

| ಅಕ್ಷರ.ಎಸ್.ಶೆಟ್ಟಿ 2ನೇ ತರಗತಿ, ಸ.ಕಿ.ಪ್ರಾ.ಶಾಲೆ, ಸಣ್ಣಕೆರೆ, ಚಿಕ್ಕಮಗಳೂರು ಜಿಲ್ಲೆ
| ಕಾವ್ಯಾ ಕೆ. 5ನೇ ತರಗತಿ, ಸ.ಕಿ.ಪ್ರಾ ಶಾಲೆ, ದಾವಣಗೆರೆ
| ಸಂಜನಾ ಕೆಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಟಿ ಬಸಾಪುರ ಚೌಡಾಪುರ ಕ್ಲಸ್ಟರ್, ಕೂಡ್ಲಿಗಿ
| ವಿನಯ್. ಸಿ 10ನೇ ತರಗತಿ, ವಿದ್ಯಾ ವಿಕಾಸ ವಿದ್ಯಾ ಸಂಸ್ಥೆ, ಚಿತ್ರದುರ್ಗ
ಬೆಳಗ್ಗೆ 8.00 ಗಂಟೆಗೆ ಊಟದ ಬ್ಯಾಗಿಗೆ ಸ್ನಾಕ್ಸ್, ಫೂ›ಟ್ ಜತೆಗೆ ಮಧ್ಯಾಹ್ನದ ಊಟವನ್ನು ಅಮ್ಮ ಡಬ್ಬಿಗೆ ಹಾಕಿ ಇಟ್ಟಿದ್ದರು. ಅಪ್ಪ ಶಾಲೆ ಬಳಿ ಬಿಟ್ಟಾಗ ನಾವು ಹೊರಡುವ ಬಸ್ ಆಗಲೇ ರೆಡಿಯಾಗಿ ನಿಂತಿತ್ತು. ನಮ್ಮ ಶಾಲೆಯ ಮುಖ್ಯ ಶಿಕ್ಷಕರಾದ ಶೈಲಜಾ ತುಳಸಿ ಮೇಡಂ ಎಲ್ಲರನ್ನು ಬಸ್ಸಿಗೆ ಹತ್ತಿಸಿ ಬೀಳ್ಕೊಟ್ಟರು. ಬಸ್ ಬೆಂಗಳೂರಿನ ವಿವಿಧ ರಸ್ತೆಗಳಲ್ಲಿ ಚಲಿಸುತ್ತಿತ್ತು. ಕಿಟಕಿ ಪಕ್ಕದಲ್ಲಿ ಕುಳಿತಿದ್ದ ನನಗೆ ರೋಡ್ನ ಅಕ್ಕಪಕ್ಕದಲ್ಲಿ ನೋಡುತ್ತಾ ನೋಡುತ್ತಾ ಸ್ಥಳ ಬಂದಿದ್ದೆ ಗೊತ್ತಾಗಲಿಲ್ಲ. ಕೆಳಗೆ ಇಳಿದಾಗ ನಮ್ಮ ಗಣಿತ ಶಿಕ್ಷಕರಾದ ಅಶ್ವಿನಿ ಮೇಡಂ ಎಲ್ಲರನ್ನೂ ಸಾಲಾಗಿ ನಿಲ್ಲಿಸಿದರು. ‘ಎಲ್ಲರೂ ಸಾಲಾಗಿ ಹೋಗಬೇಕು, ನಿಶ್ಯಬ್ದವಾಗಿರಬೇಕು.. ವಸ್ತುಗಳನ್ನು ಮುಟ್ಟಬಾರದು’ ಎಂದೆಲ್ಲಾ ತಿಳಿಸಿದರು. ಹೋಗುವ ಮೊದಲು ಎಲ್ಲರೂ ಮರದಡಿಯಲ್ಲಿ ಕುಳಿತು ತಂದಿದ್ದ ತಿಂಡಿ ತಿಂದೆವು. ನಮ್ಮ ಕೂಗಾಟದ ಮಧ್ಯೆ ಅಕ್ಕಪಕ್ಕದ ಮರಗಳಲ್ಲಿದ್ದ ಹಕ್ಕಿಗಳು ದನಿಗೂಡಿಸುತಿದ್ದವು..
ಒಳಗೆ ಹೋಗುತ್ತಾ ಅಲ್ಲಿಯೇ ಇದ್ದ ಫಿರಂಗಿ, ಕಲ್ಲಿನ ಆಕೃತಿ ನೋಡುತ್ತಾ ನಮ್ಮ ಟೀಚರ್ ಅಲ್ಲಿರುವ ಮಾಹಿತಿ ಓದಿ ತಿಳಿಸುತ್ತಾ ಒಳಗೆ ಕರೆದುಕೊಂಡು ಹೋದರು. ಸಂಗ್ರಹಾಲಯದಲ್ಲಿ ಒಂದು ಸುತ್ತು ಹಾಕಿದರೆ ದೇಶದ ವಿವಿಧ ರಾಜರು, ಸೈನಿಕರು ಬಳಸುತಿದ್ದ ಕತ್ತಿ, ಈಟಿ, ಬರ್ಚಿ, ಕೊಡಲಿ, ವಿವಿಧ ರೀತಿಯ ಕಠಾರಿ, ಸೇರಿದಂತೆ ರಾಜರು, ಸೈನಿಕರು ಧರಿಸುತಿದ್ದ ಬಟ್ಟೆಗಳು, ತಲೆಯ ರಕ್ಷಣೆಗೆ ತೊಡುತಿದ್ದ ರಕ್ಷಾ ಕವಚಗಳು, ಸಂಗೀತಾ ವಾದ್ಯಗಳು, ತಮಟೆಗಳು, ವೀಣೆ, ತಂಬೂರಿ, ತಬಲಾ, ಮೃದಂಗ, ಓಲಗ ಸೇರಿದಂತೆ ವಿವಿಧ ರೂಪಕಗಳು ನನ್ನನ್ನು ಆಕರ್ಷಿಸಿತು. ಶಾಸನಗಳು, ವಿವಿಧ ದೇವರ ಕಲ್ಲಿನ ಕಲಾಕೃತಿಗಳು, ವಿಗ್ರಹಗಳು, ಚಿತ್ರಪಟಗಳು, ಕಲಾಕೃತಿಗಳು ಸೇರಿದಂತೆ ನೂರಾರು ಚಿತ್ರಕಲೆಗಳನ್ನು ನೋಡಿ ಸಂತೋಷವಾಯಿತು. ಅಲ್ಲಿಂದ ನೋಡಿಕೊಂಡು ಹೊರಗೆ ಬಂದ ಮೇಲೆ ನಾನು ನೋಡುತ್ತಿದ್ದ ಮಹಾಭಾರತ ಧಾರಾವಾಹಿ ನೆನಪಾಯಿತು. ಅದರಲ್ಲೂ ಹೀಗೆ ಕತ್ತಿ ಈಟಿಗಳನ್ನು ಬಳಸುತಿದ್ದದ್ದು ನೆನಪಾಯಿತು. ಹೊರಗೆ ಬಂದು ಕ್ಯಾಂಟೀನ್ ಜಾಗದಲ್ಲಿ ಎಲ್ಲರೂ ಕುಳಿತು ಒಟ್ಟಿಗೆ ಊಟ ಮಾಡಿದೆವು.
ಬಸ್ಸಿನಲ್ಲಿ ವಾಪಸ್ ಬರುವಾಗ ನಾವು ನೋಡಿದ್ದ ವಸ್ತುಗಳನ್ನು ಟೀಚರ್ಗೆ ತಿಳಿಸಲು ಮುಗಿಬಿದ್ದೆವು. ಮತ್ತೆ ಶಾಲೆಗೆ ಬಂದಾಗ ಸಂಜೆ ನಾಲ್ಕು ಗಂಟೆ ಆಗಿತ್ತು. ಬಸ್ ಇಳಿದ ತಕ್ಷಣ ಅಪ್ಪ ಕಾಯುತ್ತಾ ನಿಂತಿದ್ದರು. ಅವರಿಗೆ ಅಲ್ಲಿ ನೋಡಿದ ಎಲ್ಲಾ ವಿಷಯಗಳನ್ನು ತಿಳಿಸಿದೆ. ‘ಅಲ್ಲಿ ಒಡೆದು ಹೋಗಿರುವ ವಿಗ್ರಹಗಳು, ಹಳೆಯದಾದ ಫಿರಂಗಿಗಳ ಕಥೆಯನ್ನು, ಅಳಿದುಳಿದ ಸಾಮ್ರಾಜ್ಯಗಳ ಕುರುಹುಗಳು, ಮಹಾ ಸಾಮ್ರಾಜ್ಯವಾಗಿ ಬೆಳೆದ ಕನ್ನಡ ನಾಡಿನ ಮನೆತನಗಳನ್ನು, ವಸ್ತು ಸಂಗ್ರಹಾಲಯದಲ್ಲಿ ನೋಡುವಂತಾಗಿದೆ’ ಎಂದು ತಿಳಿಸಿದರು. ನನ್ನ ಪ್ರವಾಸವು ಬಹಳ ಅತ್ಯಮೂಲ್ಯವಾಗಿತ್ತು. ಆದ್ದರಿಂದ ಈ ಪ್ರವಾಸವನ್ನು ಆಯೋಜಿಸಿದ್ದ ನನ್ನ ಶಾಲೆಯ ಎಲ್ಲಾ ಶಿಕ್ಷಕರಿಗೂ ನನ್ನ ವಂದನೆಗಳು.
| ಡಿ ವರ್ಷಿಕಾ ಗೌಡ ದೊಡ್ಡಗೊಲ್ಲರಹಟ್ಟಿ, ಬೆಂಗಳೂರು