

| ಡಾ. ಶ್ರೇಯಾಂಕ್ ಎಸ್. ಕೋಟ್ಯಾನ್ ಹೋಮಿಯೋಪಥಿ ವೈದ್ಯ, ಮಂಗಳೂರು
ಏಕೆ ತಲೆಹೊಟ್ಟು ಬರುತ್ತದೆ?
ತಲೆಹೊಟ್ಟು ಕಾಣಿಸಿಕೊಂಡಾಗ ನೆತ್ತಿಯ ಮೇಲಿರುವ ಚರ್ಮ ಒಣಗಲು ಮತ್ತು ಉದುರಲು ಪ್ರಾರಂಭವಾಗುತ್ತದೆ. ಕೂದಲಿನ ನೈರ್ಮಲ್ಯದ ಕೊರತೆಯಿಂದಾಗಿ, ಅತಿಯಾಗಿ ನೆತ್ತಿಗೆ ಎಣ್ಣೆ ಹಾಕಿದಾಗ ಈಸ್ಟ್ ತರಹದ ಶಿಲೀಂಧ್ರ ನೆತ್ತಿ ಸೇರಿ, ಅತಿ ಬಿಸಿ ನೀರಿನಲ್ಲಿ ತಲೆಗೆ ಸ್ನಾನ ಮಾಡುವುದು, ತಲೆ ಕೂದಲಿಗೆ ಕೆಮಿಕಲ್ಯುುಕ್ತ ಉತ್ಪನ್ನಗಳನ್ನು ಬಳಸುವುದು, ಸೋರಿಯಾಸಿಸ್, ಹುಳುಕಡ್ಡಿ ಮತ್ತು ಇಸುಬುಗಳಿಂದಾಗಿ ತಲೆ ಹೊಟ್ಟು ಕಾಣಿಸಿಕೊಳ್ಳುತ್ತದೆ. ಇದಕ್ಕೆ ವಯಸ್ಸಿನ ಮಿತಿಯಿಲ್ಲ. ಎಲ್ಲ ವಯಸ್ಸಿನವರಲ್ಲೂ ತಲೆಹೊಟ್ಟು ಕಾಣಿಸಿಕೊಳ್ಳಬಹುದು. ಆದರೆ ಹೆಚ್ಚಾಗಿ ಹದಿಹರಯದವರಲ್ಲಿ ಕಾಣಿಸಿಕೊಳ್ಳುತ್ತದೆ. ಸ್ತ್ರೀಯರಿಗಿಂತ ಪುರುಷರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ರ್ಪಾನ್ಸನ್ ಮತ್ತು ನರಮಂಡಲದ ಮೇಲೆ ಪರಿಣಾಮ ಬೀರುವ ಇತರ ರೋಗಗಳಿಂದಲೂ ತಲೆಹೊಟ್ಟು ಕಾಣಿಸಿಕೊಳ್ಳಲಿದೆ. ಚಳಿಗಾಲದಲ್ಲಿ ಹೊಟ್ಟು ಹೆಚ್ಚಾಗುತ್ತದೆ. ಸೂರ್ಯನ ಬೆಳಕಿಗೆ ಅತಿಯಾಗಿ ತಲೆಯನ್ನು ಒಡ್ಡುವುದರಿಂದ ನೆತ್ತಿಯಲ್ಲಿ ಶುಷ್ಕತೆ ಉಂಟಾಗುತ್ತದೆ.
ಹೊಟ್ಟಿನ ಲಕ್ಷಣಗಳು ಯಾವುವು?
ತಲೆಹೊಟ್ಟು ಬೇರೆ ಬೇರೆ ವಿಧಗಳಲ್ಲಿ ಕಾಣಿಸಿಕೊಳ್ಳುತ್ತದೆ. ಸಣ್ಣ, ಬಿಳಿ ಪುಡಿ, ದೊಡ್ಡ ಪುಡಿ, ಜಿಡ್ಡಿನ ಮತ್ತು ಹಳದಿ ಬಣ್ಣದ ಚರ್ಮದ ಚಕ್ಕೆಗಳಾಗಿ ಕಾಣಿಸಿಕೊಳ್ಳುತ್ತವೆ. ಕೆಲವು ಕೂದಲಿಗೆ ಅಂಟಿಕೊಳ್ಳುತ್ತವೆ. ಇನ್ನು ಕೆಲವನ್ನು ನೆತ್ತಿ ಅಥವಾ ಹುಬ್ಬುಗಳ ಮೇಲೆ ಕಾಣಬಹುದು. ಇನ್ನು ಹಲವು ಕಿವಿ, ಮೂಗು, ಎದೆ ಅಥವಾ ಬೆನ್ನಿನ ಮಧ್ಯೆ ಕಾಣಿಸಿ ಕೊಳ್ಳಬಹುದು. ತುರಿಕೆಯು ತಲೆಹೊಟ್ಟಿನ ಸಾಮಾನ್ಯ ಲಕ್ಷಣ. ನಿರಂತರವಾಗಿ ತುರಿಸಿಕೊಳ್ಳುವುದರಿಂದ ಚರ್ಮಕ್ಕೆ ಹಾನಿಯಾಗುತ್ತದೆ. ತಲೆಹೊಟ್ಟಾದಾಗ ಅತಿಯಾಗಿ ತುರಿಸಿಕೊಳ್ಳುವುದರಿಂದ ಕೂದಲು ಉದುರುತ್ತದೆ. ಕೆಲವೊಮ್ಮೆ ಚರ್ಮದಲ್ಲಿ ಉರಿ ಸಹ ಕಾಣಿಸಿಕೊಳ್ಳುತ್ತದೆ.
ಸಲಹೆ, ಅಭಿಪ್ರಾಯ ಮತ್ತು ಬರಹಗಳಿಗೆ: lalithavijayavani@gmail.com