ವಿಜಯವಾಣಿ ಜನಮತ: ಸರ್ಕಾರ ಎಚ್ಚೆತ್ತುಕೊಳ್ಳಲಿ

Vidhanasoudha vvani
Published on

‘ವಿಜಯವಾಣಿ’ ಪತ್ರಿಕೆ ಪದವಿ ಕಾಲೇಜು ಪ್ರಾಧ್ಯಾಪಕರ ಕಾರ್ಯನಿರ್ವಹಣೆ ಬಗ್ಗೆ ವರದಿ ಮಾಡಿ (ಮಾರ್ಚ್ 9) ಸಾಮಾಜಿಕ ಕಳಕಳಿ ಮೆರೆದಿದ್ದು ಶ್ಲಾಘನಾರ್ಹ. ಕನಿಷ್ಠ 1.25 ಲಕ್ಷ ರೂ.ಗಳಿಂದ ಗರಿಷ್ಠ 2.70 ಲಕ್ಷ ರೂ. ವೇತನ ಪಡೆಯುವ ಪ್ರಾಧ್ಯಾಪಕರಿಗೂ ಮತ್ತು ವೇತನ ಪಾವತಿಸುವ ಸರ್ಕಾರಕ್ಕೂ ಸಾಮಾಜಿಕ ಜವಾಬ್ದಾರಿ ಬೇಡವೇ? ಬಹಳಷ್ಟು ಪ್ರಾಧ್ಯಾಪಕರಿಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಯುಜಿಸಿ ನಿಯಮಾವಳಿ ಪ್ರಕಾರ ಕಾರ್ಯಭಾರವೇ ಇಲ್ಲ. ಕಾಲೇಜು ಶಿಕ್ಷಣ ಇಲಾಖೆ ಪ್ರತಿ ವರ್ಷ ಕಾಟಾಚಾರಕ್ಕೆ ಎಂಬಂತೆ ಸಂಬಂಧಪಟ್ಟ ಕಾಲೇಜುಗಳ ಪ್ರಾಚಾರ್ಯರಿಂದ ವಿಷಯವಾರು ಕಾರ್ಯಭಾರ ವರದಿ ತರಿಸಿಕೊಳ್ಳಲಾಗುತ್ತದೆ.

ಆದರೆ, ಕಾರ್ಯಭಾರವಿಲ್ಲದ ಶಿಕ್ಷಕರಿಗೆ "No pay No work" ಎಂದು ಅಂಜಿಸಿ ಅವರಿಂದ ‘ಮಾಮೂಲಿ’ ಪಡೆದು ನಿಯೋಜನೆಗೆ ಬ್ರೇಕ್ ಹಾಕುವುದು ಸಾಮಾನ್ಯ ಎಂಬಂತಾಗಿದೆ. ಇದು ಮೇಲಧಿಕಾರಿಗಳ ಗಮನಕ್ಕೆ ಬಾರದೆ ನಡೆಯುತ್ತಿರುವ ನಿರಂತರ ದಂಧೆ ಎಂದರೆ ತಪ್ಪಾಗಲಿಕ್ಕಿಲ್ಲ. ಕಾರ್ಯಭಾರ ತಪಾಸಣೆ ಮಾಡುವ ಅಧಿಕಾರವನ್ನು ಜಂಟಿ ನಿರ್ದೇಶಕರ ಕಚೇರಿಗೆ ಕೊಡುವ ಬದಲು ಆಯುಕ್ತರ ಕಚೇರಿಗೆ ನೀಡಬೇಕು ಮತ್ತು ಮೇಲಧಿಕಾರಿಗಳು ಮೇಲಿಂದ ಮೇಲೆ ಮಹಾವಿದ್ಯಾಲಯಗಳಿಗೆ ಅನಿರೀಕ್ಷಿತ ಭೇಟಿ ಕೊಟ್ಟು ಕಾರ್ಯಭಾರ ಪರೀಕ್ಷಿಸಿದರೆ ಇನ್ನೂ ಉತ್ತಮ.

| ವಿ.ಜಿ.ಇನಾಮದಾರ, ಸಾರವಾಡ (ವಿಜಯಪುರ ಜಿಲ್ಲೆ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net