ಮಣ್ಣಿನ ಹಣತೆಯ ದೀಪವೇ ಶ್ರೇಷ್ಠ

Soil Lamp
Published on

ದೀಪಾವಳಿಗೆ ಇನ್ನೊಂದೇ ವಾರ ಬಾಕಿ. ಬಗೆಬಗೆಯ ವಿನ್ಯಾಸದ ದೀಪಗಳು ಈಗಾಗಲೇ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಅಲ್ಯುಮಿನಿಯಂ, ಪಿಂಗಾಣಿ, ಗಾಜು ಸೇರಿದಂತೆ ವಿವಿಧ ವಸ್ತುಗಳಿಂದ ತಯಾರಿಸಿದ ಆಕರ್ಷಕ ದೀಪಗಳು ಲಭ್ಯ ಇವೆ. ಆದರೆ ಇವೆಲ್ಲವುಗಳ ನಡುವೆ ಮಣ್ಣಿನಿಂದ ತಯಾರಿಸಿದ ಹಣತೆಯಲ್ಲಿ ಬೆಳಗುವ ದೀಪವೇ ಶ್ರೇಷ್ಠ ಎನ್ನುತ್ತದೆ ಶಾಸ್ತ್ರ.

| ಮನೋಹರ ಜೋಶಿ

ಮಣ್ಣಿನ ಹಣತೆಗಳಲ್ಲಿ ದೀಪಗಳನ್ನು ಬೆಳಗುವುದು ನಮ್ಮ ಭಾರತೀಯರ ಪುರಾತನ ಧಾರ್ವಿುಕ ಸಂಪ್ರದಾಯ ಮತ್ತು ಸಂಸ್ಕೃತಿ. ‘‘ಮೃಣ್ಮಯೇನ ತು ಪಾತ್ರೇಣ ಗೋಘ್ರತೇನ ಸುರಾಧೀಪ, ದೀಪಂ ದಧಾತಿ ಯೋ ಭಕ್ಱಾ ಜ್ಯಾನೀ ಯೋಗೀ ಸುಖೀ ಭವೇತ್’’ ಎನ್ನುವ ಸೃ್ಮಗಳ ಪ್ರಮಾಣದಂತೆ ಯಾರು ಮಣ್ಣಿನಿಂದ ತಯಾರಿಸಿದ ಹಣತೆಯಲ್ಲಿ ದೇವರಿಗೆ ದೀಪವನ್ನು ಸಮರ್ಪಿಸುತ್ತಾರೋ ಅವರು ಜ್ಞಾನಿಯೂ ಯೋಗಿಯೂ ಸುಖಿಯೂ ಆಗುತ್ತಾರೆ ಎಂದು ತಿಳಿಸಲಾಗಿದೆ. ಮಣ್ಣಿನ ದೀಪದ ಪಾತ್ರೆಯಲ್ಲಿ ಬೆಳಗಿದ ದೀಪವೇ ಶ್ರೇಷ್ಠ ದೀಪವಾಗಿದೆ ಎಂಬುದು ಇದರ ಅರ್ಥ.

ಹಣತೆಯ ಪಾತ್ರೆಯಲ್ಲಿ ಬ್ರಹ್ಮದೇವರ ಸನ್ನಿಧಾನ, ತೈಲದಲ್ಲಿ ಲಕ್ಷ್ಮೀ ದೇವಿ ಹಾಗೂ ದೀಪಗಳನ್ನು ಹಚ್ಚುವ ಬತ್ತಿಗಳಲ್ಲಿ ವಸುದೇವನ ಸನ್ನಿಧಾನ ಇರುವುದರಿಂದ ಮಣ್ಣಿನ ಹಣತೆಗಳಲ್ಲಿ ಬೆಳಗಿದ ದೀಪವು ಆರೋಗ್ಯ, ಸಂಪತ್ತಿನ ಅಭಿವೃದ್ಧಿಗೆ ಕಾರಣವಾಗುತ್ತದೆ. ಇದುವೇ ಪ್ರಶಸ್ತವಾದ ದೀಪದಾನವೆಂದು ಪುರಾಣಗಳಲ್ಲಿ ಉಲ್ಲೇಖಿತವಾಗಿದೆ. ಹಣತೆಯಲ್ಲಿ ಹಚ್ಚಿದ ಸಾಲು ಸಾಲು ದೀಪಗಳು ಕಣ್ಣುಗಳಿಗೆ, ಮನಸ್ಸಿಗೆ ಅಹ್ಲಾದಕರವಾದ ಅನುಭವವನ್ನು ನೀಡುತ್ತವೆ.

ಮಣ್ಣಿನ ಹಣತೆ ದೀಪದ ಮಹತ್ವ: ಮಣ್ಣಿನ ಹಣತೆಯಲ್ಲಿ ದೇವರಿಗೆ ದೀಪಗಳನ್ನು ಹಚ್ಚಿದರೆ ಗುರುಗಳ ಹಾಗೂ ದೇವತೆಗಳ ಅನುಗ್ರಹ ಪ್ರಾಪ್ತಿಯಾಗುತ್ತದೆ. ಕಾರ್ತಿಕ ಸೋಮವಾರ ಶಿವನ ದೇವಾಲಯಗಳಲ್ಲಿ ಹಣತೆ ದೀಪ ಹಚ್ಚಿದರೆ ಶಿವಾನುಗ್ರಹ ದೊರೆಯುತ್ತದೆ. ವಿಷ್ಣು ದೇವರಿಗೆ ಸಮರ್ಪಿಸಿದ ಹಣತೆ ದೀಪವು ಸಾಯುಜ್ಯ ಪದವಿಯನ್ನು ದೊರಕಿಸುತ್ತದೆ. ಮಣ್ಣಿನ ಹಣತೆಯ ದೀಪದಾನದಿಂದ ಸತ್ಯಭಾಮೆಯು ಶ್ರೀಕೃಷ್ಣನನ್ನು ಪಡೆದಳು. ಮಣ್ಣಿನ ಹಣತೆಯಲ್ಲಿ ಹಚ್ಚಿದ ದೀಪದಿಂದ ಧನಾತ್ಮಕ ಶಕ್ತಿಯು ಪರಿಸರದ ತುಂಬೆಲ್ಲ ಹರಡುತ್ತದೆ. ಇದರಿಂದ ಮನಸ್ಸಿಗೆ ನೆಮ್ಮದಿ ಮತ್ತು ಹೊಸ ಚೈತನ್ಯ ಬರುತ್ತದೆ.

ಮಣ್ಣಿನ ಹಣತೆಗಳು

ದೀಪಾವಳಿ ಹಬ್ಬಕ್ಕೆ ಕೆಲವೇ ದಿನಗಳು ಉಳಿದಿವೆ. ಹಣತೆಗಳನ್ನು ಹಚ್ಚುವುದು ದೀಪಾವಳಿ ಹಬ್ಬದಲ್ಲಿ ಕಂಡುಬರುವ ಸಂಭ್ರಮ. ಹಲವು ವರುಷಗಳ ಹಿಂದೆ ದೀಪಾವಳಿ ಸಮೀಪಿಸುತ್ತಿದ್ದಂತೆ ಮಣ್ಣಿನ ಹಣತೆ ತಯಾರು ಮಾಡುವವರಿಗೆ ಕೈತುಂಬಾ ಕೆಲಸ ಸಿಗುತ್ತಿತ್ತು. 2-3 ತಿಂಗಳ ಮೊದಲೇ ಜೇಡಿಮಣ್ಣು ತಂದು ಚೆನ್ನಾಗಿ ಹದ ಮಾಡಿ ಮನೆಯ ಸದ್ಯಸರೆಲ್ಲರೂ ಸೇರಿ ಕೈಯಿಂದ ಪ್ರಣತಿಗಳನ್ನು ತಯಾರಿಸಿ ಮಾರುತ್ತಿದ್ದರು. ಇದರಿಂದ ಅವರ ಜೀವನ ಸಾಗುತ್ತಿತ್ತು. ಇಂದು ಆ ವಾತಾವರಣ ನೋಡಲು ಸಿಗುವುದಿಲ್ಲ. ಹಣತೆಗಳನ್ನು ತಯಾರಿ ಸುವ ಯಂತ್ರಗಳು ಬಂದ ಮೇಲೆ ಮಣ್ಣಿನ ಹಣತೆಗಳ ಬೇಡಿಕೆ ಕುಸಿಯುತ್ತಿದೆ. ಮಾರುಕಟ್ಟೆಗೆ ಯಂತ್ರಗಳಲ್ಲಿ ತಯಾರಿಸಿದ ವಿವಿಧ ವಿನ್ಯಾಸ, ಬಣ್ಣಗಳ ಪಿಂಗಾಣಿ ಹಣತೆಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಇದರಿಂದ ಕುಂಬಾರರ ವೃತ್ತಿಗೂ ಹೊಡೆತ ಬಿದ್ದಿದೆ. ಈ ಎಲ್ಲ ಧಾರ್ವಿುಕ- ಸಾಮಾಜಿಕ ಹಿನ್ನೆಲೆ ಇಟ್ಟುಕೊಂಡು ಮಣ್ಣಿನ ಹಣತೆಗಳನ್ನು ಉಪಯೋಗಿಸಿ ದೀಪಾವಳಿಯನ್ನು ಸಂಭ್ರಮ ದಿಂದ ಆಚರಿಸೋಣ. ದೀರ್ಘ ಕಾಲ ಬಾಳಿಕೆ ಬರುವ ಈ ಮಣ್ಣಿನ ಹಣತೆಗಳಲ್ಲಿಯೇ ದೀಪ ಬೆಳಗೋಣ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net