

| ಮಹಾದೇವ ಬಸರಕೋಡ
ಬುದ್ಧನ ಪ್ರತಿಯೊಂದು ಕ್ರಿಯೆಯನ್ನು ಗಮನಿಸುತ್ತಿದ್ದ. ಬುದ್ಧನ ಮಾತುಗಳನ್ನು ಕೇಳುವ, ಅವನ ದೈನಂದಿನ ವರ್ತನೆಯನ್ನು ಗಮನಿಸುವ ಅವಕಾಶ ಸಿಕ್ಕಿದ್ದು ಒಳ್ಳೆಯದೇ ಎಂದು ಭಾವಿಸಿದ. ಕೆಲ ದಿನಗಳು ಕಳೆದ ನಂತರ ಬುದ್ಧ ಆ ವ್ಯಕ್ತಿಯನ್ನು ಕರೆದು, "ನಾಳೆ ನಿಮ್ಮೊಂದಿಗೆ ವಿಷಯಗಳ ಮೇಲೆ ವಾದ ಮಾಡಲು ಸಿದ್ಧ, ನೀವು ಸಿದ್ಧವಾಗಿ ಬನ್ನಿ' ಎಂದ. ಆಗ ಆ ವ್ಯಕ್ತಿ& "ದಯವಿಟ್ಟು ಕ್ಷಮಿಸಿ ಬಿಡಿ. ನನ್ನ ಶಾಸಜ್ಞಾನಕ್ಕಿಂತ ತಾವು ಎಲ್ಲರೊಂದಿಗೆ ಬೆರೆಯುವ ರೀತಿ, ಮಾರ್ಗದರ್ಶನ ಮಾಡುವ ಪರಿ ನಿಜಕ್ಕೂ ಅತ್ಯದ್ಭುತ. ಸಾಂತ್ವನ ಬಯಸಿ ಬರುವ ಎಲ್ಲ ಭಕ್ತರ ಜೊತೆಗೆ ತೋರುವ ಪ್ರೀತಿ, ಅನುಕಂಪ, ದಯೆ ತಮ್ಮ ಮಂದಹಾಸ, ಪ್ರಸನ್ನತೆಯ ವದನ, ಹೃದಯಕ್ಕೆ ಲಗ್ಗೆ ಹಾಕಿ ಅವರ ಸಮಸ್ಯೆಗಳನ್ನೆಲ್ಲ ಕ್ಷಣಮಾತ್ರದಲ್ಲಿ ಪರಿಹರಿಸುವ ರೀತಿಗೆ ನಾನು ಸೋತುಹೋಗಿದ್ದೇನೆ. ಎಲ್ಲರ ಚಿಂತನೆಗಳನ್ನೇ ಬದಲಾಯಿಸಿ ಅವರನ್ನು ಚಿಂತೆಯ ಚಿತೆಯಿಂದ ಹೊರತರುವ ನಿಮ್ಮ ವ್ಯಕ್ತಿತ್ವ ನಿಜಕ್ಕೂ ಅರ್ಥಪೂರ್ಣ. ನನ್ನ ಶಾಸಜ್ಞಾನ ಇವೆಲ್ಲದುರ ಮುಂದೆ ತೃಣಸಮಾನ' ಎಂದು ಹೇಳಿ ಬುದ್ಧನಿಗೆ ಶರಣಾದ.
ಬದುಕಿನಲ್ಲಿ ವಿವೇಕದ ಕುರಿತಾಗಿ ತಿಳಿದುಕೊಳ್ಳುವುದು ದೊಡ್ಡ ಸಂಗತಿಯೇನಲ್ಲ. ಅದನ್ನು ನಮ್ಮ ದೈನಂದಿನ ನಡತೆಯಲ್ಲಿ ರೂಢಿಸಿಕೊಳ್ಳುವುದು ಮುಖ್ಯ. ನಮ್ಮ ಜ್ಞಾನ, ತಿಳಿವಳಿಕೆಯನ್ನು ನಿಸರ್ಗದೊಂದಿಗೆ, ನಿತ್ಯದ ಬದುಕಿನ ಕ್ರಿಯೆಗಳೊಂದಿಗೆ ಸಾಮರಸ್ಯಗೊಳಿಸಿಕೊಳ್ಳದೇ ನಿರಾಸೆ ಅನುಭವಿಸುತ್ತೇವೆ. ನಮ್ಮ ನಡೆಯಲ್ಲಿ ನಮ್ಮ ನುಡಿಗಳನ್ನು ಸಾಮರಸ್ಯಗೊಳಿಸಿಕೊಳ್ಳದೇ ಇತರರಿಗೆ ಹೇಳುವುದರಲ್ಲಿ ಯಾವುದೇ ಅರ್ಥವಿಲ್ಲ. ಆಚಾರ ವಿಚಾರಗಳನ್ನು ಒಂದಾಗಿಸಿಕೊಳ್ಳುವುದು ನಮ್ಮ ಆದ್ಯತೆಯಾಗಬೇಕು.
ಎನ್ನ ನಡೆಯೊಂದು ಪರಿ
ಎನ್ನ ನುಡಿಯೊಂದು ಪರಿ
ಎನ್ನೊಳಗೇನೂ ಶುದ್ಧವಿಲ್ಲ ನೋಡಯ್ಯ
ನುಡಿಗೆ ತಕ್ಕ ನಡೆಯ ಕಂಡಡೆ
ಕೂಡಲಸಂಗಮದೇವನೊಳಗಿಪ್ಪನಯ್ಯಾ
ಎಂಬ ಅಣ್ಣ ಬಸವಣ್ಣನ ಮಾತಿನಂತೆ ಅರ್ಥೈಸಿಕೊಂಡ ಶಾಸಗಳ ಜ್ಞಾನವನ್ನು ಅನುಷ್ಠಾನಕ್ಕೆ ತರುವುದರಿಂದ ವ್ಯಕ್ತಿತ್ವಕ್ಕೆ ನತೆ. ಬದುಕು ಅರ್ಥಪೂರ್ಣ.
(ಲೇಖಕರು ಅಧ್ಯಾಪಕರು)
(ಪ್ರತಿಕ್ರಿಯಿಸಿ: manollasavv@gmail.com)