ವಿಜಯವಾಣಿ ಜನಮತ: ಸಂಗೀತ ಶಿಕ್ಷಕರನ್ನು ನೇಮಿಸಿ

Musivc
Published on

ಸಂಗೀತ ಶಿಕ್ಷಣದ ಅವಿಭಾಜ್ಯ ಅಂಗವಾಗಿದೆ. ಅಲ್ಲದೆ, ಸಂಗೀತವು ಮಾನಸಿಕ ಒತ್ತಡ ಕಡಿಮೆ ಮಾಡಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಸಹಾಯ ಮಾಡುತ್ತದೆ.

ಆದರೆ, ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಸಂಗೀತ ಶಿಕ್ಷಕರ ಹುದ್ದೆಗಳು 2009ರಲ್ಲಿ ನೇಮಕಾತಿ ಆಗಿದ್ದು, ಆ ಬಳಿಕ ಹುದ್ದೆಗಳು ಖಾಲಿ ಇದ್ದರೂ ನೇಮಕಾತಿ ನಡೆದಿಲ್ಲ. ಅದೇ ರೀತಿ, ಸಮಾಜ ಕಲ್ಯಾಣ ಇಲಾಖೆಯ 480 ಮುರಾರ್ಜಿ ವಸತಿ ಶಾಲೆಗಳ ಪೈಕಿ 232 ಶಾಲೆಗಳಲ್ಲಿನ ಹುದ್ದೆ ಭರ್ತಿ ಮಾಡಿ 8 ವರ್ಷವಾದರೂ ಮತ್ತೆ ನೇಮಕಾತಿ ಪ್ರಕ್ರಿಯೆ ನಡೆದಿಲ್ಲ.

ಸಂಗೀತ ವಿದ್ವತ್ ಪದವಿ ಹೊಂದಿದ ಅನೇಕ ಯುವಕರು ನಿರುದ್ಯೋಗಿಗಳಾಗಿದ್ದಾರೆ. ಸರ್ಕಾರ ಇನ್ನಾದರೂ ಶಾಲೆಗಳಿಗೆ ಸಂಗೀತ ಶಿಕ್ಷಕರನ್ನು ನೇಮಿಸಿ ನಿರುದ್ಯೋಗ ಸಮಸ್ಯೆಯನ್ನು ಪರಿಹರಿಸಿ ಕಲೆಗೆ ಪ್ರೋತ್ಸಾಹ ನೀಡಬೇಕು.

| ಯಶವಂತ ಬಡಿಗೇರ, ಸಿಂದಗಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net