ಇಂದು ವಿಶ್ವ ಆಹಾರ ದಿನ: ಮಕ್ಕಳ ಮನೋಬಲಕ್ಕೆ ಹಣ್ಣು, ತರಕಾರಿ

Child food (1)
Published on

ಹಣ್ಣು, ತರಕಾರಿ ಎಂದರೆ ಮೂಗು ಮುರಿಯುವ ಮಕ್ಕಳೇ ಈ ಸುದ್ದಿ ಓದಿ.... ಹಣ್ಣು ಹಾಗೂ ತರಕಾರಿ ಸೇವನೆ ಯಿಂದ ಮಕ್ಕಳ ಮನೋಬಲ, ಮಾನಸಿಕ ಸ್ವಾಸ್ಥ$್ಯ ಹೆಚ್ಚಾಗುತ್ತದೆ ಎಂಬುದು ಪಾಶ್ಚಾತ್ಯರು ನಡೆಸಿರುವ ಅಧ್ಯಯನದಲ್ಲೂ ಸಾಬೀತಾಗಿದೆ. ಉಪವಾಸವಿದ್ರೂ ಜಂಕ್​ುಡ್​ ಸಹವಾಸ ಒಳ್ಳೆಯದಲ್ಲ ಎಂದು ಹೇಳುತ್ತದೆ ಬ್ರಿಟನ್​ನ ನಾರ್ವಿಚ್​ನ ಯುನಿವರ್ಸಿಟಿ ಆ್​ ಈಸ್ಟ್​ ಆಂಗ್ಲಿಯಾ ನಡೆಸಿದ ಅಧ್ಯಯನದ ವಿವರ ಇಲ್ಲಿದೆ.

| ರಮೇಶ್​ ಮೈಸೂರು

ಹಣ್ಣು ಹಾಗೂ ಸಸ್ಯಾಹಾರ ಸೇವಿಸುವವರ ಹಾಗೂ ಅವರ ಮಾನಸಿಕ ಸ್ವಾಸ್ಥ$್ಯದ ನಡುವಿನ ಸಂಬಂಧವನ್ನು ವಿಶ್ಲೇಷಿಸುವುದು ಈ ಅಧ್ಯಯನದ ಉದ್ದೇಶವಾಗಿತ್ತು. ಇದಕ್ಕಾಗಿ ಪ್ರತಿದಿನ ಆಹಾರದಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ಪಾಲನ್ನು ಹಣ್ಣು ಹಾಗೂ ತರಕಾರಿ ಮೂಲಕ ಸೇವಿಸುವವರನ್ನು ಆಯ್ಕೆ ಮಾಡಲಾಗಿತ್ತು. ಅದರಲ್ಲೂ ಮುಖ್ಯವಾಗಿ ಹಿರಿಯ ಪ್ರಾಥಮಿಕ ಮಕ್ಕಳನ್ನು ಒಳಗೊಂಡಿತ್ತು. ಆಹಾರ ಪದ್ಧತಿ ಇವರ ಮಾನಸಿಕ ಸ್ವಾಸ್ಥ$್ಯದೊಂದಿಗೆ ನೇರ ಸಂಬಂಧ ಹೊಂದಿರುವುದು ಕಂಡುಬಂದಿದೆ.

ಸಂಶೋಧಕರು ಹೇಳೋದೇನು?

ಶಾಲೆಗೂ ಮುಂಚೆ, ಶಾಲೆಯಲ್ಲಿ ಹಾಗೂ ಹೊರಗೂ ಕೂಡ ಮಕ್ಕಳಿಗೆ ಉತ್ತಮ ಪೋಷಕಾಂಶ ಆಹಾರ ಲಭ್ಯವಾಗಿರುವಂತೆ ನೋಡಿಕೊಳ್ಳುವ ನೀತಿ ನಿರೂಪಣೆ ಸ್ಥಳಿಯಾಡಳಿತಗಳ ಗುರಿಯಾಗಿರಲಿ. ನಾರ್ವಿಚ್​ ಮೆಡಿಕಲ್​ ಸ್ಕೂಲ್​ನ ಪ್ರೊ. ಅಲಿಸಾ ವೆಲ್ಷ್​ ಹೇಳುವಂತೆ: ಮಾನಸಿಕ ಸ್ವಾಸ್ಥ$್ಯ ಕುಸಿಯವುದು ಯುವಜನರಲ್ಲಿ ಬಹುದೊಡ್ಡ ಸಮಸ್ಯೆಯಾಗಿದೆ. ಜತೆಗೆ ಇದು ದೀರ್ಕಾಲದವರೆಗೆ ಋಣಾತ್ಮಕ ಸನ್ನಿವೇಶಗಳಿಗೆ ಕಾರಣವಾಗುತ್ತದೆ. ಮಕ್ಕಳು ಹಾಗೂ ಹದಿಹರೆಯದವರಲ್ಲಿ ಮಾನಸಿಕ ಸ್ವಾಸ್ಥ$್ಯ ಕುಸಿಯುವಲ್ಲಿ ಸಾಮಾಜಿಕ ಜಾಲತಾಣ ಹಾಗೂ ಆಧುನಿಕ ಶಾಲಾ ಪದ್ಧತಿ ಪ್ರಮುಖ ಕಾರಣಗಳಾಗುತ್ತಿವೆ. ಜತೆಗೆ ಬಾಲ್ಯಾವಸ್ಥೆಯಲ್ಲಿ ಮಾನಸಿಕ ಸ್ವಾಸ್ಥ$್ಯದ ಮಹತ್ವವನ್ನು ಅರಿಯುವಲ್ಲಿ ಹೆಚ್ಚು ಜಾಗೃತಿ ಮೂಡುತ್ತಿದೆ.

ಜಂಕ್​ಫುಡ್​​ ಬೇಡ

ನಾರ್ವಿಚ್​ ಮೆಡಿಕಲ್​ ಸ್ಕೂಲ್​ನ ಡಾ. ರಿಚರ್ಡ್​ ಹೇಹೊಯ್​ ಹೇಳುವಂತೆ: ಉತ್ತಮ ಆಹಾರ ಸೇವನೆ ಮಕ್ಕಳಲ್ಲಿ ಉತ್ತಮ ಮಾನಸಿಕ ಸ್ವಾಸ್ಥ$್ಯಕ್ಕೆ ಕಾರಣವಾಗಿದೆ. ಅದರಲ್ಲೂ ಮುಖ್ಯವಾಗಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೆಚ್ಚಿನ ನಂಟು ಕಂಡುಬಂದಿದೆ. ಹಣ್ಣು ಮತ್ತು ತರಕಾರಿ ಸೇವಿಸುವವರಲ್ಲಿ ಇದು ಉತ್ತಮವಾಗಿದೆ. ಸಾಂಪ್ರದಾಯಿಕ ಉಪಾಹಾರವನ್ನು ಸೇವಿಸುವವರ ಮಾನಸಿಕ ಸ್ವಾಸ್ಥ$್ಯ ಸೇವಿಸದಿರುವವಗಿಂತ ಹೆಚ್ಚು ಉತ್ತಮವಾಗಿತ್ತು. ಅದರಲ್ಲೂ ಮಧ್ಯಾಹ್ನಕ್ಕೆ ಸ್ನಾಕ್ಸ್​ ಹಾಗೂ ಶಕ್ತಿ ಪಾನೀಯ (ಎನರ್ಜಿ ಡ್ರಿಂಕ್​) ಸೇವಿಸುವವರ ಮನೋಶಕ್ತಿ ಕಡಿಮೆ. ಬೆಳಗಿನ ಉಪಾಹಾರ ಸೇವಿಸದವರಿಗಿಂತಲೂ ಕೆಳಮಟ್ಟದಲ್ಲಿತ್ತು ಎಂದು ಅಧ್ಯಯನ ಹೇಳಿದೆ.

ತರಕಾರಿಗಳಲ್ಲಿ ಪ್ರೋಟಿನ್​ ಸೀಬೆಹಣ್ಣಿನಲ್ಲಿ ವಿಟಮಿನ್​ ಸಿ, ಕ್ಯಾರೆಟ್​ನಲ್ಲಿ ಎ ವಿಟಮಿನ್​, ಮೊಳಕೆಕಾಳಿನಲ್ಲಿ ಬಿ12, ಸೊಪು$್ಪ, ಹಸಿರು ತರಕಾರಿಯಲ್ಲಿ ಕಬ್ಬಿಣದ ಅಂಶ, ರಾಗಿಯಲ್ಲಿ ಕ್ಯಾಲ್ಶಿಯಂ ಹಾಗೂ ಕಬ್ಬಿಣದ ಅಂಶ, ಹಾಲು, ಮೊಟ್ಟೆ, ವಿವಿಧ ತರಕಾರಿಗಳಲ್ಲಿ ಪ್ರೋಟಿನ್​ ಸಿಗುತ್ತದೆ. ಆದರೆ ಬಾಯಿಗೆ ರುಚಿ ಎನಿಸುವ ಪ್ಯಾಕೆಟ್​ ಆಹಾರಗಳಲ್ಲಿ ಎನೂ ಇರುವುದಿಲ್ಲ. ಆದ್ದರಿಂದ ಮಕ್ಕಳು ಇದರ ದಾಸರಾಗಬಾರದು ಎಂಬುದು ಡಾ.ಬಸವರಾಜ್​ ಅವರ ಸಲಹೆ.

ಮಕ್ಕಳು ಸಾಮಾನ್ಯವಾಗಿ ಬೇಕರಿ ಪದಾರ್ಥ ಅಥವಾ ಪ್ಯಾಕ್ಡ್​ ಆಹಾರಗಳನ್ನು ಸೇವಿಸುವ ಹವ್ಯಾಸ ಬೆಳೆಸಿಕೊಳ್ಳುತ್ತಾರೆ. ಆದರೆ ಇದು ಅಷ್ಟು ಉತ್ತಮವಲ್ಲ. ಶಾಲೆ ಸ್ನಾಕ್ಸ್​ ಬಾಕ್ಸ್​ನಲ್ಲಿ ಈ ತರಹದ ಪದಾರ್ಥಗಳ ಬದಲಾಗಿ ಮೊಳಕೆಕಾಳು, ತರಕಾರಿ (ಹಸಿ/ಬೇಯಿಸಿದ್ದು), ಮೊಟ್ಟೆ, ಹಣ್ಣುಗಳನ್ನು ಒಯ್ಯಬಹುದು. ಆರಂಭದಲ್ಲಿ ಇದನ್ನು ಸೇವಿಸುವುದು ಕಷ್ಟವಾದರೂ ನಂತರದಲ್ಲಿ ಅದೇ ಅಭ್ಯಾಸವಾಗಿ 70 ವರ್ಷವಾದರೂ ಆರೋಗ್ಯ ಸದೃಢವಾಗಿರುತ್ತದೆ. | ಡಾ. ಜಿ.ವಿ. ಬಸವರಾಜ್​ ಮಕ್ಕಳತಜ್ಞ, ಇಂದಿರಾಗಾಂಧಿ ಆಸ್ಪತ್ರೆ, ಬೆಂಗಳೂರು

ಆಹಾರಕ್ಕೂ ಸ್ವಾಸ್ಥ್ಯಕ್ಕೂ ನಂಟು ಪೋಷಕಾಂಶಗಳ ವಿಷಯದಲ್ಲಿ ಕಂಡುಬಂದ ಅಂಶವೆಂದರೆ ಶೇ.25 ಹಿರಿಯ ಪ್ರಾಥಮಿಕ ಹಾಗೂ ಪ್ರಾಥಮಿಕ ಶಾಲೆಯ ಶೇ.28 ಮಕ್ಕಳು ಐದು ದಿನಗಳ ಸಸ್ಯಾಹಾರ ಕ್ರಮ ಅನುಸರಿಸುತ್ತಿದ್ದರು. 10ರಲ್ಲಿ ಒಬ್ಬ ವಿದ್ಯಾರ್ಥಿ ಮಾತ್ರ ಯಾವುದೇ ಹಣ್ಣು ಅಥವಾ ತರಕಾರಿ ಸೇವಿಸುತ್ತಿರಲಿಲ್ಲ. ಐದರಲ್ಲಿ ಒಬ್ಬರು ಮಾತ್ರ ಮಧ್ಯಾಹ್ನದ ಊಟದಿಂದ ದೂರವಾಗಿದ್ದರೆ, 10ರಲ್ಲಿ ಒಬ್ಬರು ಬೆಳಗಿನ ಉಪಾಹಾರ ಸೇವಿಸುತ್ತಿರಲಿಲ್ಲ ಎಂದು ವರದಿ ಹೇಳಿದೆ. ಹೀಗಿರುವಾಗ ಪೋಷಕಾಂಶ ಹಾಗೂ ಮಾನಸಿಕ ಸ್ವಾಸ್ಥ$್ಯಕ್ಕಿರುವ ನಂಟೇನು ಎಂಬುದನ್ನು ಸಂಶೋಧಕರ ತಂಡ ಗಮನಿಸಿದೆ. ಅಂದರೆ ಬಾಲ್ಯದ ಕೆಟ್ಟ ಅನುಭವಗಳು, ಮನೆಯಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net