

| ರಾಜೇಶ್ವರಿ ಹಿರೇಮಠ
ಸಾಮಾನ್ಯವಾಗಿ ಭಾವನಾತ್ಮಕ ಬುದ್ಧಿವಂತಿಕೆಗೆ EI (ಇಮೋಷನಲ್ ಇಂಟೆಲಿಜೆನ್ಸ್) ಎಂದು ಕರೆಯುತ್ತೇವೆ. ಒತ್ತಡ ಅಥವಾ ಸ್ಟ್ರೆಸ್ ಕಡಿಮೆ ಮಾಡಲು, ಪರಿಣಾಮಕಾರಿಯಾಗಿ ಮಾತನಾಡಲು, ಇತರರೊಂದಿಗೆ ಸಹಾನುಭೂತಿ ತೋರಿಸಲು ಮತ್ತು ಜೀವನದಲ್ಲಿ ಕಷ್ಟಗಳನ್ನು ಸಮಾಧಾನವಾಗಿ ಮತ್ತು ಧೈರ್ಯವಾಗಿ ಎದುರಿಸಲು, ಸ್ವಂತ ಭಾವನೆಗಳನ್ನು ಅರ್ಥಮಾಡಿಕೊಳ್ಳುವ ಮತ್ತು ನಿರ್ವಹಿಸುವ ಸಾಮರ್ಥ್ಯಕ್ಕೆ ‘ಭಾವನಾತ್ಮಕ ಬುದ್ಧಿವಂತಿಕೆ’ ಎಂದು ಕರೆಯುತ್ತಾರೆ. ಹೆಚ್ಚಿನ ಉಕಿ ಇದ್ದರೆ ಒಳ್ಳೆಯ ಸಂಬಂಧ ಬೆಳೆಸಲು, ಸ್ಟ್ರೆಸ್ ಕಡಿಮೆ ಮಾಡಲು, ಸಂಘರ್ಷಗಳನ್ನು ಕಡಿಮೆ ಮಾಡಲು ಮತ್ತು ಕೆಲಸದಲ್ಲಿ ಸಂತೃಪ್ತಿ ಹೊಂದಲು ಸಹಾಯ ಮಾಡುತ್ತದೆ. ಭಾವನಾತ್ಮಕ ಬುದ್ಧಿವಂತಿಕೆಯು ವೈಯಕ್ತಿಕ ಜೀವನ ಮತ್ತು ಜತೆಗೆ ಕೆಲಸ ಮಾಡುವರರೊಂದಿಗೆ ಸಂಬಂಧ ಮತ್ತು ಕಾರ್ಯಕ್ಷಮತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಜೀವನದಲ್ಲಿ ನಾವು ಮಾಡುವ ಬಹುತೇಕ ಕೆಲಸಗಳು ಹೆಚ್ಚಾಗಿ ಭಾವನೆಗಳು ಮತ್ತು ಭಾವನಾತ್ಮಕ ಬುದ್ಧಿವಂತಿಕೆ ಆಧರಿಸಿವೆ. ವ್ಯಕ್ತಿಗಳು ಉತ್ತಮ ಮಾತನಾಡುವ ಕಲೆ ಹೊಂದಿದ್ದರೆ ಸರಿಯಾದ ನಿರ್ಧಾರ ಮತ್ತು ಇತರರೊಂದಿಗೆ ಒಳ್ಳೆಯ ಮಾತನಾಡುವ ಸಾಮರ್ಥ್ಯ ಹೊಂದಿರುತ್ತಾರೆ. ನಮ್ಮ ಸ್ವಂತ ಭಾವನೆಗಳಿಂದ ಏನು ಕಲಿಯುತ್ತೇವೆಯೋ ಅದು ಜೀವನದಲ್ಲಿ ಬಯಸುವ ಜೀವನಶೈಲಿ ಅನುಸರಿಸಲು ಮತ್ತು ನಮ್ಮ ಜೀವನದಲ್ಲಿ ನಾವು ಏನನ್ನು ಬಯಸುವುದಿಲ್ಲ ಅಥವಾ ಬಯಸುತ್ತೇವೆ ಎಂಬುದನ್ನು ಹೆಚ್ಚು ಸ್ಪಷ್ಟವಾಗಿ ತಿಳಿದುಕೊಳ್ಳಲು ಸಹಾಯ ಮಾಡಿಕೊಡುತ್ತದೆ. ಉಕಿ ಸಾಮಾನ್ಯ ಬುದ್ಧಿಮತ್ತೆಗಿಂತ ಹೆಚ್ಚು ಮುಖ್ಯವಾಗಿದೆ ಎಂಬುದನ್ನು ನಾವು ನಂಬುವಂತೆ ಮಾಡುತ್ತದೆ. ಏಕೆಂದರೆ ಇದು ನಿಜವಾದ ಅರ್ಥದಲ್ಲಿ ಸಂಪೂರ್ಣ ಜೀವನ ನಡೆಸುವ ಸುಲಭವಾದ ಮಾರ್ಗವಾಗಿದೆ.