

ಯಾವ ಗಂಡಿಗೆ ಯಾವ ಹೆಣ್ಣು ಎಂದು ದೇವರು ಮೊದಲೇ ನಿರ್ಧಾರ ಮಾಡಿ ಕಳಿಸಿರುತ್ತಾನೆ ಎನ್ನುತ್ತೇವೆ ನಾವು. ಆದರೆ ಮಧ್ಯ ಅಮೆರಿಕದಲ್ಲಿನ ಕೆಂಟುಕಿಯಲ್ಲಿ ದೇವರು ಸ್ವಲ್ಪ ವಿಭಿನ್ನ ನಿಲುವು ತೋರಿದ್ದಾನೆ. ಅದೇನೆಂದರೆ ಗಂಡನಿಗೆ ಹೆಂಡತಿಯ ಮೇಲೆ ಪ್ರೀತಿ ಜಾಸ್ತಿಯಾದರೆ ಆಕೆಯನ್ನು (ಆಕೆಯನ್ನಷ್ಟೇ!) ಎರಡೆರಡು ಬಾರಿ ಮದುವೆಯಾಗಬಹುದಂತೆ.
ಇನ್ನೂ ಪ್ರೀತಿ ಜಾಸ್ತಿಯಾಯಿತೆಂದು ಆಕೆಯನ್ನು ಮೂರನೇ ಬಾರಿ ಮದುವೆಯಾಗುತ್ತೇನೆ ಎಂದರೆ ಅದಕ್ಕೆ ಅಲ್ಲಿಯ ಕಾನೂನು ಒಪ್ಪುವುದಿಲ್ಲ. ಅಂದರೆ, ಒಬ್ಬಳನ್ನೇ ಮೂರು ಬಾರಿ ಮದುವೆಯಾಗಬಾರದು ಎನ್ನುತ್ತದೆ ಕೆಂಟುಕಿಯ ಕಾನೂನು.
ಕಟ್ಟಿಕೊಂಡವಳನ್ನೇ ಎರಡು ಬಾರಿ ಮದುವೆಯಾಗುವ ಸಂಪ್ರದಾಯ ಸದ್ಯ ನಮ್ಮಲ್ಲಿ ಇಲ್ಲ ಎಂದು ಭಾರತೀಯ ಪುರುಷರು ನೆಮ್ಮದಿಯ ಉಸಿರುಬಿಟ್ಟಾರು!