ತಪ್ಪು ತಿದ್ದಿಕೊಳ್ಳಲು ತಡವಾಗಿ ತವಕಿಸುತ್ತಿರುವ ಜಗತ್ತು

china school
Published on

ಚೀನಾದಿಂದ ಕರೊನಾ ವೆರಸ್​ ಹೊರಜಗತ್ತಿಗೆ ಹರಡುತ್ತಿದೆ ಎಂದು ಮೊದಲು ಗುರುತಿಸಿ 2019ರ ಡಿಸೆಂಬರ್​ ಅಂತ್ಯದಲ್ಲೇ ಜಗತ್ತನ್ನು ಎಚ್ಚರಿಸಿದ್ದೇ ತೆವಾನ್​. ಆದರೆ ಚೀನೀ ಸರ್ಕಾರ ಮತ್ತು ಅದರ ಕೆಗೊಂಬೆಯಂತೆ ವರ್ತಿಸುತ್ತಿದ್ದ ಡಬ್ಲೂ$್ಯಎಚ್​ಓ ತೆವಾನ್​ ವಿರುದ್ಧವೇ ಅಪಪ್ರಚಾರ ಆರಂಭಿಸಿದವು.

ಇಂದು ಕಮ್ಯೂನಿಸ್ಟ್​ ಚೀನಾದ ಬಗ್ಗೆ ಜಾಗತಿಕವಾಗಿ ಪ್ರಚಲಿತವಿರುವ ಚಿತ್ರಗಳು ಇವು& ಥಿ ನೆರೆನಾಡುಗಳ ಜಲಪ್ರದೇಶಗಳನ್ನು ಒತ್ತುವರಿ ಮಾಡಿಕೊಂಡು ಆ ದೇಶಗಳ ಅರ್ಥವ್ಯವಸ್ಥೆ ಹಾಗೂ ಸುಭದ್ರತೆಯ ಮೇಲೆ ಒತ್ತಡ ಹೇರುತ್ತಿದೆ. ಥಿ ಷಿನ್​ಜಿಯಾಂಗ್​ ಮತ್ತು ಹಾಂಗ್​ಕಾಂಗ್​ಗಳಲ್ಲಿ ಮಾನವಹಕ್ಕುಗಳ ವ್ಯಾಪಕ ಉಲ್ಲಂನೆಯಲ್ಲಿ ತೊಡಗಿದೆ. ಥಿ ಬಡರಾಷ್ಟ್ರಗಳಿಗೆ ಅನಗತ್ಯ,

ಅವ್ಯಾವಹಾರಿಕ ಯೋಜನೆಗಳಿಗಾಗಿ ಒತ್ತಾಯಪೂರ್ವಕವಾಗಿ ಸಾಲ ಕೊಟ್ಟು, ಸಾಲ ತೀರಿಸಲು ವಿಲವಾಗುವ ದೇಶಗಳ ನೆಲವನ್ನು ಕಬಳಿಸುತ್ತಿದೆ. ಮತ್ತು ಎಲ್ಲಕ್ಕಿಂತ ಮುಖ್ಯವಾಗಿ, ಥಿ ಕರೊನಾ ವೆರಸ್​ ಎಂಬ ಘಾತಕ ರೋಗಾಣುವನ್ನು ಸಷ್ಟಿಸಿ, ಹರಡಿ ಮಾನವಕುಲವನ್ನು ಬಣ್ಣಿಸಲಾಗದ ಮಟ್ಟಿಗಿನ ಸಂಕಷ್ಟಕ್ಕೆ ದೂಡಿದೆ. ಈ ಅರಿವುಗಳೊಂದಿಗೆ ಇಂದು ಆರ್ಥಿಕ ಹಾಗೂ ಸೇನಾ ಶಕ್ತಿಗಳಾದ "ಜಿ7' ಮತ್ತು "ನ್ಯಾಟೋ' ದೇಶಗಳು ಚೀನಾ ವಿರುದ್ಧ ಕಠಿಣ ನಿಲುವು ತಳೆದಿವೆ. ಇದು ಚೀನಾದ ಕಮ್ಯೂನಿಸ್ಟ್​ ಸರ್ಕಾರಕ್ಕೆ ತನ್ನ ಇದುವರೆಗಿನ ಅಸ್ತಿತ್ವದಲ್ಲಿ ಎದುರಾಗಿರುವ ಅತಿ ದೊಡ್ಡ ಜಾಗತಿಕ ವಿರೋಧ. ಆದರೆ ಪ್ರಶ್ನೆಯೆಂದರೆ ಚೀನಾ ಜಗತ್​ಕಂಟಕ ಎಂಬ ಅರಿವು ಪಶ್ಚಿಮ ಜಗತ್ತಿಗೆ ಇಷ್ಟು ತಡವಾಗಿ ತಟ್ಟಿದ್ದು ಹೇಗೆ? ಕಳೆದ ಆರು ದಶಕಗಳ ಇತಿಹಾಸವನ್ನು ಅವಲೋಕಿಸಿದರೆ ತಿಳಿಯುವ ಸತ್ಯವೆಂದರೆ ಕಮ್ಯೂನಿಸ್ಟ್​ ಚೀನಾ ಜಗತ್​ಕಂಟಕನಾಗಿ ಬೆಳೆದದ್ದೇ ಇದೇ ದೇಶಗಳ ಸಹಕಾರದಿಂದ!

ಚೀನೀ ಕಮ್ಯೂನಿಸ್ಟರು ವಿಶ್ವಾಸಕ್ಕೆ ಅನರ್ಹರು ಎಂದು ಸ್ಪಷ್ಟವಾಗಿ ನಂಬಿದ್ದ ಹ್ಯಾರಿ ಟ್ರೂಮನ್​ ಸರ್ಕಾರ (1945&52) ವಿಶ್ವಸಂಸ್ಥೆಯಿಂದ ಕಮ್ಯೂನಿಸ್ಟ್​ ಚೀನಾವನ್ನು ಹೊರಗಿಡುವ ವ್ಯವಸ್ಥೆ ಮಾಡಿತ್ತು. ಪರಿಣಾಮವಾಗಿ ಚೀನಾಕ್ಕಿದ್ದ ಭದ್ರತಾ ಸಮಿತಿಯ ಕಾಯಂ ಸದಸ್ಯತ್ವ ಪ್ರಜಾಪ್ರಭುತ್ವ ಮಾರ್ಗ ಹಿಡಿದ ಚೀನೀ ರಾಷ್ಟ್ರೀಯವಾದಿ ಗಣರಾಜ್ಯ ಅಂದರೆ ತೆವಾನ್​ಗೆ ದಕ್ಕಿತು. ಮುಂದಿನ ಅಧ್ಯ ಡ್ವೆಟ್​ ಡಿ. ಐಸೆನ್​ಹೋವರ್​ ಅಂತೂ, 1958ರಲ್ಲಿ ತೆವಾನ್​ನ ವಿರುದ್ಧ ಸೇನಾ ಕಾರ್ಯಾಚರಣೆಗೆ ಮುಂದಾದ ಚೀನಾಗೆ ಅಣ್ವಸ್ತ್ರದ ಬೆದರಿಕೆ ಒಡ್ಡುವ ಮಟ್ಟಕ್ಕೂ ಹೋದರು. ಆದರೆ ಅದೇ ಐಸೆನ್​ಹೋವರ್​ ಮರುವರ್ಷವೇ ನೀತಿಯನ್ನು ಬದಲಾಯಿಸಿ ಚೀನೀ ಕಮ್ಯೂನಿಸ್ಟರೊಂದಿಗೆ ಪೋಲ್ಯಾಂಡ್​ನ ರಾಜಧಾನಿ ವಾರ್ಸಾದಲ್ಲಿ ರಹಸ್ಯ ಮಾತುಕತೆಗಳನ್ನು ಆರಂಭಿಸಿದರು! ನಂತರ ಮತಿಹೀನ ಹಾಗೂ ದುರಹಂಕಾರಿ ಅಧ್ಯ ಲಿಂಡನ್​ ಬಿ. ಜಾನ್ಸನ್​ ಅಮೆರಿಕವನ್ನು ಅನಗತ್ಯವಾಗಿ ವಿಯೆಟ್ನಾಂ ಯುದ್ಧದ ಕೆಸರಿಗೆ ದೂಡಿದರು. ಮುಂದಿನ ಮೂರು ವರ್ಷಗಳಲ್ಲಿ ವಿಯಟ್ನಾಂನಿಂದ ಬರುವ "ಬಾಡಿ ಬ್ಯಾಗ್​'ಗಳ ಸಂಖ್ಯೆ ಏಕಪ್ರಕಾರವಾಗಿ ಏರತೊಡಗಿದಂತೇ ಅಮೆರಿಕದಾದ್ಯಂತ ಯುದ್ಧ&ವಿರೋಧಿ ಪ್ರತಿಭಟನೆಗಳು ಭುಗಿಲೆದ್ದವು. ಆಗ ಎಚ್ಚೆತ್ತ ಅಧ್ಯ ಜಾನ್ಸನ್​ ತನ್ನ ದೇಶವನ್ನು ವಿಯೆಟ್ನಾಂ ಕೆಸರಿನಿಂದ ಹೊರತರಲು ಹೆಣಗಿ, ಸೋತು, ಸಂಧಾನಕ್ಕಾಗಿ ಗೋಗರೆದರೆ ವಿಯೆಟ್ನಾಮಿಗಳು ಹೇಳಿದ್ದು "ಹನೋಯ್​ಗೆ ಹಾದಿ ಪೀಕಿಂಗ್​ ಮೂಲಕ ಹಾದು ಬರುತ್ತದೆ' ಎಂದು! ಇದನ್ನು ಅರಶ@ ತೆಗೆದುಕೊಂಡ ಮುಂದಿನ ಅಧ್ಯ ರಿಚರ್ಡ್​ ನಿಕ್ಸನ್​ ಮತ್ತು ಅವರ ರಾಷ್ಟ್ರೀಯ ಸುರಾ ಸಲಹೆಗಾರ ಹೆನ್ರಿ ಕಿಸಿಂಜರ್​ ಚೀನಾ ಜತೆ ಮೊದಲಿಗೆ ಗುಟ್ಟಿನಲ್ಲಿ, ನಂತರ ಬಹಿರಂಗವಾಗಿ ಸಂಬಂಧಗಳನ್ನು ಸ್ಥಾಪಿಸಿಕೊಂಡರು. ಕಿಸಿಂಜರ್​ ಅಂತೂ ಚೀನೀ ಅತಿಥಿಸತ್ಕಾರಕ್ಕೆ ಮನಸೋತು ವಾಸ್ತವಪ್ರಜ್ಞೆಯನ್ನೂ, ಭವಿಷ್ಯದ ಬಗ್ಗೆ ವಸ್ತುನಿಷ್ಠವಾಗಿ ಯೋಚಿಸುವ ಸಾಮರ್ಥ್ಯವನ್ನೂ ಕಳೆದುಕೊಂಡರು. ಪರಿಣಾಮವಾಗಿ ವಿಶ್ವಸಂಸ್ಥೆಯಿಂದ ತೆವಾನ್​ ಹೊರದೂಡಲ್ಪಟ್ಟು, ಭದ್ರತಾ ಸಮಿತಿಯ ಕಾಯಂ ಸದಸ್ಯತ್ವ ಕಮ್ಯೂನಿಸ್ಟ್​ ಚೀನಾಗೆ ಬೆಳ್ಳಿತಟ್ಟೆಯಲ್ಲಿ ಬಂತು. ಅಲ್ಲಿಗೆ ಕಮ್ಯೂನಿಸ್ಟ್​ ಸರ್ಕಾರಕ್ಕೆ ಅಂತಾ ರಾಷ್ಟ್ರೀಯವಾಗಿ ಪೂರ್ಣ ಮಾನ್ಯತೆ ದಕ್ಕಿದಂತಾಯಿತು. ತಾನು ಮಾಡಿದ್ದು ತಪು$್ಪ ಎಂದು ಅದೇ ಕಿಸಿಂಜರ್​ ಮಹಾಶಯ ನಾಲ್ಕು ದಶಕಗಳ ನಂತರ ಸಣ್ಣದನಿಯಲ್ಲಿ ಹಳಹಳಿಸಿಕೊಂಡರು. ಆದರೆ ಅಷ್ಟರಲ್ಲಿ ಟಿಸಿದ್ದ ಅನಾಹುತಗಳು ಒಂದೆರಡಲ್ಲ.

ಮೊದಲಿಗೆ ಅಮೆರಿಕ, ಅದರ ಬೆನ್ನ ಹಿಂದೆಯೇ ಕೆನಡಾ, ನಂತರದ ದಿನಗಳಲ್ಲಿ ಪಶ್ಚಿಮ ಯುರೋಪ್​, ಜಪಾನ್​ ಮತ್ತು ಆಸ್ಟ್ರೆಲಿಯಾಗಳು ಚೀನಾವನ್ನು ಅಪ್ಪಿ ಕೊಂಡದ್ದೇ ತೆವಾನ್​ ಅನಾಥವಾಯಿತು. ವಿಶ್ವಸಂಸ್ಥೆಯಿಂದ ಆರಂಭಗೊಂಡು ವಿಶ್ವ ಆರೋಗ್ಯ ಸಂಟನೆ (ಡಬ್ಲು ್ಯಎಚ್​ಓ) ಸೇರಿದಂತೆ ವಿವಿಧ ಅಂತಾರಾಷ್ಟ್ರೀಯ ಸಂಸ್ಥೆಗಳೂ ತೆವಾನನ್ನು ಹೊರಗಟ್ಟಿದವು. ಅದರ ಮಾತಿಗೆ ಕಿವಿಗೊಡುವವರೇ ಇಲ್ಲದಂತಾಯಿತು. ಚೀನಾದಿಂದ ಕರೊನಾ ವೆರಸ್​ ಹೊರಜಗತ್ತಿಗೆ ಹರಡುತ್ತಿದೆ ಎಂದು ಮೊದಲು ಗುರುತಿಸಿ 2019ರ ಡಿಸೆಂಬರ್​ ಅಂತ್ಯದಲ್ಲೇ ಜಗತ್ತನ್ನು ಎಚ್ಚರಿಸಿದ್ದೇ ತೆವಾನ್​. ಆದರೆ ಚೀನೀ ಸರ್ಕಾರ ಮತ್ತು ಅದರ ಕೆಗೊಂಬೆಯಂತೆ ವರ್ತಿಸುತ್ತಿದ್ದ ಡಬ್ಲು$್ಯಎಚ್​ಓ ತೆವಾನ್​ ವಿರುದ್ಧವೇ ಅಪಪ್ರಚಾರ ಆರಂಭಿಸಿದವು. ತೆವಾನ್​ ಹೇಳಿದ್ದು ಸತ್ಯ ಎಂದು ಜಗತ್ತು ಅರಿಯುವ ಹೊತ್ತಿಗೆ ಕಾಲ ಮಿಂಚಿತ್ತು, ಕರೊನಾ ಮಾರಿ ಜಗತ್ತಿಗೆ ಅಮರಿಕೊಂಡಿತ್ತು. ಜಗತ್ತಿನ ಗಮನ ಕರೋನಾದತ್ತ ತಿರುಗಿದಂತೇ, ಕಳೆದ ಒಂದೂವರೆ ವರ್ಷದಲ್ಲಿ ತೆವಾನ್​ನ ಸುರೆಗೇ ಅಪಾಯವೊಡ್ಡುವ ಚಟುವಟಿಕೆಗಳಲ್ಲಿ ಚೀನಾ ಎಗ್ಗಿಲ್ಲದೆ ತೊಡಗಿಕೊಂಡಿದೆ. ತಾನು ಆ ದ್ವೀಪರಾಷ್ಟ್ರದ ಮೇಲೆ ಆಕ್ರಮಣವೆಸಗಿದರೆ ಜಗತ್ತು ಅದನ್ನು ಗಂಭೀರವಾಗಿ ತೆಗೆದುಕೊಳ್ಳುತ್ತದೆಯೇ ಅಥವಾ ಎಪ್ಪತ್ತು ವರ್ಷಗಳ ಹಿಂದೆ ತಾನು ಟಿಬೆಟ್​ ಅನ್ನು ನುಂಗಿ ನೊಣೆದಾಗ ಅತ್ತ ಮುಖ ತಿರುಗಿಸಿದಂತೇ ಈಗಲೂ ತಿರುಗಿಸಿಬಿಡುತ್ತದೆಯೇ ಎಂದು ಪರೀಸುತ್ತಿದೆ. ಜತೆಗೆ ಭಾರತದಂತಹ ದೊಡ್ಡ ದೇಶದಿಂದ ಹಿಡಿದು ಬ್ರುನೆನಂತಹ ಪುಟ್ಟ ದೇಶದ ನೆಲ ಹಾಗೂ ಜಲದ ಮೇಲೆ ಕಿರುಬನ ಕಣ್ಣು ಹಾಕುತ್ತಿದೆ.

ಆರ್ಥಿಕ ರಂಗದತ್ತ ತಿರುಗಿದರೆ 1978ರಲ್ಲಿ ಡೆಂಗ್​ ಷಿಯಾವೋಪಿಂಗ್​ ಚೀನಿ ಅರ್ಥವ್ಯವಸ್ಥೆಯನ್ನು ಉದಾರೀಕರಣಗೊಳಿಸಿ, ಉತ್ಪಾದನಾ ಟಕಗಳನ್ನು ಸ್ಥಾಪಿಸಲು ಅಗತ್ಯ ಸವಲತ್ತುಗಳನ್ನು ವಿದೇಶೀ ಕಂಪನಿಗಳಿಗೆ ನೀಡುವ ೂಷಣೆ ಮಾಡಿದಾಗ ಚೀನಾಗೆ ಮುಗಿಬಿದ್ದದ್ದು ಇದೇ ಅಮೆರಿಕ, ಪಶ್ಚಿಮ ಯುರೋಪ್​ ಮತ್ತು ಜಪಾನ್​ ಮೂಲದ ಬಹುರಾಷ್ಟ್ರೀಯ ಕಂಪನಿಗಳು. ಕಡಿಮೆ ಕೂಲಿಗೆ ದುಡಿಯಲು ತಯಾರಿದ್ದ ಚೀನೀ ಕೆಲಸಗಾರರ ಬಹತ್​ ಸೇನೆಯನ್ನು ಬಳಸಿಕೊಂಡು, ಕಡಿಮೆ ಖರ್ಚಿನಲ್ಲಿ ಎಲ್ಲ ಬಗೆಯ ಉತ್ಪನ್ನಗಳನ್ನು ಉತ್ಪಾದಿಸಿ, ಅವುಗಳನ್ನು ಪ್ರಪಂಚದಾದ್ಯಂತ ಮಾರಿ ಹೇರಳ ಲಾಭ ಗಳಿಸುವ ಬಹುರಾಷ್ಟ್ರೀಯ ಕಂಪನಿಗಳ ಲಾಭಕೋರತನ ಅಂತಿಮವಾಗಿ ವರದಾನವಾದದ್ದು ಚೀನಾಗೇ. ಹೆಚ್ಚು ಹೆಚ್ಚು ವಿದೇಶೀ ಕಂಪನಿಗಳು ಚೀನಾಗೆ ಬಂದು ಕಾರ್ಯಾರಂಭ ಮಾಡಿದಷ್ಟೂ ಚೀನಾದ ನಿವ್ವಳ ರಾಷ್ಟ್ರೀಯ ಉತ್ಪಾದನೆ (ಜಿಡಿಪಿ) ತಾರಾಮಾರು ಏರತೊಡಗಿ, ಆ ಕಮ್ಯೂನಿಸ್ಟ್​ ದೇಶ ಈ ಶತಮಾನದ ಆರಂಭದ ಹೊತ್ತಿಗೆ ಜಗತ್ತಿನ ಮೂರನೆಯ, ಮುಂದಿನ ಹತ್ತು ವರ್ಷಗಳಲ್ಲಿ ಎರಡನೆಯ ಬಹತ್​ ಅರ್ಥವ್ಯವಸ್ಥೆಯ ಸ್ಥಾನಕ್ಕೇರಿತು. ಅದಕ್ಕನುಗುಣವಾಗಿ ಚೀನೀ ಸರ್ಕಾರದ ಆದಾಯವೂ ವರ್ಷೇವರ್ಷೇ ಅಗಣಿತ ಪ್ರಮಾಣದಲ್ಲಿ ಏರಿತು. ಈ ಅಗಾಧ ಆದಾಯವನ್ನು ತನ್ನದೇ ಉತ್ಪಾದನಾ ಹಾಗೂ ವ್ಯವಹಾರ ಸಂಸ್ಥೆಗಳನ್ನು ದಂಡಿಯಾಗಿ ಸ್ಥಾಪಿಸಲು ಚೀನೀ ಸರ್ಕಾರ ಬಳಸತೊಡಗಿತು. ಪ್ರತ್ಯ ಹಾಗೂ ಪರೋವಾಗಿ ಚೀನೀ ಕಮ್ಯೂನಿಸ್ಟ್​ ಸರ್ಕಾರದ ಒಡೆತನದಲ್ಲಿರುವ ಉತ್ಪಾದನಾ ಸಂಸ್ಥೆಗಳು ಕಡಿಮೆ ಬೆಲೆಯ ವಸ್ತುಗಳನ್ನು ಅಧಿಕವಾಗಿ ಉತ್ಪಾದಿಸಿ ಜಾಗತಿಕ ಮಾರುಕಟ್ಟೆಯನ್ನು ಆಕ್ರಮಿಸಿಕೊಂಡರೆ, ಚೀನೀ ವ್ಯವಹಾರ ಹಾಗೂ ಹಣಕಾಸು ಸಂಸ್ಥೆಗಳು ಅಮೆರಿಕ, ಯುರೋಪ್​, ಆಸ್ಟ್ರೆಲಿಯಾ ಅಷ್ಟೇ ಏಕೆ ನಮ್ಮ ಭಾರತದಲ್ಲಿನ ಸಂಸ್ಥೆಗಳ ಶೇರುಗಳನ್ನು ಕೊಳ್ಳಲು ತಮ್ಮ ಹಣವನ್ನು ವ್ಯಾಪಕವಾಗಿ ಬಳಸುತ್ತಿವೆ. ಜತೆಗೆ, ಚೀನೀ ಕಮ್ಯೂನಿಸ್ಟ್​ ಸರ್ಕಾರ ತನ್ನ ವಾರ್ಷಿಕ ಆದಾಯದ ಒಂದು ದೊಡ್ಡ ಅಂಶವನ್ನು ಸೇನಾಶಕ್ತಿಯ ವದ್ಧಿಗೆ ಬಳಸಿಕೊಂಡು ಜಾಗತಿಕ ಶಕ್ತಿಯಾಗಿ ಬೆಳೆಯಲು ಹವಣಿಸುತ್ತಿದೆ, ತನ್ನ ಸುತ್ತಲಿನ ದೇಶಗಳ ಹಿತಾಸಕ್ತಿಗಳಿದೆ ಧಕ್ಕೆಯೊಡ್ಡಿ ಪ್ರಾದೇಶಿಕ ಶಾಂತಿಯನ್ನು ಕದಡುತ್ತಿದೆ, ಪೂರ್ವ ಚೀನಾ ಸಮುದ್ರ ಮತ್ತು ದಣ ಚೀನಾ ಸಮುದ್ರಗಳಲ್ಲಿ ನಡುಗಡ್ಡೆಗಳನ್ನು ಅತಿಕ್ರಮಿಸಿಕೊಂಡು ಇಡೀ ಸಾಗರ ಪ್ರದೇಶದ ಮೇಲೆ ಹತೋಟಿ ಸ್ಥಾಪಿಸಿಕೊಂಡಿದೆ. ಪರಿಣಾಮವಾಗಿ ದಣ ಚೀನಾ ಸಮುದ್ರದಲ್ಲಿ ವಾರ್ಷಿಕವಾಗಿ ಮೂರು ಟ್ರಿಲಿಯನ್​ ಡಾಲರ್​ ಮೌಲ್ಯದ ಸರಕುಗಳನ್ನು ಸಾಗಿಸುವ, ಜಗತ್ತಿನ ಎರಡನೆಯ ಅತಿ ದೊಡ್ಡ ವಾಣಿಜ್ಯ ಮಾರ್ಗ ವನ್ನು ಯಾವಾಗ ಬೇಕಾದರೂ ಹಾಳುಗೆಡಹುವ ಸಾಮರ್ಥ್ಯ ಇಂದು ಚೀನಾಕ್ಕಿದೆ!

ಪ್ರಸಕ್ತ ಅಧ್ಯ ಷಿ ಜಿನ್​ಪಿಂಗ್​ ಅಂತೂ "ಬೆಲ್ಟ್​ ಆ್ಯಂಡ್​ ರೋಡ್​' ಎಂಬ ಕರಾಳ ಯೋಜನೆ ಮೂಲಕ ಹಲವಾರು ಬಡದೇಶಗಳನ್ನು ಸಾಲಸಂಕೋಲೆಯಲ್ಲಿ ಕೆಡವಿಕೊಂಡು, ಅವುಗಳ ನೆಲವನ್ನು ಕಬಳಿಸುವ ಮೂಲಕ ನವವಸಾಹತುಶಾಹಿ ಯೋಜನೆಯಲ್ಲಿ ತೊಡಗಿಕೊಂಡಿದ್ದಾರೆ. ಒಟ್ಟಿನಲ್ಲಿ ಇಂದು ಚೀನಾ ಜಾಗತಿಕ ಶಾಂತಿಕಂಟಕನಾಗಿ ಬೆಳೆದುನಿಂತಿದೆ. ನಮ್ಮಂತಹ ಸಾಮಾನ್ಯ ಜನರಿಗೆ ಬಹಳ ಹಿಂದೆಯೇ ಗೋಚರಿಸಿದ, ವಿಶ್ಲೇಷಕರು ವಿಧವಿಧವಾಗಿ ಬಣ್ಣಿಸಿದ ದುರಂತದ ಚಿತ್ರಣ ಜಾಗತಿಕ ಇತಿಹಾಸವನ್ನು ನಿರ್ದೇಶಿ ಸುವ ನಾಯಕಶಿಖಾಮಣಿಗಳಿಗೆ ಬಹಳ ತಡವಾಗಿ ಕಾಣಿಸತೊಡಗಿದೆ. ಅದಾದದ್ದು ಕಳೆದೊಂದು ವಾರದಲ್ಲಿ.

ಕಳೆದ ವಾರಾಂತ್ಯದಲ್ಲಿ (ಜೂನ್​ 11&13) ಬ್ರಿಟನ್​ನ ಕಾರ್ನವಾಲ್​ನಲ್ಲಿ ಜಿ&7 ಕೂಟದ ಸಮಾವೇಶ ಜರುಗಿತು; ಏಳು ಮಹಾ ಪ್ರಜಾಪ್ರಭುತ್ವವಾದಿ ಆರ್ಥಿಕ ಶಕ್ತಿಗಳಾದ ಅಮೆರಿಕ, ಕೆನಡಾ, ಜಪಾನ್​, ಬ್ರಿಟನ್​, ್ರಾನ್ಸ್​, ಜರ್ಮನಿ ಮತ್ತು ಇಟಲಿಗಳ ಸಂಟನೆಯಾದ ಜಿ&7 ತನ್ನೀ ಸಮಾವೇಶದಲ್ಲಿ ಚೀನಾವನ್ನು ನಾಲ್ಕು ವಿಷಯಗಳಲ್ಲಿ ನೇರವಾಗಿ ಪ್ರಶ್ನಿಸಿದೆ. ಒಂದು& ಕರೊನಾ ವೆರಸ್​ ವೂಹಾನ್​ ಇನ್​ಸ್ಟಿಟ್ಯೂಟ್​ ಆ್​ ವೆರಾಲಜಿಯ ಪಿ&4 ಲ್ಯಾಬ್​ನಿಂದ ಬಂದದ್ದಲ್ಲ ಎಂದು ಚೀನೀ ಪ್ರಭಾವಕ್ಕೊಳಗಾಗಿ ಡಬ್ಲು ್ಯಎಚ್​ಓ ಇದೇ ವರ್ಷಾರಂಭದಲ್ಲಿ ನೀಡಿದ "ತನಿಖಾ ವರದಿ'ಯನ್ನು ಜಿ&7 ತಿರಸ್ಕರಿಸಿದೆ. ಲ್ಯಾಬ್​ನಲ್ಲಿ ನಡೆಯುತ್ತಿದ್ದ ಸಂಶೋಧನೆಗಳ ವಿವರಗಳು, ಸಂಶೋಧಕರ/ಕೆಲಸಗಾರರ ವೆದ್ಯಕಿಯ ದಾಖಲೆಗಳು, ಸೋಂಕಿನ ಮೊದಲ ಸ್ಯಾಂಪಲ್​ಗಳು& ಇವೆಲ್ಲವನ್ನೂ ಚೀನೀ ಸರ್ಕಾರ ಮುಕ್ತ ತನಿಖೆಗಾಗಿ ಒದಗಿಸ ಬೇಕು. ಎರಡು& ಉಯ್ಘರ್​ ಷಿನ್​ಜಿಯಾಂಗ್​ ಮತ್ತು ಹಾಂಗ್​ಕಾಂಗ್​ಗಳಲ್ಲಿ ಚೀನೀ ಕಮ್ಯೂನಿಸ್ಟ್​ ಸರ್ಕಾರ ಎಸಗುತ್ತಿರುವ ಮಾನವಹಕ್ಕುಗಳ ಉಲ್ಲಂನೆಗಳನ್ನು ಜಿ&7 ನೇರವಾಗಿ ಖಂಡಿಸಿದೆ. ಮೂರು& ತೆವಾನ್​ನ ಸುರೆಯನ್ನು ಜಿ&7 ಗಂಭೀರವಾಗಿ ಪರಿಗಣಿಸುತ್ತದೆ, ತೆವಾನ್​ಗೆ ಸಂಬಂಧಿಸಿದ ಯಾವುದೇ ಪ್ರಶ್ನೆಯನ್ನು ಶಾಂತಿ ಯುತ ಮಾತುಕಥೆಗಳ ಮೂಲಕವಷ್ಟೇ ಪರಿಹರಿಸಿಕೊಳ್ಳಬೇಕು. ನಾಲ್ಕು& ಸಮುದ್ರ ಮಾರ್ಗಗಳ ಕಾನೂನುಬದ್ಧ ಬಳಕೆಯ ಬಗೆಗಿನ ನಿಯಮಗಳನ್ನು ಚೀನಾ ಗೌರವಿಸಬೇಕು. ಜಿ&7 ಸಮಾವೇಶದಲ್ಲಿ ಭಾರತ ಅತಿಥಿ ರಾಷ್ಟ್ರವಾಗಿ ಭಾಗವಹಿಸಿತ್ತು ಮತ್ತು ಮಾನವಹಕ್ಕುಗಳ ಕುರಿತಾಗಿ ಸಮಾವೇಶ ಹೊರಡಿಸಿದ ಹೇಳಿಕೆಗೆ ಸಹಿಯನ್ನೂ ಹಾಕಿದೆ. ಭಾನುವಾರ ಸಮಾವೇಶ ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, "ಪ್ರಜಾಪ್ರಭುತ್ವ, ಅಭಿವ್ಯಕ್ತಿ ಸ್ವಾತಂತ್ರ$್ಯ ಮತ್ತು ಮಾನವಹಕ್ಕುಗಳ ರಣೆಗೆ ಸಂಬಂಧಿಸಿ ಭಾರತ ಜಿ&7 ಕೂಟದ ಸಹಜ ಸಹಯೋಗಿಯಾಗಿರುತ್ತದೆ' ಎಂದು ೂಷಿಸಿದರು.

ಚೀನಾದ ಕರಾಳ "ಬೆಲ್ಟ್​ ಆ್ಯಂಡ್​ ರೋಡ್​' ಯೋಜನೆಗೆ ಪ್ರತಿಯಾಗಿ ಆ್ಠಜ್ಝಿಛ ಆಚ್ಚ ಆಛಿಠಿಠಿಛ್ಟಿ ಗಟ್ಟ್ಝಛ (ಆ3ಗ) ಎಂಬ ಯೋಜನೆಯನ್ನು ಆರಂಭಿಸುವ, ಅದಕ್ಕಾಗಿ ಅಗತ್ಯವಿರುವ ದೇಶಗಳಿಗೆ ಆರ್ಥಿಕ ಸಹಾಯ ನೀಡುವ, ಅದಕ್ಕಾಗಿ 40 ಟ್ರಿಲಿಯನ್​ ಡಾಲರ್​ಗಳ ಅಗಾಧ ಧನರಾಶಿ ಹೂಡುವ ಅಮೆರಿಕದ ಯೋಜನೆಯನ್ನು ಜಿ&7 ಅಂಗೀಕರಿಸಿದೆ. ಎಂದೋ ಆಗಬೇಕಾಗಿದ್ದ ಕೆಲಸ ಇದು.

ಇದಕ್ಕೆ ಚೀನಾದ ಪ್ರತಿಕ್ರಿಯೆ ಏನು? ರಾಯಿಟರ್​ ವರದಿ ಪ್ರಕಾರ ಲಂಡನ್​ನಲ್ಲಿರುವ ಚೀನೀ ದೂತಾವಾಸದ ವಕ್ತಾರ, "ಕೆಲವೇ ದೇಶಗಳು ಜಾಗತಿಕ ವ್ಯವಹಾರಗಳನ್ನು ನಿರ್ದೇಶಿಸುವ ಕಾಲ ಎಂದೋ ಹೊರಟುಹೋಗಿದೆ...' ಎಂದು ಬೊಬ್ಬಿಟ್ಟಿದ್ದಾರೆ. ಆದರೆ ಇದೇ ಸೋಮವಾರ ಬ್ರಸೆಲ್ಸ್​ನಲ್ಲಿ ಜರುಗಿದ ನ್ಯಾಟೋ ಸಮಾವೇಶ ಚೀನಾಗೆ ಮತ್ತಷ್ಟು ದೊಡ್ಡ ಶಾಕ್​ ನೀಡಿದೆ. ನ್ಯಾಟೋದ ಸೆಕ್ರೆಟರಿ&ಜನರಲ್​ ಜೆನ್ಸ್​ ಸ್ಟೋಲ್​ಟೆನ್​ರ್ಬಗ್​, "ಚೀನಾದ ಜತೆ ನವ ಶೀತಲ ಸಮರ ಆರಂಭಿಸುವುದು ನಮ್ಮ ಉದ್ದೇಶವಲ್ಲ, ಚೀನಾ ನಮ್ಮ ವಿರೋಧಿಯಲ್ಲ... ಆದರೆ ಚೀನಾದ ಉತ್ಕರ್ಷ ನಮಗೆ ಒಡ್ಡುತ್ತಿರುವ ಅಪಾಯವನ್ನು ನಾವು ರ್ನಿಲಸುವಂತಿಲ್ಲ...' ಎಂದು ೂಷಿಸಿದರು. "ಚೀನಾ ನಮ್ಮ ವೆರಿ, ಅದರ ವಿರುದ್ಧ ಕಾರ್ಯಾಚರಣೆಗೆ ನಾವು ತಯಾರಾಗಿದ್ದೇವೆ' ಎಂದು ರಾಜತಾಂತ್ರಿಕ ಭಾಷೆಯಲ್ಲಿ ಹೇಳುವುದು ಹೀಗೆ. ಬಹುಶ@ ಇನ್ನು ಜಾಗತಿಕ ಇತಿಹಾಸ ವೇಗವಾಗಿ ಚಲಿಸತೊಡಗಲಿದೆ.

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net