

ರಾಜ್ಯದ 122 ತಾಲೂಕು ಆಸ್ಪತ್ರೆಗಳು ಮತ್ತು 50 ಸಮುದಾಯ ಆರೋಗ್ಯ ಕೇಂದ್ರಗಳಿಗೆ ಇ-ಸ್ಪರ್ಶ ನೀಡಲು ಸಚಿವಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಂಡಿರುವುದು ಸ್ವಾಗತಾರ್ಹ. ಇದಕ್ಕೆಂದೇ ಸರ್ಕಾರ -ಠಿ; 56.79 ಕೋಟಿ ಬಿಡುಗಡೆ ಮಾಡಿದೆ. ಇ-ಸ್ಪರ್ಶದಿಂದ ರೋಗಿ ಮುಂದೆ ಯಾವುದೇ ಸಂದರ್ಭದಲ್ಲಿ ರಾಜ್ಯದ ಯಾವುದೇ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಭೇಟಿ ಕೊಟ್ಟಾಗ ಆ ರೋಗಿಯ ಸಮಗ್ರ ಮಾಹಿತಿ ಚಿಕಿತ್ಸೆ ನೀಡುವ ವೈದ್ಯರಿಗೆ ಲಭಿಸಲಿದೆ. ತಾಲೂಕು ಹಾಗೂ ಅದಕ್ಕಿಂತಲೂ ಕೆಳಹಂತದ ಆಸ್ಪತ್ರೆಗಳಿಗೆ ಇ-ಸ್ಪರ್ಶವನ್ನು ವಿಸ್ತರಿಸುವ ಪ್ರಕ್ರಿಯೆಗೆ ಸರ್ಕಾರ ಹಸಿರು ನಿಶಾನೆ ತೋರಿಸಿರುವುದು, ರೋಗಿಗಳ ಹಿತದಿಂದ ಉತ್ತಮ ಕ್ರಮ.
| ಪರಮೇಶ್ವರ ಬಿ.ಬಿರಾದಾರ, ಬೀದರ