ಲಾಭ ಕೊಡುವ ಟಾಪ್ ಕುರಿ-ಮೇಕೆ ತಳಿಗಳು!: ಮನಿಮಾತು

Money Mathu
Published on

ಡಾರ್ಪರ್, ಡೆಕ್ಕನಿ, ಬೀಟಲ್, ಸಿರೋಹಿ, ಉಸ್ಮನಾಬಾದಿ, ನಾರಿ ಸುವರ್ಣ, ಬೋಯರ್, ಬಂಡೂರು, ಅಬ್ಬಬ್ಬಾ ಇಷ್ಟೆಲ್ಲಾ ಕುರಿ-ಮೇಕೆ ತಳಿಗಳ ಹೆಸರು ಹೇಳುತ್ತಿರೋದ್ಯಾಕೆ ಅಂತ ಕೇಳಿದ್ರಾ...? ಹೌದು ಕೃಷಿಯ ಜತೆ ಉಪಕಸುಬಾಗಿದ್ದ ಕುರಿ ಸಾಕಣೆ, ಈಗ ರೈತರಿಗೆ ಲಕ್ಷಾಂತರ ರೂಪಾಯಿ ಲಾಭ ತಂದುಕೊಡುವ ಉದ್ಯಮವಾಗಿ ಬೆಳೆಯುತ್ತಿದೆ. ಮಾರುಕಟ್ಟೆ ಪ್ರವೇಶಿಸಿರುವ ಹತ್ತಾರು ಹೊಸ ತಳಿಗಳು ರೈತರಿಗೆ ಬಂಪರ್ ಲಾಭ ಕೊಟ್ಟು ಜೇಬು ತುಂಬಿಸುತ್ತಿವೆ. ಇತ್ತೀಚೆಗೆ ಸ್ಯಾಂಡಲ್​ವುಡ್ ನಾಯಕ ನಟರೊಬ್ಬರು ಸುದ್ದಿ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಕುರಿ ಸಾಕಣೆ ಬಗ್ಗೆ ಮಾತನಾಡುತ್ತಾ, ಕುರಿ ಇದ್ರೆ ಎಟಿಎಂ ಇದ್ದ ಹಾಗೆ, ಕುರಿ ಸಾಕಿದರೆ ಮನೆ ಮುಂದೆಯೇ ಬಂದು ದುಡ್ಡು ಕೊಟ್ಟು ಖರೀದಿಸುವ ಮಂದಿಯಿದ್ದಾರೆ. ಸರಿಯಾಗಿ ಸಾಕಣೆ ಮಾಡಿದರೆ ಸಣ್ಣ ಮೊತ್ತದ ಹೂಡಿಕೆಯೊಂದಿಗೆ ಲಕ್ಷಾಂತರ ರೂಪಾಯಿ ಸಂಪಾದನೆ ಸಾಧ್ಯ ಎಂದು ಹೇಳಿದ್ದರು. ಇಷ್ಟೇ ಇಲ್ಲ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಕೂಡ ಬಿಡದಿ ತೋಟದಲ್ಲಿ ಇಸ್ರೇಲ್ ಪದ್ಧತಿಯಲ್ಲಿ ಕುರಿ ಸಾಕಣೆ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಇಷ್ಟೆಲ್ಲಾ ಪ್ರಾಮುಖ್ಯತೆಯನ್ನು ಕುರಿ-ಮೇಕೆ ಸಾಕಣೆ ಪಡೆದುಕೊಂಡಿದೆ. ಬನ್ನಿ ರೈತರಿಗೆ ಲಾಭ ತಂದುಕೊಡುವ ಕೆಲ ಪ್ರಮುಖ ಮೇಕೆ ಮತ್ತು ಕುರಿ ತಳಿಗಳ ಬಗ್ಗೆ ತಿಳಿಯೋಣ.

ಡಾರ್ಪರ್ ಕುರಿ, ಆದಾಯ ಭರ್ಜರಿ: ಡಾರ್ಪರ್ ಅನ್ನೋದು ದಕ್ಷಿಣ ಆಫ್ರಿಕಾ ಮೂಲದ ಕುರಿ ತಳಿ. 1930ರಲ್ಲಿ ದಕ್ಷಿಣ ಆಫ್ರಿಕಾದ ಕೃಷಿ ಇಲಾಖೆ ಇದನ್ನು ಅಭಿವೃದ್ಧಿಪಡಿಸಿತು. ತುಂಬಾ ವೇಗವಾಗಿ ತೂಕ ಹೆಚ್ಚಿಸಿಕೊಳುವ ಕಾರಣ ಮಾಂಸ ವೃದ್ಧಿಗೆ ಡಾರ್ಪರ್ ಹೇಳಿ ಮಾಡಿಸಿದ ತಳಿ. ಪ್ರತಿ ದಿನ ಇದು 110 ಗ್ರಾಂನಿಂದ 200 ಗ್ರಾಂವರೆಗೆ ತೂಕ ಹೆಚ್ಚಿಸಿಕೊಳ್ಳುತ್ತದೆ. ಕೊಬ್ಬಿನಾಂಶ ಕಡಿಮೆ ಇದ್ದು ರುಚಿ ಹೆಚ್ಚಿರುವ ಕಾರಣ ಸ್ಟಾರ್ ಹೋಟೆಲ್​ಗಳಲ್ಲಿ ಇದಕ್ಕೆ ಭಾರಿ ಬೇಡಿಕೆ. ನಾಲ್ಕು ತಿಂಗಳಲ್ಲಿ ಮಾರುಕಟ್ಟೆಗೆ ಸಿದ್ಧವಾಗುವ ಈ ತಳಿ, ಸಾಕಣೆದಾರನಿಗೆ ಲಕ್ಷಾಂತರ ರೂಪಾಯಿ ಲಾಭ ತಂದುಕೊಡಬಲ್ಲದು. ಬ್ರೀಡಿಂಗ್​ನಿಂದಲೂ ಇದರಲ್ಲಿ ಉತ್ತಮ ಲಾಭ ಗಳಿಸಲು ಸಾಧ್ಯವಿದೆ. ಈ ಕುರಿ ಸಾಕಣೆ ಮಾಡಿ ವರ್ಷಕ್ಕೆ 30 ರಿಂದ 40 ಲಕ್ಷ ರೂ.ವರೆಗೆ ಆದಾಯ ಪಡೆಯುವ ರೈತರು ಕರ್ನಾಟಕದಲ್ಲಿದ್ದಾರೆ.

ಬಂಡೂರು ಕುರಿ, ಸಾಕಿದವವರಿಗೆ ನಷ್ಟ ಇಲ್ಲಾ ರೀ..!: ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಬಂಡೂರು ಈ ಕುರಿ ತಳಿಯ ಮೂಲ. 8 ತಿಂಗಳಲ್ಲಿ 20ರಿಂದ 25 ಕೆಜಿ ತೂಗುವ ಬಂಡೂರು ಕುರಿಗಳು 20 ವರ್ಷ ಬದುಕುತ್ತವೆ. ಸುಲಭ ಸಾಕಣೆ ಮತ್ತು ರುಚಿಕರ ಮಾಂಸ ಈ ತಳಿಯ ವಿಶೇಷತೆ. ಸಾಮಾನ್ಯವಾಗಿ ಎಲ್ಲ ಕುರಿಗಳಲ್ಲಿ ಮಾಂಸದಿಂದ ಕೊಬ್ಬು ಪ್ರತ್ಯೇಕವಾಗಿರುತ್ತದೆ. ಆದರೆ ಬಂಡೂರು ಕುರಿಯಲ್ಲಿ ಮಾಸದ ನಡುವಿನಲ್ಲಿಯೇ ತೆಳುವಾದ ಕೊಬ್ಬಿನ ಎಳೆ ಇರುತ್ತದೆ. ಇದೇ ಮಾಂಸದ ರುಚಿಗೆ ಮುಖ್ಯ ಕಾರಣ ಎನ್ನುತ್ತಾರೆ ರೈತರು. ಇನ್ನು ಲಾಭದ ಲೆಕ್ಕಾಚಾರಕ್ಕೆ ಬರುವುದಾದರೆ 6 ಸಾವಿರ ರೂ. ಕೊಟ್ಟು ಬಂಡೂರು ಮರಿ ತಂದರೆ ಕನಿಷ್ಠ 15 ಸಾವಿರ ರೂ.ಗೆ ಮಾರಾಟ ಮಾಡಬಹುದು. ಖರ್ಚು 1 ಸಾವಿರ ರೂ. ತೆಗೆದರೂ 1 ಮರಿಗೆ 8 ಸಾವಿರ ರೂ. ಲಾಭ ಸಿಗುತ್ತೆ. ಇದರಂತೆ 100 ಮರಿ ಸಾಕಿದ್ರೆ ವರ್ಷಕ್ಕೆ 8 ಲಕ್ಷ ರೂ. ಲಾಭ ಗಳಿಸಬಹುದು. ಬಂಡೂರು ಕುರಿ ಸಾಕಣೆಯಲ್ಲಿ ಲಾಸ್ ಅನ್ನೋದು ಇಲ್ಲವೇ ಇಲ್ಲ ಅಂತಾರೆ ಅನುಭವಿ ರೈತರು.

ಬೋಯರ್ ಮೇಕೆ ಸೂಪರ್, ಆದಾಯ ಬಂಪರ್: ಉತ್ತಮ ಮಾಂಸದ ತಳಿ ಬೋಯರ್ ಮೇಕೆಯ ಹೈಲೈಟ್. ಇದರ ರೋಗನಿರೋಧಕ ಶಕ್ತಿ ಸೂಪರ್, ಬೆಳೆಸೋ ರೈತನಿಗೆ ಆದಾಯ ಬಂಪರ್. ದಕ್ಷಿಣ ಆಫ್ರಿಕಾ ಮೂಲದ ಈ ತಳಿ ಎಲ್ಲ ವಾತಾವರಣಕ್ಕೂ ಹೊಂದಿಕೊಳ್ಳುತ್ತೆ. ಒಂದು ವರ್ಷಕ್ಕೆ 70 ರಿಂದ 80 ಕೆಜಿಯಷ್ಟು ಪರಿವರ್ತನೆಯಾಗುವ ತಳಿ ಇದು. 15 ವರ್ಷ ಜೀವಿಸುವ ಈ ಮೇಕೆ, ಪ್ರತಿ ಬಾರಿ ಅವಳಿ ಮತ್ತು ತ್ರಿವಳಿ ಮರಿ ನೀಡುತ್ತೆ. ಗಂಡು ಮರಿಯು ಕೆಜಿಗೆ ಸಾವಿರ ರೂಪಾಯಿಯಂತೆ ಮಾರಾಟವಾಗುತ್ತೆ. ಹೆಣ್ಣು ಮರಿ ಕೆಜಿಗೆ 2 ಸಾವಿರ ರೂ.ನಂತೆ ಬೆಲೆ ಇದೆ. ಇದಲ್ಲದೆ, ಕುರಿ ಗೊಬ್ಬರದ ಬೆಲೆ 1 ಟನ್​ಗೆ 4 ಸಾವಿರ ರೂ. ಇದೆ.

ಮೇಕೆಗಳಲ್ಲಿ ಬೀಟಲ್ ರಾಜ!: ಪಂಜಾಬ್ ಪ್ರಾಂತ್ಯದ ಬೀಟಲ್​ಗೆ ಭಾರತದಾದ್ಯಂತ ಉತ್ತಮ ಬೇಡಿಕೆ ಇದೆ. ಹೆಚ್ಚಿನ ಮಾಂಸ, ಹಾಲಿನ ಇಳುವರಿ ಮತ್ತು ಮರಿಗಳ ಮಾರಾಟದಿಂದ ತ್ರಿಬಲ್ ಲಾಭ ತರುತ್ತವೆ ಬೀಟಲ್ ಮೇಕೆಗಳು. ಬೀಟಲ್ ಮೇಕೆ ಒಂದು ಎಟಿಎಂ ಕಾರ್ಡ್ ಇದ್ದ ಹಾಗೆ. ಇದು ಎಷ್ಟು ಬೆಳೆಯುತ್ತೋ ಅಷ್ಟು ಬೆಲೆ ಜಾಸ್ತಿ. ಗರ್ಭಧರಿಸಿರುವ ಮೇಕೆಗಳನ್ನು ಖರೀದಿಸಿದರೆ ಲಾಭ ಗಳಿಕೆ ಸುಲಭ. ಈ ಮೇಕೆ ಸಾಕಣೆಗೆ ಉತ್ತಮ, ಗಾಳಿ, ನೀರು ಮುಖ್ಯ. ಮೇಕೆಗಳಲ್ಲಿ ಬೀಟಲ್ ತಳಿಯೇ ರಾಜ ಎನ್ನುತ್ತಾರೆ ರೈತರು.

ಫೈನಾನ್ಸಿಯಲ್ ಫ್ರೀಡಂ ಆಪ್​ನಲ್ಲಿ ಕುರಿ-ಮೇಕೆ ಸಾಕಾಣಿಕೆ ಕೋರ್ಸ್: ನಾರಿ ಸುವರ್ಣ, ಬನ್ನೂರು, ಉಸ್ಮನಾಬಾದಿ, ಬೋಯರ್ ಅಬ್ಬಬ್ಬಾ ಒಂದಾ ಎರಡಾ ಇಂಡಿಯನ್ ಮನಿ ಡಾಟ್ ಕಾಂನ ಫೈನಾನ್ಸಿಯಲ್ ಫ್ರೀಡಂ ಆಪ್​ನಲ್ಲಿ ಕುರಿ-ಮೇಕೆ ಕುರಿತ ಹಲವು ಕೋರ್ಸ್​ಗಳಿವೆ. ಕುರಿ ಮತ್ತು ಮೇಕೆ ಸಾಕಾಣಿಕೆಗೆ ಬೇಕಾದ ಸಮಗ್ರ ಮಾಹಿತಿ ಈ ಕೋರ್ಸ್​ಗಳಲ್ಲಿ ಅಡಕವಾಗಿದೆ. ಕುರಿ-ಮೇಕೆ ಸಾಕಣೆಯಲ್ಲಿ ಯಶಸ್ಸು ಗಳಿಸಿ ಲಕ್ಷಾಂತರ ರೂಪಾಯಿ ಸಂಪಾದಿಸುತ್ತಿರುವ ತಜ್ಞರೇ ನಿಮಗೆ ಕೋರ್ಸ್​ನಲ್ಲಿ ಮಾರ್ಗದರ್ಶನ ಮಾಡಿದ್ದಾರೆ. ಹಾಗಾದ್ರೆ ಇನ್ನೇಕೆ ತಡ ಈಗಲೇ ಫೈನಾನ್ಸಿಯಲ್ ಫ್ರೀಡಂ ಆಪ್ ಡೌನ್​ಲೋಡ್ ಮಾಡಿ ಕುರಿ-ಮೇಕೆ ಸಾಕಣಿ ಬಗ್ಗೆ ಇರುವ ಕೋರ್ಸ್​ಗಳನ್ನು ವೀಕ್ಷಿಸಿ, ನೀವೂ ಹೆಚ್ಚೆಚ್ಚು ಸಂಪಾದಿಸಿ.

ಕುರಿ-ಮೇಕೆ ಸಾಕಣೆ ಬಗ್ಗೆ ಸಮಗ್ರ ಕೋರ್ಸ್​ಗಳು
  • ಕುರಿ-ಮೇಕೆ ಸಾಕಾಣಿಕೆ ಬೇಸಿಕ್ ಕೋರ್ಸ್
  • ಉಸ್ಮನಾಬಾದಿ, ಬೋಯರ್, ಸಿರೋಹಿ ಮೇಕೆ, ನಾರಿಸುವರ್ಣ, ಡಾರ್ಪರ್, ಬಂಡೂರು, ಡೆಕ್ಕನಿ ಕುರಿ ಸಾಕಣೆ ಕುರಿತು ಪ್ರತ್ಯೇಕ ಕೋರ್ಸ್​ಗಳು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net