

ಮಹರ್ಷಿ ಅರವಿಂದರು ಭಾರತೀಯ ಮಹಾಯೋಗಿಗಳಲ್ಲಿ ಒಬ್ಬರು. ಅವರು ಕವಿ, ವಿದ್ವಾಂಸ, ಮಹಾಯೋಗಿ, ಸ್ವಾತಂತ್ರ್ಯ ಹೋರಾಟಗಾರ. ಬಂಗಾಲದಲ್ಲಿ ಜನಿಸಿ, ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ, ಅನಂತರ ಪಾಂಡಿಚೇರಿಯಲ್ಲಿ ಉಳಿದು ದಿವ್ಯದರ್ಶನ ಪಡೆದು
ಪೊ›. ಮಂದರ್ಕೆ ಮಾಧವ ಪೈ ಅವರು ಕೊಂಕಣಿ-ಸಂಸ್ಕೃತ- ಕನ್ನಡ ಈ ಮೂರೂ ಭಾಷೆಗಳಳ್ಲಿ ಸಮದಂಡಿಯಾದ ವಿದ್ವತ್ತನ್ನು ಪಡೆದವರು. ಮಹರ್ಷಿ ಅರವಿಂದರ ತತ್ತ್ವಜ್ಞಾನದ ಉದಧಿಯಲ್ಲಿ ಮಿಂದವರು. ಸಾವಿತ್ರ-ಸತ್ಯವಾನ್-ಅಶ್ವಪತಿ-ದ್ಯುಮತ್ಸೇನ ಈ ಪಾತ್ರಗಳು ಮರ್ತ್ಯಸ್ತರದಿಂದ ಅಮರತ್ವದ ದಿವ್ಯಚೇತನದತ್ತ ಹಾಗೂ ದಿವ್ಯಜೀವನದತ್ತ ಕರೆದೊಯ್ಯುವ ಕಾರಣಿಕರೆಂಬುದನ್ನು ಅರವಿಂದರು ತಮ್ಮ ಕಾವ್ಯದಲ್ಲಿ ಶ್ರುತಪಡಿಸಿದ್ದಾರೆ. ಅದು ಸಾವಿತ್ರಿ ಮಹಾಕಾವ್ಯದ ಅಖಂಡ ಆಶಯವೂ ಆಗಿದೆ. ಈ ಆಶಯವು ಅನುವಾದದಲ್ಲಿ ಧೀರಗಂಭೀರವಾದ ವಾಣಿಯಿಂದ ಅಲಂಕೃತವಾಗಿರುವುದು ಸೌಭಾಗ್ಯದ ಸಂಗತಿ. ಕಾವ್ಯತತ್ತ್ವ ಮತ್ತು ದರ್ಶನತತ್ತ್ವಗಳು ಒಂದರೊಡನೊಂದು ಕೈಹಿಡಿದು ಇಲ್ಲಿ ನಡೆದಿವೆ. ಮೂಲ ಇಂಗ್ಲಿಷ್ ಮಹಾಕಾವ್ಯದಲ್ಲಿ ಬರುವ ರೂಪಕ, ಪ್ರತಿಮೆ, ಸಂಕೇತಗಳು ಕನ್ನಡದಲ್ಲಿ ಸಮರ್ಥವಾಗಿ ಇಳಿದು ಬಂದಿವೆ. ಅಸಾಧಾರಣವಾದ ವ್ಯುತ್ಪತ್ತಿ, ಮೌಲಿಕ ಕಲ್ಪಕತೆ, ಸಾಂದ್ರವಾದ ವರ್ಣನೆ, ರಮ್ಯನೋಟ ಮತ್ತು ಅನಿತರ ಸಾಧಾರಣವಾದ ದರ್ಶನದೃಷ್ಟಿಯಿಂದ ಶ್ರೀ ಅರವಿಂದರ ಸಾವಿತ್ರಿಯ ಓದು ಅನನ್ಯವಾದ ಅನುಭವವನ್ನು ಸಹೃದಯರಿಗೆ ನೀಡುತ್ತದೆ. ಅದೇ ಅನುಭವ ಕನ್ನಡಾನುವಾದದಲ್ಲಿ ನಮಗೆ ಆಗುತ್ತದೆ.
ಇಂಥದೊಂದು ಮಹತ್ತ್ವದ ಮಹಾಕಾವ್ಯವನ್ನು ಡಾ. ಅಜಿತ್ ಸಬ್ನೀಸ್ ಅವರು ಹೊರತಂದು ಕನ್ನಡಿಗರಿಗೆ ನೀಡಿದ್ದಾರೆ. ಇಂಗ್ಲಿಷಿನಿಂದ ಕನ್ನಡಕ್ಕೆ ಸಮರ್ಥವಾಗಿ ಅನುವಾದಗೊಂಡ ಮಹಾಕಾವ್ಯಗಳ ಪಂಕ್ತಿಯಲ್ಲಿ ‘ಸಾವಿತ್ರಿ’ ಕಾವ್ಯಕ್ಕೆ ಮೇಲಾದ ಸ್ಥಾನವುಂಟು; ಮಾನ್ಯವುಂಟು! ಪೊ›. ಮಂದರ್ಕೆ ಮಾಧವ ಪೈ ಅವರ ಅತುಲ ಶ್ರಮವನ್ನು ಪ್ರತಿಯೊಬ್ಬ ಕಾವ್ಯಾಸಕ್ತರು ಅಭಿನಂದಿಸಬೇಕು.