

ಸೌದಿಯ ಯುವರಾಜ ಮೊಹಮ್ಮದ್ ಬಿನ್ಸಲ್ಮಾನ್ ತನ್ನ ಪ್ರಗತಿಪರ ಆಲೋಚನೆಗಳಿಂದಲೇ ಹೆಸರುವಾಸಿಯಾದವರು. ಹೆಣ್ಣುಮಕ್ಕಳಿಗೆ ಪುರುಷರೊಂದಿಗೆ ಸೇರಿ ಆಟವಾಡುವುದಕ್ಕೆ ಅನುಮತಿ ಕೊಟ್ಟಿದ್ದಲ್ಲದೆ ಗಾಡಿ ಚಲಾಯಿಸಲು ಮುಕ್ತ ಪರವಾನಗಿಯನ್ನೂ ನೀಡಿದರು. ಇಷ್ಟೇ ಅಲ್ಲ, ಹೆಣ್ಣುಮಕ್ಕಳು ಹಿಜಾಬ್ ಧರಿಸುವುದಾಗಲೀ ಅಥವಾ ದೇಹವನ್ನು ಮುಚ್ಚುವ ಅಬಾಯ-ಬುರ್ಖಾ ಬಗೆಯ ಕಪು್ಪಬಟ್ಟೆ- ಧರಿಸುವ ಅಗತ್ಯವಿಲ್ಲ ಎಂದು ಕೆಲವು ದಿನಗಳ ಹಿಂದೆ ಸ್ಪಷ್ಟಪಡಿಸಿದರು. ಗೌರವಯುತವಾದ ಬಟ್ಟೆ ಧರಿಸಿದರೆ ಸಾಕು ಎಂಬುದನ್ನು ಹೇಳಲು ಮೊಹಮ್ಮದ್ ಬಿನ್ಸಲ್ಮಾನ್ ಮರೆಯಲಿಲ್ಲ. ಇದು ಎಲ್ಲ ಮತ-ಪಂಥಗಳೂ ಹೇಳಬಹುದಾಗಿರುವಂಥ ವಿಚಾರವೇ. ಕೆಟ್ಟ ನಿಯಮಗಳನ್ನು ಹೆಣ್ಣುಮಕ್ಕಳಿಗೆ ಹೇರಿ ಅವರ ಬದುಕನ್ನು ನರಕಗೊಳಿಸುವ ನೀಲಿನಕಾಶೆ ರೂಪಿಸಿಕೊಟ್ಟ ಸೌದಿ ಅರೇಬಿಯಾ ಸ್ವತಃ ಈ ನಿರ್ಣಯಗಳನ್ನು ಕೈಗೊಳ್ಳುತ್ತಿರುವಾಗ ಭಾರತದಲ್ಲಿನ ಹೆಣ್ಣುಮಕ್ಕಳು ತಾವು ಬುರ್ಖಾ ಧರಿಸುತ್ತೇವೆ ಎಂದು ಹಠ ಹಿಡಿದಿರುವುದಲ್ಲದೆ ಅದಕ್ಕಾಗಿ ಶಿಕ್ಷಣವನ್ನೂ ತ್ಯಾಗ ಮಾಡಬಲ್ಲೆವು ಎನ್ನುತ್ತಿರುವುದು ದುರಂತಕಾರಿಯೇ. ಮಾಧ್ಯಮದ ಚರ್ಚೆಗಳಲ್ಲಿ ಈ ವಿಚಾರವನ್ನು ಹೇಳಿದಾಗ ಬುರ್ಖಾವಾದಿಯೊಬ್ಬ, ‘ಸೌದಿಯ ಜನ ಏನಾದರೂ ಮಾಡಿಕೊಂಡು ಹಾಳಾಗಿಹೋಗಲಿ. ನಾವು ಮಾತ್ರ ಬುರ್ಖಾ ಬೆಂಬಲಿಸುವುದನ್ನು ಬಿಡಲಾರೆವು’ ಎಂದು ಹೇಳಿದ್ದು ಇನ್ನೂ ಕಿವಿಯಲ್ಲಿ ಗುಂಯ್ಗುಡುತ್ತಿದೆ! ಇಸ್ಲಾಂನ ನೀತಿಗಳು, ನಡೆ-ನುಡಿಗಳು ಅರಬ್ಬರ ದೇಣಿಗೆಯೇ. ಹಾಗೆ ನೋಡಿದರೆ, ಅವರು ಮೂಲ. ಇಲ್ಲಿರುವವರು ನಕಲು. ನಕಲು ಮಾಡುವವರು ಸ್ವಂತಬುದ್ಧಿ ಬಳಸಿದರೆ ಏನಾಗಬಹುದೆನ್ನುವುದಕ್ಕೆ ಕರ್ನಾಟಕವೇ ಸಾಕ್ಷಿ. ಅದಕ್ಕೆ ಹಿಂದೆ ಹೇಳಿದ್ದು ಮೂಲಕ್ಕಿಂತ ಮತಾಂತರಿತರೇ ಅಪಾಯಕಾರಿ ಅಂತ. ಇದನ್ನು ದೃಢೀಕರಿಸುವ ಇನ್ನೊಂದಷ್ಟು ಸಂಗತಿಗಳಿವೆ. ಇತ್ತೀಚೆಗೆ ‘ಪ್ರಿಂಟ್’ ಪತ್ರಿಕೆ ಭಾರತದಿಂದ ಐಸಿಸ್ಗೆ ಸೇರಿ ಜಗತ್ತಿನ ಬೇರೆ-ಬೇರೆ ದೇಶಗಳಲ್ಲಿರುವ 40 ಜನರ ಬಗ್ಗೆ ವಿಸõತವಾಗಿ ವರದಿ ಮಾಡಿದೆ. ರಾಂಚಿಯಲ್ಲಿ ಹುಟ್ಟಿ ಅಲಿಘರ್ ಮುಸ್ಲಿಂ ಯುನಿವರ್ಸಿಟಿಯ ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ಇಂಜಿನಿಯರಿಂಗ್ ಪದವಿ ಪಡೆದ ಸೈಯ್ಯದ್ ಮೊಹಮ್ಮದ್ ಅರ್ಷಿಯಾನ್ ಹೈದರ್ ಐಸಿಸ್ ಉಗ್ರಗಾಮಿಗಳಿಗೆ ಆತ್ಮಹತ್ಯಾ ಡ್ರೋನ್ಗಳನ್ನು ರೂಪಿಸಿಕೊಟ್ಟವ. ಈಗ ತುರ್ಕಿಯ ಜೈಲಿನಲ್ಲಿದ್ದಾನೆ. ಶ್ರೀನಗರದ ಆದಿಲ್ ಫಯಾಜ್ ವಾದಾ ಬ್ರಿಜ್ಬೇನ್ನಲ್ಲಿ ಎಂಬಿಎ ಮಾಡಿಕೊಂಡವ. ಆರಂಭದಿಂದಲೂ ಪ್ರತ್ಯೇಕತಾವಾದಿಗಳನ್ನು ಟೀಕಿಸುತ್ತಲೇ ಇದ್ದವನನ್ನು ಆಸ್ಟ್ರೇಲಿಯಾದಲ್ಲಿ ಹಮೀದ್ ಅಲ್ ಕುದ್ಸಿ ತಲೆಕೆಡಿಸಿದ. ಆತ ಪೊಲೀಸರಿಗೆ ಸಿಕ್ಕಿಬಿದ್ದು ಎಂಟು ವರ್ಷ ಜೈಲಿಗೆ ಹೋದ ನಿಜ. ಇತ್ತ ತಲೆಕೆಡಿಸಿಕೊಂಡ ಆದಿಲ್ ಫಯಾಜ್ ಐಸಿಸ್ ಸೇರಿ ತಾನು ಜೈಲುವಾಸ ಅನುಭವಿಸಿದ. ತಯ್ಯೀಬ್ ಶೇಕ್ ಮೀರನ್ ಇಂಜಿನಿಯರಿಂಗ್ ಅನ್ನು ಅರ್ಧದಲ್ಲೇ ಬಿಟ್ಟು ಓಡಿದ. ಶೋಯಿಬ್ ಶಫೀಕ್ ಅನ್ವರ್ ಇವರೆಲ್ಲ ಐಸಿಸ್ಗೆ ಸೇರಿ ಸಿಕ್ಕುಬಿದ್ದು ಬೇರೆ-ಬೇರೆ ಜೈಲುಗಳಲ್ಲಿರುವವರೇ. ಅಚ್ಚರಿಯೇನು ಗೊತ್ತೇ? ಬುರ್ಖಾ ಪರವಾಗಿ ವಾದ ಮಾಡುತ್ತಿರುವ ಮಂದಿ ಈಗ ಐಸಿಸ್ಗೆ ಸೇರಿ ಜೈಲುಗಳಲ್ಲಿರುವ ಈ ಮಂದಿಯನ್ನು ಬಿಡಿಸಿಕೊಳ್ಳಲು ಕೇಂದ್ರ ಸರ್ಕಾರ ಯಾವ ಪ್ರಯತ್ನವನ್ನೂ ಮಾಡುತ್ತಿಲ್ಲವೆಂದು ವಿಷಕಾರುತ್ತಿದ್ದಾರೆ. ಇವರ ಆತ್ಮವಿಶ್ವಾಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಲೇಬೇಕು. ನಮ್ಮ ತೆರಿಗೆಯ ಹಣದಲ್ಲಿ ಉಚಿತ ಶಿಕ್ಷಣ ಪಡೆದು, ರಾಷ್ಟ್ರದ ವಿರುದ್ಧ ಕತ್ತಿ ಮಸಿಯುವ ಐಸಿಸ್ಗೆ ಸೇರಿ, ಅನ್ಯರಾಷ್ಟ್ರಗಳಲ್ಲಿ ಸಿಕ್ಕುಬಿದ್ದು ಜೈಲುಗಳಲ್ಲಿರುವ ಇವರನ್ನು ಬಿಡಿಸಿಕೊಂಡು ಬರಲು ನಮ್ಮ ಇಡಿಯ ರಾಜತಾಂತ್ರಿಕ ವ್ಯವಸ್ಥೆ ಕೆಲಸ ಮಾಡಬೇಕಂತೆ; ಶಭಾಷ್! ಬಹುಶಃ ದೇಶದ ಪ್ರಧಾನಿ ನರೇಂದ್ರ ಮೋದಿಯವರ ಬದಲು ಸಿದ್ಧರಾಮಯ್ಯನವರೇ ಆಗಿದ್ದರೆ ಅದು ಸಾಧ್ಯವಾಗಿಬಿಡುತ್ತಿತ್ತೇನೋ. ಅಧಿಕಾರಕ್ಕೆ ಬಂದೊಡನೆ ಪಿಎಫ್ಐ ಉಗ್ರರನ್ನೇ ಬಿಟ್ಟವರಲ್ಲವೇ ಅವರು! ಕಾಂಗ್ರೆಸ್ಸು ಈ ಬಗೆಯ ತುಷ್ಟೀಕರಣದ ರಾಜನೀತಿ ಮಾಡುತ್ತಿದ್ದುದರಿಂದಲೇ ಈ ರೀತಿಯ ಬಯಕೆಗಳನ್ನು ವ್ಯಕ್ತಪಡಿಸಲು ಮುಸಲ್ಮಾನರಿಗೆ ಸಾಧ್ಯವಾಗುತ್ತಿರೋದು. ಆದರೆ ಮೂಲ ಪ್ರಶ್ನೆ, ಶ್ರೇಷ್ಠ ಶಿಕ್ಷಣವನ್ನು ಪಡೆದ ನಂತರವೂ ಮುಸಲ್ಮಾನ ತರುಣರೇಕೆ ಹೀಗಿರುತ್ತಾರೆ? ಹಿಂದೂಗಳಲ್ಲಿ ಮಕ್ಕಳು ಅಪ್ಪಿ-ತಪ್ಪಿ ಸೇವಾಕಾರ್ಯಗಳಲ್ಲಿ ನಿರತವಾದರೇನೇ ತಂದೆ-ತಾಯಿಗಳು ಬದುಕೇ ಮುಗಿದುಹೋಯ್ತು ಎನ್ನುವಂತೆ ವರ್ತಿಸುತ್ತಾರೆ. ಇಲ್ಲಿ ಮಕ್ಕಳು ಐಸಿಸ್ಗೆ ಸೇರಿದಾಗಲೂ ತಂದೆ-ತಾಯಂದಿರು ಹೆಮ್ಮೆಯಿಂದ ಸಂಭ್ರಮಿಸುತ್ತಾರೆ. ಸತ್ತಮೇಲೆ ಸಿಗುವ 72 ಹೂರ್ಗಳಿಗಾಗಿ ಎಷ್ಟೆಲ್ಲ ಪರದಾಟ ನೋಡಿ. ಈ ಎಲ್ಲ ನಂಬಿಕೆಗಳನ್ನು ರೂಪಿಸಿದ ರಾಷ್ಟ್ರದ ಮಂದಿಯೇ ಇವುಗಳನ್ನು ಕೊಡವಿಕೊಂಡು ಮೇಲೇಳುತ್ತಿರುವಾಗ ಭಾರತದಂಥ ರಾಷ್ಟ್ರಗಳು ಅದಕ್ಕೆ ಜೋತಾಡುತ್ತಿರುವುದನ್ನು ನೋಡಿದರೆ ಅನುಕಂಪ ಬರದೆ ಇರಲಾರದು.
ಈ ಕಥೆ ಬರಿ ಭಾರತದ್ದಷ್ಟೇ ಅಲ್ಲ. ಏಷ್ಯಾದಲ್ಲಿ ಇಸ್ಲಾಂನ ಆಕ್ರಮಣಕ್ಕೊಳಗಾಗಿ ಮತಾಂತರಗೊಂಡ ಬಹುತೇಕ ರಾಷ್ಟ್ರಗಳು ಹೀಗೆಯೇ ಇವೆ. ಇತ್ತೀಚೆಗೆ ಮಲೇಷ್ಯಾದ ಪಾರ್ಟಿ ಇಸ್ಲಾಂಸೇ ಮಲೇಷ್ಯಾ ಪಕ್ಷದ ಮಂತ್ರಿ ಸಿತಿಜೈಲಾ ಮೊಹಮ್ಮದ್ ಯೂಸುಫ್ ಎರಡು ನಿಮಿಷದ ವಿಡಿಯೋ ಮಾಡಿ ಹೆಣ್ಣುಮಕ್ಕಳಿಗೆ ತಾಯಿಯ ಸಂದೇಶ ಕೊಟ್ಟಿದ್ದಾರೆ. ಅದರಲ್ಲಿ ಗಂಡನನ್ನು ರಮಿಸುವುದು ಹೇಗೆ ಎಂಬುದೆಲ್ಲವನ್ನೂ ಹೇಳಿ ಮಾತು ಕೇಳದ ಹೆಂಡತಿಯರನ್ನು ತಹಬಂದಿಗೆ ತರುವ ಉಪಾಯವನ್ನು ಗಂಡಸರಿಗೆ ಹೇಳಿಕೊಟ್ಟಿದ್ದಾರೆ. ಎಷ್ಟು ಕೆಳಮಟ್ಟದ ಆಲೋಚನೆ ಎಂದರೆ ಮೊದಲ ಹಂತದಲ್ಲಿ ಗಂಡ ಹೆಂಡತಿಯೊಂದಿಗೆ ಮಲಗುವುದನ್ನು ಬಿಡಬೇಕೆಂತೆ. ಕೆಲವು ದಿನಗಳ ನಂತರ ಹೆಂಡತಿ ಸುಧಾರಿಸಲಿಲ್ಲವೆಂದರೆ ಆಕೆಯನ್ನು ನಿಧಾನವಾಗಿ ಬಡಿಯಬೇಕಂತೆ. ಆಗಲೂ ಸುಧಾರಿಸಲಿಲ್ಲವೆಂದರೆ ಪಾಠ ಕಲಿಯುವಂತೆ ಬಡಿದು ಅವಳನ್ನು ತಹಬಂದಿಗೆ ತಂದುಕೊಳ್ಳಬೇಕಂತೆ. ಸ್ವತಃ ಹೆಣ್ಣಾಗಿ ಆಕೆ ಪುರುಷರಿಗೆ ಕೊಟ್ಟಿರುವ ಈ ಉಪಾಯಗಳು ಮತಾಂತರಿತ ಇಸ್ಲಾಂ ಜಗತ್ತಿನ ಮಾನಸಿಕ ಸ್ಥಿತಿಯನ್ನು ಬಯಲು ಮಾಡುವಂಥದ್ದು. ಆದರೆ ಮಲೇಷ್ಯಾದ ಹೆಣ್ಣುಮಕ್ಕಳು ಭಾರತದ ಹೆಣ್ಣುಮಕ್ಕಳಂತಲ್ಲ. ಅಲ್ಲಿಗೆ ಇನ್ನೂ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ನುಗ್ಗಿದಂತೆ ಕಾಣುತ್ತಿಲ್ಲ. ಹೀಗಾಗಿ ಆಕೆಯ ಈ ವಿಡಿಯೋ ಕುರಿತಂತೆ ತೀವ್ರ ಪ್ರತಿಭಟನೆ ವ್ಯಕ್ತಗೊಂಡಿದೆ. ಅಲ್ಲಿನ ಹೆಣ್ಣುಮಕ್ಕಳು ಈಗ ಆಕೆಯ ರಾಜೀನಾಮೆಗೆ ಒತ್ತಾಯಿಸುತ್ತಿದ್ದಾರೆ. ಮುಸಲ್ಮಾನ ರಾಷ್ಟ್ರವೊಂದರಲ್ಲಿ ಹೆಣ್ಣುಮಕ್ಕಳು ಇಷ್ಟು ಬಲವಾಗಿರುವುದು ಸಂತೋಷ ತರುವ ಸಂಗತಿಯೇ. ಪಕ್ಕದ ಪಾಕಿಸ್ತಾನದ ಕಥೆಯೂ ಇದಕ್ಕಿಂತ ಭಿನ್ನವೇನೂ ಅಲ್ಲ. ಇಮ್ರಾನ್ ಸರ್ಕಾರದ ಧಾರ್ವಿುಕ ವಹಿವಾಟುಗಳ ಮಂತ್ರಿ ನೂರುಲ್ ಹಕ್ಖಾದ್ರಿ ಭಾರತದಲ್ಲಿ ನಡೆಯುತ್ತಿರುವ ಹಿಜಾಬ್ಗಳ ಕುರಿತಂಥ ಪ್ರತಿಭಟನೆಗೆ ತುಪ್ಪ ಸುರಿಯುವ ದೃಷ್ಟಿಯಿಂದ ಮಾತನಾಡಲು ಹೋಗಿ ಎಡವಟ್ಟು ಮಾಡಿಕೊಂಡಿದ್ದಾರೆ. ಅಲ್ಲಿ ಪ್ರತಿವರ್ಷ ಮಹಿಳೆಯರ ದಿನಾಚರಣೆಗೆ ನಡೆಯುವ ಔರತ್ ಮಾರ್ಚ್-ಮಹಿಳೆಯರ ನಡಿಗೆಯನ್ನು ನಿಷೇಧಿಸಬೇಕೆಂದು ಹೇಳಿದ್ದಾರೆ. ಅದಕ್ಕೆ ಕಾರಣ ಕೊಡುತ್ತ, ‘ಈ ನಡಿಗೆಯಲ್ಲಿ ಮಹಿಳೆಯರು ಕೂಗುವ ಘೊಷಣೆ ಇಸ್ಲಾಂ ನಾಗರಿಕತೆಗೆ ಹೊಂದುವಂಥದ್ದಲ್ಲ’ ಎಂದು ಹೇಳಿ, ‘ಅದರ ಬದಲು ಅಂದಿನ ದಿನವನ್ನು ‘ಅಂತಾರಾಷ್ಟ್ರೀಯ ಹಿಜಾಬ್ ದಿನ’ವೆಂದು ಆಚರಿಸಿ ಪ್ರತಿ ಹೆಣ್ಣುಮಗಳೂ ಹಿಜಾಬ್ ಧರಿಸುವಂತೆ ಮಾಡುವ ಪ್ರಯತ್ನ ಒಳಿತು’ ಎಂದುಬಿಟ್ಟಿದ್ದಾರೆ. ಇದು ಕೂಡ ಅಲ್ಲಿನ ಹೆಣ್ಣುಮಕ್ಕಳ ಆಕ್ರೋಶಕ್ಕೆ ಕಾರಣವಾಗಿದೆ. ಅವರದ್ದೇ ಪಕ್ಷದ ಶರೀ ರೆಹ್ಮಾನ್, ಪಾಕಿಸ್ತಾನದ ಮಾಜಿ ರಾಯಭಾರಿ ಮಲೀಹಾ ಲೋಧಿಯಂಥವರು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಖಾದ್ರಿಯನ್ನು ತಮ್ಮ ಮಾತುಗಳಿಂದಲೇ ಥಳಿಸಿದ್ದಾರೆ. ಆದರೆ ಇಸ್ಲಾಂನಲ್ಲಿ ಮಹಿಳೆಯರನ್ನು ತುಳಿದಿಟ್ಟುಕೊಳ್ಳುವ ಪುರುಷರ ಮಾನಸಿಕತೆ ಮಾತ್ರ ಬಟಾಬಯಲಾಗಿದೆ. ಅವರಿಗೆ ಹಿಜಾಬ್ ಗಲಾಟೆ ಒಂದು ನೆಪವಾಗಿ ಸಿಕ್ಕಿದೆ ಅಷ್ಟೇ.
ಈ ನಡುವೆ ಸುಮ್ಮನಿರಲಾಗದ ಶಶಿ ತರೂರ್ ಒಂದು ಟ್ವೀಟ್ ಮಾಡಿದ್ದಾರೆ. ‘ಹಿಜಾಬ್ನ ಕುರಿತಂತೆ ಭಾರತ ತೆಗೆದುಕೊಳ್ಳುತ್ತಿರುವ ನಿರ್ಣಯಗಳಿಂದಾಗಿ ಗಲ್ಪ್ ರಾಷ್ಟ್ರಗಳಲ್ಲಿ ಪ್ರತಿಕೂಲ ವಾತಾವರಣ ನಿರ್ವಣವಾಗುತ್ತಿದೆ’ ಎಂದಿದ್ದಾರೆ. ಅಚ್ಚರಿಯೇನು ಗೊತ್ತೇ? ಈ ಗಲಾಟೆ ನಂತರವೇ ಸೌದಿ ಅರೇಬಿಯಾದ ಸೇನಾಮುಖ್ಯಸ್ಥ ಮತ್ತು ಒಮನ್ನ ನೌಕಾಸೇನೆಯ ಮುಖ್ಯಸರು ಭಾರತಕ್ಕೆ ಭೇಟಿ ನೀಡಿದ್ದಾರೆ. ಅಷ್ಟೇ ಅಲ್ಲ, ಭಾರತ ಮತ್ತು ಎಮಿರೇಟ್ಗಳ ನಡುವೆ ದ್ವಿಪಕ್ಷೀಯ ಒಪ್ಪಂದಗಳು ನಡೆದಿದ್ದು, ಇದರ ಆಧಾರದ ಮೇಲೆ ಭಾರತ ಎಮಿರೇಟ್ನಲ್ಲಿ ಐಐಟಿ ನಿರ್ವಿುಸುವ ಹೊಣೆಗಾರಿಕೆ ಹೊತ್ತುಕೊಂಡಿದೆ. ಭಾರತದಲ್ಲಿ ಐಐಟಿಗಳು ಅಂತಾರಾಷ್ಟ್ರೀಯ ಮಟ್ಟದ ವೈಜ್ಞಾನಿಕ ಶಿಕ್ಷಣ ಕೊಡುವಲ್ಲಿ ಹೆಸರುವಾಸಿಯಾಗಿದ್ದು ಎಮಿರೇಟ್ಸ್ ಈ ಕುರಿತಂತೆ ಆಸಕ್ತಿ ವಹಿಸಿರುವುದು ಸಂತೋಷ ಪಡಬೇಕಾದ್ದೇ. ಎಮಿರೇಟ್ಸ್ನ ಮಂತ್ರಿ ಶೇಕ್ ಹಮೀದ್ ಬಿನ್ ಜೈಯೇದ್ ಅಲ್ ನಹ್ಯಾನ್ ನೇತೃತ್ವದ ತಂಡದೊಂದಿಗೆ ಕೇಂದ್ರ ಸರ್ಕಾರ ಮಾಡಿಕೊಂಡಿರುವ ಒಪ್ಪಂದದ ಪ್ರಕಾರ ಕನಿಷ್ಠಪಕ್ಷ ಭಾರತದ 80 ಪ್ರತಿಶತ ರಫ್ತುಗೊಳ್ಳುವ ವಸ್ತುಗಳಿಗೆ ಇನ್ನುಮುಂದೆ ತೆರಿಗೆ ಇರಲಾರದು. ಭಾರತ ಈ ಒಪ್ಪಂದದ ಆಧಾರದ ಮೇಲೆ ಇನ್ನುಮುಂದೆ ಎರಡು ಬಿಲಿಯನ್ ಡಾಲರ್ಗಳಷ್ಟು ಹೆಚ್ಚು ಬಟ್ಟೆಯನ್ನು ರಫ್ತು ಮಾಡಲಿದೆ. ಒಟ್ಟಾರೆ ವಹಿವಾಟನ್ನು ಲೆಕ್ಕ ಹಾಕುವುದಾದರೆ ಈ ಒಪ್ಪಂದದಿಂದಾಗಿ 60 ಬಿಲಿಯನ್ ಡಾಲರ್ಗಳಷ್ಟಿದ್ದ ಎರಡೂ ರಾಷ್ಟ್ರಗಳ ವಹಿವಾಟು ಐದೇ ವರ್ಷಗಳಲ್ಲಿ 100 ಬಿಲಿಯನ್ ಡಾಲರ್ಗಳಿಗೆ ಏರಲಿದೆ. ಅಷ್ಟೇ ಅಲ್ಲ, ಭಾರತದ ವಸ್ತ್ರೋದ್ಯಮ, ಆಭರಣೋದ್ಯಮ ಮೊದಲಾದ ಕ್ಷೇತ್ರಗಳಲ್ಲಿ ಕನಿಷ್ಠ ಐದು ಲಕ್ಷ ಉದ್ಯೋಗವನ್ನು ಈ ಒಪ್ಪಂದ ಸೃಷ್ಟಿಸಲಿದೆ. ಇವಿಷ್ಟನ್ನೂ ಏಕೆ ಹೇಳಿದೆನೆಂದರೆ ಮುಸಲ್ಮಾನ ರಾಷ್ಟ್ರಗಳ ಬೆಂಬಲ ಸಿಗುವುದೆಂದು ನಿರೀಕ್ಷಿಸುತ್ತಿರುವ ಹಿಜಾಬ್ ಪರ ಹೋರಾಟಗಾರರು ಈಗ ಅಕ್ಷರಶಃ ಒಂಟಿಯಾಗಿಬಿಟ್ಟಿದ್ದಾರೆ! ಹೋರಾಟ ಬಿಡಲಾಗದೇ ಹಿಡಿದುಕೊಳ್ಳಲಾಗದೇ ವಿಚಿತ್ರ ಗೊಂದಲಕ್ಕೆ ಸಿಕ್ಕುಬಿದ್ದಿದ್ದಾರೆ. ಅತ್ತ ಫೆಬ್ರವರಿ 11ಕ್ಕೆ ಇಂಡೋನೇಷ್ಯಾ ಸರ್ಕಾರದ ಧಾರ್ವಿುಕ ವಹಿವಾಟುಗಳ ಮಂತ್ರಿ ಅಬ್ದುಲ್ ರೋಷ್ವುನ್ ಸ್ಥಳೀಯ ಹಿಂದೂ ಮತ್ತು ಬೌದ್ಧರೊಂದಿಗೆ ಮಾತುಕತೆ ನಡೆಸಿ ಬೊರೊಬುದೂರ್ನಲ್ಲಿರುವ ಪ್ರಂಬನನ್ ಮಂದಿರದಲ್ಲಿ ಹಿಂದೂ ಮತ್ತು ಬೌದ್ಧರು ಪೂಜೆ ನಡೆಸುವ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಇದು ಅಲ್ಲಿನ ಇತರ ಮಂದಿರಗಳಿಗೂ ಸದ್ಯದಲ್ಲಿಯೇ ವಿಸ್ತಾರಗೊಳ್ಳಲಿದೆ. ಒಂದೊಂದೇ ಮುಸಲ್ಮಾನ ರಾಷ್ಟ್ರಗಳು ಹಿಂದೂಧರ್ಮವನ್ನು ಗುರುತಿಸುವ, ಗೌರವಿಸುವ ಕೆಲಸ ಮಾಡುತ್ತಿದ್ದರೆ ಇತ್ತ ದಾರುಲ್ ಉಲೂಮ್ ದೇವಬಂಧಿ ಮುಸ್ಲಿಂರು ಶಾಲೆಗಳಲ್ಲಿ ಮುಸ್ಲಿಂ ವಿದ್ಯಾರ್ಥಿಗಳು ಸರಸ್ವತಿ ಪೂಜೆಯಲ್ಲಿ ಭಾಗವಹಿಸುವುದು ನಿಷಿದ್ಧ ಎನ್ನುತ್ತಿದ್ದಾರೆ. ಮಹಿಳೆಯರು ತಾವು ಯಾರನ್ನು ಮದುವೆಯಾಗಬಹುದೋ (ಇಸ್ಲಾಂನ ಪ್ರಕಾರ ಮಹರಂ) ಅವರಿಗೆ ಮಾತ್ರ ಮುಖ ತೋರಿಸಬೇಕು, ಉಳಿದವರಿಂದ ಮುಖವನ್ನು ಮುಚ್ಚಿಕೊಳ್ಳಬೇಕು ಎನ್ನುತ್ತಿದ್ದಾರೆ. ಕುತ್ತಿಗೆಗೆ ಹಾಕಿಕೊಳ್ಳುವ ಟೈ ಕ್ರೖೆಸ್ತಮತದ ಸಂಕೇತವೆಂದೂ ಅದನ್ನು ಧರಿಸುವುದು ಹರಾಮ್ ಎಂದೂ ಪ್ರಚಾರ ಮಾಡುತ್ತಿದ್ದಾರೆ. ಅದಕ್ಕೆ ಸರಿಯಾಗಿ ಬೆಂಗಳೂರಿನಲ್ಲಿ ಕುಳಿತು ಜಮೀರ್ ಬುರ್ಖಾ ಹಾಕದಿರುವುದೇ ಅತ್ಯಾಚಾರಕ್ಕೆ ಕಾರಣ ಎಂದಿದ್ದಾರೆ. ಇವರಿಗೆ ಅಧಿಕಾರ ಕೊಟ್ಟರೆ ಹಿಂದೂ ಹೆಣ್ಣುಮಕ್ಕಳೂ ಬುರ್ಖಾ ಹಾಕಿಕೊಂಡು ಹೋಗಬೇಕಾದ, ಶಾಲೆಗಳಲ್ಲಿ ಸರಸ್ವತಿ ಪೂಜೆ ನಿಷೇಧಿಸಬೇಕಾದ ಕಾಲ ಬಂದರೆ ಅಚ್ಚರಿ ಪಡಬೇಕಿಲ್ಲ! ಆರಂಭದಲ್ಲೇ ಹೇಳಿದ್ದೆನಲ್ಲ, ಮೂಲಕ್ಕಿಂತ ಮತಾಂತರಗೊಂಡವರೇ ಅಪಾಯಕಾರಿ ಅಂತ!
(ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)