

ಜನರಿಗಿಂದು ಮೂಲಭೂತವಾಗಿ ಬೇಕಾಗಿರುವುದು ಆಹಾರ, ನೀರು, ಆರೋಗ್ಯ, ಶಿಕ್ಷಣ. ಇದನ್ನು ಮನಗಂಡ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮೂಲಭೂತ ಸೌಲಭ್ಯಗಳನ್ನು ಜನರಿಗೆ ಕೈಗೆಟುಕುವ ಹಾಗೆ ಮಾಡಿ ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರಿದ್ದಾರೆ. ಜನಸಾಮಾನ್ಯರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಜೀವನಪೂರ್ತಿ ಹೆಣಗಾಡಬೇಕು. ಅದರ ಜೊತೆ ಕಾಯಿಲೆ ಬಂದರೆ ಮುಗಿದೇ ಹೋಯಿತು ಜೀವನ. ನಮ್ಮ ರಾಜ್ಯದಲ್ಲಿ ಶಿಕ್ಷಣ ಸಂಸ್ಥೆಗಳು, ಖಾಸಗಿ ಆಸ್ಪತ್ರೆಗಳು ಎಲ್ಲ ರಾಜಕಾರಣಿಗಳ ಸ್ವತ್ತುಗಳಾಗಿವೆ. ಜೊತೆಗೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲು ಸಿದ್ಧವಿಲ್ಲ. ಕಾಯಿಲೆಗೆ ಕಾರಣ ಪತ್ತೆ ಹಚ್ಚಿ ಸರಿಯಾಗಿ ಅದಕ್ಕೆ ಚಿಕಿತ್ಸೆ ಕೊಡುವಂತೆ ಕೇಜ್ರಿವಾಲ್ ಮೂಲಭೂತ ಸಮಸ್ಯೆಗಳನ್ನು ನಿವಾರಿಸಿದ್ದಾರೆ. ನಿಜಕ್ಕೂ ಆ ರೀತಿ ದಿಟ್ಟ ನಿರ್ಧಾರ ತೆಗೆದುಕೊಳ್ಳುವ ನಾಯಕರು ಬೇಕಾಗಿದ್ದಾರೆ. ಆಪ್ನ ಈ ಗೆಲುವು ಇತರೆ ಪಕ್ಷಗಳಿಗೆ ಎಚ್ಚರಿಕೆ ಗಂಟೆಯೂ ಆಗಿದೆ.
| ಎಂ.ಪರಮೇಶ್ವರ, ಮದ್ದಿಹಳ್ಳಿ (ಹಿರಿಯೂರು ತಾಲೂಕು)