

ಯಾರದ್ದೋ ತಪ್ಪಿಗೆ ಇನ್ನಾರಿಗೋ ಶಿಕ್ಷೆಯಾದರೆ ‘ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದಂತೆ’ ಎಂಬ ಮಾತು ಇದೆ. ಈ ಮಾತು ಜಪಾನ್ನಲ್ಲಿ ಸ್ವಲ್ಪ ಬದಲಾವಣೆ
ಏಕೆಂದರೆ, ಜನರ ಆರೋಗ್ಯ ಕಾಪಾಡುವ ಜವಾಬ್ದಾರಿಯನ್ನು ವಿಮಾ ಕಂಪನಿಗಳಿಗೆ ನೀಡಲಾಗಿದೆ. ಎಲ್ಲರೂ ವಿಮೆ ಮಾಡಿಸುವುದು ಇಲ್ಲಿ ಕಡ್ಡಾಯ. ಆದ್ದರಿಂದ ಜನರ ಆರೋಗ್ಯವನ್ನು ಪ್ರತಿ ತಿಂಗಳೂ ವಿಮಾ ಕಂಪನಿ ನೋಡಿಕೊಳ್ಳಬೇಕು. ಒಂದು ವೇಳೆ 40-74 ವರ್ಷ ವಯಸ್ಸಿನ ಮಹಿಳೆಯರ ಸೊಂಟದ ಸುತ್ತಳತೆ 85 ಸೆಂ.ಮೀ (33.5 ಇಂಚು) ಹಾಗೂ ಪುರುಷರ ಸೊಂಟದ ಅಳತೆ 90 ಸೆಂ.ಮೀಗಿಂತ (35.5 ಇಂಚು) ಹೆಚ್ಚಿಗೆ ಇದ್ದರೆ ವಿಮಾ ಕಂಪನಿಗಳು ದಂಡ ತೆರಬೇಕು!