ಭವಿಷ್ಯದ ಸಿಎಂ ವಿಜಯೇಂದ್ರ ವೀರಶೈವ ಮಹಾಸಭಾ ಪ್ರಸ್ತಾಪ

vijayendra pic
Published on

ಬಳ್ಳಾರಿ: ಮುಂದಿನ ಸಿಎಂ ಅಭ್ಯರ್ಥಿಯನ್ನಾಗಿ ಬಿ.ವೈ.ವಿಜಯೇಂದ್ರ ಹೆಸರನ್ನು ಶಿಫಾರಸು ಮಾಡುವಂತೆ ಈಗಿನಿಂದಲೇ ಬೇಕಾದ ಎಲ್ಲ ಸಿದ್ಧತೆ ಮಾಡಿಕೊಳ್ಳಬೇಕು. ಅಲ್ಲದೆ, ವಿಜಯೆಂದ್ರಗೆ ಸಿಎಂ ಆಗಲು ಎಲ್ಲ ರೀತಿಯ ಅರ್ಹತೆಯಿದೆ ಎಂಬ ಮಾತನ್ನು ವೀರಶೈವ ಅಭಿವೃದ್ಧಿ ನಿಗಮದ ಅಧ್ಯಕ್ಷ ಪರಮಶಿವಯ್ಯ ಹೇಳುವ ಮೂಲಕ ಹೊಸ ಚರ್ಚೆಗೆ ನಾಂದಿ ಹಾಡಿದ್ದಾರೆ.

ಬರೊಬ್ಬರಿ 117 ವರ್ಷಗಳ ನಂತರ ಬಳ್ಳಾರಿಯಲ್ಲಿ ಶನಿವಾರ ಆಯೋಜನೆಯಾಗಿದ್ದ ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ವೀರಶೈವ&ಲಿಂಗಾಯತ ಸಮುದಾಯದ ಒಗ್ಗಟ್ಟು ಪ್ರದರ್ಶನವಾಯಿತು. ಈ ವೇಳೆ ಪರಮಶಿವಯ್ಯ ವಿಷಯ ಪ್ರಸ್ತಾಪಿಸಿದರು. ಸಮುದಾಯ ಯಾವ&ಯಾವ ವಿಷಯಗಳಲ್ಲಿ ಹಿಂದುಳಿದಿದೆ? ಮುನ್ನಲೆಗೆ ಯಾವ ರೀತಿ ಕ್ರಮ ವಹಿಸಬೇಕು? ಎಂಬ ವಿಚಾರದ ಜತೆಗೆ ಎಲ್ಲರೂ ಒಗ್ಗಟ್ಟಾಗಿ ವೀರಶೈವ&ಲಿಂಗಾಯತದ ಶಕ್ತಿಯನ್ನು ಜಗತ್ತಿಗೆ ತೋರಿಸಿಕೊಡಲು ಕಂಕಣಬದ್ಧರಾಗಿರಲು ಮುಖಂಡರು ವೇದಿಕೆಯ ಮೂಲಕವೇ ಸಮುದಾಯದ ಜನರಿಗೆ ಕರೆ ನೀಡಿದರು. ಕೆಲ ರಾಜಕೀಯ ವ್ಯಕ್ತಿಗಳು ಸಮುದಾಯ ಬಳಸಿಕೊಂಡು, ನಂತರ ಕೈ ಬಿಟ್ಟಿರುವ ಕುರಿತು ಚರ್ಚೆ ನಡೆಯಿತು.

ಇದೇ ವೇಳೆ ಕಲಬುರಗಿ ವಿಶ್ವವಿದ್ಯಾಲಯಕ್ಕೆ ಬಸವಣ್ಣನವರ ಹೆಸರು ಇಡಬೇಕೆಂಬ ಆಗ್ರಹವನ್ನು ಕಾರ್ಯಕಾರಿಣಿ ಸಭೆಯಲ್ಲಿ ಸದಸ್ಯರು ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪರಮ ಶಿವಯ್ಯ, ಸಮಾಜದ ಪ್ರತಿಯೊಬ್ಬರು ಒಗ್ಗೂಡಿದಾಗ ಈ ಕಾರ್ಯವಾಗಲಿದೆ. ಜೆ.ಎಚ್​.ಪಟೇಲರ್​ ಕಾಲದಲ್ಲಿ ಸಚಿವ ಸಂಪುಟದಲ್ಲಿ ಇದಕ್ಕೆ ಒಪ್ಪಿಗೆ ಸಿಗಬೇಕಾಗಿತ್ತು. ಆದರೆ, ಅಂದು ಕೆಲವರು ತೀವ್ರ ವಿರೋಧಿಸಿದ್ದರಿಂದ ಕೈ ಬಿಡಲಾಗಿದೆ. ಮುಂದೆ ಎಲ್ಲರೂ ಒಗ್ಗಟ್ಟಾಗಿ ಕಲಬುರಗಿ ವಿವಿಗೆ ಬಸವಣ್ಣನವರ ಹೆಸರು ಇಡುವಂತೆ ಮಾಡುವುದಕ್ಕೆ ಸರ್ಕಾರದ ಮೇಲೆ ಒತ್ತಡ ಹಾಕೋಣ ಎಂದು ಕರೆ ನೀಡಿದರು.

ಕಾರ್ಯಕ್ರಮ ಮೊಟಕು:

ಇದೇ ವೇಳೆ ಲಿಂ.ಹಾನಗಲ್​ ಕುಮಾರೇಶ್ವರ ಮಹಾಶಿವಯೋಗಿಗಳ 154ನೇ ಜಯಂತ್ಯುತ್ಸವ ಆಚರಿಸಲಾಯಿತು. ಜತೆಗೆ ಪುನೀತ್​ ರಾಜಕುಮಾರ್​ ನಿಧನ ಹಿನ್ನೆಲೆ ಕಾರ್ಯಕ್ರಮವನ್ನು ಅರ್ಧಕ್ಕೆ ಮೊಟಕು ಗೊಳಿಸಲು ಅಖಿಲ ಭಾರತ ವೀರಶೈವ ಮಹಾಸಭಾ ಬಳ್ಳಾರಿ ಜಿಲ್ಲಾ ಟಕ ತೀಮಾರ್ನ ಕೈಗೊಂಡಿತು. ಅ.31ರಂದು ನಿಗದಿಯಾಗಿದ್ದ ಬಿಎಸ್​ವೈಗೆ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ಹಾನಗಲ್​ ಕುಮಾರೇಶ್ವರರ ಭಾವಚಿತ್ರದ ಮೆರವಣಿಗೆ ರದ್ದುಪಡಿಸಲಾಗಿದೆ ಎಂದು ಸಂಟಕರು ವೇದಿಕೆ ಮೇಲೆ ಘೋಷಿಸಿದರು. ಅಭಾವಿಪ ರಾಷ್ಟ್ರೀಯ ಹಿರಿಯ ಉಪಾಧ್ಯಕ್ಷ ಎನ್​.ತಿಪ್ಪಣ್ಣ, ಅಖಿಲ ಭಾರತ ವೀರಶೈವ ಮಹಾಸಭಾ ಮಹಿಳಾ ಅಧ್ಯೆ ಎಸ್​.ವೈ.ಅರುಣಾ, ರಾಷ್ಟ್ರೀಯ ಕಾರ್ಯದರ್ಶಿ ರೇಣುಕಾ ಪ್ರಸನ್ನ, ವಿಪ ಸದಸ್ಯ ಅಲ್ಲಂ ವೀರಭದ್ರಪ್ಪ, ಶ್ರೀ ಕಲ್ಯಾಣ ಸ್ವಾಮಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net