ಮುಸ್ಲಿಂ ರಾಷ್ಟ್ರ; ನಿಮಗಿನ್ನೂ ಅಚ್ಚರಿಯೇ!

Column F
Published on
ಕಳೆದ ಇಡೀ ವಾರ ಮಾಧ್ಯಮಗಳಲ್ಲೆಲ್ಲ 2047ರಲ್ಲಿ ಭಾರತವನ್ನು ಇಸ್ಲಾಂ ರಾಷ್ಟ್ರವಾಗಿಸುವುದರ ಕುರಿತಂತೆಯೇ ಚರ್ಚೆ. ಅದನ್ನು ಪತ್ರಕರ್ತರು, ಲೇಖಕರೆಲ್ಲ ಅಚ್ಚರಿ ಎಂಬಂತೆ ಪ್ರಸ್ತುತಪಡಿಸಿರುವುದನ್ನು ನೋಡಿದರೆ ಯಾಕೊ ಹಿಂದೂಗಳ ಮುಗ್ಧತೆಯ ಕುರಿತಂತೆ ಯೋಚಿಸಿ ಪಿಚ್ಚೆನಿಸಿತು. ಮುಸಲ್ಮಾನರು ಈ ಅಜೆಂಡಾ ಬಳಸಿಯೇ ಮುಸಲ್ಮಾನ ರಾಷ್ಟ್ರ ಮಾಡಲು ಕಾಯುತ್ತಿದ್ದಾರೆ ಮತ್ತು ಅದು ಈಗ ಆರಂಭವಾಗಿದೆ ಎಂದು ಭಾವಿಸುವುದೇ ಬಲುದೊಡ್ಡ ಮೂರ್ಖತನ. ಈಗ ಕೈಗೆ ಸಿಕ್ಕಿರುವ ಏಳು ಪುಟಗಳ ಈ ಆಲೋಚನಾ ಪತ್ರ ನನ್ನ ದೃಷ್ಟಿಯಲ್ಲಿ ಅತ್ಯಂತ ಹಳೆಯದ್ದು. ಅದಾಗಲೇ ಮುಸಲ್ಮಾನರು ಇದಕ್ಕಿಂತ ಸಾಕಷ್ಟು ಮುಂದೆ ಹೋಗಿಯಾಗಿದೆ!

ಈ ಒಟ್ಟಾರೆ ಪತ್ರದಲ್ಲಿ ಭಾರತ ಮುಸಲ್ಮಾನರಿಗೇ ಸೇರಿದ್ದು, ಬ್ರಿಟೀಷರು ತಮ್ಮಿಂದಲೇ ಅದನ್ನು ಕಿತ್ತುಕೊಂಡದ್ದು, ಹಿಂದೂಗಳಿಗೆ ಬ್ರಿಟೀಷರು ಹೆಚ್ಚು ಸಹಕಾರ ಮಾಡಿದರು ಎಂಬ ಆರಂಭಿಕ ಅಂಶಗಳೆಲ್ಲ ಹೊಸತೇನೂ ಅಲ್ಲ. ಗಿರೀಶ್ ಕಾರ್ನಾಡರಿಂದ ಹಿಡಿದು ಬರಗೂರು ರಾಮಚಂದ್ರಪ್ಪನವರೆಗೆ ಎಲ್ಲರೂ ಇದನ್ನೇ ಹೇಳಿದ್ದಾರೆ. ಇನ್ನು ಮುಸಲ್ಮಾನರನ್ನು ಸಾಮಾಜಿಕವಾಗಿ ಸಶಕ್ತಗೊಳಿಸುವ ಎಂಪವರ್ ಇಂಡಿಯಾದ ಕಲ್ಪನೆ ಕನಿಷ್ಠಪಕ್ಷ ಒಂದು ದಶಕಗಳ ಹಿಂದೆಯೇ ಮಂಗಳೂರಿನಲ್ಲಿ ಪೋಸ್ಟರ್​ಗಳಾಗಿ ರಾರಾಜಿಸುತ್ತಿದ್ದುದು ನನಗೆ ಚೆನ್ನಾಗಿ ನೆನಪಿದೆ. ಎಂಪವರ್ ಇಂಡಿಯಾ ಎಂಬ ಹೆಸರಿನಲ್ಲಿ ಪಿಎಫ್​ಐ ಬಲುದೊಡ್ಡ ರ‍್ಯಾಲಿ ಮಾಡಿತ್ತು. ಆಗ ಹಿರಿಯರೊಬ್ಬರು ಕರೆ ಮಾಡಿ ಮೇಲ್ನೋಟಕ್ಕೆ ಎಂಪವರ್ ಎಂದು ಕಾಣುತ್ತದೆಯಾದರೂ ಇದು ಹೊರಡಿಸುವ ಸದ್ದು ಎಂ ಪವರ್ ಇಂಡಿಯಾ ಎಂದಾಗುತ್ತದೆ ಎಂದಿದ್ದರು. ಇಲ್ಲಿ ಎಂ ಎನ್ನುವುದು ಮುಸ್ಲಿಂ ಎಂದು ಅವರ ವಾದವಾಗಿತ್ತು. ಎಂಪವರ್ ಇಂಡಿಯಾದಿಂದ ಹಿಡಿದು ಮುಸ್ಲಿಂ ಪವರ್ ಇಂಡಿಯಾದವರೆಗೂ ಅವರ ದೀರ್ಘ ಆಲೋಚನೆ ಇದೆ ಎಂದು ಆ ವ್ಯಕ್ತಿ ಅಂದೇ ಆಲೋಚಿಸಿದ್ದರು. ಅವರ ಈ ಅಧಿಕಾರ ಪಡೆಯುವ ಹುನ್ನಾರದ ಹಾದಿ ಮುಸಲ್ಮಾನರನ್ನು ಅರಿತ ಯಾರಿಗೂ ಹೊಸತೆನಿಸುವುದಿಲ್ಲ. ಮೊದಲ ಹಂತದಲ್ಲಿ ಭಾರತೀಯ ಎಂಬ ಭಾವನೆಯನ್ನು ಬದಿಗಿಟ್ಟು ಮುಸಲ್ಮಾನ ಎಂಬ ಭಾವನೆಯಿಂದ ಎಲ್ಲರನ್ನೂ ಒಗ್ಗೂಡಿಸುವ ಪ್ರಯತ್ನವಂತೆ ಅವರದ್ದು. ಹೀಗೆ ಇಸ್ಲಾಮನ್ನು ಎಲ್ಲಕ್ಕಿಂತಲೂ ದೊಡ್ಡದ್ದೆಂದು ಬಿಂಬಿಸಿ ಅದರೊಳಗಿರುವ ಎಲ್ಲ ಜಾತಿಗಳನ್ನು ಪ್ಯಾಪುಲರ್ ಫ್ರಂಟ್ ಆಫ್ ಇಂಡಿಯಾದ ಅಡಿಯಲ್ಲಿ ತರಬೇಕು ಎಂಬುದು ಅವರ ಉದ್ದೇಶ. ಸಮರ್ಥ ಕಾರ್ಯಕರ್ತರನ್ನು ಕತ್ತಿ, ಕಬ್ಬಿಣದ ರಾಡುಗಳು ಮತ್ತಿತರ ಶಸ್ತ್ರ ಬಳಕೆಗೆ ಸಿದ್ಧಗೊಳಿಸಬೇಕೆಂಬುದು ಅವರ ಯೋಜನೆಯಲ್ಲಿದೆ. ಇದು ಇನ್ನೂ ಆರಂಭವಾಗಬೇಕಿದೆ ಎಂದುಕೊಂಡಿದ್ದೀರೇನು? ಪ್ಯಾಪುಲರ್ ಫ್ರಂಟ್ ಆಫ್ ಇಂಡಿಯಾ ಅದಾಗಲೇ ಈ ಕೆಲಸದಲ್ಲಿ ಎಷ್ಟು ಮುಂದೆ ಸಾಗಿದೆ ಎಂದರೆ ನಿಮ್ಮ ಮನೆಯ ಪಕ್ಕದಲ್ಲಿರುವ ನಿಮ್ಮ ಪರಮಾಪ್ತ ಮುಸಲ್ಮಾನ ಮಿತ್ರನನ್ನೂ ಅವರು ಗಾಳ ಹಾಕಿ ಸೆಳೆದಾಗಿದೆ! ಇತ್ತೀಚೆಗೆ ವೈದ್ಯರೊಬ್ಬರ ಹತ್ಯೆಯಾಯ್ತಲ್ಲ, ಕೊಲೆ ಮಾಡಿದವ ಅವರ ಆಪ್ತಮಿತ್ರ ಎಂಬುದು ಇದಕ್ಕೊಂದು ಉದಾಹರಣೆಯಷ್ಟೆ.

ಎರಡನೇ ಹಂತದಲ್ಲಿ ಇವರು ಕೆಲವರನ್ನು ಹುಡು-ಹುಡುಕಿ ಹತ್ಯೆ ಮಾಡಿ ಭಯ ಹುಟ್ಟಿಸುವ ಪ್ರಯತ್ನ ಮಾಡುತ್ತಾರಂತೆ. ಮೊದಲ ಹಂತದಲ್ಲಿ ಶಸ್ತ್ರಾಭ್ಯಾಸದಲ್ಲಿ ಪಳಗಿದ ಕಾರ್ಯಕರ್ತರಿಗೆ ವಿಶೇಷವಾದ ತರಬೇತಿ ನೀಡಿ ಆಧುನಿಕ ಶಸ್ತ್ರಗಳ ಬಳಕೆಗೂ ಸಿದ್ಧಗೊಳಿಸಲಾಗುತ್ತದೆಯಂತೆ. ಎಲ್ಲಿ ತಾವು ಶಕ್ತರಾಗಿದ್ದೇವೆ ಎನಿಸುತ್ತದೆಯೋ ಅಲ್ಲಿ ಪಥ ಸಂಚಲನ ನಡೆಸಿ ಶಕ್ತಿ ಪ್ರದರ್ಶನ ಮಾಡಲಾಗುತ್ತದೆಯಲ್ಲದೆ, ಸೂಕ್ತವಾದ ರೀತಿಯಲ್ಲಿ ಸ್ಪೋಟಕಗಳನ್ನೂ ಸಂಗ್ರಹಿಸಲಾಗುತ್ತದೆಯಂತೆ. ಇದು ಇನ್ನೂ ಆಗಬೇಕಿದೆ ಎಂದುಕೊಂಡಿದ್ದೀರೇನು? ಕೇರಳದಲ್ಲಿ ದಿನಬೆಳಗಾದರೆ ಪಥ ಸಂಚಲನಗಳು ನಡೆಯುತ್ತಿವೆ. ಹುಡು-ಹುಡುಕಿ ಕೊಲ್ಲುವ ಪ್ರಕ್ರಿಯೆ ಎಷ್ಟು ವ್ಯಾಪಕವಾಗಿ ನಡೆದಿದೆ ಎಂದರೆ ಮುಸಲ್ಮಾನರು ತಪ್ಪು ಮಾಡುತ್ತಿದ್ದಾರೆ ಎಂದು ಗೊತ್ತಾದಾಗಲೂ ಹಿಂದೂಗಳು ಮಾತನಾಡುವ ಧೈರ್ಯ ಕಳೆದುಕೊಳ್ಳುವಷ್ಟು! ವಿಶೇಷವಾದ ತರಬೇತಿಯಂತೂ ದೂರದ ರಾಜ್ಯಗಳನ್ನು ಬಿಡಿ ಕರ್ನಾಟಕದಲ್ಲೇ ಅನೇಕ ಸ್ಥಳಗಳಲ್ಲಿ ನಡೆಯುತ್ತಿದೆ. ಮುಸಲ್ಮಾನರೇ ಬಹುಸಂಖ್ಯಾತರಾಗಿರುವ ಸ್ಥಳಗಳಲ್ಲಿ ವಿಶಾಲವಾದ ಜಾಗವನ್ನು ಆರಿಸಿಕೊಂಡು, ಅಲ್ಲೊಂದು ಮಸೀದಿಯಂತಹ ಕಟ್ಟಡವನ್ನು ಕಟ್ಟಿ ತರಬೇತಿಗೆ ಬೇಕಾದ ವ್ಯವಸ್ಥೆಯನ್ನು ಮಾಡಿಕೊಂಡುಬಿಡುತ್ತಾರೆ. ಮೊದಲೆಲ್ಲ ಈ ರೀತಿಯ ತರಬೇತಿ ಕಾಡಿನಲ್ಲಾಗುತ್ತಿತ್ತು. ಕರ್ನಾಟಕದಲ್ಲೇ ಕೆಲವರು ಈ ಬಗೆಯ ತರಬೇತಿ ನೀಡುತ್ತಾ ಸಿಕ್ಕಿಬಿದ್ದದ್ದನ್ನು ನೆನಪಿಸಿಕೊಳ್ಳಿ. ವಿಜಯಪುರವಂತೂ ಈ ರೀತಿಯ ಸ್ಲೀಪರ್​ಸೆಲ್​ಗಳ ಅಡ್ಡಾ ಎಂಬುದು ಯಾರಿಗೂ ಗೊತ್ತಿಲ್ಲದ ಸಂಗತಿಯೇನಲ್ಲ. ಇಲ್ಲಿ ಗಮನಿಸಬೇಕಾದ ಮುಖ್ಯವಾದ ಸಂಗತಿ ಎಂದರೆ ಈ ಹಂತದಲ್ಲಿ ಪಿಎಫ್​ಐ ತೇಲಿಬಿಟ್ಟಿರುವ ರಾಜಕೀಯ ಸಂಘಟನೆ ಎಸ್​ಡಿಪಿಐ ತಿರಂಗಾ, ಸಂವಿಧಾನ ಮತ್ತು ಅಂಬೇಡ್ಕರರನ್ನು ಹಿಡಿದುಕೊಂಡು ಜನರನ್ನು ಬೇರೆಡೆಗೆ ತಿರುಗಿಸುವ ಪ್ರಯತ್ನ ಮಾಡಬೇಕೆಂಬುದು ಅವರ ಆಲೋಚನೆಯಲ್ಲಿದೆ. ಆ ಮೂಲಕ ದಲಿತರನ್ನು ಸೆಳೆದುಕೊಳ್ಳುವ ಇರಾದೆ ಅವರದ್ದು. ಇದು ಇನ್ನೂ ಆಗಲಿಲ್ಲವೆಂದೇನೂ ಅಂದುಕೊಳ್ಳಬೇಡಿ. ಕೆಲವು ವರ್ಷಗಳ ಹಿಂದೆ ಉಡುಪಿ ಚಲೋ ಎಂಬ ಕಾರ್ಯಕ್ರಮ ನಡೆದುದು ನಿಮಗೆ ನೆನಪಿರಬೇಕು. ಈಗ ಸಿದ್ದರಾಮಯ್ಯನ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಕೆಲವು ಬುದ್ಧಿಜೀವಿಗಳು ದಲಿತರಿಗೆ ಮಂದಿರ ಪ್ರವೇಶವಿಲ್ಲ ಎಂಬ ಹಳತಾದ ಚಿಂತನೆಗೆ ಮರುಜೀವವನ್ನು ಕೊಟ್ಟು ಹೋರಾಟ ಆರಂಭಿಸಿದರು. ಅವರು ರಾಜ್ಯದ ಎಲ್ಲೆಲ್ಲಿ ಕಾರ್ಯಕ್ರಮಗಳನ್ನು ಮಾಡಿದರೋ ಅಲ್ಲೆಲ್ಲ ವೇದಿಕೆಯ ಮೇಲೆ ಬುದ್ಧಿಜೀವಿಗಳು ದಲಿತರನ್ನು ಭಡಕಾಯಿಸುವ ಭಾಷಣ ಮಾಡುತ್ತಿದ್ದರೆ, ಅದಕ್ಕೆ ಬೇಕಾದ ಸಂಪನ್ಮೂಲವನ್ನು ಮತ್ತು ಕಾರ್ಯಕ್ರಮಕ್ಕೆ ಬೇಕಾದ ಜನರನ್ನು ಒದಗಿಸುತ್ತಿದ್ದುದು ಪಿಎಫ್​ಐನಂತಹ ಸಂಘಟನೆಗಳೇ! ಉಡುಪಿಯಲ್ಲಂತೂ ಈ ಕಾರ್ಯಕ್ರಮದಲ್ಲಿ ಅರ್ಧದಷ್ಟಕ್ಕೂ ಹೆಚ್ಚು ಮಂದಿ ಮುಸಲ್ಮಾನರೇ ಇದ್ದುದನ್ನು ಕಂಡು ಸ್ಥಳೀಯರ ಕಣ್ಣು ಕೆಂಪಗಾಗಿತ್ತು. ಮುಂದೆ ಇವರ ಹೋರಾಟ ಹಳ್ಳ ಹಿಡಿಯುವಂತೆ ಮಾಡಲು ದಲಿತರನ್ನು ಸೇರಿಸಿಕೊಂಡು ಉಡುಪಿಯ ಮಠದಲ್ಲೇ ಕನಕ ನಡೆ ಎಂಬ ಕಾರ್ಯಕಮ್ರವನ್ನು ಆಯೋಜಿಸಲಾಯ್ತು. ಆಗೆಲ್ಲ ಬುದ್ಧಿಜೀವಿಗಳು, ಮುಸಲ್ಮಾನರು ಪರಚಿಕೊಂಡಿದ್ದನ್ನು ಹತ್ತಿರದಿಂದ ಗಮನಿಸಿದವರಿಗೆ ಈ ಕರಪತ್ರವೇನೂ ವಿಶೇಷ ಎನಿಸುವುದಿಲ್ಲ. ದಲಿತರನ್ನು ತಮ್ಮೆಡೆಗೆ ಸೆಳೆದುಕೊಳ್ಳಬೇಕೆಂಬ ಅವರ ಪ್ರಯತ್ನ ಅಧಿಕಾರವನ್ನು ತಮ್ಮದಾಗಿಸಿಕೊಳ್ಳಬೇಕೆಂಬ ಹಂಬಲದ್ದಷ್ಟೇ. ಮುಸಲ್ಮಾನರಲ್ಲೇ ಇರುವ ಅಜ್ಲಫ್​ಗಳೆಂದು ಕರೆಯಲ್ಪಡುವ ದಲಿತ ವರ್ಗಕ್ಕೆ ನಯಾಪೈಸೆಯಷ್ಟೂ ಕಿಮ್ಮತ್ತಿಲ್ಲ. ಮೇಲ್ವರ್ಗದ ಸಯ್ಯದ್​ಗಳು ಈ ಅಜ್ಲಫ್​ಗಳೊಂದಿಗೆ ಯಾವ ಸಂಬಂಧವನ್ನೂ ಇರಿಸಿಕೊಳ್ಳಲು ಇಚ್ಛಿಸುವುದಿಲ್ಲ. ಆದರೆ, ಪಿಎಫ್​ಐ ಮಾತ್ರ ಭಾರತವನ್ನು ಇಸ್ಲಾಮೀಕರಣಗೊಳಿಸುವ ತನ್ನ ಮೂರನೇ ಹಂತದ ಯೋಜನೆಯಲ್ಲಿ ಶೇಕಡಾ 50ರಷ್ಟು ದಲಿತರನ್ನು ತಮ್ಮ ಪಕ್ಷದೆಡೆಗೆ ಸೆಳೆದುಕೊಳ್ಳಬೇಕು ಎಂದು ಆಲೋಚನೆ ಮುಂದಿಡುತ್ತದೆ. ಒಮ್ಮೆ ಶತಾಯ-ಗತಾಯ ಅಧಿಕಾರ ಪಡೆದರೆ ಆರಕ್ಷಕ, ನ್ಯಾಯಾಲಯ, ಸೇನೆಗಳಲ್ಲೆಲ್ಲ ನಿಷ್ಠ ಮುಸಲ್ಮಾನರನ್ನೇ ಕೂರಿಸಬೇಕು ಎಂಬುದು ಅವರ ಪ್ರಯತ್ನ. ಮೂರನೇ ಹಂತಕ್ಕೆ ಅವರು ಹೋಗಿಲ್ಲವೆಂದು ನೀವೇನಾದರೂ ಭಾವಿಸುವುದಾದರೆ ಮತ್ತದು ಮೂರ್ಖತನವೇ! ಅದಾಗಲೇ ಅಧಿಕಾರಿಗಳನ್ನು ನಿರ್ಮಾಣ ಮಾಡುವ ಕೋಚಿಂಗ್ ಸೆಂಟರ್​ಗಳು ಸಿದ್ಧಗೊಂಡಿವೆಯಲ್ಲದೆ, ಆಯಕಟ್ಟಿನ ಜಾಗದಲ್ಲಿರುವ ತಮ್ಮವರನ್ನು ಬಳಸಿಕೊಂಡು ಈ ಕೇಂದ್ರಗಳಿಂದ ಬಂದವರನ್ನೇ ಆಯ್ಕೆ ಮಾಡುವ ಪ್ರಯಾಸವೂ ನಡೆದಿದೆ. ಅವರ ಬಳಿ ಈಗ ಆಯುಧಗಳ ದಾಸ್ತಾನಿದೆ. ಶುಕ್ರವಾರ ಹಿಂದೂಗಳ ಮೇಲೆ ಕಲ್ಲೆಸೆಯಬೇಕೆಂದರೆ ಅವರು ಕಲ್ಲಿಗಾಗಿ ಹುಡುಕಿಕೊಂಡು ಹೋಗಬೇಕೆಂದಿಲ್ಲ, ಮಸೀದಿಯ ಆವರಣದೊಳಗೆ ಕಲ್ಲುಗಳ ಸಂಗ್ರಹವಿದೆ. ಅಲ್ಲಿ ಕತ್ತಿಗಳಿವೆ, ಭಯಾನಕವಾದ ಶಸ್ತ್ರಗಳು ಹಿಂದೂ ರಕ್ತಕ್ಕಾಗಿ ಹಪಹಪಿಸುತ್ತಾ ಕುಳಿತಿವೆ. ತಮ್ಮ ದೇವರನ್ನು ಒಪ್ಪದ ಕಾಫಿರರ ನಾಶ ಮಾಡಿ ಭಾರತವನ್ನು ತಮ್ಮದಾಗಿಸಿಕೊಳ್ಳುವ ತವಕ ಅವರಲ್ಲಿ ಇಲ್ಲವೆಂದುಕೊಳ್ಳಬೇಡಿ. ಇವೆಲ್ಲವೂ ಸಾಕಷ್ಟು ಹಿಂದಿನಿಂದ ನಡೆದುಕೊಂಡೇ ಬಂದಿದೆ. ಈಗ ಆ ಯೋಜನೆಯ ಸ್ವರೂಪ ಕಣ್ಮುಂದೆ ಕಾಣಿಸಿಕೊಂಡಿದೆ ಅಷ್ಟೇ. ಹಿಜಾಬ್, ನೂಪುರ್, ಗಲಾಟೆಗಳ ನಂತರ ಪ್ರತೀ ಮನೆಯಿಂದ ಒಬ್ಬರಾದರೂ ಕಟ್ಟರ್ ಇಸ್ಲಾಂನ ವಿಚಾರ ಬೆಂಬಲಿಸುವವರು ನಿರ್ವಣವಾಗಬೇಕೆಂಬ ಅವರ ಕನಸು ಸಾಕಾರಗೊಳ್ಳುತ್ತಿದೆ ಎಂಬುದಷ್ಟೇ ಆತಂಕದ ಸಂಗತಿ. ಸಂಘಟನೆಗೆ ಅಥವಾ ಪಕ್ಷಕ್ಕೆ, ಸಾಧ್ಯವಾದರೆ ಮುಂಚೂಣಿಯ ಕೆಲವು ಸಣ್ಣ-ಪುಟ್ಟ ಸಂಘಟನೆಗಳಿಗೆ ಅಥವಾ ಕೊನೆಯಪಕ್ಷ ತಮ್ಮ ಪತ್ರಿಕೆಗಳ ಓದುಗರಾಗಿ, ಅದೂ ಸಾಧ್ಯವಾಗದಿದ್ದರೆ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮನ್ನು ಅನುಸರಿಸುವವರಾಗಿ ಮನೆಯಿಂದ ಒಬ್ಬರಾದರೂ ಇರ ಬೇಕೆಂಬುದು ಪಿಎಫ್​ಐನ ಸಂಕಲ್ಪ. ಈ ನಿಟ್ಟಿನಲ್ಲಿ ಜನರನ್ನು ದೊಡ್ಡ ಮಟ್ಟದಲ್ಲಿ ಸೇರಿಸುವ, ಒಲಿಸಿಕೊಳ್ಳುವ, ತಮ್ಮೆಡೆಗೆ ಸೆಳೆದುಕೊಳ್ಳುವ ಪ್ರಯತ್ನ ಅವರು ಆರಂಭಿಸಿ ದಶಕವೇ ಕಳೆದಿದೆ.

ಇಡಿಯ ಆಲೋಚನಾ ಪತ್ರದಲ್ಲಿ ಗಮನಿಸಬೇಕಾದ ಒಂದೇ ಸಂಗತಿ ಎಂದರೆ ಅವರು ಟರ್ಕಿಯ ಗೆಳೆತನದ ಕುರಿತಂತೆ ಮಾತನಾಡಿರುವುದು. ಇದು ನಮ್ಮೆಲ್ಲ ಅನುಮಾನಗಳನ್ನು ದೃಢಪಡಿಸುವಂತಿದೆ. ಸೂಕ್ಷ್ಮವಾಗಿ ಗಮನಿಸಿದರೆ ಹಿಜಾಬ್​ನ ಪ್ರಕರಣದಿಂದ ಹಿಡಿದು ನೂಪುರ್ ಪ್ರಕರಣದವರೆಗೆ ಎಲ್ಲವನ್ನೂ ವಹಾಬಿಗಳು ಬಲವಾಗಿ ವಿರೋಧಿಸಲಿಲ್ಲ. ಅವರು ಈ ಎಲ್ಲ ಸಂದರ್ಭದಲ್ಲೂ ತಟಸ್ಥ ನೀತಿಯನ್ನೇ ಅನುಸರಿಸಿದ್ದರು. ಏಕೆಂದರೆ ಅವರು ಸೌದಿ ಅರೇಬಿಯಾದ ನಿಷ್ಠತೆ ಉಳ್ಳವರು. ಹೀಗಾಗಿ, ಅಲ್ಲಿಂದ ಯಾವ ಸಂದೇಶವೂ ಅವರಿಗೆ ಬಂದಿರಲಿಕ್ಕಿಲ್ಲ. ಆದರೆ, ಟರ್ಕಿ ಈ ಸಂದರ್ಭದಲ್ಲಿ ವಿಶೇಷವಾಗಿ ನಮ್ಮ ವಿರೋಧಕ್ಕೆ ನಿಂತಿತು. ಹೀಗಾಗಿಯೇ ಪಿಎಫ್​ಐನ ಚಟುವಟಿಕೆ ತೀವ್ರವಾಯ್ತು. ಇಸ್ಲಾಂ ಜಗತ್ತಿನಲ್ಲಿ ಯಾರು ಅತ್ಯಂತ ಕ್ರೂರಿಗಳೋ ಅವರಿಗೇ ಅನುಯಾಯಿಗಳು ಹೆಚ್ಚು. ಹೀಗಾಗಿಯೇ ಅವರು ಕತ್ತು ಕಡಿದು ಅದರ ವಿಡಿಯೋ ಹಂಚಿಕೊಂಡು ಸಂಭ್ರಮಿಸೋದು. ಈ ನಿಟ್ಟಿನಲ್ಲಿ ಟರ್ಕಿಯ ಕೈ ಈಗ ನಿಸ್ಸಂಶಯವಾಗಿ ಮೇಲಾಗಿದೆ. ಆದರೆ, ನಾವು ತಲೆಕೆಡಿಸಿಕೊಳ್ಳಬೇಕಾಗಿರುವ ಸಂಗತಿ ಇದೊಂದೇ ಅಲ್ಲ. ಇತ್ತೀಚೆಗೆ ನೆಟ್ವರ್ಕ್ ಕಂಟಾಜಿಯನ್ ರಿಸರ್ಚ್ ಸೆಂಟರ್ ಒಂದು ವರದಿಯನ್ನು ಪ್ರಕಟಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂಗಳ ವಿರುದ್ಧ ನಡೆಯುವಂತಹ ಆಕ್ರಮಣಗಳ ವಿರುದ್ಧ ಯಾರಿದ್ದಾರೆ ಎಂಬ ಹುಡುಕಾಟ ನಡೆಸಿದೆ. ಅವರ ಪ್ರಕಾರ ಸಾಮಾಜಿಕ ಜಾಲತಾಣಗಳ ಮಾಧ್ಯಮದಲ್ಲಿ ಹಿಂದೂ ವಿರೋಧಿ ಚಿಂತನೆಗಳು, ಮೀಮ್ಳನ್ನು ಹೆಚ್ಚು-ಹೆಚ್ಚು ಮಾಡುವ ಪ್ರಯತ್ನ ಮಾಡಲಾಗುತ್ತಿದೆ. ಅದರಲ್ಲೂ ವಿಶೇಷವಾಗಿ ಪ್ರತಿಭಟನೆ ತೋರದ ಸಣ್ಣ-ಸಣ್ಣ ಸಮಾಜಗಳನ್ನೇ ಬಡಿಯಬೇಕೆಂಬ ಪ್ರಯತ್ನ ಕಾಣುತ್ತದೆ. ಮತ್ತೂ ಅತ್ಯಂತ ಭಯಾನಕವಾದ ಸಂಗತಿ ಎಂದರೆ ಅನೇಕ ರಾಷ್ಟ್ರಗಳೇ ಭಾರತದ ವಿರುದ್ಧ ಈ ರೀತಿಯ ಪ್ರಯಾಸದಲ್ಲಿ ತೊಡಗಿದೆ ಎಂಬುದು! ಸುಮಾರು ಹತ್ತು ಲಕ್ಷ ಟ್ವೀಟ್​ಗಳನ್ನು ಅಧ್ಯಯನ ಮಾಡಿದ ನಂತರ ಈ ಸಂಸ್ಥೆ ಇರಾನ್ ಸರ್ಕಾರದ ಪಾತ್ರದ ಕುರಿತಂತೆ ಗಾಬರಿಯ ಸಂಗತಿಗಳನ್ನು ಹೊರಹಾಕಿದೆ!

ಇಲ್ಲಿಗೇ ಮುಗಿಯುವುದಿಲ್ಲ. ಮೋದಿ ಅಧಿಕಾರಕ್ಕೆ ಬಂದ ಒಂದೇ ವರ್ಷದಲ್ಲಿ ಇಂಡಿಪೆಂಡೆಂಟ್ ಆಂಡ್ ಪಬ್ಲಿಕ್ ಸ್ಪಿರಿಟೆಡ್ ಮಿಡಿಯಾ ಫೌಂಡೇಷನ್ ಎಂಬೊಂದು ಸಂಘಟನೆ ಆರಂಭವಾಗಿ ಅದು ಮೋದಿ ವಿರೋಧಿ, ಕೆಲವೊಮ್ಮೆ ಭಾರತ ವಿರೋಧಿ ಚಿಂತನೆಗಳಿಗೆ ನೀರೆರೆಯುವ ಡಿಜಿಟಲ್ ಮಾಧ್ಯಮಗಳಿಗೆ ಹಣ ನೀಡಲಾರಂಭಿಸಿತು. ಇತ್ತೀಚೆಗೆ ಬಂಧನಗೊಂಡಿರುವ ಸ್ವಘೊಷಿತ ಫ್ಯಾಕ್ಟ್ ಚೆಕರ್ ಜುಬೈರ್​ಗೂ ಕೆಲ ಭಾರತೀಯರ ಸಹಕಾರ ದೊರೆತಿದೆ. ಇವರು ಹೂಡಿಕೆ ಮಾಡುವ ಕೆಲವು ಪತ್ರಿಕೆಗಳಂತೂ ಪುಂಖಾನುಪುಂಖವಾಗಿ ಮೋದಿಯ ವಿರುದ್ಧ ಸುಳ್ಳುಗಳನ್ನು ಹೇಳುತ್ತವೆ. ಹೊಸ-ಹೊಸ ಸುಳ್ಳುಗಳನ್ನು ಬಿತ್ತುತ್ತಲೇ ನಡೆಯುತ್ತವೆ!

ಮುಸಲ್ಮಾನರು ಭಾರತವನ್ನು ತುಂಡರಿಸುವ ಹೋರಾಟದಲ್ಲಿ ಒಬ್ಬಂಟಿ ಯಾಗಿಲ್ಲ. ಅವರಿಗೆ ಸಹಕಾರ ನೀಡಲು ಎಡಪಂಥೀಯರ ದೊಡ್ಡ ಪಡೆ ಕೆಲಸ ಮಾಡುತ್ತಲೇ ಇದೆ. ಈ ಶಕ್ತಿಯಿಂದಲೇ ಅವರು ದೆಹಲಿಯಲ್ಲಿ ಸಿಎಎ ವಿರುದ್ಧ ಪ್ರತಿಭಟನೆ ಮಾಡಿದ್ದು, ಈ ಶಕ್ತಿಯಿಂದಲೇ ರಾಕೇಶ್ ಟಿಕಾಯ್್ತ ಟ್ರಾ್ಯಕ್ಟರ್​ಗಳನ್ನು ಕರೆದೊಯ್ದು ದೆಹಲಿ ಮುತ್ತಿಗೆ ಹಾಕಿದ್ದು, ಈ ಶಕ್ತಿಯಿಂದಲೇ ಅಗ್ನಿಪಥ್ ವಿರುದ್ಧದ ಹೋರಾಟಕ್ಕೆ ಭಾಷ್ಯ ಬರೆದಿದ್ದು. ನಾವು ಪಿಎಫ್​ಐನ ಈ ಕರಪತ್ರವನ್ನು ಹಿಡಿದುಕೊಂಡೇ ಅಚ್ಚರಿಯಾಯ್ತು, ಗಾಬರಿಯಾಯ್ತು ಎಂದು ಬಡಬಡಿಸುತ್ತಿದ್ದೇವೆ. ನಿಜವಾದ ಅಜೆಂಡಾ ಹೊರಬಂದರೆ ಹೆದರಿಕೆಯಿಂದ ಊಟ ಸೇರದ, ನಿದ್ದೆ ಬರದ ಸ್ಥಿತಿ ತಲುಪುತ್ತೆ! ನೆನಪಿಡಿ, ನಾವು ಈ ರಕ್ಕಸರಿಂದಲೇ ಸುತ್ತುವರಿದಿದ್ದೇವೆ. ದೇವತೆಗಳಿಗಿಂತ ರಾಕ್ಷಸರದ್ದೇ ಹೆಚ್ಚು ಶಕ್ತಿ. ಆದರೂ ಕೊನೆಗೆ ಗೆಲುವು ದೇವರದ್ದೇ ಎಂಬ ಧೈರ್ಯದ ಮೇಲೆ ಇವರನ್ನೆಲ್ಲ ಎದುರಿಸಬೇಕಷ್ಟೇ!

(ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net