ಕಾಂಗ್ರೆಸ್​ ಮತ್ತು ಚೀನಾ ಏಕಿಷ್ಟು ಕುಚುಕು!

China Congress
Published on

ಟಿಬೆಟ್​ನ ಆಂತರಿಕ ವಿಚಾರದಲ್ಲಿ ಚೀನಾ ಮೂಗು ತೂರಿಸಿದಾಗ ತಲೆಕೆಡಿಸಿಕೊಳ್ಳದ ಕಾಂಗ್ರೆಸ್ಸಿಗೆ ಈಗ ಚೀನಾ ವಿಚಾರದಲ್ಲಿ ಅಮೆರಿಕಾ ಮೂಗು ತೂರಿಸಿದಾಗ ಆಕ್ರೋಶ ಹುಟ್ಟುತ್ತಿದೆ ಎಂದರೆ ಇದು ಕಾಂಗ್ರೆಸ್ಸಿನ ಬಂಡವಾಳ ಬಯಲು ಮಾಡುತ್ತದೆಯೋ ಅಥವಾ ಚೀನಾ ಬಂಡವಾಳವನ್ನೇ ಬಯಲು ಮಾಡುತ್ತದೆಯೋ ಎಂಬುದು ಅರ್ಥವಾಗುತ್ತಿಲ್ಲ.

ಇಂಡಿಯಾ ಮತ್ತು ಚೀನಾ ಫ್ರೆಂಡ್​ಶಿಪ್​ ಅಸೋಸಿಯೇಷನ್​ ಎಂಬ ಸಂಟನೆಯೊಂದಿದೆಯಂತೆ. ಇದರ ಕರ್ನಾಟಕ ವಿಭಾಗ ಒಂದು ಕಾರ್ಯಕ್ರಮವನ್ನು ಆಯೋಜಿಸಿದೆ. ಈ ಕಾರ್ಯಕ್ರಮದ

ಉದ್ದೇಶವೇನು ಗೊತ್ತೇ? ಅಮೆರಿಕಾ ಚೀನಾದ ಆಂತರಿಕ ವಿಚಾರಗಳಲ್ಲಿ ಮೂಗು ತೂರಿಸುವುದನ್ನು ಅವರು ವಿರೋಧಿಸಬೇಕೆಂದಿದ್ದಾರೆ. ಅಂದರೆ ಚೀನಾ ತೈವಾನನ್ನು ನುಂಗುವ ಪ್ರಯತ್ನ ಮಾಡುತ್ತಿದೆಯಲ್ಲ, ಅದರ ವಿರೋಧಕ್ಕೆ ಅಮೆರಿಕಾ ಮಾಡುತ್ತಿರುವ ಪ್ರಯಾಸವನ್ನು ಇವರು ಆಂತರಿಕ ಹಸ್ತೇಪ ಎಂದು ಕರೆಯುತ್ತಿದ್ದಾರೆ. ಅಚ್ಚರಿಯೇನು ಗೊತ್ತೇ? ಬೆಂಗಳೂರಿನಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮಕ್ಕೆ ಭಾರತದ ಚೀನೀ ರಾಯಭಾರಿ ಮುಖ್ಯ ಅತಿಥಿಯಾಗಿ ಬರುತ್ತಿದ್ದಾರೆ. ಜೊತೆಗೆ ವಿಶೇಷ ಅತಿಥಿಯಾಗಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇದ್ದಾರೆ. ಅತಿಥಿಗಳಾಗಿ ಕರ್ನಾಟಕದ ಮಾಜಿ ಉಪಮುಖ್ಯಮಂತ್ರಿ ಎಚ್​.ಸಿ ಮಹದೇವಪ್ಪ, ರಾಜ್ಯಸಭಾ ಸದಸ್ಯ ಎಲ್​. ಹನುಮಂತಯ್ಯ, ಮಾಜಿ ಮಂತ್ರಿ ಪಿಜಿಆರ್​ ಸಿಂಧ್ಯ ಮತ್ತು ಈ ಸಂಟನೆಯ ಅಧ್ಯಕ್ಷರೂ, ಮಾಜಿ ಮಂತ್ರಿಗಳೂ ಆಗಿರುವ ಸದ್ಯಕ್ಕೆ ಶಾಸಕರೂ ಆಗಿರುವ ಶ್ರೀನಿವಾಸ ಗೌಡ ಎಲ್ಲರೂ ಹೋಗುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಚೀನಾ ಕುರಿತಂತೆ ಚಿತ್ರಗಳ ಪ್ರದರ್ಶಿನಿಯೂ ಇದೆ ಎಂದು ಆಹ್ವಾನ ಪತ್ರಿಕೆಯಲ್ಲಿ ಹೇಳಲಾಗಿದೆ.

ಟ್ವಿಟರ್​ನಲ್ಲಿ ಈ ಕುರಿತಂತೆ ಭಾರೀ ಸದ್ದಾದೊಡನೆ ಸಿದ್ದರಾಮಯ್ಯನವರು "ನಾನು ಕಾರ್ಯಕ್ರಮಕ್ಕೆ ಬರುವುದಿಲ್ಲವೆಂದರೂ ನನ್ನ ಹೆಸರು ಹಾಕಲಾಗಿದೆ' ಎಂದಿದ್ದಾರಲ್ಲದೆ ಈ ರೀತಿಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ನನ್ನ ಅಥವಾ ನನ್ನ ಪಕ್ಷದ ಸಿದ್ಧಾಂತವಲ್ಲವೆಂದು ನುಣುಚಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಹಾಗೆ ನುಣುಚಿಕೊಳ್ಳುವ ಪ್ರಯತ್ನದಲ್ಲಿ ಅವರು ಕಾಂಗ್ರೆಸ್ಸಿನ ಇತರೆ ನಾಯಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಕುರಿತಂತೆ ಸೊಲ್ಲೆತ್ತಿಲ್ಲ. ಚೀನಾದ ಪರವಾಗಿ ನಿಲ್ಲುವ ಈ ದರ್ದು ಕಾಂಗ್ರೆಸ್ಸಿಗೇಕೆ ಎನ್ನುವ ಪ್ರಶ್ನೆ ಕಾಡುವುದಿಲ್ಲವೇ? ಮೋದಿ ವಿರೋಧದ ಧಾವಂತಕ್ಕೆ ಬಿದ್ದು ಭಾರತ ವಿರೋಧಿಯೇ ಆಗುತ್ತಿರುವ ಇವರುಗಳ ಮಾನಸಿಕ ಸ್ಥಿತಿಯನ್ನು ಹೇಗೆಂದು ಅಂದಾಜಿಸಬೇಕು! ಜನರಲ್​ ಬಿಪಿನ್​ ರಾವತ್​ರು ಹೇಳಿದ್ದರಲ್ಲ, ಭಾರತ ಎದುರಿಸಬೇಕಾದ್ದು ಎರಡು ದಿಕ್ಕಿನ ಶತ್ರುಗಳನ್ನಲ್ಲ, ಎರಡೂವರೆ ದಿಕ್ಕಿನಿಂದ ಬರುತ್ತಿರುವ ಶತ್ರುಗಳನ್ನು. ಚೀನಾ ಮತ್ತು ಪಾಕಿಸ್ತಾನ ಕಣ್ಣಿಗೆ ಕಾಣುವ ಶತ್ರುಗಳಾದರೆ, ಅವರ ಬೆಂಬಲಕ್ಕೆ ನಿಲ್ಲುವ ಈ ಮಂದಿ ಒಳಗಿಂದಲೇ ಭಾರತವನ್ನು ತಿನ್ನುವ ಗೆದ್ದಲು ಹುಳಗಳು ಎಂದರೆ ಯಾರೂ ಅಚ್ಚರಿ ಪಡುವಂತಿಲ್ಲ.

ಇಷ್ಟಕ್ಕೂ ಅಮೆರಿಕಾ ಮತ್ತು ಚೀನಾದ ಆಂತರಿಕ ವಿಚಾರಗಳಲ್ಲಿ ಹಸ್ತೇಪ ನಡೆಸಿದರೆ ಬೊಬ್ಬೆ ಇಡಬೇಕೆಂದು ಇವರು ಬಯಸುವುದಾದರೂ ಏಕೆ? ಇವರು ಚೀನಾವನ್ನು ತಮ್ಮ ರಾಷ್ಟ್ರವೆಂದು ಬಗೆದಿದ್ದಾರೋ? ಚೀನಾದ ಅಧ್ಯಕ್ಷನಿಗೆ ನಿಷ್ಠರೋ? ಅಥವಾ ಚೀನಾ ಕೊಡುವ ಹಣದಲ್ಲಿ ತಮ್ಮ ಬದುಕು ನಡೆಸುತ್ತಿದ್ದಾರೋ? ಪ್ರಶ್ನೆ ಕೇಳಬೇಕಲ್ಲ. ಏಕೆಂದರೆ ಸ್ವತ@ ಚೀನಾ ನಿರಂತರವಾಗಿ ಭಾರತದ ಆಂತರಿಕ ವಿಚಾರಗಳಲ್ಲಿ ಹಸ್ತೇಪ ನಡೆಸುತ್ತಾ ನಮ್ಮ ಸಾರ್ವಭೌಮತೆಗೆ ಧಕ್ಕೆ ತರುವ ಕೆಲಸ ನಡೆಸುತ್ತಿದ್ದಾಗಲೂ ದನಿ ಎತ್ತದ ಇವರು ಚೀನಾಕ್ಕೆ ಅಮೆರಿಕಾದಿಂದ ತೊಂದರೆಯಾದೊಡನೆ ಕೂಗಾಡುತ್ತಿದ್ದಾರಲ್ಲ, ಅಂತರಂಗವನ್ನು ಕೆದಕಲೇಬೇಕಾಯ್ತಲ್ಲ! ಬಹಳ ಹಿಂದೆ ನಕ್ಸಲ್​ ಚಳವಳಿಯನ್ನು ಹುಟ್ಟುಹಾಕಿದ ಕನು ಸನ್ಯಾಲ್​, ಚಾರು ಮಜುಂದಾರ್​ನಂತಹ ನಾಯಕರು "ಚೀನಾದ ಅಧ್ಯಕ್ಷ ನಮ್ಮ ಅಧ್ಯಕ್ಷ' ಎಂಬ ಹೇಳಿಕೆಯನ್ನು ಕೊಟ್ಟದ್ದಲ್ಲದೆ, ಕಮ್ಯುನಿಸ್ಟರೆಲ್ಲರೂ ಸುದೀರ್ ಕಾಲ ಅದನ್ನೇ ಅನುಸರಿಸುವಂತೆ ಮಾಡಿದ್ದರಲ್ಲ, ಇದು ಅದರದ್ದೇ ಪ್ರಭಾವವಿರಬಹುದಾ? ಅನೇಕ ಪ್ರಶ್ನೆಗಳು ಕಾಡುತ್ತಿವೆ. ಚೀನಾ ಜಾಗತಿಕ ವೇದಿಕೆಗಳಲ್ಲಿ ಎಂದೂ ಭಾರತದ ಪರವಾಗಿ ಮಾತನಾಡಲಿಲ್ಲ. ಭಾರತದ ಬೆಳವಣಿಗೆಯನ್ನು ತಡೆಯುವ ಅದರ ಪ್ರಯಾಸ ಎಂದೂ ನಿಂತಿಲ್ಲ. ಭಾರತದ ಸುತ್ತಲೂ ಇರುವ ರಾಷ್ಟ್ರಗಳನ್ನು ಎತ್ತಿಕಟ್ಟಿ ಭಾರತವನ್ನು ದುರ್ಬಲಗೊಳಿಸುವ ಪ್ರಯತ್ನವನ್ನೂ ಮಾಡುತ್ತಿದೆ. ಅಷ್ಟೇ ಅಲ್ಲದೆ, ನಿರಂತರವಾಗಿ ಭಿನ್ನ ಭಿನ್ನ ಮಾರ್ಗಗಳಿಂದ ಒಳನುಸುಳುಕೋರರಿಗೆ ತರಬೇತಿ, ಸಹಕಾರ ನೀಡಿ ಭಾರತವನ್ನು ಒಳಗಿಂದ ತುಂಡರಿಸುವ ಪ್ರಯತ್ನವನ್ನೂ ಮಾಡುತ್ತಿದೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ಸು ಚೀನಾದ ಬೆಂಬಲಕ್ಕೆ ಈ ರೀತಿ ನಿಂತಿರುವುದನ್ನು ನೋಡಿದರೆ ಅದರ ನಾಯಕರು ಮುಕ್ತವಾಗಿ ವಿಚಾರವನ್ನು ಹಂಚಿಕೊಳ್ಳಬೇಕಾದ ಸಂದರ್ಭ ಬಂದಿದೆ ಎಂದೆನಿಸುತ್ತದೆ. ಕೇಂದ್ರದಲ್ಲಿ ಕಾಂಗ್ರೆಸ್ಸು ಅಧಿಕಾರದಲ್ಲಿದ್ದಾಗ ಚೀನಾದ ಕಮ್ಯುನಿಸ್ಟ್​ ಪಾರ್ಟಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು ಮತ್ತು ಒಪ್ಪಂದದ ವಿಚಾರಗಳನ್ನು ಇಂದಿನವರೆಗೂ ಗುಪ್ತವಾಗಿರಿಸಿರುವುದು ಏಕೆಂಬುದು ಪ್ರಶ್ನಿಸಬೇಕಾದ ಸಂದರ್ಭ.

ಸ್ವಾತಂತ್ರ$್ಯ ಬಂದ ಲಾಗಾಯ್ತು ಚೀನಾ ನಮ್ಮೊಡನೆ ನಡೆದುಕೊಂಡ ರೀತಿಯೇ ಬೇರೆ. ಜವಾಹರ್​ಲಾಲ್​ ನೆಹರೂಗೆ ಭಾರತೀಯ ವಿದೇಶಾಂಗ ನೀತಿ ಎಂದರೆ ಅದು ಅಹಿಂಸಾ ನೀತಿ ಎಂಬ ಭ್ರಮೆ ಇತ್ತು. ನಾವು ಯಾರೊಡನೆ ಯುದ್ಧ ಮಾಡಬೇಕಾಗಿಲ್ಲ, ನಮ್ಮನ್ನು ಕಂಡರೆ ಯಾರಿಗೂ ದ್ವೇಷವಿಲ್ಲ ಎಂಬ ತಪು$್ಪಕಲ್ಪನೆಯಲ್ಲಿ ಅವರಿದ್ದರು. ಒಂದು ಹಂತದಲ್ಲಂತೂ ಭಾರತಕ್ಕೆ ಸೇನೆಯೇ ಬೇಡ, ಪೊಲೀಸರೇ ಸಾಕು ಎಂಬುದು ಅವರ ವಾದವಾಗಿತ್ತು. ಚೀನಾ ಟಿಬೆಟ್​ ಅನ್ನು ಕಬಳಿಸಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡು ಭಾರತದ ಗಡಿಗೆ ಬಂದು ನಿಂತಾಗ ದೇಶ ಗಾಬರಿಗೊಂಡಿದ್ದು ನಿಜವಾದರೂ, ಆಗ ನೆಹರೂ ಅದನ್ನು ಟಿಬೆಟ್​ನ ಆಂತರಿಕ ವಿಚಾರ ಎಂದು ಹೇಳಿ ಕೈತೊಳೆದುಕೊಂಡಿದ್ದರು. ಟಿಬೆಟ್​ನ ಆಂತರಿಕ ವಿಚಾರದಲ್ಲಿ ಚೀನಾ ಮೂಗು ತೂರಿಸಿದಾಗ ತಲೆಕೆಡಿಸಿಕೊಳ್ಳದ ಕಾಂಗ್ರೆಸ್ಸಿಗೆ ಈಗ ಚೀನಾ ವಿಚಾರದಲ್ಲಿ ಅಮೆರಿಕಾ ಮೂಗು ತೂರಿಸಿದಾಗ ಆಕ್ರೋಶ ಹುಟ್ಟುತ್ತಿದೆ ಎಂದರೆ ಇದು ಕಾಂಗ್ರೆಸ್ಸಿನ ಬಂಡವಾಳ ಬಯಲು ಮಾಡುತ್ತದೆಯೋ ಅಥವಾ ಚೀನಾ ಬಂಡವಾಳವನ್ನೇ ಬಯಲು ಮಾಡುತ್ತದೆಯೋ ಎಂಬುದು ಅರ್ಥವಾಗುತ್ತಿಲ್ಲ. 1962ರಲ್ಲಿ ಭಾರತದ ಮೇಲೆ ಏಕಾಏಕಿ ದಾಳಿ ಮಾಡಿದ ಚೀನಾ ಭಾರತ ಮರೆಯಲಾಗದ ಹೊಡೆತವನ್ನು ಕೊಟ್ಟಿತು. ಈ ಬಾರಿ ಸೋತಿದ್ದು ಸೈನಿಕರಲ್ಲ, ದೂರದೃಷ್ಟಿಯಿಲ್ಲದ ದೇಶದ ನಾಯಕತ್ವ. ಭಾರತದ ರಕ್ಷಣೆಗೆ ಸೈನಿಕರೇ ಬೇಡ ಎನ್ನುತ್ತಿದ್ದ ಮಂದಿ ಸಮರಸನ್ನದ್ಧತೆ ಇಲ್ಲದ ಸೈನಿಕರನ್ನು ಗಡಿ ತುದಿಯಲ್ಲಿ ನಿಲ್ಲಿಸಿ ಕಾದಾಡಿ ಎಂದರೆ ಏನು ಮಾಡಬೇಕು ಹೇಳಿ? ಆದರೆ, ಚೀನಾ ಅಲ್ಲಿಗೇ ನಿಲ್ಲಲಿಲ್ಲ. ಜಗತ್ತಿನ ಜನರ ಮುಂದೆ ತನ್ನ ಮುಖವನ್ನು ಸುಂದರವಾಗಿರಿಸಿಕೊಳ್ಳಬೇಕು, ಆದರೆ ಭಾರತದ ಮುಖಕ್ಕೆ ಮಸಿ ಬಳಿಯಬೇಕು ಎನ್ನುವ ದೃಷ್ಟಿಯಿಂದ 1965ರಲ್ಲಿ ಪಾಕಿಸ್ತಾನವನ್ನು ಛೂ ಬಿಟ್ಟಿತು. ಅಯೂಬ್​ ಖಾನ್​ ಮತ್ತು ಭುಟ್ಟೊ ಇಬ್ಬರೂ ಸೇರಿ ಭಾರತದ ಮೇಲೆ ದಾಳಿ ಮಾಡಿದಾಗ ಅದು ನಮಗೆ ಅಚ್ಚರಿ. ಆದರೆ, ಲಾಲ್​ ಬಹದ್ದೂರ್​ ಶಾಸಿ ಸೆಟೆದು ನಿಂತರು. ಪಾಕಿಸ್ತಾನಕ್ಕೆ ಬಲವಾದ ಹೊಡೆತ ಕೊಟ್ಟಿದ್ದಲ್ಲದೆ, ಆತ್ಮರಕ್ಷಣೆಯನ್ನು ಬಿಟ್ಟು ಗಡಿರೇಖೆಯನ್ನು ದಾಟಿ ಮುನ್ನುಗ್ಗುವಂತೆ ಭಾರತೀಯ ಸೈನಿಕರಿಗೆ ಮುಕ್ತ ಪರವಾನಗಿ ನೀಡಿದರು. ಸುದೀರ್ ಕದನಕ್ಕೆ ಸಿದ್ಧ ಮಾಡಿಕೊಳ್ಳದ ಪಾಕಿಸ್ತಾನ ಪತರಗುಟ್ಟಿತು. ಭಾರತೀಯ ಸೇನೆ ಲಾಹೋರ್​ನವರೆಗೂ ನುಗ್ಗಿ ಪಾಕಿಸ್ತಾನವನ್ನೇ ಅಸ್ಥಿರಗೊಳಿಸುವ ಪರಿಸ್ಥಿತಿಯನ್ನು ನಿರ್ಮಾಣ ಮಾಡುತ್ತಿದ್ದಂತೆ ಚೀನಾದ ಎದೆ ಬಡಿದುಕೊಳ್ಳಲಾರಂಭಿಸಿತು. ಸಿಕ್ಕಿಂ ಗಡಿಯಲ್ಲಿ ಕ್ಯಾತೆ ತೆಗೆದ ಚೀನಾ ಟಿಬೆಟ್​ನ ದಣ ಭಾಗ ಸಿಕ್ಕಿಂ ಆದ್ದರಿಂದ ಅದನ್ನು ತನಗೆ ಬಿಟ್ಟುಕೊಡಬೇಕೆಂಬ ವಾದ ಮಂಡಿಸಲಾರಂಭಿಸಿತು. ಆಗಿನ್ನೂ ಸಿಕ್ಕಿಂ ರಾಜರ ಕೈಲಿತ್ತು. ಭಾರತ ಚೀನಾದಿಂದ ಅವರಿಗೆ ರಕ್ಷಣೆ ಕೊಡಿಸುವ ಹೊಣೆಯನ್ನು ಹೊತ್ತುಕೊಂಡಿತ್ತಷ್ಟೆ. 1962ರ ಯುದ್ಧದಲ್ಲಿ ಭಯಾನಕ ಸೋಲುಂಡಿದ್ದ ಭಾರತಕ್ಕೆ ಚೀನಿಯರನ್ನೆದುರಿಸುವ ಧೈರ್ಯವಿಲ್ಲದೆ, ಅನೇಕ ಪೋಸ್ಟ್​ಗಳನ್ನು ಬಿಟ್ಟು ಹಿಂದೆ ಸರಿಯಬೇಕಾಯ್ತು. ಆದರೆ, ಚೀನಾ ಈ ರೀತಿ ಮತ್ತೊಂದು ಗಡಿಯಲ್ಲಿ ಯುದ್ಧಮಯ ವಾತಾವರಣವನ್ನು ನಿರ್ಮಾಣ ಮಾಡಿದ್ದರಿಂದ ಸಹಜವಾಗಿಯೇ ಭಾರತದ ಆಂತರಿಕ ಸ್ಥೆರ್ಯ ಕುಸಿದು ತಾಷ್ಕೆಂಟ್​ನಲ್ಲಿ ಪಾಕಿಸ್ತಾನದೊಂದಿಗೆ ಅನಿವಾರ್ಯದ ಒಪ್ಪಂದಕ್ಕೆ ಇಳಿಯಬೇಕಾಯ್ತು. ಅಂದರೆ ನಮ್ಮ ಕೈ ಮೇಲಾಗುವಾಗಲೆಲ್ಲ ಚೀನಾ ಆಂತರಿಕ ಹಸ್ತೇಪ ಮಾಡುತ್ತದೆಂದಾಯ್ತು!

ಹಾಗಂತ ಅದು ಇಷ್ಟಕ್ಕೇ ನಿಲ್ಲಲಿಲ್ಲ. ಕಮ್ಯುನಿಸ್ಟ್​ ನಾಯಕರನ್ನು ತನ್ನ ದೇಶಕ್ಕೆ ಕರೆಸಿಕೊಂಡು ತರಬೇತಿ ಕೊಡಿಸಿದ್ದಲ್ಲದೆ, ಭಾರತವನ್ನು ಅಸ್ಥಿರಗೊಳಿಸುವ ಉಪಾಯಗಳನ್ನೂ ಹೆಣೆದುಕೊಟ್ಟಿತು. ಮಾವೊವಾದಿಗಳದ್ದೆ ತಂಡವೊಂದು ರೂಪುಗೊಂಡು ನಕ್ಸಲ್​ ಚಳವಳಿಗೆ ಅಡಿಪಾಯ ಹಾಕಲಾಯ್ತು. ನೋಡನೋಡುತ್ತಲೇ ಪಶ್ಚಿಮ ಬಂಗಾಳದಿಂದ ಒರಿಸ್ಸಾ ದಾಟಿ ಸುದೂರದ ಆಂಧ್ರದವರೆಗೂ ಈ ರಕ್ತಪಿಪಾಸುತನ ವ್ಯಾಪಕವಾಗಿ ಹಬ್ಬಿತು. ಭಾರತೀಯ ಸೇನೆಯೊಂದಿಗೆ ಅವರ ಕದನ ಒಂದು ಕಾಲಟ್ಟದಲ್ಲಿ ಭಯ ಹುಟ್ಟಿಸುವಂಥದ್ದಾಗಿತ್ತು. ಇಡಿಯ ಭಾರತದ ಶಕ್ತಿಯನ್ನು ಆಂತರಿಕವಾಗಿ ಏಕಾಗ್ರಗೊಳಿಸುವ ಪ್ರಯತ್ನ ಮಾಡಬೇಕಾಯ್ತು. ಈ ಸಂದರ್ಭದಲ್ಲಿಯೇ ಈಶಾನ್ಯ ರಾಜ್ಯಗಳಲ್ಲೂ ಪ್ರತ್ಯೇಕತಾವಾದಿಗಳಿಗೆ ಸಾಕಷ್ಟು ಆಹಾರ ನೀಡಿದ ಚೀನಾ ಭಾರತದ ಒಂದಿಡೀ ಅಂಗವನ್ನೇ ತುಂಡರಿಸಿಬಿಡುವ ಮಹತ್ವದ ಪ್ರಯತ್ನಕ್ಕೆ ಕೈ ಹಾಕಿತು. 1967ರಲ್ಲಿ ಸಿಕ್ಕಿಂನ ನಾಥುಲಾ ಮತ್ತು ಚೋಲಾ ಪಾಸ್​ಗಳಲ್ಲಿ ತಾನೇ ಕಾಲು ಕೆರೆದುಕೊಂಡು ಜಗಳಕ್ಕೆ ಬಂದ ಚೀನಾಕ್ಕೆ ಭಾರತೀಯ ಸೈನಿಕರು ತಕ್ಕ ಶಾಸ್ತಿ ಮಾಡಿದರು. ಮೊದಲ ಆಕ್ರಮಣದಲ್ಲಿ ಯಶಸ್ಸು ಕಂಡ ಚೀನಾ ಭಾರತದ 80 ಸೈನಿಕರನ್ನು ಧರಾಶಾಯಿಗೊಳಿಸಿದರೆ ಭಾರತೀಯ ಸೇನೆ 300ಕ್ಕೂ ಹೆಚ್ಚು ಸೈನಿಕರನ್ನು ಯಮಪುರಿಗಟ್ಟಿತು. ಚೀನಾದ ತಾಕತ್ತು ಉಡುಗಿಯೇ ಹೋದಂತಾಯ್ತು. ದೂರದೃಷ್ಟಿಯಿಲ್ಲದ ನೆಹರೂರಂತಹ ನಾಯಕರ ಕಾರಣದಿಂದಾಗಿ 1962ರ ಯುದ್ಧವನ್ನು ಭಾರತ ಸೋತಿತೆಂಬುದು ಅದಕ್ಕೆ ಅರಿವಾಗಲು ಬಹಳ ಸಮಯ ಹಿಡಿಯಲಿಲ್ಲ. ಆನಂತರ ಅದು 1967ರ ಈ ಕದನವನ್ನು ನೆನಪಿಸಿಕೊಳ್ಳಲೇ ಇಲ್ಲ. ಮತ್ತೆ ಇಂಥದ್ದೊಂದು ದುಸ್ಸಾಹಸಕ್ಕೆ ಕೈ ಹಾಕಿದ್ದು ಒಂದೂವರೆ, ಎರಡು ವರ್ಷದ ಹಿಂದೆ ಗ್ಯಾಲ್ವಾನ್​ ಕಣಿವೆಯಲ್ಲೇ.

ಆರಂಭಿಕ ದಾಳಿ ನಡೆಸಿದ ಚೀನಾ ನಮ್ಮ 20 ಸೈನಿಕರನ್ನು ಬಲಿ ತೆಗೆದುಕೊಂಡಿತು ನಿಜ, ಆದರೆ ಆನಂತರ ಭಾರತೀಯ ಸೇನೆ ಕೊಟ್ಟ ಪ್ರತ್ಯುತ್ತರದಲ್ಲಿ ನೂರಕ್ಕೂ ಹೆಚ್ಚು ಸೈನಿಕರನ್ನು ಕಳೆದುಕೊಂಡಿತು. ಹಾಗಂತ ರಷ್ಯಾದ ಗೂಢಚರ್ಯ ಸಂಸ್ಥೆ ವರದಿ ಮಾಡಿದೆ. ತನ್ನವರಾರನ್ನೂ ಕಳೆದುಕೊಂಡಿಲ್ಲವೆಂದು ಧಿಮಾಕು ತೋರಿದ್ದ ಚೀನಾ ಗ್ಯಾಲ್ವಾನ್​ ಟನೆಗೆ ಒಂದು ವರ್ಷವಾದ ನಂತರ ನಾಲ್ಕು ಜನರನ್ನು ಕಳೆದುಕೊಂಡಿದ್ದೆವು ಎಂಬ ವಿಡಿಯೊ ಬಿಡುಗಡೆ ಮಾಡಿದ್ದೇ ಅವರಲ್ಲಿ ಮನೆಮಾಡಿರುವ ಭಾರತದ ಕುರಿತ ಆತಂಕಕ್ಕೆ ಸಾ.

ಚೀನಾ ಆಂತರಿಕವಾಗಿ ಕುಸಿದುಹೋಗುತ್ತಿದೆ. ಅಲ್ಲಿನ ರಿಯಲ್​ ಎಸ್ಟೇಟ್​ ಉದ್ಯಮ ನೆಲಕಚ್ಚಿದ ನಂತರ ಬ್ಯಾಂಕುಗಳು ದಿವಾಳಿಯಾಗಿವೆ. ಜನರು ಬ್ಯಾಂಕಿನಲ್ಲಿಟ್ಟ ಹಣವನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳುತ್ತಿದೆ. ಬಲುವೇಗವಾಗಿ ಷಿ ಜಿನ್​ಪಿಂಗ್​ನ ವಿರುದ್ಧ, ಕಮ್ಯುನಿಸ್ಟ್​ ಪಾರ್ಟಿಯ ವಿರುದ್ಧ ಜನರ ಆಕ್ರೋಶ ನೀಭವಿಸುತ್ತಿದೆ. ಸಿಕ್ಕಿಂನಲ್ಲಿ ಭಾರತದ ವಿರುದ್ಧ ದುಸ್ಸಾಹಸ ಮಾಡುವ ಮೊದಲು ಮಾವೊನ ಜನಪ್ರಿಯತೆ ಬಲು ವೇಗವಾಗಿ ಕುಸಿದಿತ್ತು. ಷಿಯ ಪರಿಸ್ಥಿತಿಯೂ ಅದೇ ದಿಕ್ಕಿನಲ್ಲಿ ಸಾಗುತ್ತಿರುವುದರಿಂದ ಆತ ಮತ್ತೊಂದು ಪ್ರಯತ್ನಕ್ಕೆ ಕೈ ಹಾಕಿದರೆ ಅಚ್ಚರಿಯಿಲ್ಲ. ಆದರೆ, ಈ ಬಾರಿ ಇದು ನೆಹರೂ ಭಾರತವಲ್ಲ, ಮೋದಿ ಭಾರತ! ಚೀನೀ ಗಡಿಯಲ್ಲಿ ಭಾರತೀಯ ಸೈನಿಕರು ಅತ್ಯಾಧುನಿಕ ಶಸಾಸಗಳನ್ನು ಹಿಡಿದು ನಿಂತಿದ್ದಾರೆ. ಈ ಲೇಖನವನ್ನು ನೀವು ಓದುತ್ತಿರುವ ವೇಳೆಗಾಗಲೇ ಆ ಗಡಿಯಲ್ಲಿ ಸೈನಿಕರು ಆಧುನಿಕ ಶಸಗಳೊಂದಿಗೆ ವಿಶೇಷ ಅಭ್ಯಾಸ ನಡೆಸುತ್ತಿರುತ್ತಾರೆ. ಸೇನೆ ಅದಕ್ಕೆ ಕೊಟ್ಟಿರುವ ಹೆಸರೇನು ಗೊತ್ತೇ? ರೆಡ್​ ಹಂಟ್​. ರೆಡ್​ ಎನ್ನುವುದು ಚೀನೀ ಬಾವುಟದ ಬಣ್ಣ, ಕಮ್ಯುನಿಸ್ಟರು ಆಯ್ದುಕೊಂಡಿರುವ ಬಣ್ಣ. ನೇರವಾಗಿ ರೆಡ್​ ಹಂಟ್​ ಎನ್ನುವ ಮೂಲಕ ಭಾರತ ಕೊಡುತ್ತಿರುವ ಸಂದೇಶ ಚೀನಾದ ಎದೆಗೇ ಒದ್ದಂತಿದೆ. ಆದರೆ, ಒಳಗೆ ಕೆಲವು ದುಷ್ಟರು ಭಾರತದ ಅನ್ನ ತಿಂದು ಚೀನಿಯರ ಸಹಕಾರಕ್ಕೆ ನಿಲ್ಲುವುದು ಮಾತ್ರ ಸಹಿಸಲು ಸಾಧ್ಯವೇ ಆಗುತ್ತಿಲ್ಲ.

ಕೆಲವು ವರ್ಷಗಳ ಹಿಂದೆ ಹಿಂದೂ ಪತ್ರಿಕೆ ಎರಡು ಪುಟಗಳಷ್ಟು ವಿಸ್ತಾರವಾಗಿ ಚೀನಾದ ಪರವಾದ ಜಾಹೀರಾತನ್ನು ಪ್ರಕಟಿಸಿ ತನ್ನ ನಿಷ್ಠೆಯನ್ನು ಮೆರೆದಿತ್ತು. ಪಾಕಿಸ್ತಾನಕ್ಕೆ ಎಕನಾಮಿಕ್​ ಕಾರಿಡಾರ್​ ನಿರ್ಮಾಣ ಮಾಡುವಲ್ಲಿ ಚೀನಾ ತೋರುತ್ತಿರುವ ಉತ್ಸಾಹ ಭಾರತವನ್ನು ನಾಶಗೊಳಿಸಲು ಇರುವಂಥದ್ದು ಎಂಬುದರ ಅರಿವಿದ್ದಾಗಲೂ ಚೀನಾದ ಬೆಂಬಲಕ್ಕೆ ಅವರೆಲ್ಲ ನಿಲ್ಲುವುದನ್ನು ನೋಡಿದರೆ ಯಾವ ಮನಸ್ಥಿತಿಯಿಂದ ಇವೆಲ್ಲವನ್ನೂ ಸ್ವೀಕರಿಸಬೇಕು ಎನ್ನುವುದೇ ಗೊತ್ತಾಗುವುದಿಲ್ಲ.

ಮೋದಿಯನ್ನು ವಿರೋಧಿಸಿ; ಆದರೆ ಆ ನೆಪದಲ್ಲಿ ದೇಶವಿರೋಧಿಗಳಾಗಿ ಬಿಡಬೇಡಿ ಎಂಬ ಸಲಹೆಯನ್ನು ಯಾರಾದರೂ ಕಾಂಗ್ರೆಸ್ಸಿಗೆ ಕೊಡಬೇಕಲ್ಲ! ಸಿದ್ದರಾಮಯ್ಯನವರು ತಮ್ಮ ಸುತ್ತಲೂ ಇದೇ ಕೆಂಪು ಮಂದಿಯನ್ನು ಇಟ್ಟುಕೊಂಡಿರುವುದು ಎಂಥವನಿಗೂ ಅರಿವಾಗುವಂಥದ್ದು. ಬಹಳ ಬೇಗ ಅವರನ್ನು ರಡಿಸಿಕೊಳ್ಳದಿದ್ದರೆ ಇತಿಹಾಸ ಸಿದ್ದರಾಮಯ್ಯನವರನ್ನು ಬೇರೆ ತಕ್ಕಡಿಯಲ್ಲೇ ಇಟ್ಟು ತೂಗಿ ನೋಡುತ್ತದೆ.

(ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net