

ಹುಬ್ಬಳ್ಳಿಯ ಖಾಸಗಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಕಾಶ್ಮೀರದ ಮೂವರು ವಿದ್ಯಾರ್ಥಿಗಳು ಪುಲ್ವಾಮಾ ದಾಳಿಯನ್ನು ಸಮರ್ಥಿಸಿಕೊಂಡು ಪಾಕಿಸ್ತಾನ ಪರ ಘೊಷಣೆ ಕೂಗಿ ಅದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿರುವುದು ಅಕ್ಷಮ್ಯ ಅಪರಾಧ. ದೇಶದ್ರೋಹ ಕೃತ್ಯವೆಸಗುವವರಿಗೆ ಸುಲಭದಲ್ಲಿ ಜಾಮೀನು ಸಿಕ್ಕರೆ ಜೈಲಿನಿಂದ ಹೊರಗೆ ಬಂದ ಕೂಡಲೇ ಪುನಃ ಅದೇ ಕೃತ್ಯದಲ್ಲಿ ತೊಡಗಿಕೊಳ್ಳುತ್ತಾರೆ. ಈ ದೇಶದ ಅನ್ನ ತಿಂದು ಇಲ್ಲಿನ ಸಕಲ ಸರ್ಕಾರಿ ಸವಲತ್ತುಗಳನ್ನು ಪಡೆದು ದೇಶದ್ರೋಹಿ ಕೃತ್ಯಗಳಲ್ಲಿ ತೊಡಗುವ ಇಂತಹ ವಿದ್ಯಾರ್ಥಿಗಳ ವಿರುದ್ಧ ತನಿಖೆ ನಡೆಸಿ ಕಠಿಣ ಶಿಕ್ಷೆ ನೀಡಲೇಬೇಕು. ಹಾಗಾದಲ್ಲಿ ಮಾತ್ರ ದೇಶವಿರೋಧಿ ಕೂಗು ಕಡಿಮೆಯಾಗುತ್ತದೆ ಮತ್ತು ಅಂತಹವರಿಗೆ ಬೆಂಬಲ ನೀಡುವವರಿಗೂ ಅದು ಎಚ್ಚರಿಕೆಯ ಪಾಠವಾಗುತ್ತದೆ.
| ಎನ್. ರಾಜೇಶ್ ಅಡಿಗ, ಮಂಗಳೂರು