

‘ದಿ ಕಶ್ಮೀರ್ ಫೈಲ್ಸ್’ ತೆರೆದುಕೊಳ್ಳುವುದರೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರ ಗೋಳು ನೋಡಲಾಗುತ್ತಿಲ್ಲ. ‘ಜೈ ಭೀಮ್ ನೋಡಿ’ ಎಂದು ಹೇಳುವವರೇ ಎಲ್ಲ. ಇದೊಂದು ತಲೆಮರೆಸಿಕೊಳ್ಳುವ ಅಂಶ. ಅಂಬೇಡ್ಕರ್ರು ಮುಸಲ್ಮಾನರ ಬಗ್ಗೆ ಹೇಳಿರುವ ಸಂಗತಿಯನ್ನು ಮಾತನಾಡುತ್ತಿದ್ದಂತೆ ‘ಅವರು ಮೇಲ್ವರ್ಗದವರ ಬಗ್ಗೆ ಹೇಳಿರುವುದನ್ನು ಹೇಳಿ’ ಎನ್ನುವ ಮಂದಿ, ‘ಕಶ್ಮೀರ್ ಫೈಲ್ಸ್’ ಚಿತ್ರದ ಬಗ್ಗೆ ಮಾತನಾಡಿದೊಡನೆ ‘ದಲಿತ್ ಫೈಲ್ಸ್ ಬಗ್ಗೆ ರ್ಚಚಿಸಿ’ ಎನ್ನುವವರಿಗೇನೂ ಕೊರತೆ ಇಲ್ಲ. ಕಳೆದ 75 ವರ್ಷಗಳಲ್ಲಿ ಎಡಪಂಥೀಯ ಚಿಂತಕರು ಇವುಗಳ ಬಗ್ಗೆಯೇ ರ್ಚಚಿಸಿರುವುದನ್ನು ಬಿಟ್ಟರೆ ಮತ್ತೇನು ಮಾಡಿದ್ದಿದೆ ಹೇಳಿ? ಇರುವ ಸತ್ಯವನ್ನು ತಿರುಚುತ್ತ ತಮಗೆ ಬೇಕಾದಂತೆ ಪ್ರಸ್ತುತಪಡಿಸಿ ಭಾರತದಲ್ಲಿರುವ ಬಹುಸಂಖ್ಯಾತ ಹಿಂದೂಗಳು ಸದಾ ತಲೆತಗ್ಗಿಸಿಯೇ ನಿಲ್ಲುವಂತೆ ಮಾಡುವಲ್ಲಿ ಅವರು ನಿಸ್ಸೀಮರು.
ಸಾಹಿತ್ಯವನ್ನು, ಕಲೆಯನ್ನು ತಮಗೆ ಬೇಕಾದಂತೆ ಬಳಸಿಕೊಂಡು ಜನಮಾನಸವನ್ನು ಕುಗ್ಗಿಸುವಂತೆ ಮಾಡುವಲ್ಲಿ ಅವರ ಸಾಧನೆ ಮೆಚ್ಚಬೇಕಾದ್ದೇ. ಒಂದಷ್ಟು ಉದಾಹರಣೆ ಕೊಡುತ್ತೇನೆ. ‘ಜೈ ಭೀಮ್ ಸಿನಿಮಾದ ಬಗ್ಗೆ ಇಷ್ಟೆಲ್ಲ ಮಾತನಾಡುತ್ತಾರಲ್ಲ, ಅದು ತಮಿಳುನಾಡಿನಲ್ಲಿ 90ರ ದಶಕದಲ್ಲಿ ನಡೆದ ಸತ್ಯಘಟನೆಯ ಆಧಾರದ ಮೇಲೆ ನಿರ್ವಣಗೊಂಡ ಚಿತ್ರ. ಬುಡಕಟ್ಟು ಜನಾಂಗದ ಹೆಣ್ಣುಮಗಳೊಬ್ಬಳ ನ್ಯಾಯಕ್ಕಾಗಿ ಹೋರಾಡಿದ ವಕೀಲನ ಕಥೆ. ಇಲ್ಲಿ ಮೇಲ್ವರ್ಗದ ಹಿಂದೂ ಈ ಜನಾಂಗದವರನ್ನು ತುಳಿದಿದ್ದಾನೆ ಎಂಬಂತೆ ತೋರಿಸುವ ಪ್ರಯತ್ನ ಮಾಡಲಾಗಿದೆ. ಇಡಿಯ ಚಿತ್ರದ ನಿಜವಾದ ವಿಲನ್ ಅಲ್ಲಿ ಕಂಡುಬರುವ ಸಬ್ ಇನ್ಸ್ಪೆಕ್ಟರ್. ಆತನನ್ನು ಹಿಂದೂವಾಗಿ ಮತ್ತು ಅಲ್ಲಿನ ಪ್ರಮುಖ ವನಿಯಾರ್ ಕಮ್ಯುನಿಟಿಯ ಸದಸ್ಯನಾಗಿ ತೋರಿಸಲಾಗಿದೆ. ನಾವು ಅದನ್ನು ನಂಬಿಕೊಂಡೇ ಬಂದಿದ್ದೇವೆ. ವಾಸ್ತವ ಸಂಗತಿ ಏನು ಗೊತ್ತೇ? ನಿಜವಾದ ಘಟನೆಯಲ್ಲಿ ಆತನ ಹೆಸರು ಆಂಟನಿ ಸಾಮಿ. ಹೆಸರು ನೋಡಿದರೆ ಆತ ಯಾವ ಮತಕ್ಕೆ ಸೇರಿದವನೆಂದು ಎಂಥವನಿಗೂ ಅರಿವಾಗುತ್ತದೆ. ಈ ಚಿತ್ರದ ಪಾತ್ರಗಳೆಲ್ಲವೂ ಕಾಲ್ಪನಿಕ ಎಂದು ಆರಂಭದಲ್ಲಿ ಪ್ರದರ್ಶಿಸುವ ಒಂದು ಸಾಲಿನೊಂದಿಗೆ ತಮಗೆ ಬೇಕಾದಂತೆ ಹೆಸರುಗಳನ್ನು ತಿರುಚುವ ಸಾಮರ್ಥ್ಯವನ್ನು ನಿರ್ದೇಶಕರು ಗಳಿಸಿಕೊಂಡುಬಿಡುತ್ತಾರೆ. ಸೃಜನಶೀಲತೆಯ ಸ್ವಾತಂತ್ರ್ಯವನ್ನು ಬಳಸಿಕೊಳ್ಳುವ ನೆಪದಲ್ಲಿ ಇಡಿಯ ಚಿತ್ರದಲ್ಲಿ ಹಿಂದೂ ಸಮಾಜವನ್ನು ಅವಮಾನಿಸಿದ ರೀತಿ ಇದೆಯಲ್ಲ ಅದು ನಿಜಕ್ಕೂ ಅಸಮಾಧಾನ ಉಂಟುಮಾಡುವಂಥದ್ದು. ಈ ಚಿತ್ರ ಪ್ರದರ್ಶನಗೊಳ್ಳುತ್ತಿದ್ದಾಗ ತಮಿಳುನಾಡಿನ ವನಿಯಾರ್ ಜನಾಂಗದವರು ಈ ಕಾರಣಕ್ಕಾಗಿ ವಿರೋಧ ಪ್ರದರ್ಶನಕ್ಕೆ ಮುಂದಾಗಿದ್ದರು. ಎಲ್ಲ ಪತ್ರಿಕೆಗಳೂ ಇದನ್ನು ‘ಸತ್ಯಘಟನೆ ಆಧರಿಸಿದ ಚಿತ್ರ’ ಎಂದು ಹೇಳುವಾಗಲೇ ಇಲ್ಲಿರುವ ಪಾತ್ರಗಳು ಈ ರೀತಿ ಹೆಸರು ಬದಲಾಯಿಸಲ್ಪಟ್ಟಿವೆ ಎಂಬುದನ್ನು ಮಾತ್ರ ಹೇಳಲಿಲ್ಲ!
ಈ ರೀತಿ ಹೆಸರುಗಳನ್ನು ಬದಲಾಯಿಸಿ ಹಿಂದೂಗಳನ್ನು ಕಟಕಟೆಯಲ್ಲಿ ನಿಲ್ಲಿಸುವ ಸಿನಿಮಾ ಮಂದಿಯ ಪ್ರಯತ್ನ ಹೊಸತೇನೂ ಅಲ್ಲ. ‘ಚಕ್ದೇ ಇಂಡಿಯಾ’ ನೋಡಿರಬೇಕಲ್ಲ, ಒಂದು ಕಾಲದಲ್ಲಿ ದೇಶಭಕ್ತಿಯ ಉದ್ದೀಪನಕ್ಕೆ ತರುಣರು ಹೆಮ್ಮೆಯಿಂದ ನೋಡುತ್ತಿದ್ದ ಚಿತ್ರ ಅದು. ಆದರೆ ಪ್ರತೀಬಾರಿ ಚಿತ್ರ ನೋಡುವಾಗಲೂ ಮುಸ್ಲಿಂ ತರಬೇತುದಾರ ಕಬೀರ್ ಖಾನನ ಕುರಿತಂತೆ ಅನುಕಂಪ ವ್ಯಕ್ತವಾಗುತ್ತಿತ್ತು. ಆದರೆ ಸತ್ಯಕಥೆ ಏನು ಗೊತ್ತೇ? ಕಬೀರ್ ಖಾನನ ಪಾತ್ರ ನಿಜಜೀವನದಲ್ಲಿ ಮೀರ್ ರಂಜನ್ ನೇಗಿಯದ್ದು. ಆತ ಹುಮಾವ್ ರಜಪೂತ ಕುಟುಂಬಕ್ಕೆ ಸೇರಿದವ. 1982ರ ಏಷ್ಯನ್ ಗೇಮ್ಸ್ನಲ್ಲಿ ಪಾಕಿಸ್ತಾನ ಭಾರತದೆದುರು 1-7 ಗೋಲುಗಳಿಂದ ಭರ್ಜರಿ ವಿಜಯ ಸಾಧಿಸಿ ಮೆರೆದಾಡಿತ್ತು. ಈ ಹೊತ್ತಿನಲ್ಲಿ ಗೋಲ್ಕೀಪರ್ ಆಗಿದ್ದ ನೇಗಿ ಈ ಗೋಲ್ಗಳನ್ನು ತಡೆಯಲಿಲ್ಲವೆಂಬುದು ಜನಮಾನಸದಲ್ಲಿ ಆಕ್ರೋಶವಾಗಿ ಪ್ರತಿಧ್ವನಿಸಿತು. ಪಾಕಿಸ್ತಾನದ ನಾಯಕ ತಮ್ಮ ಹಿಂದಿನ ಸೋಲಿಗೆ ತಾವು ಸರಿಯಾದ ಉತ್ತರ ಕೊಟ್ಟಿದ್ದೇವೆ ಎಂದು ಹೇಳುವ ಭರದಲ್ಲಿ ‘ಗೋಲ್ಕೀಪರ್ ತಮ್ಮ ಪರವಾಗಿ ಆಡಿದ್ದಾನೆ’ ಎಂಬಂಥ ಮಾತುಗಳನ್ನು ಹೇಳಿಬಿಟ್ಟ. ಅಲ್ಲಿಂದಾಚೆಗೆ ನೇಗಿಯ ಬದುಕು ನರಕವಾಗಿಬಿಟ್ಟಿತು! ಕೆಲವು ವರ್ಷಗಳ ಕಾಲ ಹಾಕಿಯಿಂದ ದೂರವೇ ಉಳಿದುಬಿಟ್ಟ ನೇಗಿ ಹಠಹಿಡಿದು ಗೋಲ್ಕೀಪಿಂಗ್ ತರಬೇತುದಾರರಾಗಿ ಹಾಕಿ ಪ್ರಪಂಚಕ್ಕೆ ಮರಳಿದರು. ಪುರುಷರಿಗೆ ತರಬೇತಿ ಕೊಟ್ಟ ನಂತರ ಅವರು ಮಹಿಳೆಯರ ಹಾಕಿ ತಂಡದ ಜವಾಬ್ದಾರಿಯನ್ನು ಹೊತ್ತರು. ಕಾಮನ್ವೆಲ್ತ್ ಗೇಮ್ಳಲ್ಲಿ ಮಹಿಳಾ ತಂಡ ಚಿನ್ನ ಗೆಲ್ಲುವಾಗ ಮತ್ತು ಏಷ್ಯಾಕಪ್ನಲ್ಲಿ ವಿಜಯಶಾಲಿಯಾಗಿ ಹೊರಹೊಮ್ಮುವಾಗ ನೇಗಿಯೇ ತರಬೇತುದಾರಿಕೆಯ ನೇತೃತ್ವ ವಹಿಸಿದ್ದು. ಆದರೆ ಬಾಲಿವುಡ್ ನಿರ್ಲಜ್ಜವಾಗಿ ಆ ಹೆಸರನ್ನು ‘ಕಬೀರ್ ಖಾನ್’ ಮಾಡಿ ಇಡಿಯ ಭಾರತೀಯರು ವಿಶೇಷವಾಗಿ ಹಿಂದೂಗಳು ತಲೆತಗ್ಗಿಸಿ ನಿಲ್ಲುವಂತೆ ಮಾಡಿಬಿಟ್ಟಿತು. ಈಗಲೂ ‘ಚಕ್ದೇ ಇಂಡಿಯಾ’ ನೋಡುವಾಗ ಎಂಥ ತಪು್ಪ ಮಾಡಿದೆವು ಎಂದು ಕಾಣುತ್ತಿರುತ್ತದೆ.
ಇವರುಗಳ ತಿರುಚುವಿಕೆ ಮುಗಿಯುವಂಥದ್ದಲ್ಲ. ‘ಶೇರ್ನಿ’ ಸಿನಿಮಾ ಬಂದಿದ್ದು ನಿಮಗೆ ನೆನಪಿರಬೇಕು. ವಿದ್ಯಾ ಬಾಲನ್ ಅರಣ್ಯಾಧಿಕಾರಿಯಾಗಿ ‘ಅವನಿ’ ಎಂಬ ಹುಲಿಯೊಂದನ್ನು ರಕ್ಷಿಸುವ ಕಥೆಯುಳ್ಳ ಚಿತ್ರ ಅದು. ಈ ಚಿತ್ರ ನೈಜಕಥೆಯನ್ನೇ ಆಧರಿಸಿದ್ದು. ಆದರೆ ಹೆಸರುಗಳನ್ನು ಎಷ್ಟರಮಟ್ಟಿಗೆ ಬದಲಾಯಿಸಲಾಗಿದೆ ಎಂದರೆ ನಿಜ ಬದುಕಿನಲ್ಲಿ ವಿದ್ಯಾ ಬಾಲನ್ಳ ಪಾತ್ರ ಐಎಫ್ಎಸ್ ಅಧಿಕಾರಿ ಕೆ.ಎಮ್ ಆಭರಣಾಳದ್ದು. ಆದರೆ ಇಲ್ಲಿ ಅದಕ್ಕೊಂದು ಕ್ರಿಶ್ಚಿಯನ್ ಹೆಸರು ಕೊಡಲಾಗಿದೆ. ಚಿತ್ರದಲ್ಲಿ ಹುಲಿಯ ಕೊಲೆ ಮಾಡುವ ವ್ಯಕ್ತಿಯನ್ನು ರಂಜನ್ ಅಲಿಯಾಸ್ ಪಿಂಟು ಭಯ್ಯಾ ಎಂದು ತೋರಿಸಲಾಗಿದೆ. ವಾಸ್ತವವಾಗಿ ಹುಲಿಯ ಕೊಲೆಮಾಡುವವ ಅಸ್ಗರ್ ಅಲಿ ಖಾನ್ ಎಂಬ ಮುಸಲ್ಮಾನ. ಮುಸಲ್ಮಾನರನ್ನೆಲ್ಲ ಸಜ್ಜನರೆಂದು ಬಿಂಬಿಸುವ ಧಾವಂತಕ್ಕೆ ಬಿದ್ದ ಬಾಲಿವುಡ್ನ ಸೆಕ್ಯುಲರ್ ಮನಸ್ಥಿತಿಗಳು ಅದಕ್ಕೊಂದು ವಿಕಾರವಾಗಿರುವ ಹಿಂದೂ ವ್ಯಕ್ತಿಯನ್ನು ಸೃಷ್ಟಿಸಿ ಹಿಂದೂಗಳ ಮಾನಸಿಕ ಸ್ಥಿತಿಯ ಮೇಲೆ ಬಡಿಯುತ್ತಲೇ ಹೋಗುತ್ತಾರೆ. ಇಡಿಯ ಚಿತ್ರದಲ್ಲಿ ‘ಹಸನ್ ನೂರಾನಿ’ ಎಂಬ ಅಧಿಕಾರಿಯನ್ನು ಅತ್ಯಂತ ಪ್ರಾಮಾಣಿಕನೆಂದು ತೋರಿಸುವ ಮತ್ತು ಕಚೇರಿಯಲ್ಲಿ ಭಜನೆ, ಪೂಜೆ ಮಾಡುವ ಹಿಂದೂಗಳನ್ನು ಮೂರ್ಖರಂತೆ ಬಿಂಬಿಸುವ ಪ್ರಯತ್ನವನ್ನೂ ಮಾಡಲಾಗಿದೆ. ವಾಸ್ತವ ಬದುಕಿನಲ್ಲಿ ಇದ್ಯಾವುದೂ ಸತ್ಯವಲ್ಲ.
ಈ ರೀತಿ ಮುಸಲ್ಮಾನರನ್ನು ಸಜ್ಜನರೆಂದು, ಲವಲೇಶದಷ್ಟೂ ಕೆಡುಕಿಲ್ಲದ ಪ್ರಾಮಾಣಿಕ, ಮುಗ್ಧಜನರೆಂದು ತೋರಿಸಲು ಬಾಲಿವುಡ್ ಹೆಣಗಾಡುವ ರೀತಿ ಗಾಬರಿ ಹುಟ್ಟಿಸುವಂಥದ್ದು. ‘ಮೈ ನೇಮ್ ಈಸ್ ಖಾನ್’ ಎಂಬ ಶಾರುಖ್ ಖಾನನ ಚಿತ್ರವೊಂದು ಮುಸಲ್ಮಾನರ ಹೆಸರನ್ನು ಕಂಡರೆ ಜನ ಭಯೋತ್ಪಾದಕರೆಂದು ಭಾವಿಸುವುದು ಎಷ್ಟು ಸರಿ ಎಂಬುದನ್ನು ಬಿಂಬಿಸಹೊರಟಿತ್ತು. ಇದೇ ಸಾಲಿಗೆ ಕಾಶ್ಮೀರದ ವಸ್ತುವನ್ನು ಆಧರಿಸಿದ ‘ಹೈದರ್’ ಮತ್ತು ‘ಶಿಖಾರಾ’ಗಳು ಸೇರುತ್ತವೆ. ಇವೆಲ್ಲವೂ ಕಾಶ್ಮೀರದ ಮುಸಲ್ಮಾನರ ಮೇಲೆ ಎಂತಹ ಅನುಕಂಪವನ್ನು ಹುಟ್ಟಿಸಿಬಿಡುತ್ತದೆಂದರೆ ‘ಪಂಡಿತರು ಮರಳಿ ಕಾಶ್ಮೀರಕ್ಕೆ ಹೋಗದಿದ್ದರೆ ಒಳಿತು’, ಎಂದು ಪಂಡಿತರೇ ಇಂದಿನ ದಿನಗಳಲ್ಲಿ ವಾದಿಸಿದರೂ ಅಚ್ಚರಿ ಪಡಬೇಕಾಗಿಲ್ಲ ಎನ್ನುವಷ್ಟು! ‘ಹೈದರ್’ ಸಿನಿಮಾದಲ್ಲಿ ವಿಶಾಲ್ ಭಾರದ್ವಾಜ್ ಎಂಬ ತರುಣನ ಸಣ್ಣದೊಂದು ಪಾತ್ರ ನಿರ್ವಹಿಸಿದ್ದು ಸಾಕಿಬ್ ಬಿಲಾಲ್ ಶೇಖ್. ಸಿನಿಮಾದಲ್ಲಿ ನಟಿಸಿದ ಐದೇ ವರ್ಷಗಳಲ್ಲಿ ಲಷ್ಕರ್-ಎ-ತೋಯ್ಬಾದ ಭಯೋತ್ಪಾದಕನಾಗಿ ಭಾರತೀಯ ಸೇನಾಪಡೆಗಳ ಕಾರ್ಯಾಚರಣೆಗೆ ಬಲಿಯಾದ. ಈ ಚಿತ್ರದ ಆಲೋಚನೆ ಪಾಕಿಸ್ತಾನಿ-ಅಮೆರಿಕನ್ ಆಗಿರುವ ಬಶ್ರತ್ ಪೀರ್ನದ್ದು. ಆತನ ಪತ್ನಿ ಸಾಹಿತ್ಯ ಅಕಾಡೆಮಿಯ ಸದಸ್ಯನಾಗಿ ಐದು ವರ್ಷಗಳ ಕಾಲ ಕೆಲಸ ನಿರ್ವಹಿಸಿದ್ದ ಕೈಲಾಶ್ ವಾಜಪೇಯಿಯ ಮಗಳು ಅನನ್ಯ ವಾಜಪೇಯಿ. ಕುತ್ತಿಗೆಯ ಮಟ್ಟದವರೆಗೂ ಇವರೆಲ್ಲರಿಗೂ ಭಾರತವನ್ನು ಕಂಡರೆ, ಮೋದಿಯನ್ನು ಕಂಡರೆ ಆಕ್ರೋಶ. ಅನನ್ಯಾಳಂತೂ ಭಾರತವಿರೋಧಿ ಸತ್ಯ ತಿರುಚುವಲ್ಲಿ ನಿಸ್ಸೀಮನಾದ ಶೆಲ್ಡನ್ ಪೋಲಾಕ್ನ ಅನುಯಾಯಿ. ಇವರುಗಳು ಮಾಡಿರುವ ಚಿತ್ರದ ಪ್ರಭಾವ ನಟಿಸಿರುವ ವ್ಯಕ್ತಿಯ ಮೇಲೆ ಇಷ್ಟಾಗಿರಬಹುದಾದರೆ ಇನ್ನು ಅವುಗಳನ್ನೇ ವೀಕ್ಷಿಸಿ ಬೆಳೆದ ತರುಣರ ಕಥೆ ಹೇಗಿರಬಹುದು? ಈ ಸಾಕಿಬ್ ಶೇಖ್ನ ಕುರಿತಂತೆ ವಿಸõತ ಲೇಖನವನ್ನು ಪ್ರಕಟಿಸಿದ ಪ್ರಾಪಗ್ಯಾಂಡ ಪತ್ರಿಕೆ ‘ವೈರ್’ ಆತನನ್ನು ಒಳ್ಳೆಯ ಫುಟ್ಬಾಲ್ ಆಟಗಾರ, ಹತ್ತನೇ ತರಗತಿಯಲ್ಲಿ ಶೇಕಡ 76 ಅಂಕಗಳನ್ನು ಪಡೆದವ, ಇಂಜಿನಿಯರ್ ಆಗಬೇಕೆಂಬ ಕನಸಿಟ್ಟುಕೊಂಡಿದ್ದವ ದುರದೃಷ್ಟವಶಾತ್ ಭಯೋತ್ಪಾದಕನಾಗಿಬಿಟ್ಟ ಎಂದೆಲ್ಲ ಬರೆಯಿತು. ಆದರೆ ಆತನ ಚಿಕ್ಕಪ್ಪ ಬಲವಾಗಿಯೇ ಸಾಕಿಬ್ನ ಕಾರ್ಯಗಳನ್ನು ಸಮರ್ಥಿಸಿಕೊಳ್ಳುತ್ತ, ‘ಅವರೆಲ್ಲ ಸಿಂಹದಂತೆ ಕಾದಾಡಿದರು. ಹೀಗಾಗಿ ದುಃಖಿಸುವ ಪ್ರಮೇಯವೇ ಇಲ್ಲ. ನಮಗೆಲ್ಲ ಹಬ್ಬ’ ಎಂದಿದ್ದನ್ನೂ ಪತ್ರಿಕೆ ಉಲ್ಲೇಖಿಸಿತ್ತು. ಅಂದರೆ ಭಯೋತ್ಪಾದನೆಗೆ ಬೇಕಾದ ಮಾನಸಿಕ ಸ್ಥಿತಿಯನ್ನು ಮುಸಲ್ಮಾನರಲ್ಲಿ ಉದ್ದೀಪಿಸುತ್ತಲೇ ಇವರನ್ನು ಅನುಕಂಪದಿಂದ ಕಾಣಬೇಕು ಎಂಬ ಭಾವನೆಯನ್ನು ಹಿಂದೂಗಳಲ್ಲಿ ಬಿತ್ತಿಬಿಡುತ್ತಾರೆ. ಕಳೆದ ಏಳು ದಶಕಗಳಲ್ಲಿ ಎಡಪಂಥೀಯರು ತಮ್ಮ ಕೈಲಿರುವ ಎಲ್ಲ ಅಸ್ತ್ರಗಳನ್ನು ಹೀಗೆ ಬಳಕೆ ಮಾಡಿದುದರಿಂದಲೇ ಪಾಕಿಸ್ತಾನಕ್ಕೆ ಹೋಗಿ ಮುಸ್ಲಿಂ ಹೆಣ್ಣುಮಗುವೊಂದನ್ನು ಬಿಟ್ಟುಬರುವ, ಅದಕ್ಕಾಗಿ ತನ್ನ ಹಿಂದೂಧರ್ಮದ ಆಚರಣೆಗಳೊಂದಿಗೂ ಸಂಧಾನ ಮಾಡಿಕೊಳ್ಳುವ ಚಲನಚಿತ್ರಗಳನ್ನೂ ನಾವು ಗೌರವದಿಂದ ಸ್ವಾಗತಿಸಿಬಿಡುತ್ತೇವೆ.
ಇವೆಲ್ಲದರ ನಡುವೆಯೂ ಹೇಳಲೇಬೇಕಾದ ಒಂದು ಮಾತೇನು ಗೊತ್ತೇ? ಹಿಂದಿ ಸಿನಿಮಾಗಳು ಮತ್ತು ದಕ್ಷಿಣದ ಇತರ ಭಾಷೆಯ ಸಿನಿಮಾ ಮಂದಿ ಇತಿಹಾಸವನ್ನು ತಿರುಚಿ ಹೆಸರುಗಳನ್ನೇ ಬದಲಿಸಿ, ಮನಸೋ ಇಚ್ಛೆ ಚಿತ್ರಗಳನ್ನು ತರುತ್ತಿರುವಾಗಲೂ ಕನ್ನಡ ಸಿನಿಮಾರಂಗ ಇವರುಗಳಿಂದ ಬಚಾವಾಗಿದೆ ಎಂದರೆ ನಿಸ್ಸಂಶಯವಾಗಿಯೂ ಅದಕ್ಕೆ ಕಾರಣ ಡಾ. ರಾಜಕುಮಾರರೇ. ಸಾಂಪ್ರದಾಯಿಕ ಹಿನ್ನೆಲೆಯಿಂದ ಬಂದ ಅವರು ತಮ್ಮ ಧಾರ್ವಿುಕ ಚೌಕಟ್ಟನ್ನು ಬಿಟ್ಟು ಅಲುಗಾಡಲೇ ಇಲ್ಲ. ಹೀಗಾಗಿಯೇ ದೇವರ ವಿಚಾರದಲ್ಲಿ, ಕನ್ನಡದ ರಾಜರುಗಳ ವಿಚಾರದಲ್ಲಿ ಅವರು ಅಪ್ರತಿಮವಾದ ಕೆಲಸ ಮಾಡಿ ಕನ್ನಡ ಚಿತ್ರರಂಗ ಸಾಗಬೇಕಾದ ಹಾದಿಯನ್ನು ಬಲುಹಿಂದೆಯೇ ರೂಪಿಸಿಕೊಟ್ಟರು. ಹಿಂದಿ ಸಿನಿಮಾ ಜಗತ್ತು ಈ ರೀತಿಯ ವ್ಯಕ್ತಿಗಳನ್ನು ಪಡೆಯಲಿಲ್ಲವೆನ್ನುವುದೂ ಇಂದಿನ ಸ್ಥಿತಿಗೆ ಕಾರಣವಿರಬಹುದೆನಿಸುತ್ತದೆ.
ಇರಲಿ, ಇವೆಲ್ಲದರ ನಿಜವಾದ ನಷ್ಟವನ್ನು ಅನುಭವಿಸುತ್ತಿರುವುದು ಮುಸ್ಲಿಂ ಸಮಾಜವೇ. ಅವರ ತಪು್ಪಗಳನ್ನು ಮುಚ್ಚಿಟ್ಟು ಅವರನ್ನು ದೇವರೆಂದು ಬಿಂಬಿಸುವ ಪ್ರಯತ್ನ ಮಾಡಿದ ಮಂದಿಯೆಲ್ಲ ಅವರ ಬದುಕನ್ನು ಹಾಳುಗೆಡವುತ್ತಿದ್ದಾರೆ. ತಥಾಕಥಿತ ಹಿಂದೂ ಮೇಲ್ವರ್ಗದವರು ದಲಿತರ ಮೇಲೆ ನಡೆಸಿದ ಅತ್ಯಾಚಾರವನ್ನು ಬ್ರಿಟಿಷರ ಕಾಲದಿಂದಲೂ ವೈಭವೀಕರಣಗೊಳಿಸಿ ಪ್ರದರ್ಶಿಸುವ ಪ್ರಯತ್ನ ಮಾಡಲಾಗಿದೆ. ಇದರಿಂದ ಹಿಂದೂ ಕುಗ್ಗಿಹೋಗಿದ್ದಾನೆನಿಸಿದರೂ ತನ್ನ ತಾನು ತಿದ್ದಿಕೊಂಡು ಹೊಸಯುಗದ ಸವಾಲುಗಳಿಗೆ ಎದೆಕೊಟ್ಟು ನಿಂತಿದ್ದಾನೆ. ಆದರೆ ಮುಸಲ್ಮಾನನಿಗೆ ಆ ಸಾಧ್ಯತೆಯೇ ಇಲ್ಲ. ಅವನಿಂದು ಈ ಪ್ರಾಪಗ್ಯಾಂಡ ತಂಡದ ಕೈಗೊಂಬೆ. ತಮಗೆ ಬೇಕಾದಂತೆ ಮುಸಲ್ಮಾನರನ್ನು ಕುಣಿಸಬಲ್ಲ ಸಾಮರ್ಥ್ಯ ಅವರಿಗಿದೆ. ಕೆಲವು ತಿಂಗಳುಗಳವರೆಗೂ ಹಿಜಾಬ್ ಅನ್ನು ವಿರೋಧಿಸಿ ಅರೆ-ಬರೆ ಬಟ್ಟೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಸಿನಿಮಾ ನಟಿ, ಟಿವಿ ನಿರೂಪಕಿಯರು ಏಕಾಕಿ ಹಿಜಾಬ್ನ ಪರವಾಗಿ ಮಾತನಾಡುತ್ತಿರುವುದು ಮುಸಲ್ಮಾನರನ್ನು ಎತ್ತ ಬೇಕಿದ್ದರೂ ತಿರುಗಿಸಬಲ್ಲೆವು ಎಂಬ ಧೈರ್ಯದಿಂದಲೇ. ಮೊನ್ನೆಯಂತೂ ಹಿಜಾಬ್ನ ಕುರಿತಂತೆ ನ್ಯಾಯಾಲಯ ಆದೇಶ ಹೊರಡಿಸಿತ್ತಲ್ಲ, ಆಗ ರಾಜ್ಯ ಬಂದ್ಗೆ ಕರೆಕೊಟ್ಟ ಮುಸಲ್ಮಾನರು ಜನರಿಗೆ ಬಲುದೊಡ್ಡ ಸಂದೇಶವನ್ನೇ ಕೊಟ್ಟುಬಿಟ್ಟರು. ತಾವು ನ್ಯಾಯಾಲಯವನ್ನು, ಅಂಬೇಡ್ಕರ್ರ ಸಂವಿಧಾನವನ್ನು ಪುರಸ್ಕರಿಸುವುದಿಲ್ಲವೆಂದೂ, ತಮ್ಮಿಚ್ಛೆಯಂತೆ ದೇಶದ ಜನ ನಡೆಯಲಿಲ್ಲವೆಂದರೆ ನಾವು ಯಾವ ಹಂತಕ್ಕೆ ಬೇಕಿದ್ದರೂ ಹೋಗಬಲ್ಲೆವೆಂಬುದೇ ಆ ಸಂದೇಶ! ಇದರ ಪರಿಣಾಮವಾಗಿ ಹಿಂದೂಗಳು ಎಚ್ಚೆತ್ತುಕೊಳ್ಳುವಂತಾಯ್ತು. ಅಂದು ಯಾರು ಯಾರು ತಮ್ಮ ಅಂಗಡಿಗಳ ಬಾಗಿಲುಗಳನ್ನು ಮುಚ್ಚಿದ್ದರೋ ಅದೆಲ್ಲವೂ ಮುಸಲ್ಮಾನರ ಅಂಗಡಿ, ಇನ್ನುಮುಂದೆ ಅಲ್ಲಿಂದ ವಸ್ತುಗಳನ್ನು ಖರೀದಿಸಬೇಕಿಲ್ಲ ಎಂಬ ನಿರ್ಣಯವನ್ನು ಅನೇಕರು ಮಾಡಿಬಿಟ್ಟಿದ್ದಾರೆ. ಈ ಅಂತರ ಹಿಂದೂ ಮತ್ತು ಮುಸಲ್ಮಾನರ ನಡುವೆ ಸೃಷ್ಟಿಯಾಗಿದೆಯಲ್ಲ, ಅದು ಬಡ, ಮಧ್ಯಮವರ್ಗದ ಮುಸಲ್ಮಾನರ ಬದುಕಿಗೆ ಖಂಡಿತ ಒಳಿತಲ್ಲ.
ಮುಸಲ್ಮಾನರು ಇನ್ನಾದರೂ ವಾಸ್ತವಿಕತೆಯನ್ನು ಒಪ್ಪಿಕೊಳ್ಳಬೇಕಾಗಿದೆ. ಐತಿಹಾಸಿಕವಾಗಿ ಮಾಡಿದ ತಪು್ಪಗಳನ್ನು ತಿದ್ದಿಕೊಳ್ಳುತ್ತ ಅಂದಿನ ತಪ್ಪುಗಳಿಗೆ ಕ್ಷಮೆಕೇಳಿ ಏಕರಸಗೊಂಡು ಮುನ್ನಡೆಯಬೇಕಾದ ಹೊತ್ತು ಬಂದಿದೆ.
(ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)