

ತಿರುಪತಿ ವೆಂಕಟರಮಣ ಬಹಳಷ್ಟು ಕುಟುಂಬಗಳಿಗೆ ಮನೆದೇವರು, ಇಷ್ಟದೇವರು ಆಗಿರುವುದರಿಂದ, ವರ್ಷಕ್ಕೊಮ್ಮೆಯಾದರೂ ತಿರುಪತಿಗೆ ಭೇಟಿ ನೀಡಿ ದರ್ಶನ ಪಡೆಯುವ ಸಂಪ್ರದಾಯವನ್ನು ಅಸಂಖ್ಯ ಕುಟುಂಬಗಳು ಚಾಚೂ ತಪ್ಪದೆ ಪಾಲಿಸುತ್ತಿವೆ. ಹೀಗೆ ತಿರುಪತಿಯಲ್ಲಿ ದರ್ಶನದ ಬಳಿಕ, ಅಲ್ಲಿನ ಪ್ರಸಿದ್ಧ ಹಾಗೂ ಸ್ವಾದಿಷ್ಟಕರ ಲಡ್ಡುಪ್ರಸಾದವನ್ನು ಮನೆಗೆ ತಂದು, ಅದನ್ನು ಬಂಧುಮಿತ್ರರಿಗೆ ಹಂಚಿ, ಸಾರ್ಥಕತೆ ಪಡೆದುಕೊಳ್ಳುವ ಭಾವವೇ ಅನನ್ಯ.
ಲಕ್ಷ ಲಡ್ಡುಗಳನ್ನು ತಯಾರಿಸಲಾಗುತ್ತಿದೆ. ಬ್ರಹ್ಮೋತ್ಸವ ಮತ್ತು ವಿಶೇಷ ಹಬ್ಬಗಳ ಸಂದರ್ಭದಲ್ಲಿ ಈ ಸಂಖ್ಯೆ 8ರಿಂದ 10 ಲಕ್ಷಕ್ಕೆ ಏರುತ್ತದೆ.
ಪ್ರಸಾದ ತಯಾರಿಸುವ ಎರಡು ಸಾವಿರ ಚದರಡಿಯ ಅಡುಗೆ ಮನೆಯಲ್ಲಿ ಇಂದಿಗೂ ವೈದಿಕ ಮಂತ್ರಗಳ ಘೊಷ ಕೇಳಿಬರುತ್ತದೆ ಮತ್ತು ಶುದ್ಧ ದೇಸಿ ತುಪ್ಪದ ಸುವಾಸನೆ ಪಸರಿಸುತ್ತದೆ. ಇಲ್ಲಿ ಇಂದಿಗೂ ಒಲೆಯ ಮೇಲೆ ಕಡಲೆಹಿಟ್ಟನ್ನು ಬಿಸಿ ಮಾಡಿ ಲಡ್ಡು ತಯಾರಿಸಲು ಮಿಶ್ರಣವನ್ನು ಸಿದ್ಧಪಡಿಸಲಾಗುತ್ತದೆ. 25 ಸಿಬ್ಬಂದಿ (ವೈಷ್ಣವ ಬ್ರಾಹ್ಮಣರು) ದೇವರಿಗಾಗಿ ವಿಶೇಷ ಪ್ರಸಾದವನ್ನು ತಯಾರಿಸುತ್ತಾರೆ.
25 ಸಾವಿರ ಚದರ ಅಡಿಯಲ್ಲಿ ನಿರ್ವಿುಸಲಾಗಿರುವ ಮೂರು ಮಹಡಿಯ ಅಡುಗೆಮನೆಯಲ್ಲಿ ಗ್ಯಾಸ್/ಸ್ಟೀಮ್ಂದ ನಡೆಯುವ ಯಂತ್ರಗಳಿದ್ದು, 700 ವೈಷ್ಣವ ಬ್ರಾಹ್ಮಣರು 4ರಿಂದ 6 ಲಕ್ಷ ಲಡ್ಡುಗಳನ್ನು ಪ್ರತಿನಿತ್ಯ ತಯಾರಿಸುತ್ತಾರೆ.