ಇನ್ನೊಂದಷ್ಟು ಜ್ಞಾನ, ಮತ್ತೊಂದಷ್ಟು ವಿವೇಕ...

USIEF
Published on

ಈ ಹಿಂದೆ ಯುನೈಟೆಡ್ ಸ್ಟೇಟ್ಸ್ ಎಜುಕೇಶನಲ್ ಫೌಂಡೇಶನ್ ಇನ್ ಇಂಡಿಯಾ ಎಂದಿದ್ದು ಯುಎಸ್​ಐಇಎಫ್ ಎಂದಾಯಿತು. ಬದಲಾದದ್ದು ಹೆಸರು ಮಾತ್ರವಲ್ಲ, ಈ ಕಾರ್ಯಕ್ರಮದಲ್ಲಿ ಭಾರತ ನಿಜ ಅರ್ಥದಲ್ಲಿ ಸಮಾನ ಸಹಭಾಗಿಯಾಯಿತು. ವಿಶ್ವದ ಅತಿದೊಡ್ಡ ಫುಲ್​ಬ್ರೖೆಟ್ ಕಾರ್ಯಕ್ರಮ ನಿರ್ವಹಿಸುತ್ತಿರುವ ದೇಶ ಎಂಬ ಹೆಗ್ಗಳಿಕೆ ಭಾರತದ್ದು.

‘ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮಗಳು ವಿದೇಶಾಂಗ ವ್ಯವಹಾರಗಳ ಒಂದು ಪುಟ್ಟ ಭಾಗವಾಗಿದೆ. ಆದರೆ ವಿಶ್ವಶಾಂತಿ ಮತ್ತು ಅದರ ಸ್ಥಿತಿಯ ದೃಷ್ಟಿಕೋನದಿಂದ ನೋಡಿದಾಗ ಇದು ವಿದೇಶಾಂಗ ನೀತಿಯ ಚಟುವಟಿಕೆಗಳಲ್ಲಿ ಅತ್ಯಂತ ಮುಖ್ಯ ಮತ್ತು ಅತ್ಯುತ್ತಮ ಫಲ ಕೊಡುವ ಕಾರ್ಯಕ್ರಮಗಳಲ್ಲಿ ಒಂದಾಗಿದೆ’ ಎಂದು ಅಮೆರಿಕದ ಮಾಜಿ ಸೆನೆಟರ್ ಜೆ. ವಿಲಿಯಂ ಫುಲ್​ಬ್ರೖೆಟ್ ಅವರು ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮಗಳ ಮಹತ್ವದ ಬಗ್ಗೆ ತಮ್ಮ ‘ದ ಪ್ರೖೆಸ್ ಆಫ್ ಎಂಪೈರ್’ ಕೃತಿಯಲ್ಲಿ ಬರೆದಿದ್ದಾರೆ.

ಅವರ ಈ ಮಾತುಗಳು ಹಿಂದೆಂದಿಗಿಂತ ಹೆಚ್ಚು ಮಹತ್ವ ಪಡೆದಿವೆ. ಎಲ್ಲ ದೇಶಗಳು ಜತೆಯಾಗುವುದು, ನಮಗೆ ತಿಳಿದಿರುವ ವಿಷಯಗಳ ಬಗ್ಗೆ ಸಂವಹನ, ನಮಗೆ ಆಪ್ತವಾದದ್ದು ಯಾವುದು, ಎಲ್ಲಕ್ಕಿಂತ ಮುಖ್ಯವಾಗಿ ಬೇರೆಯವರ ಮಾತಿಗೆ ಕಿವಿಗೊಡುವುದು ಹಾಗೂ ಪರಸ್ಪರ ಅರ್ಥಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ಅವರ ಬಗ್ಗೆ ತಿಳಿದುಕೊಳ್ಳುವ ಅವಶ್ಯಕತೆಯನ್ನು ಈ ವಾಕ್ಯಗಳು ಎತ್ತಿ ತೋರಿಸುತ್ತವೆ.

1950ರ ಫೆಬ್ರವರಿಯಲ್ಲಿ ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ಮತ್ತು ಅಂದಿನ ಭಾರತದಲ್ಲಿನ ಅಮೆರಿಕದ ರಾಯಭಾರಿ ಲಾಯ್ ಡಬ್ಲು್ಯ ಹೆಂಡರ್ಸನ್ ಅವರು ಫುಲ್​ಬ್ರೖೆಟ್ ಕಾರ್ಯಕ್ರಮ ಆರಂಭಿಸುವ ಒಪ್ಪಂದಕ್ಕೆ ಸಹಿ ಹಾಕಿದರು. ಇದೀಗ ಆ ಕಾರ್ಯಕ್ರಮಕ್ಕೆ 70 ವರ್ಷ. ಈ ಏಳು ದಶಕಗಳಲ್ಲಿ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ವಲಯದಲ್ಲಿ ಅಧ್ಯಯನ ನಡೆಸುತ್ತಿರುವ ಸುಮಾರು 20,000 ಕ್ಕೂ ಹೆಚ್ಚು ಭಾರತೀಯರು ಮತ್ತು ಅಮೆರಿಕನ್ನರು ಈ ಕಾರ್ಯಕ್ರಮದ ಲಾಭ ಪಡೆದಿದ್ದಾರೆ.

ಈ ಕಾರ್ಯಕ್ರಮದ ಆರಂಭದ ದಿನಗಳಿಂದಲೂ ಅಮೆರಿಕ-ಭಾರತ ಶೈಕ್ಷಣಿಕ ಪ್ರತಿಷ್ಠಾನ (ಯುನೈಟೆಡ್ ಸ್ಟೇಟ್ಸ್- ಇಂಡಿಯಾ ಎಜುಕೇಶನಲ್ ಫೌಂಡೇಶನ್ -ಯುಎಸ್​ಐಇಎಫ್) ಇದರ ನಿರ್ವಹಣೆಯ ಹೊಣೆ ಹೊತ್ತಿದೆ. ಈ ಕಾರ್ಯಕ್ರಮ ಅಗಾಧ ಪ್ರಗತಿ ಕಂಡಿದೆ. ಈ ಹಿಂದೆ ಯುನೈಟೆಡ್ ಸ್ಟೇಟ್ಸ್ ಎಜುಕೇಶನಲ್ ಫೌಂಡೇಶನ್ ಇನ್ ಇಂಡಿಯಾ ಎಂದಿದ್ದು ಯುಎಸ್​ಐಇಎಫ್ ಎಂದಾಯಿತು. ಬದಲಾದದ್ದು ಹೆಸರು ಮಾತ್ರವಲ್ಲ, ಈ ಕಾರ್ಯಕ್ರಮದಲ್ಲಿ ಭಾರತವೂ ಹಣ ತೊಡಗಿಸುವಿಕೆ ಮತ್ತು ಆಡಳಿತಾತ್ಮಕವಾಗಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ ನಿಜ ಅರ್ಥದಲ್ಲಿ ಸಮಾನ ಸಹಭಾಗಿಯಾಯಿತು. ಇದರಡಿಯಲ್ಲಿ ಈ ಕಾರ್ಯಕ್ರಮದ ಗಾತ್ರ ಮೂರುಪಟ್ಟು ಹೆಚ್ಚಿತು, ಅನೇಕ ಹೊಸ ಕಾರ್ಯಕ್ರಮಗಳನ್ನು ರೂಪಿಸಲಾಯಿತು.

ವಿಶ್ವದ ಅತಿದೊಡ್ಡ ಫುಲ್​ಬ್ರೖೆಟ್ ಕಾರ್ಯಕ್ರಮ ನಿರ್ವಹಿಸುತ್ತಿರುವ ದೇಶ ಎಂಬ ಹೆಗ್ಗಳಿಕೆ ಭಾರತದ್ದು, ಅಷ್ಟೇಅಲ್ಲ ವಿಶ್ವದಲ್ಲೇ ಅತ್ಯಂತ ಹೆಚ್ಚು ಸಂಶೋಧನಾ ವಿದ್ಯಾರ್ಥಿಗಳ ವಿನಿಮಯ ಕಾರ್ಯಕ್ರಮವೂ ಇಲ್ಲಿಯದೇ.

ಇದೀಗ ಯುಎಸ್​ಐಇಎಫ್ ಕಚೇರಿಗಳು ನವದೆಹಲಿ, ಮುಂಬೈ, ಕೊಲ್ಕತಾ, ಹೈದರಾಬಾದ್ ಮತ್ತು ಚೆನ್ನೈನಲ್ಲಿ ಕಾರ್ಯನಿರ್ವಹಿಸುತ್ತಿವೆ. ಇವುಗಳ ಮೂಲಕ ಭಾರತೀಯ ವಿದೇಶಾಂಗ ಸಚಿವಾಲಯ ಮತ್ತು ಅಮೆರಿಕದ ರಾಯಭಾರ ಕಚೇರಿಯ ಜತೆಗೂಡಿ ಫುಲ್​ಬ್ರೖೆಟ್ ವಿನಿಮಯ ಕಾರ್ಯಕ್ರಮಗಳನ್ನು ಸಂಯೋಜಿಸಲಾಗುತ್ತದೆ.

ಹಲವಾರು ಕಾರ್ಯಕ್ರಮಗಳು ದೈನಂದಿನ ಜಂಜಡಗಳ ನಡುವೆ ಕಳೆದು ಹೋಗುವುದು ಸಹಜವೇ. ಒಂದರೆಗಳಿಗೆ ನಿಂತು ಕೃತಜ್ಞತೆ ಸಲ್ಲಿಸಿ, ಆತ್ಮಾವಲೋಕನ ಮಾಡಿಕೊಂಡು, ಹೊಸ ಉತ್ಸಾಹದಿಂದ ಮುಂದುವರಿಯಲು ಇಂತಹ ವಾರ್ಷಿಕೋತ್ಸವಗಳು ನೆರವಾಗುತ್ತವೆ.

ಎಪ್ಪತ್ತನೇ ವಾರ್ಷಿಕೋತ್ಸವದ ಈ ಹೊತ್ತಿನಲ್ಲಿ ಅನೇಕ ಹಳೆಯ ಘಟನೆಗಳು ನೆನಪಿಗೆ ಬರುತ್ತಿವೆ. ಅಂದು ಫುಲ್ ಬ್ರೖೆಟ್ ಕಾರ್ಯಕ್ರಮವೆಂದರೆ ಸುದೀರ್ಘ ಸಮುದ್ರಯಾನ ಮತ್ತು ತಮ್ಮ ಕಂಫರ್ಟ್ ಝೆೊನ್​ನಿಂದ ಗಾವುದಗಟ್ಟಳೆ ದೂರ ಹಾರುವುದಾಗಿತ್ತು. ಕಾಲ ಹೇಗೆ ಬದಲಾಗಿದೆ ಎಂಬುದರ ಹೆಜ್ಜೆಗುರುತುಗಳು ಅಂದಿನ ತಜ್ಞರ ಕೈಪಿಡಿಗಳಲ್ಲಿ ಕಾಣಸಿಗುತ್ತವೆ. ದೇಶದಲ್ಲಿನ ಬದುಕಿಗೆ ಹೊಂದಿಕೊಳ್ಳಲು ಅಗತ್ಯವಿರುವ ಮಾಹಿತಿಗಳು ಈ ಕೈಪಿಡಿಯಲ್ಲಿ ಭರಪೂರ ತುಂಬಿರುತ್ತಿದ್ದವು. ಅದರಲ್ಲಿ ಒಂದೆರಡು ಉದಾಹರಣೆಗಳನ್ನು ಹೆಕ್ಕಿತೆಗೆದು ಹೇಳುವುದಾದರೆ, ಶೈಕ್ಷಣಿಕ ಪ್ರಗತಿ, ವಿದೇಶಿ ನೆಲದಲ್ಲಿನ ಅನುಭವಗಳನ್ನು ದಾಖಲಿಸಲು ಅನುಕೂಲವಾಗುವಂತೆ ನಿಮ್ಮದೇ ಟೈಪ್​ರೈಟರ್​ಗಳನ್ನು ತರುವಂತೆ ಸಲಹೆ ನೀಡುತ್ತಿದ್ದೆವು.

ಆಧುನಿಕ ತಂತ್ರಜ್ಞಾನ ಎಲ್ಲವನ್ನೂ ಬದಲಿಸಿಬಿಟ್ಟಿದೆ. ನಾವು ಪ್ರಯಾಣಿಸುವ ಬಗೆ ಮತ್ತು ಸಂಪರ್ಕ ಸಾಧಿಸುವ ರೀತಿಗಳಿಗೆ ಆಧುನಿಕತೆಯ ಸ್ಪರ್ಶ ದೊರೆತಿದೆ. ಸಾಹಸ ಪ್ರವೃತ್ತಿ, ಸೌಹಾರ್ದ, ಹೊಸತನ ಕಲಿಯುವ ಮತ್ತು ಜ್ಞಾನವನ್ನು ಹಂಚಿಕೊಳ್ಳುವ ತುಡಿತಗಳು ಈ ಪ್ರತಿಷ್ಠಿತ ಕಾರ್ಯಕ್ರಮದಲ್ಲಿ ಬಾಗವಹಿಸಿದ ಅಮೆರಿಕ ಮತ್ತು ಭಾರತೀಯ ತಜ್ಞರಿಗೆ ಪ್ರೇರಣೆಯಾಗಿವೆ.

ಯುಎಸ್​ಐಇಎಫ್​ನ ಕಾರ್ಯನಿರ್ವಾಹಕ ನಿರ್ದೇಶಕ ಆಡಂ ಗ್ರಾಟ್ಸಿ್ಕ, ಅಮೆರಿಕದ ವಿದೇಶಾಂಗ ಸಹಾಯಕ ಕಾರ್ಯದರ್ಶಿ ಮೇರಿ ರಾಯ್್ಸ ಭಾರತದ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ, ಭಾರತದಲ್ಲಿನ ಅಮೆರಿಕದ ರಾಯಭಾರಿ ಕೆನೆತ್ ಐ ಜೆಸ್ಟರ್, ಫುಲ್​ಬ್ರೖೆಟ್ ವಿದೇಶಿ ವಿದ್ಯಾರ್ಥಿ ವೇತನ ಮಂಡಳಿಯ ಸದಸ್ಯ ಮನೀಶ್ ಗೋಯಲ್.
ಯುಎಸ್​ಐಇಎಫ್​ನ ಕಾರ್ಯನಿರ್ವಾಹಕ ನಿರ್ದೇಶಕ ಆಡಂ ಗ್ರಾಟ್ಸಿ್ಕ, ಅಮೆರಿಕದ ವಿದೇಶಾಂಗ ಸಹಾಯಕ ಕಾರ್ಯದರ್ಶಿ ಮೇರಿ ರಾಯ್್ಸ ಭಾರತದ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ, ಭಾರತದಲ್ಲಿನ ಅಮೆರಿಕದ ರಾಯಭಾರಿ ಕೆನೆತ್ ಐ ಜೆಸ್ಟರ್, ಫುಲ್​ಬ್ರೖೆಟ್ ವಿದೇಶಿ ವಿದ್ಯಾರ್ಥಿ ವೇತನ ಮಂಡಳಿಯ ಸದಸ್ಯ ಮನೀಶ್ ಗೋಯಲ್.

ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ ಯುಎಸ್​ಐಇಎಫ್ ಸಿಬ್ಬಂದಿಗೆ ಆಭಾರಿ. ಫುಲ್​ಬ್ರೖೆಟ್ ಕಾರ್ಯಕ್ರಮದಲ್ಲಿ ಭಾಗವಹಿಸಿದವರ ಬೆಂಬಲ, ಪೋ›ತ್ಸಾಹಗಳು ನಮ್ಮ ಬಲ. ತಮ್ಮ ಕಲಿಕೆಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುವ ಅವರ ಉತ್ಸಾಹ, ಉತ್ಸುಕತೆಗಳು, ನಮ್ಮ ಕಾರ್ಯಕ್ರಮದ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡುತ್ತವೆ. ಪ್ರತಿವರ್ಷವೂ ಭಾರತ ಹಾಗೂ ಅಮೆರಿಕಗಳ ನಡುವೆ ವಿನಿಮಯಗೊಳ್ಳುವ ವಿದ್ಯಾರ್ಥಿಗಳು ಮತ್ತು ಶೈಕ್ಷಣಿಕ ತಜ್ಞರ ಪ್ರತಿಭೆ ಮತ್ತು ಮಾನವತ್ವಗಳು ನನ್ನನ್ನು ಮೂಕವಿಸ್ಮಿತನನ್ನಾಗಿಸುತ್ತವೆ. ಈ ಎರಡೂ ಗುಂಪುಗಳು ತಮ್ಮ ಕಾರ್ಯವ್ಯಾಪ್ತಿಗಷ್ಟೇ ಸೀಮಿತಗೊಳ್ಳದೆ, ಜ್ಞಾನ, ಅನುಭವಗಳ ಸಾರವನ್ನು ಧಾರೆ ಎರೆಯುತ್ತಾ ತಮ್ಮ ವಾಸದ ಅವಧಿಯನ್ನು ಮತ್ತಷ್ಟು ಅರ್ಥಪೂರ್ಣವಾಗಿಸುತ್ತಾರೆ. ಈ ಅವಧಿಯಲ್ಲಿ ಅವರು ಭೇಟಿಯಾಗುವ ವ್ಯಕ್ತಿಗಳು, ಪಡೆಯುವ ಅನುಭವಗಳು ಅವರನ್ನು ಇನ್ನಷ್ಟು ಮಾಗುವಂತೆ ಮಾಡುತ್ತದೆ.

ಭಾರತದಲ್ಲಿನ ಫುಲ್​ಬ್ರೖೆಟ್ ಕಾರ್ಯಕ್ರಮಕ್ಕೆ 70ರ ಸಂಭ್ರಮ. ಈ ಹೊತ್ತಿನಲ್ಲಿ ಸೆನೆಟರ್ ಫುಲ್​ಬ್ರೖೆಟ್ ಅವರ ಧ್ಯೇಯೋದ್ದೇಶಗಳನ್ನು ಈಡೇರಿಸುವ ನಮ್ಮ ಬದ್ಧತೆಯನ್ನು ನವೀಕರಿಸುವ ಅಗತ್ಯವಿದೆ. ಇನ್ನೊಂದು ಸ್ವಲ್ಪ ಜ್ಞಾನ, ಇನ್ನೊಂದಷ್ಟು ವಿವೇಕ, ಹಾಗು ಜಗತ್ತಿನ ಆಗುಹೋಗುಗಳ ಬಗ್ಗೆ ಒಂದು ಹಿಡಿ ಹೆಚ್ಚು ಕಕ್ಕುಲತೆ- ಈ ಮೂಲಕ ದೇಶಗಳು ಶಾಂತಿ ಮತ್ತು ಸ್ನೇಹದಿಂದ ಬಾಳುವುದನ್ನು ಕಲಿಯಲು ಅತ್ಯುತ್ತಮ ಅವಕಾಶವನ್ನು ಒದಗಿಸಿ ಕೊಡುತ್ತವೆ.

ಯುಎಸ್​ಐಇಎಫ್ 2021-22 ನೇ ಸಾಲಿಗೆ ಭಾರತೀಯ ಪೌರರಿಂದ ಅರ್ಜಿ ಸ್ವೀಕರಿಸುತ್ತಿದೆ. ವಿದ್ಯಾರ್ಥಿಗಳು, ತಜ್ಞರು, ಶಿಕ್ಷಕರು, ನೀತಿ ನಿರೂಪಕರು, ಆಡಳಿತಜ್ಞರು, ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್, ಗಣಿತ, ಸಾಮಾಜಿಕ ವಿಜ್ಞಾನ, ಕಲಾ ವಿಭಾಗಗಳಲ್ಲಿ ಅಧ್ಯಯನ ನಡೆಸುತ್ತಿರುವ ವೃತ್ತಿಪರರಿಗೆ ಈ ಫೆಲೋಶಿಪ್​ಗಳನ್ನು ನೀಡಲಾಗುತ್ತದೆ. ಅಮೆರಿಕಕ್ಕೆ ಖುದ್ದು ಭೇಟಿ ನೀಡಿ ಅನುಭವಿಸುವ ಅವಕಾಶ ಹಾಗು ಅಲ್ಲಿ ನಿಮ್ಮ ದೇಶದ ಸಾಂಸ್ಕೃತಿಕ ರಾಯಭಾರಿಯಾಗಬಲ್ಲ ಅಭ್ಯರ್ಥಿ ನಿಮ್ಮಲ್ಲೊಬ್ಬರು ಆಗಿರಬಾರದೇಕೆ? ಹೆಚ್ಚಿನ ವಿವರಗಳಿಗೆ www.usief.org.in ಭೇಟಿಕೊಡಿ ಅಥವಾ ನವದೆಹಲಿ, ಚೆನ್ನೈ, ಹೈದರಾಬಾದ್, ಕೊಲ್ಕತಾ ಅಥವಾ ಮುಂಬೈನಲ್ಲಿರುವ ಯುಎಸ್​ಐಇಎಫ್ ಕಚೇರಿಗಳಿಗೆ ಭೇಟಿಕೊಡಿ.

(ಲೇಖಕರು ಅಮೆರಿಕ-ಭಾರತ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯನಿರ್ವಾಹಕ ನಿರ್ದೇಶಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net