಿ ಹೋಮ್​ ಲೋನ್​ನಲ್ಲಿ ಬಡ್ಡಿಗೆ ತೆರಿಗೆ ವಿನಾಯಿತಿ ಇದೆ. ಆದರೆ, ಸಾಲದ ಮೂಲ ಮೊತ್ತಕ್ಕೆ ಅಲ್ಲ. ಇದಕ್ಕಾಗಿ ಬೇಕಾಗಿರುವುದು ಸಾಲ ನೀಡಿದವರಿಂದ ಒಂದು ಪ್ರಮಾಣಪತ್ರ. ಅದೇ ರೀತಿ, ನಿರ್ಮಾಣ ಹಂತದ ಅಪಾರ್ಟ್​ಮೆಂಟ್​ ಖರೀದಿ ಮಾಡಿದಾಗಲೂ ಹಸ್ತಾಂತರಕ್ಕೆ ಮುಂಚಿನ ಅವಧಿಯಲ್ಲಿ ಪಾವತಿಸಿದ ಒಟ್ಟು ಬಡ್ಡಿಯನ್ನು ತೆರಿಗೆ ವಿನಾಯಿತಿಗೆ ಸೇರಿಸಬಹುದು. ಸ್ವತಃ ವಾಸವಿರುವ ಅಪಾರ್ಟ್​ಮೆಂಟ್​ಗೆ ಗರಿಷ್ಠ 2 ಲಕ್ಷ ರೂಪಾಯಿ ವಿನಾಯಿತಿ ಸಿಗಲಿದೆ. ಇದಕ್ಕೆ ಕೆಲವೊಂದು ನಿಬಂಧನೆಗಳಿವೆ. ಅವುಗಳನ್ನು ಐಟಿ ರಿಟರ್ನ್ಸ್​ ಸಲ್ಲಿಸುವಾಗ ಪರಿಣತರ ನೆರವಿನೊಂದಿಗೆ ಅರ್ಥಮಾಡಿಕೊಳ್ಳಬಹುದು. ಪತಿ-ಪತ್ನಿ ಜಂಟಿ ಮಾಲೀಕತ್ವ ಹೊಂದಿದ್ದರೆ ಆಗ ಇಬ್ಬರಿಗೂ ಸಾಲದ ಬಡ್ಡಿ ಮೇಲೆ ತಲಾ 2 ಲಕ್ಷ ರೂಪಾಯಿ ತನಕ ತೆರಿಗೆ ವಿನಾಯಿತಿ ಸಿಗಲಿದೆ. ಆದಾಯ ಗಳಿಸುವ ಪುತ್ರ ಅಥವಾ ಪುತ್ರಿ ಇದ್ದರೆ ಆಗ ಸಾಲವನ್ನು ಮೂವರಿಗೆ ಹಂಚಲಾಗುತ್ತದೆ. ಮೂವರು ಕೂಡ ತಲಾ 2 ಲಕ್ಷ ರೂಪಾಯಿ ತನಕ ತೆರಿಗೆ ವಿನಾಯಿತಿ ಸಿಗುತ್ತದೆ.

ಪ್ರಸಕ್ತ ವರ್ಷಕ್ಕೆ ಅನ್ವಯವಾಗುವ ತೆರಿಗೆ ಸ್ಲ್ಯಾಬ್​

* 2.5 ಲಕ್ಷ ರೂ.ವರೆಗೆ - ಶೂನ್ಯ ತೆರಿಗೆ

* 2.5 ಲಕ್ಷ ದಿಂದ 5 ಲಕ್ಷ ವರೆಗೆ - ಶೇ.5

* 5 ಲಕ್ಷ ದಿಂದ 7.5 ಲಕ್ಷ - ಶೇ. 10

* 7.5 ಲಕ್ಷದಿಂದ 10 ಲಕ್ಷ - ಶೇ. 15

* 10ರಿಂದ 12.5 ಲಕ್ಷ - ಶೇ. 20

* 12.5ರಿಂದ 15 ಲಕ್ಷ - ಶೇ. 25

* 15 ಲಕ್ಷಕ್ಕಿಂತ ಮೇಲ್ಪಟ್ಟು ಶೇ. 30

(* ವಿವಿಧ ಬಗೆಯ ವಿನಾಯಿತಿ, ಡಿಡಕ್ಷನ್​ಗಳ ಪ್ರಯೋಜನ ಪಡೆದು ತೆರಿಗೆಯ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳಲು ಅವಕಾಶ ಇದೆ.)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net