

ಭಾರತೀಯ ಸಂಸ್ಕೃತಿಯಲ್ಲಿ ತುಳಸಿಗೆ ವಿಶೇಷ ಸ್ಥಾನಮಾನವಿದೆ. ವಿಶ್ವ ಆರೊಗ್ಯ ಸಂಸ್ಥೆ ಹಾಗೂ ವಿವಿಧ ಆಯುರ್ವೆದ ತಜ್ಞವೈದ್ಯರು ತಿಳಿಸಿದಂತೆ, ತುಳಸಿ ಎಲೆಗಳು ಆಂಟಿ-ಟಸ್ಸಿವ್ ಗುಣಲಕ್ಷಣಗಳನ್ನು ಹೊಂದಿದ್ದು, ದೇಹದ ಕಫ, ಕೆಮ್ಮು, ಅಸ್ತಮಾ, ದಮ್ಮು ಮತ್ತು ಇದೇ ರೀತಿಯ ಉಸಿರಾಟಕ್ಕೆ, ದೇಹಕ್ಕೆ ಎದುರಾಗುವ ಶೀತ, ಜ್ವರದಂಥ ಸಮಸ್ಯೆಗಳಿಗೆ ರಾಮಬಾಣವಾಗಿ ಕೆಲಸ ಮಾಡುತ್ತವೆ. ತುಳಸಿಯ ನಾಲ್ಕೈದು ತಾಜಾ ಎಲೆಗಳನ್ನು ಹಾಗೇ ತಿನ್ನುವುದರಿಂದ ಅಥವಾ ನೀರಿನಲ್ಲಿ ಹಾಕಿ ಕುದಿಸಿ ಕುಡಿಯುವುದರಿಂದ ಸಮಸ್ಯೆಯನ್ನು ನಿವಾರಿಸಬಹುದು. ಅಮೃತಬಳ್ಳಿಯ ಎಲೆಯಿಂದ ಕಷಾಯ ಮಾಡಿ ಸೇವಿಸಬಹುದು.
ಇದನ್ನೂ ಓದಿ ಬಾಲಕನ ಹೊಟ್ಟೆಯಲ್ಲಿದ್ದವು ಹನ್ನೆರಡು ಅಯಸ್ಕಾಂತಗಳು!
ಷಡಂಗ ಪಾನೀಯ-ಜ್ವರದಲ್ಲಿ ಅತ್ಯುತ್ತಮವಾದ ಕಷಾಯವಾಗಿದ್ದು ಇದು ದಾಹವನ್ನು ನೀಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ದೇಹದಲ್ಲಿ ಅಗ್ನಿ(ಜೀರ್ಣಶಕ್ತಿ) ಬಹು ಮುಖ್ಯ. ಎಲ್ಲ ರೋಗಗಳಿಗೂ ಮಂದಾಗ್ನಿಯೇ ಕಾರಣ. ಹಾಗಾಗಿ ಜೀರ್ಣಶಕ್ತಿಯ ವರ್ಧನೆಗಾಗಿ ಹಸಿಶುಂಠಿಯ ಸೇವನೆ ಅಥವಾ ಶುಂಠಿಚಹಾ, ಪುದೀನಾ ಚಹಾ ಸೇವನೆ ಮಾಡುವುದು ಉತ್ತಮ. ಗೋಮೂತ್ರ ಅತ್ಯುತ್ತಮವಾದ ರೋಗಾಣು ನಾಶಕವಾಗಿದು, ಇದನ್ನು ದಿನಾಲೂ ಬೆಳಗಿನ ಜಾವದಲ್ಲಿ 4-5 ಚಮಚದಷ್ಟು ಸೇವಿಸಬಹುದು. ಒಂದು ಚಮಚ ಚ್ಯವನಪ್ರಾಶವನ್ನು ದಿನವೂ ಸೇವಿಸಬೇಕು. ದಿನವೂ ಅರಿಶಿಣ, ಸ್ವಲ್ಪ ಸೈಂಧವಉಪ್ಪನ್ನು ಬಿಸಿನೀರಿನಲ್ಲಿ ಸೇರಿಸಿ ಬಾಯಿಮುಕ್ಕಳಿಸುವುದರಿಂದ ಹಾಗೂ ಗಂಡೂಷಧಾರಣೆ ಮಾಡುವುದರಿಂದ ರೋಗಾಣು ನಮ್ಮ ಗಂಟಲಿನಿಂದ ಶ್ವಾಸಕೋಶವನ್ನು ಸೇರದಂತೆ ತಡೆಗಟ್ಟಬಹುದು. ಸೀತೋಫಲಾದಿ ಚೂರ್ಣದಲ್ಲಿ ಕಲ್ಲುಸಕ್ಕರೆ, ಏಲಕ್ಕಿ, ಹಿಪ್ಪಲಿ, ದಾಲ್ಚಿನಿ ಮುಂತಾದ ದ್ರವ್ಯಗಳಿದ್ದು ಇದನ್ನು ಅರ್ಧಚಮಚದಷ್ಟು ಬಿಸಿನೀರಿನ ಜತೆ ಅಥವಾ ಜೇನುತುಪ್ಪದ ಜತೆ ದಿನಕ್ಕೆ ನಾಲ್ಕೈದು ಬಾರಿ ಸೇವಿಸುವುದರಿಂದ ನೆಗಡಿ, ಕೆಮ್ಮು, ಶ್ವಾಸದ ತೊಂದರೆಯನ್ನು ನಿವಾರಿಸಬಹುದು. ಮೃತ್ಯುಂಜಯರಸ, ಭಯಂಕರ ಜ್ವರವನ್ನೂ ನಾಶ ಮಾಡಿ ದೇಹವನ್ನು ಸುಸ್ಥಿಯಲ್ಲಿ ಇಡುತ್ತದೆ. ಹಾಗೆಯೇ ಸುದರ್ಶನ ಚೂರ್ಣ, ಸುದರ್ಶನಾರಿಷ್ಟ, ಅಮೃತಾರಿಷ್ಟ ಇವು ಜ್ವರದಲ್ಲಿ ಅಮೃತ ಸಮಾನವಾಗಿವೆ.
ಮನೆಯಲ್ಲಿಯೇ ಸ್ಯಾನಿಟೈಸರ್ ತಯಾರಿಕೆ: 100 ಗ್ರಾಂ ಬೇವಿನ ಎಲೆಗಳನ್ನು ಸ್ವಚ್ಛವಾಗಿ ತೊಳೆದುಕೊಂಡು, ಅವುಗಳನ್ನು ಒಂದು ಲೀಟರ್ ನೀರಿನಲ್ಲಿ ಹಾಕಿ ಕುದಿಸಬೇಕು. ಚೆನ್ನಾಗಿ ಕುದಿಸಿದ ನೀರಿನಲ್ಲಿ 200 ಗ್ರಾಂ (ಒಂದು ಹಿಡಿಯಷ್ಟು) ತುಳಸಿ ಎಲೆಗಳನ್ನು ಹಾಕಿ ಪುನಃ ಕುದಿಸಿ ತಣ್ಣಗಾಗಲು ಬಿಟ್ಟು, ನಂತರ ಆ ನೀರಿಗೆ ಪಟಕ (Alum) ಮತ್ತು ಕರ್ಪರ (Camphor) ಪುಡಿ ಮಾಡಿ ಹಾಕಬೇಕು. ಅರ್ಧಗಂಟೆಯ ನಂತರ ಈ ಮಿಶ್ರಣವನ್ನು ಸೋಸಿ ಬಾಟಲಿಯಲ್ಲಿ ತುಂಬಿ ಇಟ್ಟುಕೊಂಡು ಗಂಟೆಗೊಮ್ಮೆ ಇದರಿಂದ ಕೈ ತೊಳೆಯುತ್ತ ಇರಬೇಕು.
ರೋಗ ಪ್ರತಿರೋಧಕ ಶಕ್ತಿ ಹೆಚ್ಚಳಕ್ಕಾಗಿ: ್ಝಾಲಿಷ್ ಮಾಡದೇ ಇರುವಂಥ ಅಥವಾ ಅರ್ಧ ಪಾಲಿಷ್ ಮಾಡಿರುವ ಅಕ್ಕಿಯ ಅನ್ನವನ್ನು ತಿನ್ನುವುದರಿಂದ ರಕ್ತದಲ್ಲಿ ಪ್ಲೇಟಲೆಟ್ ಹೆಚ್ಚಾಗುವುದಲ್ಲದೆ ರೋಗ ಪ್ರತಿರೋಧಕ ಶಕ್ತಿ ಹೆಚ್ಚುತ್ತದೆ. ್ಝ್ರತಿ ನಿತ್ಯ ಒಂದು ನೆಲ್ಲಿಕಾಯಿಯನ್ನು (Gooseberry-ಆಮಲಕಿ) ತಿನ್ನುತ್ತಿದ್ದರೆ ಇದು ಕೂಡ ರೋಗ ಪ್ರತಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿಯಾಗುತ್ತದೆ. ್ಝೋಧಿ ರೊಟ್ಟಿ (ಚಪಾತಿ )ಯ ಜತೆಗೆ ಹೆಸರುಬೇಳೆ, ಕಡಲೆಬೇಳೆಗಳ ಪಲ್ಯ (ಭಾಜಿ) ಸೇವಿಸಿದರೆ ರಕ್ತದ ಪ್ರಮಾಣ ಹೆಚ್ಚುತ್ತದೆ. ಸೊಪ್ಪನ್ನು ಚೆನ್ನಾಗಿ ತೊಳೆದು ಪಲ್ಯ ಮಾಡಿ ತಿನ್ನುವುದರಿಂದ ಶರೀರಕ್ಕೆ ಹೇರಳ ಪೋಷಕಾಂಶಗಳು ದೊರೆತು ರೋಗ ಪ್ರತಿರೋಧಕ ಶಕ್ತಿ ಹೆಚ್ಚಿಸುತ್ತದೆ. ್ಝೆುಂತೆ, ರಾಜಗಿರಿ, ಕಿರಕಸಾಲಿ, ಹೊನಗನ್ನೆ ಸೊಪ್ಪುಗಳಲ್ಲಿ ಹೇರಳ ಪೋಷಕಾಂಶಗಳು ಇರುತ್ತವೆ.
ಆಯುರ್ವೆದ ಶಾಸ್ತ್ರವು ರೋಗಗಳಿಗೆ ಹೇಗೆ ಚಿಕಿತ್ಸೆ ಮಾಡಬೇಕು ಎಂಬುದನ್ನು ಹೇಳುತ್ತದೆ. ಜತೆಗೆ ರೋಗ ಬರದಂತೆ ನಮ್ಮಆರೋಗ್ಯವನ್ನು, ಆಯುಷ್ಯವನ್ನು ಹೇಗೆ ವೃದ್ಧಿಸಿಕೊಳ್ಳಬೇಕು ಎಂಬುದನ್ನು ಹಾಗೂ ರೋಗನಿರೋಧಕ ಶಕ್ತಿಯನ್ನು ಹೇಗೆ ಹೆಚ್ಚಿಸಿಕೊಳ್ಳಬೇಕು ಎಂಬುದನ್ನು ಸವಿಸ್ತಾರವಾಗಿ ಹೇಳುತ್ತದೆ. ಸ್ವಚ್ಛತೆಗೆ ಪ್ರಾಧಾನ್ಯ ನೀಡಿ, ನಿತ್ಯ ಜೀವನದಲ್ಲಿ ಆಯುರ್ವೆದದಲ್ಲಿಯ ಪ್ರಮುಖ ಅಂಶಗಳನ್ನು ಅಳವಡಿಸಿಕೊಂಡು ಅನೇಕ ಮಹನೀಯರು ಶತಾಯುಷಿಗಳಾಗಿ ಇರುವುದನ್ನು ನಾವು ನೋಡಬಹುದಾಗಿದೆ. ಪ್ರತಿದಿನ ವ್ಯಾಯಾಮ, ಪ್ರಾಣಾಯಾಮ ದಿನಚರಿಯಲ್ಲಿ ಸಾರ್ವಕಾಲಿಕವಾಗಿ ಇರುವುದು ಇಂದಿನ ಮುಂದಿನ ದಿನಮಾನಗಳಲ್ಲಿ ಆರೋಗ್ಯ ರಕ್ಷಣೆಗೆ ಅತಿ ಅವಶ್ಯ ಎಂಬುದನ್ನು ಅರಿತುಕೊಳ್ಳುವುದು ಮಹತ್ವದ ಸಂಗತಿ.
ಪಥ್ಯಾಪಥ್ಯ ವಿಚಾರ: ಬಿಸಿಯಾದ ಆಹಾರ, ಅನ್ನ, ಗಂಜಿ, ಎಳನೀರು, ಹಣ್ಣಿನರಸ, ಕುದಿಸಿ ಆರಿಸಿದ ನೀರು ಇವುಗಳನ್ನು ಸೇವಿಸುವುದು ಹಿತಕರ.
ಸುಲಭವಾಗಿ ಜೀರ್ಣ ವಾಗುವ ತರಕಾರಿ, ಸೊಪ್ಪು, ಹೆಸರುಬೇಳೆಯಿಂದ ತಯಾರಿಸಿದ ಆಹಾರ ಹಾಗೂ ಶುಂಠಿ, ನಿಂಬೆರಸ ಮತ್ತು ತುಳಸೀಬೀಜದಿಂದ ತಯಾರಿಸಿದ ಚಹಾ ಸೇವನೆ ಉತ್ತಮ. ತಂಗಳ ಅನ್ನ, ಕರಿದ ಕುರುಕಲು ಪದಾರ್ಥಗಳು, ಫ್ರಿಜ್ನಲ್ಲಿಟ್ಟ ಆಹಾರ ಇವು ನಿಷಿದ್ಧ.
ರಾಜ್ಯ ಸರ್ಕಾರ ಹಾಗೂ ಆಯುಷ್ ಇಲಾಖೆ ಸೂಚಿಸಿದಂತೆ ಕರೊನಾ ಮತ್ತು ಇತರ ವೈರಾಣು ಸೋಂಕಿನ ಬಗ್ಗೆ ಮುಂಜಾಗ್ರತೆ, ಅದನ್ನು ತಡೆಗಟ್ಟುವ ಸರಳ ವಿಧಾನಗಳ ಅನುಸರಣೆ, ಮನೆಮದ್ದು ಜತೆಗೆ ಆಯುರ್ವೆದ ಚಿಕಿತ್ಸೆ ಅನುಸರಿಸಿದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು ಹಾಗೂ ಸೊಂಕು ತಡೆಗಟ್ಟಬಹುದು.
(ಲೇಖಕರು ಹುಬ್ಬಳ್ಳಿ ಆಯುರ್ವೇದ ಮಹಾವಿದ್ಯಾಲಯದ ಪ್ರಾಚಾರ್ಯರು)