ವಿಜಯವಾಣಿ ಜನಮತ: ರೈಲುಮಾರ್ಗ ನಿರ್ವಿುಸಿ

railway_track
Published on

ಉತ್ತರ ಕರ್ನಾಟಕದ ನಾಲ್ಕು ದಶಕಗಳ ಕನಸಾದ ಆಲಮಟ್ಟಿ- ಕೂಡಲಸಂಗಮ- ಹುನಗುಂದ- ಕುಷ್ಟಗಿ- ಹುಲಗಿ, ಬಾಗಲಕೋಟ- ಶಿರೂರ- ಅಮೀನಗಡ- ಹುನಗುಂದ- ಮುದಗಲ್- ರಾಯಚೂರ ಹಾಗೂ ಗದಗ- ಯಲವಿಗಿಗಳ ರೈಲುಮಾರ್ಗ ರಚಿಸುವಂತೆ ಒತ್ತಾಯಿಸಿದರೂ ಕಾರ್ಯರೂಪಕ್ಕೆ ಬಂದಿರಲಿಲ್ಲ. ಹಾಗಾಗಿ, 1) ಆಲಮಟ್ಟಿ-ಕೂಡಲಸಂಗಮ- ಹುನಗುಂದ- ಕುಷ್ಟಗಿ- ಹುಲಗಿ 2) ಬಾಗಲಕೋಟ- ಶಿರೂರು- ಅಮೀನಗಡ- ಹುನಗುಂದ- ಮುದಗಲ್- ರಾಯಚೂರು 3) ಗದಗ- ಲಕ್ಷ್ಮೇಶ್ವರ- ಯಲವಿಗಿ ರೈಲುಮಾರ್ಗ ನಿರ್ವಿುಸಲು 2009ರಲ್ಲಿ ಕೇಂದ್ರ ರೈಲು ಖಾತೆಯ ರಾಜ್ಯಸಚಿವರಾಗಿದ್ದ ಕೆ.ಎಚ್.ಮುನಿಯಪ್ಪ ಹಾಗೂ ಚಾಮರಾಜನಗರದ ಸಂಸದ ಧೃವನಾರಾಯಣರಿಗೆ ಮನವಿ ಸಲ್ಲಿಸಲಾಯಿತು.

ಈ ಬೇಡಿಕೆ ಕುರಿತು ಸಕಾರಾತ್ಮಕ ಚಿಂತನೆ ಮಾಡಿ ಆಗಿನ ರೈಲು ಸಚಿವೆ ಮಮತಾ ಬ್ಯಾನರ್ಜಿಯವರಿಗೆ ರೈಲುಮಾರ್ಗದ ಅವಶ್ಯಕತೆ ಕುರಿತು ತಿಳಿಸಿ 2009ರ ರೈಲು ಮುಂಗಡಪತ್ರದಲ್ಲಿ ಆಲಮಟ್ಟಿ-ಕೂಡಲಸಂಗಮ-ಹುನಗುಂದ-ಹುಲಗಿ ಹಾಗೂ ಗದಗ-ಯಲವಿಗಿ ರೈಲುಮಾರ್ಗ ರಚನೆಗೆ ಅನುಮೋದನೆ ನೀಡಿ ಮಾರ್ಗ ರಚನೆ ಕುರಿತು ಸಮೀಕ್ಷೆಗೆ ಆದೇಶ ಮಾಡಲಾಯಿತು.

ನಂತರ ಬಂದ ಕೇಂದ್ರ ಸರ್ಕಾರ ಗದಗ-ಯಲವಿಗಿ ರೈಲುಮಾರ್ಗ ರಚನೆ ಕುರಿತು -ಠಿ; 640 ಕೋಟಿ ಮಂಜೂರು ಮಾಡಿದೆ. ಆದರೆ, ಸದರಿ ಮಾರ್ಗದೊಂದಿಗೆ ಮುಂಗಡಪತ್ರದಲ್ಲಿ ಅನುಮೋದನೆ ಪಡೆದ ಆಲಮಟ್ಟಿ-ಕೂಡಲಸಂಗಮ-ಹುನಗುಂದ -ಹುಲಗಿ ಮಾರ್ಗ ರಚನೆ ಪ್ರಕ್ರಿಯೆಗೆ ಹಣ ಮಂಜೂರು ಮಾಡಿಲ್ಲ. ಈ ಬಗ್ಗೆ ರೈಲ್ವೆ ರಾಜ್ಯಸಚಿವ ಸುರೇಶ್ ಅಂಗಡಿಯವರಿಗೆ ಮೂರು ಬಾರಿ ಮನವಿ ಸಲ್ಲಿಸಿದರೂ ಈ ಬಾರಿಯ ಮುಂಗಡ ಪತ್ರದಲ್ಲಿ ಹಣ ಮಂಜೂರಾಗಿಲ್ಲ. ಕಾರಣ ವಿಜಯಪುರ, ಬಾಗಲಕೋಟೆ, ಕೊಪ್ಪಳ ಸಂಸದರು, ಶಾಸಕರು, ಇತರೆ ಜನಪ್ರತಿನಿಧಿಗಳು ಆಲಮಟ್ಟಿ-ಹುಲಗಿ ರೈಲುಮಾರ್ಗ ನಿರ್ವಿುಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕು.

| ಬಸವರಾಜ ಹುಡೇದಗಡ್ಡಿ, ವಕೀಲರು, ಬೆಂಗಳೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net