

ನಮ್ಮ ಕನಸ್ಸುಗಳೇ ನಮ್ಮ ಭವಿಷ್ಯವನ್ನು ಬದಲಾಯಿಸಬಲ್ಲ ಮಹಾನ್ ಶಕ್ತಿಗಳು. ಅಂತಹ ಮಹೋನ್ನತವಾದ ಕನಸುಗಳಿಲ್ಲದಿದ್ದರೆ ಜೀವನಕ್ಕೇನು ಬೆಲೆ? ನಾವು ಕಾಣುವ ಕನಸು ಉನ್ನತ, ಅನನ್ಯ, ಅದ್ಭುತ, ಉತಷ್ಟ ಹಾಗೂ ಗುಣಮಟ್ಟದ್ದಾಗಿರಬೇಕು. ಆ ಕನಸು ನನಸಾದಾಗ ನಮ್ಮ ಪ್ರಗತಿಯ ಜೊತೆಗೆ ಸಮಾಜದ ಸ್ಥಿತಿಯೂ ಉನ್ನತವಾಗಬೇಕು. ಕನಸುಗಳು ದೊಡ್ಡದಾದಷ್ಟು ಲ ದೊಡ್ಡದಾಗುತ್ತದೆ. ಅದ್ದರಿಂದಲೇ ಎಂದಿಗೂ ಕನಸು ಕಾಣುವಲ್ಲಿ ಬಡತನವಿರಬಾರದು. ಕನಸೇ ತಾನೆ ನಮ್ಮೆಲ್ಲರನ್ನೂ ಏಳ್ಗೆಯ ದಾರಿಯಲ್ಲಿ ಮುನ್ನಡೆಸುವ ಉತ್ಸಾಹದ ಶಕ್ತಿ. ಅಂತಹ ಶಕ್ತಿಯೊಂದು ನಮಗೇ ಅರಿವಿಲ್ಲದಂತೆ ನಮ್ಮಲ್ಲಿಯೇ ಅಡಗಿದೆ. ಅದನ್ನು ಸಾಕಾರಗೊಳಿಸಿಕೊಳ್ಳಬೇಕು. ನಿರ್ಧಾರ ತಳೆದಷ್ಟು ಶ್ರೀವಾಗಿ ನಾವು ಉನ್ನತಿಯತ್ತ ಸಾಗುತ್ತೇವೆ. ವ್ಯಕ್ತಿ ಬಡವನಾದರೆ ಚಿಂತೆಯಿಲ್ಲ. ಅವನ ದೂರದೃಷ್ಟಿ ಹೊಂದಿದ ರ್ನಿದಿಷ್ಟ ಗುರಿಗಳಿಂದ ಕೂಡಿದ ಕನಸುಗಳೇ ಅವನನ್ನು ಶ್ರೀಮಂತಗೊಳಿಸುತ್ತವೆ. ಅಂತಹ ಕನಸುಗಳನ್ನು ನನಸು ಮಾಡಿಕೊಳ್ಳುವ ಮನಸ್ಸಿದ್ದರೆ ಅವನಿಗೆ ಅದನ್ನು ಸಾಧಿಸುವ ಮಾರ್ಗವೂ ಗೋಚರಿಸುತ್ತದೆ. ಆ ಮಾರ್ಗವನ್ನು ಅನುಸರಿಸಿ ಸಾಧನೆ ಮಾಡಬಹುದು. ಆದರೆ ಎಂದೂ ಬತ್ತದ ಉತ್ಸಾಹವಿರಬೇಕಷ್ಟೆ. ಆದ್ದರಿಂದ ರ್ನಿದಿಷ್ಟವಾದ ಗುರಿಯನ್ನು ತಲುಪಲು ಕನಸುಗಳನ್ನು ಕಾಣಲೇಬೇಕು. "ಇಷ್ಟೇ ನನ್ನ ಪ್ರಪಂಚ, ನನ್ನ ಸಾಮರ್ಥ್ಯ, ಯೋಗ್ಯತೆ' ಎಂಬ ಉದಾಸೀನ ಭಾವನೆ ಮಾತ್ರ ನಮ್ಮೆದುರು ಎಂದೂ ಸುಳಿಯಬಾರದು.
(ಲೇಖಕರು ಸಂಸತ ಉಪನ್ಯಾಸಕರು)
(ಪ್ರತಿಕ್ರಿಯಿಸಿ: manollasavv@gmail.com)