ಜನಮತ: ದುರ್ಗಕ್ಕೇಕೆ ದುರ್ಗತಿ?

Chitradurga
Published on

ಬರದ ಜಿಲ್ಲೆ ಚಿತ್ರದುರ್ಗಕ್ಕೆ ಭದ್ರಾ ನೀರು ಬರಲೇ ಇಲ್ಲ, ಅತ್ತ ತುಮಕೂರು-ಚಿತ್ರದುರ್ಗ ದಾವಣಗೆರೆ ರೈಲ್ವೆ ಕಾಮಗಾರಿ ಕೈಗೆತ್ತಿಕೊಳ್ಳಲೇ ಇಲ್ಲ, ಬಜೆಟ್​ನಲ್ಲಿ ಅನುಮೋದನೆ ಸಿಕ್ಕಿ ಹತ್ತು ವರ್ಷಗಳೇ ಕಳೆದರೂ ರೈಲ್ವೆ ಕಾಮಗಾರಿ ಅಲ್ಲಿಯೇ ಇದೆ. ಇಚ್ಛಾಶಕ್ತಿ ಕೊರತೆಯಿಂದ ಭದ್ರೆ ಅಲ್ಲಿಯೇ ನಿಂತಿದ್ದಾಳೆ, ರೈಲ್ವೆ ಕಾಮಗಾರಿಯೂ ಸ್ಥಗಿತವಾಗಿದೆ. ಒಟ್ಟಾರೆ ಚಿತ್ರದುರ್ಗದ ಉನ್ನತಿ ಯಾರಿಗೂ ಬೇಡವಾಯಿತೇಕೆ? ಬರದ ನಾಡಿಗೆ ನೀರು ತರಲು ಭಗೀರಥ ಏಕೆ ಹುಟ್ಟಿಕೊಂಡಿಲ್ಲ?

| ಎಂ.ಪರಮೇಶ್ವರ, ಮದ್ದಿಹಳ್ಳಿ (ಹಿರಿಯೂರು ತಾಲೂಕು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net