

ತೆಳ್ಳಗೆ ಬಳುಕುವಂತಿರಬೇಕು ಎನ್ನುವುದು ಬಹುತೇಕರ ಕನಸು. ಅದಕ್ಕಾಗಿ ಜಿಮ್ಗೆ ಹೋಗಿ ಕಸರತ್ತು ಮಾಡುವುದೂ ಇದೆ. ಆದರೆ ಮನೆಯಲ್ಲೇ ಸಿಗುವ ಕೆಲವೊಂದು ಪದಾರ್ಥಗಳನ್ನು ಬಳಸಿ ತೆಳ್ಳಗಾಗಬಹುದು. ಆಯುರ್ವೆದದಲ್ಲಿ ಮೆಂತ್ಯ ಕಾಳಿಗೆ ಮಹತ್ವವಿದೆ. ಹಲವು ಕಾಯಿಲೆ ಗುಣಪಡಿಸಲು ಮೆಂತ್ಯ ಕಾಳಿನ ಪುಡಿ ನೀಡುತ್ತಾರೆ. ಅದರಂತೆಯೇ ತೂಕ ಇಳಿಸಲು ಇದನ್ನು ಬಳಸಬಹುದು. ಖರ್ಚು ಕಡಿಮೆ. ಆರೋಗ್ಯಕ್ಕೂ ಯಾವುದೇ ಹಾನಿ ಇಲ್ಲ. ಮೆಂತ್ಯ ಕಾಳಿನಲ್ಲಿ ಅಧಿಕ ನಾರಿನಾಂಶವಿದೆ.
ಮೆಂತ್ಯ ಕಾಳನ್ನು ಪ್ರತಿನಿತ್ಯ ಎದ್ದ ತಕ್ಷಣ ಒಂದು ಲೋಟ ನೀರಿನೊಂದಿಗೆ ಸೇವಿಸಿದರೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಇದ್ದರೆ ಕಡಿಮೆಯಾಗುತ್ತದೆ. ಹತ್ತರಿಂದ ಹದಿನೈದು ಕಾಳುಗಳನ್ನು ಜಗಿದರೆ ಆಗಾಗ ಹೊಟ್ಟೆ ಹಸಿವಾಗುವುದನ್ನು ನಿಯಂತ್ರಣದಲ್ಲಿಡಬಹುದು. ಇದರಲ್ಲಿರುವ ನಾರಿನಂಶ ಕೊಬ್ಬು ಕರಗಿಸಲು ಸಹಕಾರಿ. ಈ ಕಾಳನ್ನು ಹಾಗೆಯೇ ಸೇವಿಸಲು ಕಷ್ಟ ಎನ್ನುವವರು ಪದಾರ್ಥ ಮಾಡಿ ತಿನ್ನಬಹುದು. ದೈನಂದಿನ ಆಹಾರ ಕ್ರಮದಲ್ಲಿ ಇವುಗಳ ಬಳಕೆ ಹೆಚ್ಚಿದ್ದರೆ ಉತ್ತಮ.
ಕಾಳುಗಳಷ್ಟೇ ಅಲ್ಲದೆ ಮೆಂತ್ಯ ಸೊಪ್ಪು ಸಹ ಆರೋಗ್ಯಕ್ಕೆ ಉತ್ತಮ. ಪ್ರತಿನಿತ್ಯ ಖಾಲಿ ಹೊಟ್ಟೆಯಲ್ಲಿ ಮೆಂತ್ಯ ಕಾಳು ಸೇವಿಸುವುದರಿಂದ ತೂಕ ಇಳಿಸ ಬಹುದು. ಆಗಾಗ ಅತಿಸಾರ, ಬೇಧಿ ಕಾಣಿಸಿಕೊಳ್ಳುತ್ತಿದ್ದರೆ ಮೆಂತ್ಯ ಕಾಳನ್ನು ನಿಯಮಿತವಾಗಿ ಬಳಸಬಹುದು. ಇದರಿಂದ ಕ್ರಮೇಣ ಅತಿಸಾರ ನಿಯಂತ್ರಣಕ್ಕೆ ಬರುತ್ತದೆ.
ಸಲಹೆ, ಅಭಿಪ್ರಾಯ ಮತ್ತು ಬರಹಗಳಿಗೆ: lalithavijayavani@gmail.com