ವಿಜಯವಾಣಿ ಜನಮತ: ಅರ್ಹರಿಗೆ ಮನ್ನಣೆ ನೀಡಬೇಕು

Madhyapradesh vvani
Published on

ಮಧ್ಯಪ್ರದೇಶದಲ್ಲಿ ಹಲವಾರು ವರ್ಷಗಳಿಂದ ಅಧಿಕಾರ ವಂಚಿತವಾದ ಕಾಂಗ್ರೆಸ್ ಪಕ್ಷವನ್ನು ಮರಳಿ ಅಧಿಕಾರಕ್ಕೆ ತರುವಲ್ಲಿ ಶ್ರಮಿಸಿ ಆ ನಿಟ್ಟಿನಲ್ಲಿ ಯಶಸ್ವಿಯಾದ ಕಾಂಗ್ರೆಸ್​ನ ಯುವ ನೇತಾರ ಜ್ಯೋತಿರಾದಿತ್ಯ ಸಿಂಧಿಯಾ ಪಕ್ಷಕ್ಕೆ ರಾಜೀನಾಮೆ ನೀಡಿರುವುದು ಕಾಂಗ್ರೆಸ್ ಪಕ್ಷಕ್ಕೆ ಮರ್ವಘಾತವನ್ನೇ ನೀಡಿದೆ.

ಸಿಂಧಿಯಾ ಕಾಂಗ್ರೆಸ್​ನ ಯುವ ನೇತಾರರಲ್ಲದೆ ಮಾಸ್​ಲೀಡರ್ ಅಗಿ ಗುರುತಿಸಿಕೊಂಡವರು. ಪಕ್ಷಕ್ಕಾಗಿ ದುಡಿದವರನ್ನು ಕಡೆಗಣಿಸಿ ಹಲವಾರು ವರ್ಷಗಳಿಂದ ಅಧಿಕಾರ ಅನುಭವಿಸಿದವರಿಗೇ ಮಣೆ ಹಾಕುತ್ತಿರುವುದನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ 135 ವರ್ಷಕ್ಕೂ ಮಿಕ್ಕಿದ ಇತಿಹಾಸ ಹೊಂದಿದ ರಾಷ್ಟ್ರೀಯ ಪಕ್ಷವೆಂಬ ಹೆಗ್ಗಳಿಕೆಯಿರುವ ಕಾಂಗ್ರೆಸ್ ಪಕ್ಷ ದಿನೇದಿನೇ ಕುಸಿಯುತ್ತಿರುವುದು ಸ್ಪಷ್ಟ.

| ಎನ್. ರಾಜೇಶ್ ಅಡಿಗ, ಮಂಗಳೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net