

ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ಸೆಂಬ ಬೆಟ್ಟದ ತುದಿಗೆ ತಲುಪಲೇಬೇಕೆಂಬ ಕನಸನ್ನಿಟ್ಟುಕೊಂಡು ಪರಿಶ್ರಮ ಪಡುವ ಯುವಪೀಳಿಗೆಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಸಂದರ್ಭದಲ್ಲಿ ಎದುರಾಗುವ ಸವಾಲುಗಳು ಒಂದೆರಡಲ್ಲ. ಸ್ಪರ್ಧಾತ್ಮಕ ಪರೀಕ್ಷೆ ಬರೆಯಲಿರುವ ಅಭ್ಯರ್ಥಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆ ಮೊದಲ ಬಾರಿಗೆ ಐತಿಹಾಸಿಕ ನಗರಿ ಹಂಪಿಯಲ್ಲಿ ‘ಡಿಜಿಟಲ್ ಗ್ರಂಥಾಲಯ’ವೊಂದನ್ನು ಆರಂಭಿಸಿರುವುದು ಶ್ಲಾಘನೀಯ.
ಇನ್ಮುಂದೆ ಈ ಗ್ರಂಥಾಲಯ ವರ್ಷದ 365 ದಿನಗಳ ಕಾಲ ತೆರೆಯಲು ಕ್ರಮ ಕೈಗೊಳ್ಳಲಾಗಿರುವುದರಿಂದ ಅಭ್ಯರ್ಥಿಗಳಿಗೆ ಈ ಸೇವೆ ಅತ್ಯುಪಯುಕ್ತ. ಜತೆಗೆ ಸ್ಪರ್ಧಾತ್ಮಕ ಪರೀಕ್ಷೆ ಸಿದ್ಧತೆಯ ಪುಸ್ತಕಗಳನ್ನು ಅಂಗೈನಲ್ಲೇ ವ್ಯಾಸಂಗ ಮಾಡುವ ಸದಾವಕಾಶ ಒದಗಿಸಲೆಂದೇ ‘ಡಿಜಿಟಲ್ ಆಪ್’ಗೂ ಚಾಲನೆ ನೀಡಿದ್ದು ವಿಶೇಷ ಮೈಲಿಗಲ್ಲಾಗಿದೆ. ಮುಂದಿನ ದಿನಗಳಲ್ಲಿ ಈ ಸೇವೆಯಲ್ಲಿ ವ್ಯತ್ಯಯವಾಗದಂತೆ ಸಂಬಂಧಪಟ್ಟವರು ಕಾಳಜಿ ವಹಿಸಲಿ.
| ಪರಮೇಶ್ವರ ಬಿ.ಬಿರಾದಾರ, ಬೀದರ